ಹೊಸ ವರ್ಷದ ’ಜೋಷ್’ - ಜೋಶಿಯೊಂದಿಗೆ...

Поділитися
Вставка
  • Опубліковано 30 гру 2022
  • ವಿವಿಧಭಾರತಿ - ಆಕಾಶವಾಣಿ ಬೆಂಗಳೂರು ಕೇಂದ್ರದ ವಾಣಿಜ್ಯ ವಿಭಾಗದಿಂದ 1 ಜನವರಿ 2023ರಂದು ಬೆಳಗ್ಗೆ 8ರಿಂದ 9ರವರೆಗೆ ಪ್ರಸಾರವಾದ ಸಂದರ್ಶನ.
    ನವೆಂಬರ್ 4, 2022ರಂದು ನಾನು ಬೆಂಗಳೂರಿನಲ್ಲಿದ್ದಾಗ ಇದರ ಧ್ವನಿಮುದ್ರಣ ಆಗಿತ್ತು. ಬೆಂಗಳೂರು ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ.ಸುಮತಿ ಮತ್ತು ವಿವಿಧಭಾರತಿ ಕೇಂದ್ರದ ಪ್ರಸಕ್ತ ಪ್ರಸಾರಾಧಿಕಾರಿ ಕಾನ್ಸೆಪ್ಟಾ ಫೆರ್ನಾಂಡಿಸ್ ಅವರು ಈ ಸಂದರ್ಶನವನ್ನು ನಡೆಸಿಕೊಟ್ಟರು.

КОМЕНТАРІ • 14

  • @saraswathivattam1158
    @saraswathivattam1158 Рік тому

    ಬಹಳ ಅಚ್ಚುಕಟ್ಟಾದ ಕಾರ್ಯಕ್ರಮ. ಬಹಳ ಚೆನ್ನಾಗಿತ್ತು !!👏👏👏

  • @veerabhadrayyahiremath6082
    @veerabhadrayyahiremath6082 Рік тому

    ಜೋಶಿ ಸರ್ ನಮಸ್ತೆ ನಾನು ನಿಮ್ಮ ಪರಾಗಸ್ಪರ್ಶ ಅಂಕಣದ ದೊಡ್ಡ ಅಭಿಮಾನಿ ಅಷ್ಟು ಅಂಕಣಗಳನ್ನು ಪುಸ್ತಕ ರೂಪದಲ್ಲಿ ಹೊರತನ್ನಿ ಸರ್ ಅವುಗಳನ್ನು ಓದಲು ನಾನು ತುಂಬಾ ಉತ್ಸುಕನಾಗಿದ್ದೇನೆ..
    ನಿಮ್ಮ ಒಂದು ಅಂಕಣ ಓದಿ ನನಗೆ ಒಂದು ಕ್ಷಣ ಮೈಮನ ರೋಮಾಂಚನವಾಗಿತ್ತು
    ಆ ಅಂಕಣದ ಹೆಸರು.
    ಮತ್ತು ಮತ್ತೂ ಮನಸ್ಸಲ್ಲಿಳಿಯುವ ಮತ್ತೂರಜ್ಜ...
    ಮತ್ತೂರು ಕೃಷ್ಣಮೂರ್ತಿ ಅವರು ವಿಧಿವಶರಾದಗ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನೀವು ಬರೆದ ಅಂಕಣ
    ಅದನ್ನು ಓದಿ ನನ್ನ ಮೈಮನ ಪುಳಕಿತಗೊಂಡಿತು....🙏🙏💐💐

  • @suneethas7349
    @suneethas7349 Рік тому

    ಅಪರೂಪದ ಕಾರ್ಯಕ್ರಮ, ಹೊಸ ವರುಷವನ್ನು ಸ್ವಾಗತಿಸಿದ ರೀತಿ ತುಂಬಾ ಸುಂದರ

  • @PrasannaKumar-eb2li
    @PrasannaKumar-eb2li Рік тому

    ತುಂಬಾ ಚೆನ್ನಾಗಿ ಮೂಡಿ ಬಂದಿದೆ SJ👌👌Thanks for sharing🙏reminded me of my Akashvani interview with Smt Malathi Sharma in 2005🙏🙏

  • @sandhyaphatak9003
    @sandhyaphatak9003 Рік тому

    ಆತ್ಮೀಯ ಮಾತುಗಳು. ಸುಂದರವಾದ ಸಂದರ್ಶನ.

