ನಮ್ಮ ದೇಹದಲ್ಲಿರುವ ಏಳು ಚಕ್ರಗಳು ಮತ್ತು 14 ಲೋಕಗಳ ವಿಶೇಷ ವಿಶ್ಲೇಷಣೆ! | secret of seven chakras in human body

Поділитися
Вставка
  • Опубліковано 20 гру 2023
  • ನಮ್ಮ ದೇಹದಲ್ಲಿರುವ ಏಳು ಚಕ್ರಗಳು ಮತ್ತು 14 ಲೋಕಗಳ ವಿಶೇಷ ವಿಶ್ಲೇಷಣೆ! | secret of seven chakras in human body | Avadhootha Sri Vinay Guruji
    ಧ್ಯಾನಮುದ್ರೆಯ ರಹಸ್ಯವನ್ನು ತಿಳಿಯುವ ಹಂಬಲ ಹಲವರಲ್ಲಿದೆ. ಯಾವುದೇ ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಅಧ್ಯಯನ ಅತ್ಯವಶ್ಯಕ . ನಮ್ಮ ಶರೀರವನ್ನು ಅನ್ನದ ಕಾಳು ಎಂದು ಭಾವಿಸಿದರೆ, ಇಡೀ ಸೃಷ್ಠಿಯು ಗದ್ದೆಯಾಗುತ್ತದೆ, ಅದನ್ನು ಬೆಳೆಯುತ್ತಿರುವ ಕೃಷಿಕನನ್ನು ಪರಮೇಶ್ವರ ಎಂದು ಭಾವಿಸಬಹುದು. ಶರೀರದ ಅರ್ಧಭಾಗವನ್ನು ಶಿವಭಾಗ ಎಂದು ಸಂಬೋಧಿಸಿದರೆ ಇನ್ನರ್ಧ ಭಾಗವನ್ನು ಶಕ್ತಿಭಾಗ ಎಂದು ಪರಿಗಣಿಸಲಾಗುತ್ತದೆ. ಇದನ್ನೇ ಪುರುಷ ಮತ್ತು ಪ್ರಕೃತಿ ಎನ್ನುವುದು. ನಮ್ಮ ದೇಹವನ್ನು ಐದು ಭಾಗಗಳಾಗಿ ವಿಭಜಿಸಿದರೆ ಅಗ್ನಿ, ವಾಯು, ವರುಣ, ಆಕಾಶ ಮತ್ತು ಪೃಥ್ವಿ ಎಂಬ ಪಂಚಭೂತ ತತ್ವಗಳು ತೆರೆದುಕೊಳ್ಳುತ್ತದೆ. ಶರೀರದ ನಾಲಗೆ, ಮೂತ್ರದ್ವಾರ, ಹೃದಯ ಮತ್ತು ಜಠರ ಭಾಗದಲ್ಲಿ ಅಗ್ನಿಯು ಯೋಗಾಗ್ನಿಯಾಗಿ ನೆಲೆಸಿರುವ ಅನುಭೂತಿಯಾಗುತ್ತದೆ. ದೇಹದಲ್ಲಿರುವ ಸೂರ್ಯ ಮತ್ತು ಚಂದ್ರನಾಡಿಗಳು ಕಣ್ಣಿನ ಭಾಗದಲ್ಲಿರುತ್ತದೆ. ಪ್ರಕೃತಿ ಸ್ವರೂಪವಾದ ಚಂದ್ರನಾಡಿಯು ಸೂರ್ಯನಾಡಿಗಿಂತ ಕಡಿಮೆ ಪ್ರಭೆಯನ್ನು ಹೊಂದಿರುವುದನ್ನು ಕಾಣಬಹುದು. ಅಂಡದಲ್ಲಿ ಬ್ರಹ್ಮಾಂಡದ ರಹಸ್ಯವು ತಿಳಿಯಲ್ಪಟ್ಟಿದೆ. ಮಾನವ ಶರೀರದಲ್ಲಿ 14 ಲೋಕಗಳಿವೆ. ನಮ್ಮ ದೇಹವು ಮೂಲಾಧಾರ ಚಕ್ರದಲ್ಲಿ ನೆಲೆಯಾಗಿದೆ. ಮೂಲಾಧಾರ ಸ್ಥಿತಿಗೆ ಗಣಪತಿ ಅಧಿಪತಿಯಾಗಿದ್ದಾನೆ. ಮಣಿಪುರ ಚಕ್ರವು ಕಾಮನೆಗಳನ್ನು ವೃದ್ಧಿಸುತ್ತದೆ. ಇಂದ್ರಿಯ ಸುಖಗಳಿಗೆ ಕಾರಣನಾದ ಇಂದ್ರ ಮತ್ತು ಮನ್ಮಥ ಈ ಚಕ್ರಭಾಗಕ್ಕೆ ಅಧಿದೇವತೆಗಳಾಗಿದ್ದಾರೆ. ಸ್ವಾದಿಷ್ಟಾನ ಚಕ್ರವು ಬ್ರಹ್ಮನಾಭಿಯಲ್ಲಿ ಜಠರಾಗ್ನಿ ನೆಲೆಯಾಗಿದೆ. ಈ ಭಾಗದಲ್ಲಿ ಸ್ವರ್ಗ ನರಕದ ನಡುವಿನಲ್ಲಿರುವ ವೈತರಣೀ ನದಿಯ ಅಸ್ತಿತ್ವವನ್ನು ಭ್ರಮಿಸಬಹುದು. ಹೃದಯ ಭಾಗದಲ್ಲಿ ಅನಾಹತ ಚಕ್ರ ಸ್ಥಿತವಿದೆ. ಇದನ್ನು ವಿಷ್ಣುಗ್ರಂಥಿ ಎನ್ನಲಾಗುತ್ತದೆ. ಪ್ರತಿಯೊಂದು