ವೈಜ್ಞಾನಿಕ ಲೋಕಕ್ಕೆ ಸವಾಲು ಹಾಕುವ ಆಧ್ಯಾತ್ಮದ ಪವಾಡಗಳ ಸತ್ಯಾಸತ್ಯತೆ | ಗುರುಬ್ರಹ್ಮ | Uncut Version

Поділитися
Вставка
  • Опубліковано 21 чер 2023
  • ವೈಜ್ಞಾನಿಕ ಲೋಕಕ್ಕೆ ಸವಾಲು ಹಾಕುವ ಆಧ್ಯಾತ್ಮದ ಪವಾಡಗಳ ಸತ್ಯಾಸತ್ಯತೆ | ಗುರುಬ್ರಹ್ಮ | Uncut Version
    ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರೊಂದಿಗೆ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟಾಲಜಿ ಸೈನ್ಸಸ್ ಮತ್ತು ಆರ್ಗನ್ ಟ್ರಾನ್ಸ್ ಪ್ಲಾಂಟ್, ಬೆಂಗಳೂರು ಇದರ ನಿರ್ದೇಶಕರು ಮತ್ತು ದೇಶದ ಖ್ಯಾತ ವೈದ್ಯರಲ್ಲೊಬ್ಬರಾದ ಡಾ. ನಾಗೇಶ್ ಗೌಡ ಅವರು ನಡೆಸಿದ ಆಧ್ಯಾತ್ಮ ಮತ್ತು ವಿಜ್ಞಾನದ ನಡುವಿನ ಸಂಬಂಧದ ಕುರಿತ ವಿಶೇಷ ಸಂದರ್ಶನವೇ ಗುರುಬ್ರಹ್ಮ. ಈ ಸಂದರ್ಶನದಲ್ಲಿ ಅವಧೂತರು ಹೇಳಿರುವ ಆಧ್ಯಾತ್ಮ ಮತ್ತು ವಿಜ್ಞಾನದ ಸಮೀಕರಣ ಇಲ್ಲಿದೆ.
    ಆಧ್ಯಾತ್ಮ ಮತ್ತು ವಿಜ್ಞಾನದ ನಡುವಿನ ದ್ವಂದದ ದೃಷಿಕೋನದಲ್ಲಿ ವಿವೇಕದ ಮಟ್ಟಿಗೆ ಇರುವ ಜ್ಞಾನ ವಿಜ್ಞಾನ. ಅದಕ್ಕೆ ವಿವೇಕದ ಚೌಕಟ್ಟಿದೆ. ವಿವೇಕದ ಮಟ್ಟವನ್ನು ದಾಟಿದ ಚೈತನ್ಯವನ್ನು ಆಧ್ಯಾತ್ಮ ಎನ್ನಲಾಗುತ್ತದೆ. ವಿಜ್ಞಾನದಲ್ಲಿ ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಜ್ಞಾನಗಳೆಂಬ ಮೂರು ವಿಧಗಳಿವೆ. ಆಧ್ಯಾತ್ಮದ ಪ್ರಕಾರ ಆದ್ಯ ಎಂದರೆ ಆರಂಭ ಎಂದರ್ಥ. ಇದನ್ನೇ ಆದಿ ಶಕ್ತಿ ಎನ್ನಲಾಗುತ್ತದೆ. ದೇಹದಲ್ಲಿ ಹೃದಯವು ಜೀವದ ಮೂಲವಾಗಿದೆ. ನಾರಾಯಣನು ಹೃದಯದಲ್ಲಿ ನೆಲೆಸಿದ್ದಾನೆ. ಆಧುನಿಕ ವಿಜ್ಞಾನದಲ್ಲಿ ವಿಧಿಯನ್ನು ಒಪ್ಪಲಾಗುತ್ತಿಲ್ಲ. ಮಾನವ ವಿಜ್ಞಾನದಿಂದ ಸರ್ವವನ್ನೂ ಸೃಷ್ಟಿಸಿದರೂ, ಮೂಲವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ನನ್ನಿಂದ ಆದ ವಾದವು ನಾಸ್ತಿಕ ವಾದ ಎನಿಸಿಕೊಳ್ಳುತ್ತದೆ. ಆಧ್ಯಾತ್ಮದ ಅಪಾರವಾದ ನಂಬಿಕೆಯಿಂದ ಮಾಡುವ ವಾದವು ಆಸ್ತಿಕ ವಾದ ಎನಿಸಿಕೊಳ್ಳುತ್ತದೆ. ವೈಜ್ಞಾನಿಕ ಅನ್ವೇಷಣೆಗಳ ಆಚೆಗೆ ಮಾನವ ಶರೀರವನ್ನು ವೀರ್ಯದ ರೂಪದಲ್ಲಿ ಸಮೀಕರಿಸಿರುವ ಭಗವಂತನ ಶಕ್ತಿಯನ್ನು ಊಹಿಸಲು ಅಸಾಧ್ಯ. ಕಣ್ಣಿಗೆ ಕಾಣುವ ಭೌತಿಕ ಜ್ಞಾನವು ವಿಜ್ಞಾನದ ಮೂಲವಾಗಿದೆ. ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಭಗವಂತನಿಂದ ನಿರ್ಮಿಸಲ್ಪಟ್ಟ ಅನಂತದಲ್ಲಿ ಬದುಕುತ್ತಿದ್ದೇವೆ. ಈ ಅನಂತದಲ್ಲಿ ಕಾಣುವ ಬೆಳಕೇ ಆದ್ಯಾ ಶಕ್ತಿ ಅಥವಾ ಆಧ್ಯಾತ್ಮವಾಗಿದೆ. ವಿಜ್ಞಾನದಲ್ಲಿ ಸೂರ್ಯನ ಬಗೆಗಿನ ವೈಜ್ಞಾನಿಕ ವಿಶ್ಲೇಷಣೆಗಳಿವೆ ಆದರೆ ಅದಕ್ಕೆ ಸೂರ್ಯನ ಹತ್ತಿರ ತಲುಪಲು ಸಾಧ್ಯವಾಗಿಲ್ಲ. ಆಧ್ಯಾತ್ಮದ ನೆಲೆಯಿರುವ ಶಾಸ್ತ್ರಗಳಲ್ಲಿ ಸೂರ್ಯನ ಸೃಷ್ಠಿಯ ಸಂಗತಿಗಳ ವಿಶ್ಲೇಷಣೆಯೂ ಇದೆ. ಪವಾಡಗಳು ನಡೆಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ, ನಮ್ಮ ಜ್ಞಾನದ ನಿಲುವಿಗೆ ಸಿಗದ ಘಟನೆಗಳು ನಡೆದಾಗ ಅದನ್ನು ಪವಾಡ ಎಂದು ಕರೆಯಲಾಗುತ್ತದೆ. ಪವಾಡವು ಜ್ಞಾನದ ಮಟ್ಟದ ಆಧಾರದಲ್ಲಿ ಅವಲಂಬಿತವಾಗಿದೆ. ನಮ್ಮ ಪೂರ್ವಜರಾದ ಋಷಿಗಳು ಇಂತಹಾ ಜ್ಞಾನವನ್ನು ಒಲಿಸಿಕೊಂಡಿದ್ದರು ಆದರೆ ಜನರು ಇದನ್ನು ಪವಾಡ ಎಂದು ಕರೆದಿದ್ದಾರೆ. ಇದಕ್ಕೆ ಕಾರಣ ಜನರಿಗೆ ಆ ಜ್ಞಾನದ ಅರಿವಿಲ್ಲದೇ ಇರುವುದೇ ಆಗಿದೆ. ವಿಜ್ಞಾನವು ವಾಸ್ತವವನ್ನು ಅವಲಂಬಿಸಿದೆ. ಅಶ್ವಿನೀ ದೇವತೆಗಳ ಪ್ರತಿರೂಪವಾದ ಚರಕ-ಶುಶ್ರುತರು ತನ್ನ ಗ್ರಂಥಗಳಲ್ಲಿ ಮೊದಲು ಖಾಯಿಲೆಗೆ ಬಾಧಿತವಾಗುವುದು ಮನಸ್ಸು ಎನ್ನುವುದನ್ನು ಉಲ್ಲೇಖಿಸುತ್ತಾನೆ. ಖಾಯಿಲೆಯಿದ್ದಾಗ ಮನಸ್ಸನ್ನು ಏಕಾಂತದಲ್ಲಿರಿಸಿ ಧನಾತ್ಮಕ ವಾತಾವರಣವನ್ನು ನಿರ್ಮಿಸಬೇಕು. ಮನಸ್ಸನ್ನು ಸಮಸ್ಥಿತಿಗೆ ತರುವುದೇ ಮೊದಲ ಚಿಕಿತ್ಸೆ. ದೇವರ ನಾಮ ಜಪಿಸುವುದರಿಂದಲೂ ಆಧ್ಯಾತ್ಮವಾಗಿ ಚಮತ್ಕಾರಗಳನ್ನು ಅನುಭವಿಸಬಹುದು. ನಮ್ಮ ದೇಶದ ವಸ್ತ್ರಾಚರಣೆಗಳಿಗೆ ನಾವು ಗೌರವವನ್ನು ನೀಡದಿದ್ದರೆ ವಿದೇಶಿಗರ ಗೌರವ ಪಡೆಯುವ ಯೋಚನೆ ನಿಷ್ಪ್ರಯೋಜಕ. ಇತಿಹಾಸದಲ್ಲಿ ಮಹಾತ್ಮರು ಎನಿಸಿದವರೆಲ್ಲಾ ತನ್ನ ಜನ್ಮದ ನಿಜಾರ್ಥವನ್ನು ಕಂಡುಕೊಂಡವರೇ ಆಗಿದ್ದಾರೆ. ಮನುಷ್ಯನ ಗರ್ವಭಂಗವನ್ನು ದೇವರು ನಾನಾ ಅವತಾರದ ಮೂಲಕ ನಾಶ ಮಾಡಿದ್ದಾನೆ. ಒಳ್ಳೆಯ ಮತ್ತು ಕೆಟ್ಟ ಚಿಂತನೆಗಳನ್ನು ಚಿತ್ತದಲ್ಲಿ ತುಂಬುವವನು ಭಗವಂತನೇ ಆಗಿದ್ದಾನೆ. ಒಬ್ಬ ರೋಗಿಯ ಪಾಲಿಗೆ ವೈದ್ಯ ದೇವರಾಗಿರುತ್ತಾನೆ. ಆ ದೇವರಲ್ಲಿ ಭಕ್ತನಿಗೆ ಭಯ, ಕಳಂಕ, ಮೋಸ ಮತ್ತು ನಾಟಕ ಬುದ್ಧಿಗಳು ಇರುವುದಿಲ್ಲ. ವೈದ್ಯರು ಮತ್ತು ಗುರುಗಳ ಬಳಿ ಯಾವುದೇ ಕಾರಣಕ್ಕೂ ಸುಳ್ಳನ್ನಾಡಬಾರದು. ಎದುರಿಗಿನ ವ್ಯಕ್ತಿ ಎಂತಹವನೇ ಆದರೂ ಅವನನ್ನು ಸರಿ ಮಾಡುವ ಜವಾಬ್ದಾರಿ ಇವರಿಬ್ಬರ ಮೇಲಿರುತ್ತದೆ. ಕಲಿ ಎನ್ನುವುದು ಕಲ್ಮಶದ ಸಂಕೇತ. ಹೀಗಾಗಿ ಅಂಧಕಾರದಿಂದ ಬೆಳಕಿನೆಡೆಗೆ ಸಾಗಲು ಪ್ರಯತ್ನಿಸಬೇಕು. ಅನಾವಶ್ಯಕ ವಸ್ತುಗಳಿಂದ ಮನಸ್ಸು ಮತ್ತು ದೇಹದ ಆರೋಗ್ಯ ಕ್ಷೀಣಿಸುತ್ತದೆ. ಹೀಗಾಗಿ ಇದು ಅನಗತ್ಯ ಕರ್ಮವಾಗುತ್ತದೆ. ತನ್ನ ಮಿತಿಯನ್ನು ಕಂಡುಕೊಂಡ ದಿನ ಮನುಷ್ಯ ಸರಿ ಹೋಗುತ್ತಾನೆ. ಮಿತಿಯನ್ನು ಮೀರಿದಾಗಲೇ ಖಾಯಿಲೆಗಳು ಆವರಿಸುವುದು. ಸಹಜವಾದ ಜೀವನವನ್ನು ಹಾಳುಗೆಡವಿ ಸಾಧಿಸುವಂತಹುದು ಏನೂ ಇಲ್ಲ. ಅತಿಯಾದ ಉತ್ಸಾಹ ಮತ್ತು ಕೊರಗುವಿಕೆಯಿಂದ ಆಪತ್ತು ಸಂಭವಿಸುತ್ತದೆ. ಜೀವನದಲ್ಲಿ ಎದುರಾಗುವ ಪ್ರತಿಯೊಂದನ್ನು ಸ್ವೀಕರಿಸುತ್ತಾ ಹೋದಾಗ, ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಜಗತ್ತಿನಲ್ಲಿ ಉಚಿತವಾಗಿ ಸಿಗುವುದು ಸಲಹೆ ಮತ್ತು ಠೀಕೆ. ಒಂದನ್ನೇ ಪರಮ ಸತ್ಯ ಎಂದು ಒಪ್ಪಿಕೊಳ್ಳಬೇಕೆಂದೇನಿಲ್ಲ. ಪರಮಾತ್ಮನ ಕಡೆಗೆ ಹೋಗಲು ಬೇರೆ ಬೇರೆ ದಾರಿಯಿದೆ. ಆಧ್ಯಾತ್ಮ ಸಾಧನೆಯ ಸುಲಭ ದಾರಿಯೇ ಸೇವೆ. ಸೇವೆಯು ದೇಹ ಮತ್ತು ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ. ಮಹಾನ್ ಚಿಂತಕರೆಲ್ಲರೂ ಈ ಮಾರ್ಗವನ್ನೇ ಪಾಲಿಸಿದ್ದಾರೆ. ದೇವಧೂತರೆನಿಸಿದವರು ಸರ್ವಾಂತರ್ಯಾಮಿಯ ಸಹಾಯದಿಂದ ಸೇವೆ ಸಲ್ಲಿಸುತ್ತಾರೆ. ಭಾರತದಲ್ಲಿ ದೊರಕುವ ಸಣ್ಣ ಸಣ್ಣ ವಿಷಯವನ್ನು ಅಧ್ಯಯಿಸಿದರೂ ಅಸಂಖ್ಯ ಜ್ಞಾನ ಪ್ರಾಪ್ತವಾಗುತ್ತದೆ. ಧರ್ಮದ ಚೌಕಟ್ಟನ್ನು ಹಾಕಿಕೊಂಡವರು ನಾವೇ ಆಗಿದ್ದೇವೆ. ಪ್ರತಿಯೊಂದು ಧರ್ಮವೂ ಎಲ್ಲರೂ ಒಂದು ಎನ್ನುವುದನ್ನೇ ನಿರೂಪಿಸಿದೆ. ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಅಹಿಂಸೆ. ದ್ವೇಷ ಭಾವದಿಂದ ಹೊರಬಂದಾಗ ದೇಶ ಕಟ್ಟಲು ಸಾಧ್ಯವಾಗುತ್ತದೆ
    For More Videos:
    ಸೂತಕದ ಮನೆ ಹನ್ನೊಂದು ದಿನ ಹೇಗಿರಬೇಕು ಗೊತ್ತೇ ? | ಅವಧೂತ ಶ್ರೀ ವಿನಯ್ ಗುರೂಜಿ • ಸೂತಕದ ಮನೆ ಹನ್ನೊಂದು ದಿನ...
    ವಿವಾಹ ಯೋಗ ಕೈ ತಪ್ಪುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ • ವಿವಾಹ ಯೋಗ ಕೈ ತಪ್ಪುವುದು...
    ಸರ್ಪ ದೋಷ ನಿವಾರಣೆ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ • ಸರ್ಪ ದೋಷ ನಿವಾರಣೆ ಹೇಗೆ?...
    ಹೀಗೆ ಮಾಡುವುದರಿಂದ ಮೋಕ್ಷದ ಬಾಗಿಲು ತೆರೆಯುತ್ತದೆ! | ಭಾಗ - 2 | ಅವಧೂತ ಶ್ರೀ ವಿನಯ್ ಗುರೂಜಿ • ಹೀಗೆ ಮಾಡುವುದರಿಂದ ಮೋಕ್ಷ...
    ಇದುವೇ ಸ್ವರ್ಗ ನರಕದ ಮಹಾ ರಹಸ್ಯ ! | ಭಾಗ - ೧ | ಅವಧೂತ ಶ್ರೀ ವಿನಯ್ ಗುರೂಜಿ • ಇದುವೇ ಸ್ವರ್ಗ ನರಕದ ಮಹಾ ...
    #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
    #hospital #medicine #Family #Familylife

КОМЕНТАРІ • 17