  • @nalinimaiya4994
    @nalinimaiya4994 Рік тому

    ಒಳ್ಳೆಯ ಲೇಖಕ ಮಾತ್ರವಲ್ಲ ಒಳ್ಳೆಯ ಮನುಷ್ಯನೂ ಹೌದು ಎಂದು ಗೊತ್ತಾಗುತ್ತದೆ ಈ ಸಂದರ್ಶನದಲ್ಲಿ. "ಏನಾದರೂ ಆಗು. ಮೊದಲು ಮಾನವನಾಗು "!

  • @sudhajayaram4741
    @sudhajayaram4741 Рік тому

    ನಮ್ಮ ಬಾಲ್ಯದ ನೆನಪಾಯ್ತು... 👌👍

  • @rameshkamath9094
    @rameshkamath9094 Рік тому

    ಹೊಸ ಆಂಗ್ಲ ವರ್ಷಕ್ಕೆ ಬೆಂಗಳೂರು ಆಕಾಶವಾಣಿಯು ನಮ್ಮ ಪ್ರೀತಿಯ' ತಿಳಿರು ತೋರಣ' ಅಂಕಣಗಾರರಾದ
    ಶ್ರೀ ವತ್ಸ ಜೋಷಿ ಯವರೊಂದಿಗೆ ಸಂದರ್ಶನ ನಡೆಸಿ ಅನೇಕ ವಿಷಯ ಗಳನ್ನು ಟಚ್ ಮಾಡುತ್ತಾ
    ನಮ್ಮೆಲ್ಲರಿಗೆ ರಸಭರಿತ ಚಲನಚಿತ್ರ ಗೀತೆಗಳನ್ನೂ ಸಹ ಕೇಳಿಸಿದ್ದಕ್ಕೆ ಅನಂತ ಧನ್ಯವಾದಗಳು.🙏😊

  • @h.sramesh5817
    @h.sramesh5817 Рік тому

    ಬಹಳ ಖುಷಿ ಆಯಿತು.

  • @surishivakumar
    @surishivakumar Рік тому

    ಹಾಡುಗಳೊಡನೆ ಹೆಣೆದ ಸಂಭಾಷಣೆ ಕೇಳಲು ಹಿತವಾಗಿದೆ .

  • @udupirecipes
    @udupirecipes Рік тому

    ಬಾಲ್ಯದ, ರೇಡಿಯೋ ಕೇಳುತ್ತ ಕಳೆದ ಮಧುರ ನೆನಪುಗಳು ಮರುಕಳಿಸಿ 2023ದ ಮೊದಲ ದಿನ ಸ್ಮರಣೀಯವಾಯಿತು.

  • @subramanyaudupa2311
    @subramanyaudupa2311 Рік тому

    Super

  • @arpanakekkaru241
    @arpanakekkaru241 Рік тому

    ಸಾರ್ಥಕ ಸಂದರ್ಶನ. ಸುಮತಿಯವರ ಸುಮಧುರ ಸ್ವರದೊಂದಿಗೆ ಜೋಶಿಯವರ ಯಶೋಗಾಥೆಯ ಅಶರೀರವಾಣಿ. ಕೇಳಿ ತುಂಬಾ ಸಂತೋಷವಾಯಿತು.🙏🙏

  • @rohinisubbarao3664
    @rohinisubbarao3664 Рік тому

    ಪ್ರಶ್ನೆಗಳು ಚುಟುಕಾಗಿ ಚುರುಕಾಗಿ ಇದ್ದರೆ ಚೆನ್ನ, ಅತಿಥಿಗಳಿಗೆ ಹೆಚ್ಚು ಮಾತನಾಡಲು ಅವಕಾಶವಿರಬೇಕು