ಜೀವಾತ್ಮದ ಹೃದಯ ಭಾಗದಲ್ಲಿ ಚೈತನ್ಯ ಶಕ್ತಿಯು ಅಣುವಿನ ರೂಪದಲ್ಲಿ ನೆಲೆಸಿದೆ. ಈ ಭಾಗದಲ್ಲಿ ಸೃಷ್ಠಿಯ ರಹಸ್ಯ ಅಥವಾ ಚಿದಂಬರ ರಹಸ್ಯವಿದೆ. ಮನುಷ್ಯನ ಮೆದುಳಿನ ಜಾಗವು ತಪೋಲೋಕವಾಗಿದೆ. ಅದಕ್ಕಿಂತ ಮೇಲೆ ವೈಕುಂಠ ಲೋಕವಿದೆ. ಗಾಯತ್ರಿ ಜಪದಿಂದ ಪಂಚಪ್ರಾಣಗಳನ್ನು ಏಕಕೇಂದ್ರಿಯವಾಗಿಸಲು ಸಾಧ್ಯವಿದೆ. ತ್ರಿಕಾಲದಲ್ಲೂ ಗಾಯತ್ರಿ ಮಂತ್ರವನ್ನು ಪಠಿಸುವವನಿಗೆ ತ್ರಿನೇತ್ರ ಅಥವಾ ಜ್ಞಾನದ ಬಾಗಿಲು ತೆರೆಯುತ್ತದೆ. ಗಾಂಧೀಜಿ ಹೇಳಿದ ಕರ್ಮಮಾರ್ಗವು ಈ ಚಕ್ರಗಳನ್ನು ಬೇಧಿಸಲು ಇರುವ ಸರಳ ಮಾರ್ಗವಾಗಿದೆ. ಮೋಹವೇ ಭ್ರಷ್ಟಾಚಾರಕ್ಕೆ ಮೂಲ ಕಾರಣ. ಮನಸ್ಸು ಭ್ರಷ್ಟವಾದಾಗ ಶರೀರ, ಬುದ್ಧಿ ಆಲೋಚನೆ ಎಲ್ಲವೂ ಭ್ರಷ್ಟವಾಗುತ್ತದೆ. ಧ್ಯಾನ ಮಾಡುವುದರಿಂದ ಭ್ರಷ್ಟಾಚಾರವನ್ನು ನಿಲ್ಲಿಸಬಹುದಾಗಿದೆ. ಧ್ಯಾನ ಮಾಡುವುದರಿಂದ ನಮ್ಮೊಳಗಿನ ಪರಮಾತ್ಮ ಜಾಗೃತನಾಗುತ್ತಾನೆ. ಇದರಿಂದ ಮೋಹ ನಾಶವಾಗುತ್ತದೆ. ಅನೇಕ ಸನ್ಯಾಸಿಗಳು ಸತ್ಕರ್ಮಗಳನ್ನು ಮಾಡಿ ಪುಣ್ಯ ಸಂಪಾದಿಸುತ್ತಾರೆ. ನೈಷ್ಕರ್ಮ ಕರ್ಮದಿಂದ ಪಾಪಗಳು ನಾಶವಾಗುತ್ತದೆ. ಗಾಂಧೀಜಿ ನೈಷ್ಕರ್ಮ ಮತ್ತು ಪ್ರಾರ್ಥನೆಯ ಸಿದ್ಧಾಂತವನ್ನು ಸಮಾಜಕ್ಕೆ ನೀಡಿದ್ದಾರೆ. ತಾನು ಬದುಕಬೇಕೆನ್ನುವ ಆಸೆಯೇ ಸಾವಾಗಿದೆ. ಶರೀರಕ್ಕೆ ಸಾವಿದೆ ಆತ್ಮಕ್ಕಲ್ಲ. ಹಳೆಯ ನೆನಪುಗಳ ಶಕ್ತಿಯಿಂದ ಮುಂದಿನ ಜನ್ಮ ರೂಪುಗೊಳ್ಳುತ್ತದೆ. ಶರೀರದ ಪ್ರತಿಯೊಂದು ಭಾಗದಲ್ಲೂ ದೇವತೆಗಳ ನೆಲೆಯಿದೆ. ಸರ್ವವೂ ಆಕಾಶತತ್ವದಲ್ಲೇ ಸ್ಥಿತವಾಗಿದೆ.
    For More Videos:
    ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾಳೆ! | ಅವಧೂತ ಶ್ರೀ ವಿನಯ್ ಗುರೂಜಿ
    • ದೇಹದಲ್ಲಿ ಈ ಚಕ್ರ ಜಾಗೃತವ...
    ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ನಾಗಪ್ರತಿಷ್ಠೆಯ ಹಿಂದ...
    ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ • ಕೃಷ್ಣಾಷ್ಟಮಿ ಆಚರಿಸುವ ಮು...
    ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ಶ್ರೀ ವಿನಯ್ ಗುರೂಜಿ
    • ಇದು ಕೃಷ್ಣನ ಒಳಗಿರುವ ಅದ್...
    ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪುಣ್ಯಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ದುರ್ಗಾಸಪ್ತಶತೀ ಮಂತ್...

