‘ಮಗನ ಮಾತೆ’ ಜಯಲಕ್ಷ್ಮಿ ಆಚಾರ್ಯ ಸಂದರ್ಶನ

Поділитися
Вставка
  • Опубліковано 24 гру 2018
  • ಮಂಗಳೂರು ಆಕಾಶವಾಣಿಯ ವನಿತಾವಾಣಿ ಕಾರ್ಯಕ್ರಮದಲ್ಲಿ ಇತ್ತೀಚೆಗೆ (17Dec2018ರಂದು)ಪ್ರಸಾರವಾದದ್ದು. ಕುಂದಾಪುರದ ಶಂಕರನಾರಾಯಣ ಗ್ರಾಮದ ಜಯಲಕ್ಷ್ಮಿ ಆಚಾರ್ಯ ಎಂಬುವರ ಜೀವನಗಾಥೆ. ಅವರ ಮೂರನೆಯ ಮಗನಿಗೆ ಭಾರತೀಯ ವಾಯುಸೇನೆಯಲ್ಲಿ ಕೆಲಸ. ಐದನೆಯ ತರಗತಿಯವರೆಗೆ ಮಾತ್ರ ’ಕಲಿತ’ ಜಯಲಕ್ಷ್ಮಿಯವರು, ಏರ್‌ಫೋರ್ಸ್‌ನಲ್ಲಿರುವ ಮಗನೊಡನೆ ಮಾಡಿದ ಕಾವ್ಯಮಯ ಪತ್ರಬರವಣಿಗೆ ‘ಮಗನ ಮಾತೆ’ ಎಂಬ ಕವನಸಂಕಲನ ಪುಸ್ತಕವಾಗಿಯೂ ಪ್ರಕಟವಾಗಿದೆ. ಅದರಿಂದ ಒಂದೆರಡು ‘ಕ್ಷೇಮಸಮಾಚಾರ’ ಕವನಗಳು ಸಹ ಈ ಸಂದರ್ಶನದಲ್ಲಿವೆ. ಅದಲ್ಲದೆಯೂ, ಜಯಲಕ್ಷ್ಮಿಯವರ ಜೀವನಾನುಭವ, ಕ್ರಿಯಾಶೀಲತೆ, ಮತ್ತು ಹೃದಯವಂತಿಕೆ ಎಷ್ಟು ಶ್ರೀಮಂತವಾದುದು ಎಂದು ನಿಮಗೆ ಈ ಸಂದರ್ಶನವನ್ನು ಕೇಳಿದಾಗ ಗೊತ್ತಾಗುತ್ತದೆ. ಅವರ ಬಗ್ಗೆ ಗೌರವಭಾವ ಮೂಡುತ್ತದೆ. ನಿಮ್ಮ 27 ನಿಮಿಷಗಳು ಖಂಡಿತ ವ್ಯರ್ಥ ಆಗಿಲ್ಲ, ಬದಲಿಗೆ ಹೊಸ ಸ್ಫೂರ್ತಿ ಸಿಕ್ಕಿತು ಅಂತಾಗಲೂಬಹುದು.

КОМЕНТАРІ • 9

  • @HamBils
    @HamBils 5 років тому +4

    ಶ್ರೀವತ್ಸ ಜೋಶಿ ಅವರೇ, ನಮ್ಮ ಅಮ್ಮನ ಬಗ್ಗೆ ಬರೆದ ಸುಂದರವಾದ ಸಾಲುಗಳಿಗೆ ಹಾಗೂ ಅವಳ ಸಂದರ್ಶನವನ್ನು ಅಂತರ್ಜಾಲಕ್ಕೆ ಬಿತ್ತಿದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು 🙏

    • @SrivathsaJoshi574123
      @SrivathsaJoshi574123  5 років тому +3

      ಮೊದಲನೆಯದಾಗಿ ನಿಮ್ಮ ಅಮ್ಮನಿಗೆ, ನಿಮಗೆ, ಮತ್ತು ನಿಮ್ಮ ಸಹೋದರನಿಗೆ- ಎಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು. ಈ ಸಂದರ್ಶನವು ನಿಮ್ಮ ಅಮ್ಮನ ಜೀವನೋತ್ಸಾಹ ಮತ್ತು ಪಾಸಿಟಿವ್ ಅಪ್ರೋಚ್‌ಗಳನ್ನು ಪರಿಚಯಿಸಿ ಅವರ ಬಗ್ಗೆ ಅಭಿಮಾನ ಮೂಡಿಸಿತು. ಮಂಗಳೂರು ಆಕಾಶವಾಣಿಗೆ ಧನ್ಯವಾದಗಳು. ಹಾಗೆಯೇ, ಯುಟ್ಯೂಬ್‌ನಲ್ಲಿ ಇದು ದಾಖಲಾಗಿರುವುದನ್ನು ಗಮನಿಸಿ ಮೆಚ್ಚುಗೆಯ ಪ್ರತಿಕ್ರಿಯೆ ಬರೆದಿದ್ದಕ್ಕೆ ನಿಮಗೆ ಧನ್ಯವಾದಗಳು.

    • @venkatagiriacharya6497
      @venkatagiriacharya6497 4 роки тому +1

      ಶ್ರೀವತ್ಸ ಜೋಶಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು

  • @vijayashreehegde6025
    @vijayashreehegde6025 5 років тому

    ಅವರ ಮಾತುಗಳನ್ನು ಕೇಳಿ ತುಂಬಾ ಖುಷಿಯಾಯಿತು. ಅವರ ಆಸಕ್ತಿ ಉತ್ಸಾಹ ಅದ್ಭುತ..ಹಂಚಿಕೊಂಡಿದಕ್ಕಾಗಿ ಧನ್ಯವಾದಗಳು ಸರ್ ....!!🙏

  • @Vanjarashree
    @Vanjarashree 5 років тому

    ಪತ್ರ ಬರೆದು ಕವಿಯತ್ರಿ ಯಾಗಿದ್ದಾರೆ ಎಂದು ಕೇಳಿ ವಿಚಿತ್ರ ಎನಿಸಿತು ಆದರೂ ಅವರ ಮಾತಿನಲ್ಲಿ ಕೇಳುವುದಕ್ಕೆ ಚೆನ್ನಾಗಿ ಅನಿಸಿತು ಧನ್ಯವಾದಗಳು ಸರ್ ನಿಮಗೆ ಎಲೆಮರೆಯ ಕಾಯಿಯಂತಿರುವ ಕವಿಯವರನ್ನು ಬೆಳಕಿಗೆ ತಂದಿರುವುದಕ್ಕೆ 😊

  • @rajudvg1622
    @rajudvg1622 3 роки тому

    76

  • @SudhindraPranesh
    @SudhindraPranesh 5 років тому

    🙏

  • @yogeshmoger8830
    @yogeshmoger8830 5 років тому

    👌

  • @rohinisubbarao3664
    @rohinisubbarao3664 5 років тому

    ಅಚ್ಚಕನ್ನಡದ ಹೆಮ್ಮೆಯ ಹೆಮ್ಮಗಳು