ಜೀವನದಲ್ಲಿ ಸಂತೋಷದಿಂದ ಇರುವುದು ಹೇಗೆ ?

Поділитися
Вставка
  • Опубліковано 8 кві 2024
  • ಸಂತೋಷದಿಂದ ಇರಲು‌ ಎನು ಮಾಡಬೇಕು ?
    ಸಂತೋಷ ಸಿಗುವುದು ಹೇಗೆ ?
    ಸಂತೋಷ ಸಿಗುವುದು ಎಲ್ಲಿ ?
    ಸಂತೋಷ ಅಂದರೇ ಎನು ?
    ಹಾಗಾದರೆ ಇವತ್ತಿನ ದಿನ ನಾವು ಸಂತೋಷ ದ ಬಗ್ಗೆ ತಿಳಿದುಕೊಳ್ಳೊಣ .
    ಈ ಒಂದು ವೀಡಿಯೋ ನಿಮಗೆ ಸ್ವಲ್ಪ ವಾದರು ಸಂತೋಷ ಹೆಚ್ಚಿಸಿಕೊಳ್ಳಲು ಸಹಾಯ ಆದರೆ ಅದೇ ನನಗೂ ಸಂತೋಷ .
    ಸಂತೋಷ ಅಂದರೆ ನಮ್ಮ ಒಂದು ಮಾನಸಿಕ ಸ್ಥಿತಿ ಇದು ನಮಗೆ ಯಾವಾಗ ಬರುತ್ತದೆ ಅಂದರೆ ನಮಗೆ ಎನಾದರೂ ಬಯಸಿದ್ದು ಸಿಕ್ಕಾಗ ,ನಮ್ಮವರಿಗೆ ಯಾರಿಗಾದರೂ ಎನಾದರೂ ಸಿಕ್ಕಾಗ ,ನಮಗೆ ಜಯವಾದಾಗ ,ರುಚಿಯಾದ ಊಟ ಸಿಕ್ಕಾಗ ,ದುಡ್ಡು ಸಿಕ್ಕಾಗ ,ಯಾವುದಾದರೂ ಒಳ್ಳೆಯ ನೋಟ ನೋಡಿದಾಗ , ಹಾಗೆ ನಮ್ಮ ಶತ್ರು ಗಳು ಅಂತಾ ಯಾರನ್ನಾದರೂ ನಮ್ಮ ಮನಸ್ಸಿನ ಲ್ಲಿ ಇಟ್ಟು ಕೊಂಡು ಅವರಿಗೇನಾದರು ಕೆಡುಕಾದಾಗ .
    ಬೇರೆಯವರಿಗೆ ಎನಾದರು ಕೊಟ್ಟು ಖುಷಿಪಡುತ್ತೆವೆ ,ಕೆಲವೊಮ್ಮೆ ಬೇರೆಯವರು ಎನಾದರೂ ಕೊಟ್ಟರೆ ಖುಷಿಯಾಗುತ್ತದೆ .
    ಹೀಗೆ ನೂರಾರು ಕಾರಣಗಳಿಗೆ ನಮಗೆ ಸಂತೋಷ ವಾಗುತ್ತದೆ .
    ಆ ಕಾರಣಗಳೆಲ್ಲವನ್ನು ನಾವೇ ಸೃಷ್ಟಿ ಮಾಡಿ ಕೊಂಡಿರುತ್ತೆವೆ .
    ಓ ನನಗೆ ಇವತ್ತು ರುಚಿಯಾದ ಆ ತಿಂಡಿ ತಿನ್ನಲು ಸಿಕ್ಕರೆ ಹೇಗೆ ? ನನಗೆ ಇವತ್ತು 50000 ರೂ ಲಾಭವಾದರೆ ಹೇಗೆ ?
    ಇವತ್ತಿನ ಕ್ರಿಕೆಟ್ ಮ್ಯಾಚ್ ನಲ್ಲಿ ಭಾರತ ಗೆದ್ದರೆ ಹೇಗೆ ?
    ನನ್ನ ಮಗ ಉತ್ತಮ ಅಂಕಗಳನ್ನು ತಂದರೆ ಹೇಗೆ ?
    ಆ ಪ್ರಸಂಗಗಳನ್ನು ನಾವು ಮೊದಲೆ ನಮ್ಮ ‌ಮನಸ್ಸಿನಲ್ಲಿ‌ ಸೃಷ್ಟಿ ಮಾಡಿಕೊಂಡು ಅವುಗಳ ನಿರೀಕ್ಷೆಯಲ್ಲಿ ಕುಳಿತಿರುತ್ತೆವೆ .
    ನಾವಂದು ಕೊಂಡಂತೆ ಅಥವಾ ಅದಕ್ಕಿಂತ ಉತ್ತಮ ಪಲಿತಾಂಶ ಸಿಕ್ಕರೆ ಖುಷಿ ಯಾಗುತ್ತದೆ ,ಇಲ್ಲವಾದರೆ ದುಃಖ ಬೇಜಾರಾಗುತ್ತದೆ .
