ಬದುಕೆಂದರೆ ಬರಿಯ ಉಸಿರಾಟವಲ್ಲ | ಹೊಸ ಕನ್ನಡ ಗೀತೆ | New Kannada Song | Badukendare Bariya Usiraatavalla

Поділитися
Вставка
  • Опубліковано 17 вер 2024
  • ಬದುಕೆಂದರೆ ಬರಿಯ ಉಸಿರಾಟವಲ್ಲ | ಹೊಸ ಕನ್ನಡ ಗೀತೆ | New Kannada Song | Badukendare Bariya Usiraatavalla
    .
    ಹಾಡಿನ ರಚನೆ : ರವಿ
    ಸಾಹಿತ್ಯ : ಪಾರ್ವತಿ ಸ್ವಪ್ನ
    ಹಾಡಿದವರು : ಸುನೋ
    .
    Lyrics :
    ಬದುಕೆಂದರೆ ಬರಿಯ ಉಸಿರಾಟವಲ್ಲ
    ಉಸಿರುಸಿರಿನಲ್ಲೂ ಕಾದಾಟ ಜಂಜಾಟ
    ಸೋಲು ಗೆಲುವಿನ ಒಳಗೆ ಹೊಡೆದಾಟ
    ಸಾವು ಬದುಕಿನ ಮಧ್ಯ ಸೆಣಸಾಟ
    ಕೊಂಚ ತರಲೆ ಕೊಂಚ ತುಂಟಾಟ ..!!
    .
    ಬದುಕೆಂದರೆ ಬರಿಯ ಉಸಿರಾಟವಲ್ಲ
    ನೋವು ನಲಿವಿನ ನಡುವೆ ಜೀಕಾಟ
    ನಿರಂತರ ಓಡುವ ಸಮಯದ ಓಟ
    ಪ್ರತಿಕ್ಷಣ ಕಲಿಸುವುದು ನವನವೀನ ಪಾಠ
    ಬಿದ್ದರೂ ಗೆದ್ದರೂ ಆಕಾಶದತ್ತ ನೋಟ..
    .
    ಬದುಕೆಂದರೆ ಬರಿಯ ಉಸಿರಾಟವಲ್ಲ
    ಬಿರುಕು ಬಿಟ್ಟ ಸಂಬಂಧಗಳ ನರಳಾಟ
    ಭಾವಗಳ ಏರಿಳಿತದ ಹೊಯ್ದಾಟ
    ಕನಸುಗಳದ್ದು ಗುರಿಯೊಡನೆ ಗುದ್ದಾಟ
    ಕೆಲವರಿಗೆ ಹಸಿವು ಕೆಲವರಿಗೆ ಊಟ...
    .
    ಬದುಕೆಂದರೆ ಬರಿಯ ಉಸಿರಾಟವಲ್ಲ
    ಸತ್ತ ನಂತರವೂ ಬದುಕುವ ಚಟ
    ಹೊತ್ತು ಹೋಗಲಾಗದ ಮಣ್ಣಿಗೆ ಕಿತ್ತಾಟ
    ಉಸಿರು ತುಂಬಲಾರದ ಹೊನ್ನಿಗೆ ಬಡಿದಾಟ
    ಇದರ ನಡುವೆಯೇ ಕಟ್ಟುವ ತನ್ನ ಗಂಟ
    ಕೊನೆಗೆ ಹೇಳಲಾಗದು ಹೋಗಿಬರುವೆ ಟಾಟಾ...
    .
    ಬದುಕೆಂದರೆ ಬರಿಯ ಉಸಿರಾಟವಲ್ಲ,,
    ಬದುಕೆಂದರೆ ಬರಿಯ ಉಸಿರಾಟವಲ್ಲ....

КОМЕНТАРІ •