ಸಮಾಧಾನ ಅಂದರೆ ಏನು ? ಹೇಗೆ ಇದನ್ನು ಪಡೆಯುವುದು ? ಜೀವನದಲ್ಲಿ ‌ಸಮಾಧಾನ ಸಿಗಲು‌ ಎನು ಮಾಡಬೇಕು

Поділитися
Вставка
  • Опубліковано 1 бер 2024
  • ಸಮಾಧಾನ
    ಸಮಾದಾನ‌ ಅಂದರೇ ಎನು?
    ನಮಗೇ ಅಸಮದಾನದಿಂದ ಆಗುವ ಹಾನಿಗಳು ಎನು ?
    ನಮಗೇ ಸಮಾದಾನದಿಂದ ಆಗುವ ಲಾಭಗಳು ಎನು ?
    ಸಮಾದನವೇ ಬೇರೆ ಸಾವಕಾಶವೇ ಬೇರೆ
    ಹಾಗಾದರೆ ಪೂರ್ತಿ ವೀಡಿಯೋ ವನ್ನು ಸಮಾದಾನದಿಂದ ನೋಡಿ ಅರ್ಥಮಾಡಿಕೊಳ್ಳೊಣವೇ?
    ಯಾರಾದರೂ ಬಹಳ ದುಃಖ ದಲ್ಲಿ ಇದ್ದಾಗ ನಾವು‌ ಅವರನ್ನ ಸಮಾದಾನ ಮಾಡಿ ಬರೋಣ ಬಾ ಅಂತಿರ್ತಿವಿ .
    ಯಾರಾದರೂ ಅತೀ ಕೋಪದಲ್ಲಿ‌ ಇದ್ದಾಗ ಅವರನ್ನು ಸಮಾದಾನ ಮಾಡಲು ಪ್ರಯತ್ನ ಮಾಡುತ್ತೆವೆ .
    ಯಾರಾದರೂ ಅವಸರದಲ್ಲಿ ‌ಎಲ್ಲಿಗಾದರೂ ಹೋಗುತ್ತಿದ್ದರೆ ಅವರನ್ನು ಸಮಾಧಾನದಿಂದ ಹೋಗು‌ ಅನ್ನಿತ್ತೆವೇ .
    ಯಾರಾದರೂ ಹೆದರಿಕೆಯಲ್ಲಿ ಇದ್ದಾಗ ನಾವು ಅವರಿಗೆ ಸಮಾದಾನ ಹೇಳಲು ಬಯಸುತ್ತೆವೆ .
    ಯಾರಾದರೂ ಅತೀ ದೈರ್ಯದಲ್ಲಿ ಯಾವುದಾದರೂ ಕೆಲಸ ಮಾಡಲು ಹೋದಾಗ ಸಮಾದಾನ ಮಾರಾಯಾ ಅಂತ ಎಚ್ಚರಿಸುತ್ತೆವೇ.
    ಜೀವನದಲ್ಲಿ ಎನೋ ಒಂದು ಬೇಕು‌ ಅಂತಾ ಬೆನ್ನು ಹತ್ತಿರುತ್ತೆವೇ ಅದು ಸಿಗೋ ತನಕ ಸಮಾದಾನನೇ ಇರಲ್ಲ .
    ಇದು ಮನಸ್ಸಿ‌ನ ಆಸ್ಥಿತಿ
    ಲಾಭ- ಹಾನಿಯ
    ಹೆದರಿಕೇ-ದೈರ್ಯ
    ದುಃಖ -ಸಂತೋಷ
    ಅಸೇ-ನಿರಾಸೇ.
    ಸತ್ಯ-ಅಸತ್ಯ
    ಕೋಪ-ಶಾಂತಿ‌
    ನ್ಯಾಯ-ಅನ್ಯಾಯ.
    ಅವಸರ-ಜಡತ್ವ
    ಮೋಹ-ಪ್ರೀತಿ
    ಅಂಹಂ-ಸ್ವಾಭಿಮಾನ
    +ve -ve ಧನಾತ್ಮಕ -ಋಣಾತ್ಮಕ.
    ಇವೆಲ್ಲದರ ನಡವೆ ನಮ್ಮ ಮನಸ್ಥಿತಿಯನ್ನು ಶೂನ್ಯ ಮಾಡುವುದು ಅಂದರೆ scale ನ್ನಾ ಜೀರೋ ಮಾಡುವುದು ಸಮಾಧಾನ .ಅದೇ ನಮ್ಮ ಮನಸ್ಸಿನ ಸಮಾಧಾನ‌.
    ಬವಿಷ್ಯದಲ್ಲಿ ಎನಾಗುತ್ತದೋ ಅನ್ನುವುದು ಅಥವಾ ಭೂತಕಾಲದಲ್ಲಿ ಹೀಗೆ ಆಗಿಬಿಟ್ಟಿತಲ್ಲಾ ಎನ್ನುವ ಮನಸ್ಥಿತಿಯನ್ನು ಬಿಟ್ಟಿ ವರ್ತಮಾನಕ್ಕೆ ಬರುವುದು ಸಮಾಧಾನ .
    ಸಮಾಧಾನ ಅಂದರೆ ಮನಸ್ಸಿನ ನಡೆಯುವ ದ್ವಂದ್ವ ಅಥವಾ ಯುದ್ದಕ್ಕೆ ವಿರಾಮ ನಿಡುವುದು.
    ಸಮಸ್ಯೆ ಗಳಿಗೆ ಪರಿಹಾರ ಸಿಗುವುದು ನಾವು ದ್ವಂದ್ವ ದಲ್ಲಿ ಭಾಗಿಯಾಗದೇ ,ವಿಚಾರಗಳನ್ನು ಆಲಿಸುವುದು .
    ನಾವು ಸಭೆಯಲ್ಲಿ ಇರುವ ರಾಜನ ಮನಸ್ಥಿತಿಗೆ ಬರುವುದೇ ಸಮಾಧಾನ .ಯುದ್ದದಲ್ಲಿ‌ ರಾಜನೂ ಸಮಾಧಾನ ಇರವುದು ಕಷ್ಟ ಸಾದ್ಯ . ಸಭೆಯಲ್ಲಿ ಕುಳಿತು ಎರಡು ಪಕ್ಷ ಗಳ ಮಂತ್ರಿಗಳ ಮಾತನ್ನು ಆಲಿಸುವ ಸ್ಥಿತಿ .
    ಅಸಮದಾನ ಅಂದರೇ ಯಾವುದೇ ಅತೀ ಯಾದರೂ ಅಸಮಧಾನವೇ.ಜೀವನದಲ್ಲಿ ನಾವು ಯಾವುದನ್ನೂ ಶಾಶ್ವತ ವಾಗಿ ನಿರಂತರವಾಗಿ ಅನುಭವಿಸುವುದು ದುರಂತಕ್ಕೆ ಕಾರಣವಾಗುವುದು . ಎಲ್ಲದಕ್ಕೂ ಒಂದು ಮಿತಿ ಇರಲೇಬೇಕು ..ಸಕ್ಕರೇ ಸಿಹಿ ಎಂದು ಅದನ್ನೇ ನಿರಂತರವಾಗಿ ತಿನ್ನಲು ಸಾದ್ಯವೇ ?
    ಯಾರಿಗೆ ಸಮಾದಾನದಲ್ಲಿ ಇರುವುದು ಗೊತ್ತಿರುತ್ತದೋ ಯಾರು ತಮ್ಮನ್ನು ತಾವು ಆದಷ್ಟು ಬೇಗ ಸಮಾಧಾನ ಮಾಡಿಕೊಂಡು ಸಹಜ ಸ್ಥಿತಿಗೆ ಬರುತ್ತಾರೋ ಅವರೇ ಜೀವನದಲ್ಲಿ ಬಹಳ ಕಾಲ ಮುಂದೆ ಹೋಗುತ್ತಾರೆ ಮತ್ತು ವಿಜಯಿಗಳು ಆಗುತ್ತಾರೆ .
    ಅತೀ ಸಂತೋಷ ದಲ್ಲಿ ,ಅತ್ಯಂತ ‌ಉತ್ಸಾಹದಲ್ಲಿ ,ಅತೀ ಕೋಪದಲ್ಲಿ ,ಅತೀ ಹೆದರಿಕೆಯಲ್ಲಿ ,ಅತೀದೈರ್ಯದಲ್ಲಿ‌, ಅತೀ ಪ್ರೀತಿಯಲ್ಲಿ ,ಅತೀಮೋಹದಲ್ಲಿ ,ಅತೀಯಾದ ಸ್ವಾಭಿಮಾನದಲ್ಲಿ ,ಅತೀಯಾದ ಆಸೆಯಲ್ಲಿ
    ನಾವು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರುತ್ತವೇಯೇ ?
    ಅತೀ ಹೆದರಿದಾಗ ಅಥವಾ ಅತೀ ದೈರ್ಯದಲ್ಲಿ ನಮ್ಮ ಹೃದಯಬಡಿತ ರಕ್ತದೊತ್ತಡದ ಲ್ಲಿ ವ್ಯತ್ಯಾಸ ವಾಗಿ ಆರೋಗ್ಯ ದಲ್ಲಿ ತೊಂದರೆ ಆಗುವುದೇ ,ಅತೀ ನಿರಾಶೆ ಯಲ್ಲಿ ಖಿನ್ನತೆ ಕಾಣಬಹುದೇ ?
    ಆದ್ದರಿಂದ ಜೀವನದಲ್ಲಿ ಸಮಾದಾನ ಮನಸ್ಸಿನ ಜೀರೋ ಸ್ಥಿತಿ ಅರ್ಥಾತ್‌ ಶೂನ್ಯ ಸ್ಥಿತಿಯಲ್ಲಿ ಅವಾಗ ಅವಾಗ ನಮ್ಮನ್ನು ನಾವು ಇಟ್ಟುಕೊಳ್ಳುವುದು ಮತ್ತು ಬೇರೆಯವರನ್ನು ಸಮಾಧಾನ ಮಾಡುವುದು ಮುಖ್ಯ ವಾಗುತ್ತದೆ.
    ಸಮಾಧಾನ ಎಲ್ಲಾ ಸಂಕಷ್ಟ ಗಳಿಗೆ ಕೊನೆಯ ಪರಿಹಾರ .ನಮಗೆ ಯಾವತ್ತೋ ಯಾವುದೇ ದಾರಿ ಕಾಣದೇ ಮನಸ್ಸು ಅಲ್ಲೋಲ ಕಲ್ಲೋಲವಾದಾಗ ನಮ್ಮ ಆಸರೆಗೆ ಬರುವುದೇ ಸಮಾದಾನ .ಸಮಾದಾನದಿಂದ ಎಷ್ಟೋ ಕಾಯಿಲೆಗಳಿಗೆ ಪರಿಹಾರ ಸಿಗುತ್ತದೆ .ಜಗಳಗಳು ಆಗದೇ ಇರಬಹುದು ,ಉನ್ನತಿಕಾಣಬಹುದು .
    ಸಮಾದಾನ ಅಂದರೆ ನಾವುಮಾಡುವ ಕೆಲಸವನ್ನು ಬಿಟ್ಟು ಕುಳಿತುಕೊಳ್ಳುವುದಲ್ಲ .ಆದರೆ ಸಮಾದಾನ ಮನಸ್ಥಿತಿ ಯಿಂದ ಯಾವುದೇ ಕಾರ್ಯ ಗಳನ್ನು ಮಾಡಿದಾಗ ,ಉತ್ತಮವಾದ ಬೇಗ ಫಲಿತಾಂಶ ಸಿಗುತ್ತದೆ .ಸಮಾದಾನದಿಂದ ಎನನ್ನು , ಹೇಗೆ ಯಾವುದನ್ನು ಯಾವಾಗ ಮಾಡಬೇಕು ಎನ್ನುವ ಜ್ಞಾನ ಸಿಗುತ್ತದೆ . ಸಮಾಧಾನ ದಿಂದ ದರ್ಮ ಯಾವುದು ಎನ್ನುವುದು ಅರ್ಥ ಆಗುತ್ತದೆ .
    ಜಗತ್ತಿನಲ್ಲಿ ಸಮಾದಾನ‌ ಬಹಳಷ್ಟು ಜನರಿಗೆ ಬೇಕಾಗಿದೆ ,ಸಮಾದಾನ‌ ಅರ್ಥವಾಗಬೇಕಿದೆ .
    ನನ್ನ ವಿಚಾರ ಇಷ್ಟ ಆದರೆ ಒಂದು ಲೈಕ್ ಮಾಡಿ .
    ಮುಂದಿನ ಸಾರಿ ಮೊತ್ತೊಂದು ಉತ್ತಮ ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೆನೆ .
    #ಸಮಾಧಾನ #ಹೇಗೆ #ಏನು #ಮಾಡಬೇಕು #ಲಾಭ #ಹಾನಿ
    #ಜೀವನ

КОМЕНТАРІ •