ಕುಸುಮಬಾಲೆ - ಓದು : ಎ. ಎಂ. ಶಿವಸ್ವಾಮಿ - ಕಂತು ೧ | Kusumabale - Reading : A. M. Shivaswamy - Episode 1

Поділитися
Вставка
  • Опубліковано 5 жов 2024
  • ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ yt.orcsnet.com...
    ********************************************
    ಪ್ರಯೋಗದಲ್ಲಿ ಒರಟು ಹಾಗೂ ಶಿಷ್ಟವಲ್ಲದ ದಲಿತ , ಪ್ರಾದೇಶಿಕ ಭಾಷೆಯನ್ನು ಇತರ ಭಾಷಾ ಪ್ರಭೇದಗಳಂತೆಯೇ ಸಮರ್ಥವಾಗಿ ಬಳಸಿ , ಕಣ್ಣೊಡಲ ತುಂಬುವ ಸಶಕ್ತ ರೂಪಕಗಳೊಡನೆ ದೇವನೂರು ಮಹಾದೇವ ಬರೆದ ಕೃತಿ 'ಕುಸುಮಬಾಲೆ' ಕನ್ನಡ ಕಾದಂಬರಿ ಇತಿಹಾಸದಲ್ಲಿ a sudden leap ಅನ್ನಿಸಿಕೊಂಡು ಹಲವು ಚರ್ಚೆಗೆ ದಾರಿಯಾಯಿತು. ತನ್ನ ವಿಶಿಷ್ಟವಾದ ಕಥನ ಕ್ರಮದಿಂದ ಓದುಗ ಮತ್ತು ವಿಮರ್ಶಕ ವರ್ಗಗಳೆರಡರಿಂದಲೂ ಪ್ರಶಂಶೆಗೆ ಪಾತ್ರವಾಯಿತು .
    ಕುಸುಮಬಾಲೆ ಮೊತ್ತ ಮೊದಲನೆಯದಾಗಿ ೧೯೮೫ರಲ್ಲಿ ಸುದ್ದಿ ಸಂಗಾತಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು . ಅದು ಪುಸ್ತಕರೂಪದಲ್ಲಿ ಹೊರಬಂದದ್ದು ೧೯೮೮ ರಲ್ಲಿ . ಇದಾದ ಮಾರನೆಯ ವರ್ಷದಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ಮೂಲಕ ಕೃತಿಕಾರ ದೇವನೂರು ಮಹಾದೇವರಿಗೆ ಕನ್ನಡದಲ್ಲಿ ಆ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಲೇಖಕ ಅನ್ನುವ ಗರಿ ಮೂಡಿಸಿತು .
    ಸರಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಎ. ಎಂ. ಶಿವಸ್ವಾಮಿ ಅವರು ಋತುಮಾನಕ್ಕಾಗಿ ಕುಸುಮಬಾಲೆಯನ್ನು ಓದಿದ್ಡಾರೆ . ಮುಂದೆ ಇದು ಹಲವು ಕಂತುಗಳಲ್ಲಿ ಪ್ರಕಟವಾಗಲಿದೆ . ಮೊದಲ ಕಂತು ಇಲ್ಲಿದೆ ಕೇಳಿ.

КОМЕНТАРІ • 35

  • @shrikantakki7327
    @shrikantakki7327 5 років тому +6

    ಕುಸುಮಬಾಲೆ ಕೃತಿಯನ್ನ ನಾನು ಓದಿದ್ದೇನೆ, ನಿಮ್ಮ ವಾಚನದಿಂದ ನನಗೆ ನಾನು ಓದಿದ ಪರಿ ನನಗೆ ಮರೆತು ಹೋಗಿ,ನಿಮ್ಮ ದ್ವನಿ ನನ್ನ ಮನಸಲ್ಲಿ ಹಿಡಿದು ಕಟ್ಟಿದ ಹಾಗೆ ಹಾಗಿದೆ, ನಿಮ್ಮ ಮುಂದಿನ ಸಂಚಿಕೆಯನ್ನ ನಾನು ಕಾಯುತ್ತಾ ಇರುತ್ತೇನೆ, ಬೇಗ ನಮ್ಮ ಕೇಳುಗ ಅಭಿಮಾನಿಗಳಿಗೆ ಉಣಬಡಿಸಿ ಸರ್. ಋತುಮಾನದ ಪ್ರಯತ್ನ ಹೀಗೆ ಮುಂದುವರೆಯಲಿ.

  • @praveenshimoga9353
    @praveenshimoga9353 5 років тому +6

    ತುಂಬಾ ಅದ್ಬುತ ಸರ್... ದಯವಿಟ್ಟು ತೇಜಸ್ವಿ ಕಥೆಗಳನ್ನೂ ಈಗೆ ವಾಚಿಸಿದರೆ ತುಂಬಾ ಚೆನ್ನಾಗಿರುತ್ತದೆ....

  • @bharathjayaram7981
    @bharathjayaram7981 5 років тому +4

    ಎಂತಹ ಅದ್ಭುತ ಕೃತಿ. ಧನ್ಯವಾದಗಳು ಶಿವಸ್ವಾಮಿ ಅವರಿಗೆ, ಹಾಗೂ ಋತುಮಾನ ತಂಡಕ್ಕೆ. ಮುಂದಿನ ಕಂತಿಗೆ ಕಾಯುತ್ತಿರುವೆ.