КОМЕНТАРІ • 13

  • @sunithabs327
    @sunithabs327 5 місяців тому +4

    ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏

  • @roopagani5022
    @roopagani5022 5 місяців тому +1

    Namaskar guruji 🙏🙏🙏🌺💐🌺💐🌺💐🌺🍅🌺

  • @NagarajBK-zl9em
    @NagarajBK-zl9em 5 місяців тому

    Namasteguruji,,guruvenamha,,,

  • @vidyaprabhu1389
    @vidyaprabhu1389 4 місяці тому

    Hearty pranams Guruji.
    Your discourse is very insightful, inspirational and motivational.No one has narrated in such a simple language which is easy to understand and elevate ourselves to higher lever.Thank you n bless all of us 🙏.

  • @abhishekgpabhishek5576
    @abhishekgpabhishek5576 5 місяців тому

    Om namah shivaya ಗುರುದೇವ 🙏😊

  • @user-ft8ve1zz7b
    @user-ft8ve1zz7b 5 місяців тому

    Sri gurubyo namaha🙏🙏🙏🙏🙏

  • @lakshmikanthc.l2366
    @lakshmikanthc.l2366 2 місяці тому

    🙏🙏🙏

  • @manjulaandanur187
    @manjulaandanur187 5 місяців тому

    🙏🙏🙏🙏🙏

  • @shamanthkumar9530
    @shamanthkumar9530 5 місяців тому

    Pujyania guruji🙏 Nimmage anekanek🙏 Namaskaragalu 👌👌💚👌👌🙏🙏🧡🙏🙏🤍

  • @laxmipai5321
    @laxmipai5321 5 місяців тому

    Namaskar guruji 🙏🏻

  • @dukhi1804
    @dukhi1804 5 місяців тому

    🙏

  • @pallavipai8663
    @pallavipai8663 5 місяців тому

    🙏🙏🙏🙏🙏

  • @GopalBhagwat-hs5ct
    @GopalBhagwat-hs5ct 5 місяців тому

    🙏🙏🙏