    ಅಂದ ಮೇಲೆ ನಮಗೆ ಸಂತೋಷ ವಾಗುವುದು ನಮ್ಮ ಮನಸ್ಥಿತಿ ಯಲ್ಲೆ ಹೊರತು ಪಲಿತಾಂಶದಿಂದ ಅಲ್ಲ .
    ಸಂತೋಷ ಅನ್ನು ವುದು ನಮ್ಮ ಮಾನಸಿಕ ಸ್ಥಿತಿ ನಾವು ನಮ್ಮ ಮನಸ್ಸಿನ ಲ್ಲಿ ಇಟ್ಟು ಕೊಳ್ಳುವ ನಿರೀಕ್ಷೆ ಅಥವಾ ಎಕ್ಸಪೆಕ್ಟೆಷನ್ ಮೆಲೆ ಅವಲಂಬಿತ ವಾಗಿರುತ್ತದೆ .
    ಬಹಳಷ್ಟು ಸಾರಿ ನಾವು ನಮ್ಮ ಸಂತೋಷ ದ ಕಾರಣಗಳನ್ನ ಬೇರೆಯವರ ಕೈಯಲ್ಲಿ ‌ಕೊಡುತ್ತೆವೆ .
    ಹೇಗೆ ಅಂದರೆ ,ಮಗ ಹೆಚ್ಚು ಅಂಕ ತೆಗೆದುಕೊಂಡು ಬಂದರೆ ನಮಗೆ ಖುಷಿಯಾಗುತ್ತದೆ,,ಅದರೆ ಅದು ನಮ್ಮ ಕೈಯಲ್ಲಿ ಇಲ್ಲ .
    ಯಾರಾದರು ನಮಗೆ ಎನನ್ನಾದರು ಕೊಟ್ಟ ರೆ ಸಂತೋಷ ವಾಗುತ್ತದೆ ಆದರೆ ಅದೂ ನಮ್ಮ ಕೈಯಲ್ಲಿ ಇಲ್ಲ ,ಕ್ರಿಕೆಟ್ ನಲ್ಲಿ‌ ಭಾರತ ವರ್ಲ್ಡ್ ಕಪ್ ತಂದರೆ ಖುಷಿಯಾಗುತ್ತದೆ ,ಆದರೆ ನಾವು ಹೋಗಿ ಆಡಲು ಆಗಲ್ಲ .ಹೀಗೆ ಬಹಳಷ್ಟು ಸಾರಿ‌ ನಮ್ಮ ಸಂತೋಷ ಬೇರೆಯವರ ಮೇಲೆ ಅವಲಂಬಿತವಾಗಿರುತ್ತದೆ ..
    ಓಕೆ ಆದರೆ ಅದು ಆಗದೇ ಇದ್ದಾಗ ದುಃಖ ಪಡುವುದು ಬೇಡ .ಮತ್ತೊಮ್ಮೆ ಪ್ರಯತ್ನ ಪಡುತ್ತೆವೆ ಎಂದು ಸಂತೋಷ ದಿಂದ ಇರುವುದನ್ನ ನಾವು ಕಲಿಯಬೇಕು .
    ನಮಗೆ ಸಂತೋಷ ಪಡಲು ಸಂತೋಷ ವಾಗಿರಲು ಪಲಿತಾಂಶಗಳು ಕಾರಣವಲ್ಲ ನಮ್ಮ ನಿರಿಕ್ಷೆಗಳು .
    ಹಾಗೇ ನಾವು ಕೆಲವೊಂದು ಸಾರಿ ನಿರೀಕ್ಷೆಗಳನ್ನೇ ಇಟ್ಟು ಕೊಂಡಿರುವುದಿಲ್ಲ ಉತ್ತಮ ಫಲಿತಾಂಶ ಗಳು ಬಂದು ಬಿಟ್ಟರೆ ನಮಗೆ ಹೆಚ್ಚು ಖುಷಿಯಾಗುವ ಅವಕಾಶ ಇರುತ್ತದೆ .
    ಹಾಗಾದರೆ‌ ನಾವು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರ ಅಂದರೆ ನಾವು ಸಂತೋಷ ವಾಗಿರಲು ನಿರ್ದರಿಸಬೇಕಾದವರು ನಾವೇ ಹೊರತು ಹೊರಗಿನ ಜಗತ್ತು ಅಲ್ಲ .ಪಲಿತಾಂಶಗಳಲ್ಲ ,
    ನಾನು‌ ಸಂತೋಷ ವಾಗಿರಬೇಕೆಂದರೆ ಬೇರೆಯವರಿಂದ ,ಬೆರೆಯದರಿಂದ ನಿರೀಕ್ಷೆ ಯನ್ನು ಬಿಟ್ಟು ನಮ್ಮ ಕೆಲಸಗಳನ್ನು ಮಾಡಬೇಕು . ನಾವೇನಾದರೂ 50000 ಸಾವಿರ ಲಾಭ ಗಳಿಸಲು ಕೆಲಸ ಮಾಡಿದಾಗ ಐದೇ ಸಾವಿರ ಸಿಕ್ಕರೂ ಸಂತೋಷ ಪಡಲು ತಯಾರಾದಾಗ ಮಾತ್ರ ನಾವು ಜೀವನದಲ್ಲಿ ಹೆಚ್ಚು ಖುಷಿಯನ್ನು ಅನುಭವಿಸಬಹುದು .
    ಜೀವನದಲ್ಲಿ ಕೆಲವೊಂದು ಸಾರಿ ನಾವು ಸೋತರು ಎನಾದರೂ ಒಂದನ್ನು ಪಡೆದಿರುತ್ತೆವೆ ,ಅನುಭವ ಇರಬಹುದು ಅಥವಾ ಬೇರೆ ಎನಾದರೂ ಇರಬಹುದು ಅದನ್ನು ನೋಡಿ ಖುಷಿಪಡಲು ಕಲಿಯಬೇಕು .
    ನಾವು ಸಂತೋಷ ಪಡಲು‌ ನೂರಾರು ಕಾರಣಗಳು ಸಿಗುತ್ತವೆ ಅವುಗಳನ್ನು ನಾವು ಹುಡುಕಿ ಕೊಂಡು ಸಂತೋಷ ವಾಗಿರಲು ಪ್ರಯತ್ನ ಪಡಬೇಕು .
    ಸಣ್ಣ ಸಣ್ಣ ಕಾರಣಗಳಿಗೆ ಖುಷಿಪಡುವುದನ್ನ ನಾವು ಮಕ್ಕಳನ್ನು ನೋಡಿ ಕಲಿಯಬೇಕು‌..
    ಮುಂದೆ ಜೀವನದಲ್ಲಿ ‌ಎನಾಗುವುದೋ‌ ,ಹಾಗೇ ಆಗಬಹುದೇನೋ ,ಹೀಗೆ ಆಗಬಹುದೇನೋ‌ ಅನ್ನೊ‌ ಚಿಂತೆ ಯಲ್ಲಿ ಈಗಿನ ಖುಷಿ ಸಂತೋಷ ವನ್ನು ಕಳೆದುಕೊಳ್ಳಬಾರದು .
    ಸಂತೋಷ ಅತೀಯಾದರೂ ಕಡಿಮೇಯಾದರೂ ಜೀವನ ಕಷ್ಟ ವೇ ಅದಕ್ಕೊಸ್ಕರ ,ಸಂತೋಷ ವನ್ನು ಎಷ್ಟು ಯಾವಾಗ ಅನುಭವಿಸಬೇಕೊ ಅನುಭವಿಸಿ ಸಮಾಧಾನ ಸ್ಥಿತಿಗೆ ಬರಬೇಕು .ಸಮಾದಾನ ಅಂದರೆ ಎನು ,ಹೇಗೆ ಅದನ್ನ ಪಡೆಯುವುದು ಅನ್ನೊದನ್ನ ಈಗಾಗಲೇ ನನ್ನ ಮುಂಚಿನ ವಿಡಿಯೋದಲ್ಲಿ ಹೇಳಿದ್ದೆನೆ .
    ಒಟ್ಟಿನಲ್ಲಿ ಹೇಳೊಸಾದರೆ ಸಂತೋಷ ಅನ್ನೊದು ಹೊರಗಿನ ಸ್ಥಿತಿ ಯಲ್ಲ ,ನಮ್ಮ ನಿರೀಕ್ಷೆ ಗಳನ್ನು ಜಾಣತನದಿಂದ ಬಳಕೆ ಮಾಡುವುದರಿಂದ ನಾವು ಸಂತೋಷ ವನ್ನು ಪಡೆಯಬಹುದು.
    ಹೆಚ್ಚು ಸಂತೋಷ ದಾಯಕ ಜೀವನಕ್ಕೆ ಕಡಿಮೆ ನಿರೀಕ್ಷೆ ಗಳಿರಲಿ ಅಥವಾ ಹೆಚ್ಚು ನಿರೀಕ್ಷೆ ಇಟ್ಟು ಕೆಲಸ ಮಾಡಿ .ಕಡಿಮೆ ಸಿಕ್ಕಾಗಲು ಖುಷಿಯಾಗುವ ಪ್ಲೆಗ್ಜಿಬಿಲಿಟಿ , ಔದಾರ್ಯ ,ಮೃದುತ್ವ
    #ಸಂತೋಷ #ಖುಷಿ #happiness #kannada #ಜೀವನ

КОМЕНТАРІ • 1

  • @creativekidsvps8831
    @creativekidsvps8831 4 дні тому +1

    ಸರ್ ನನ್ನನು ಪಿನ್ ಮಾಡಿದರೆ ನಾನು ಅವರನ್ನು ನನ್ನ 2 ಚಾನೆಲ್ ಇಂದ ಸಬ್ಸ್ಕ್ರೈಬ್ ಮಾಡುತೇನೆ