  • @vishnus2675
    @vishnus2675 18 днів тому

    Namm Shiva swamy siru 😍

  • @vasanthekalavya2440
    @vasanthekalavya2440 4 роки тому +6

    ಒಂದೇ ಒಂದು ಅನ್ ಲೈಕ್ ಬಂದಿದೆ ,,,
    ಅವ್ನು ಯಾರು ಅಂತ ನಂಗೆ ಗೊತ್ತಾಗ್ಬೇಕು,,,
    ಯಾಕೆಂದರೆ ಅವನಲ್ಲಿ ಏನೊ ನ್ಯೂನತೆ ಇದೆ,,
    ಅದನ್ನು ಪರಿಹರಿಸಬೇಕು,,,

  • @kendagannaswamyram2767
    @kendagannaswamyram2767 4 роки тому +2

    ದೂರದರ್ಶನದಲ್ಲಿ ಧಾರಾವಾಹಿ ರೂಪದಲ್ಲಿ ನೋಡಿದ್ದು, ತಮ್ಮ ವಾಚನ ಶೈಲಿ ಅದ್ಭುತ. ದೇವನೂರರ ಕೃತಿಗಳು ಅದ್ಭುತ.

  • @shashikumar7890
    @shashikumar7890 4 роки тому +1

    Blessed are those who rejoiced the teaching of this lecture live.

  • @sureshs-pf9cd
    @sureshs-pf9cd 5 років тому +2

    ಅದ್ಭುತ ಕಾದಂಬರಿ ಅದ್ಭುತ ವಾಚನ. ಮುಂದಿನ ಕಂತಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ.

  • @sridharsanjeev3050
    @sridharsanjeev3050 2 роки тому +2

    10:41👈😇😀😁

  • @jayashreejayashree1036
    @jayashreejayashree1036 2 роки тому

    ನಾನು ಈ ಕೃತಿ ಓದಿದ್ದೆ ಸರ್ ನಿಮ್ಮ ಓದು ಅದ್ಭುತವಾಗಿದೆ. ಧನ್ಯವಾದಗಳು ಸರ್.

  • @junaidurrehman3184
    @junaidurrehman3184 5 років тому +3

    OUTSTANDING! Read it in English and now to hear it in Kannada, nothing less of a bliss.

  • @nidhishree3661
    @nidhishree3661 2 роки тому

    ನಿಮ್ಮ ಭಾಷೆಯ ನೈಜತೆಗೆ ಅನಂತ ನಮನಗಳು

  • @kaalachakra819
    @kaalachakra819 4 роки тому

    ಹಳೆಯ ಮೈಸೂರು ಪ್ರಾಂತ್ಯದ ಗ್ರಾಮೀಣ ಸೊಗಡಿನ ಮಾತಿನ ವೈಖರಿ ಅದ್ಭುತ ಗುರುಗಳೆ 🥰❤👌🙏🏻

  • @krishnamurthyn9821
    @krishnamurthyn9821 5 років тому +2

    Plz continue sir

  • @gangadharhiremath7306
    @gangadharhiremath7306 Рік тому

    ಕುಸುಮಬಾಲೆ ಸಿನಿಮಾ ಮಾಡಿದರೆ ಇವರೇ ಖಂಡಿತ ಮಾಡಬೇಕು.ಆ ಪುಸ್ತಕದ ಆಡುನುಡಿ ಇವರ ಬಾಯಲ್ಲಿ ಮರು ಹುಟ್ಟು ಪಡೆದಿದೆ.
    ಗ್ರೇಟ್.

  • @therambler4836
    @therambler4836 3 роки тому +1

    ಆಹಾ ಭಾಷೆ ಕೇಳ್ತಾ ಇದ್ರೆ ಎಷ್ಟು ಆನಂದ ಆಗುತ್ತೆ...!

  • @gangadharhiremath7306
    @gangadharhiremath7306 Рік тому

    Super.Mahadevana kusumabale kannige kattuvante oodiddare Shivaswamy

  • @mouryasmedia1853
    @mouryasmedia1853 4 роки тому

    Nice narration 👌

  • @sanjayhs1799
    @sanjayhs1799 2 роки тому

    ❤️

  • @prahladkumar8686
    @prahladkumar8686 2 роки тому

    ವಾಚನ ಬ್ಯೂಟಿ 👌👌👌

  • @vidyaaraballi4345
    @vidyaaraballi4345 2 роки тому

    Super sir

  • @praburajab
    @praburajab 3 роки тому

    ಅದ್ಬುತ..! ನಿಮ್ಮ ಓದು ಮತ್ತು ದೇವನೂರರ ಬರಹ ಎರಡೂ..

  • @ksmanjunatha
    @ksmanjunatha 4 роки тому

    Lovely

  • @jayasheelajasyadheela3219
    @jayasheelajasyadheela3219 5 років тому +1

    Sir shabdamani darpana paata maduvaaga nagutidda hage nagbeku paatragalallu...... jayasheela k

  • @maaritaam6239
    @maaritaam6239 5 років тому +1

    Revive similar series,sir/mam

  • @theamrpi397
    @theamrpi397 2 роки тому

    I never really understood the first sentence - "Kalu Neeru Karagothithu". When stone & water were melting. What is the meaning of this? Can anyone explain please?

    • @sureshhp5112
      @sureshhp5112 Рік тому +1

      In "janapada", it's a mystic understanding where explanation for the truth lies beyond human intellect. In janapada beliefs, dankest time of the night beyond the midnight is believed to be "Kallu Neeru Karaguva Hottu"

    • @theamrpi397
      @theamrpi397 Рік тому

      @@sureshhp5112 Thank you for explaining this. Is there a book of these janapadas?

  • @Divyabelakinakondagmail
    @Divyabelakinakondagmail Рік тому +1

    ಎಷ್ಟ್ ಸುಂದರವಾಗಿ ಹೇಳಿದ್ದಿರಿ, ಸವಿದಿದ್ದಿರಿ 🙏🏻🙏🏻🙏🏻