ಆಶ್ವೀಜ ಮಾಸದಲಿ | Ashwweja Maasadali|

Поділитися
Вставка
  • Опубліковано 9 жов 2024
  • ಸಾಹಿತ್ಯ :
    ಆಶ್ವೀಜ ಮಾಸದಲಿ ಆಶುದ್ಧ ಪಾಡ್ಯದಲಿ
    ಭೂಷಣ ವಸ್ತ್ರವ ನೆರಿದುಡಿಸಿ
    ಆಶ್ರಮದ ಭಕ್ತರಿಗಭಯ ಮಾಯಾಮಯಿಗೆ
    ಮಹೇಶ್ವರಿ ಬಂದಳು ನಮ್ಮ ಮನೆಗೆ
    ಮಂಗಲಂ ಜಯ ಮಂಗಲೇ||೧||
    ಮರುದಿವಸ ಬಿದಿಗೆಯಲಿ ಹರನ ಪಟ್ಟದ ರಾಣಿ
    ವರ ಶಂಖಆಯುಧವನೆ ಧರಿಸಿ
    ಸಿರಿಯು ಸಂಪತ್ತನ್ನು ತನ್ನ ಭಕ್ತರಿಗಿತ್ತು
    ವರ ಲಕ್ಷ್ಮಿ ಬಂದಳು ನಮ್ಮ ಮನೆಗೆ
    ಮಂಗಲಂ ಜಯ ಮಂಗಲೇ||೨||
    ಮೂರನೆ ಸಲಿಗೆಯಲಿ ಸಾರವಾಳಿಯನುಟ್ಟು
    ಮೂರು ಕಣ್ಣುಳ್ಲವನ ಪಟ್ಟದರಸಿ
    ವಾರಾಣಿ ಇಂದ್ರಾಣಿ ವಿಜಯ ಲಕ್ಷ್ಮೀಯು ಸಹಿತ
    ಪಾರ್ವತಿ ಬಂದಳು ನಮ್ಮ ಮನೆಗೆ
    ಮಂಗಲಂ ಜಯ ಮಂಗಲೇ||೩||
    ನಾಲ್ಕನೆ ಚೌತಿಯಲಿ ಏಕದಂತನ ಮಾತೆ
    ಲೋಕಾದಿ ಲೋಕವ ಸಲಹುಎಂದು
    ಪಿನಾಕಿ ಗಂಗೆಯು ನಮ್ಮ ಪರಿಪಾಲಿಸುವ
    ವಾಗ್ದೇವಿ ಬಂದಳು ನಮ್ಮ ಮನೆಗೆ
    ಮಂಗಲಂ ಜಯ ಮಂಗಲೇ||೪||
    ಪಂಚಮಿ ದಿನದಲಿ ಪಂಚಮುಖನ ರಾಣಿ
    ಕಾಂಚಿಯಡವು ಕಟೀ ಸೂತ್ರ ಹೊಳೆಯೆ
    ಕಾಂಚಿಯ ಕಾಮಾಕ್ಷಿ ನಮ್ಮ ಪರಿಪಾಲಿಸುವ
    ಕೆಂಚೇ ಬಂದಾಳು ನಮ್ಮ ಮನೆಗೆ
    ಮಂಗಲಂ ಜಯ ಮಂಗಲೇ||೫||
    ಷಷ್ಠೀ ಯಲಿ ಸ್ವಾಮಿಭಾರತಿ ಪೃಥ್ವಿ ಸುಂದರಿ
    ಪಟ್ಟವಸಲಿಯನೆ ನೇರಿದುಟ್ಟು
    ಇಟ್ಟ ಚಂದನ ಗಂಧ ಥಳ ಥಳ ಥಳಿಸುತ್ತ
    ಸಂತ್ತುಷ್ಟಿ ಬಂದಾಳು ನಮ್ಮ ಮನೆಗೆ
    ಮಂಗಲಂ ಜಯ ಮಂಗಲೇ||೬||
    ಸಪ್ತಮಿ ದಿನದಲಿ ಸಪ್ತ ಮುಖದ ರಾಣಿ
    ಪುಸ್ತಕವ ಕೈಲಿ ಜಪಮಾಲೆ ಪಿಡಿದು
    ವಾರಾಣಿ ಇಂದ್ರಾಣಿ ವಿಜಯ ಲಕ್ಷ್ಮೀಯು
    ಸಹಿತ ಪಾರ್ವತಿ ಬಂದಳು ನಮ್ಮ ಮನೆಗೆ
    ಮಂಗಲಂ ಜಯ ಮಂಗಲೇ||೭||
    ಅಷ್ಟಮಿ ದಿನದಲಿ ಅಷ್ಟಮುಖದ ರಾಣಿ
    ಹೊತ್ತಿಗೊಂದವತಾರವ ದರಿಸಿ
    ಅಷ್ಟಮ ಧೈತ್ಯರ ಸಂಹಾರವ ಮಾಡಿ
    ವಾಗ್ದೇವಿ ಬಂದಳು ನಮ್ಮ ಮನೆಗೆ
    ಮಂಗಲಂ ಜಯ ಮಂಗಲೇ||೮||
    ಮಹಾನವಮಿ ದಿನದಲಿ ಮಹಾಲಕ್ಷ್ಮಿ ಮಾಂಕಾಳಿ
    ಇನ್ನೆನು ಅನ್ನಪೂರ್ಣೆ ಪರಮೆಶ್ವರಿ
    ವಾರಾಣಿ ಇಂದ್ರಾಣಿ ವಿಜಯ ಲಕ್ಷ್ಮಿಯು ಸಹಿತ
    ಪಾರ್ವತಿ ಬಂದಳು ನಮ್ಮ ಮನೆಗೆ
    ಮಂಗಲಂ ಜಯ ಮಂಗಲೇ||೯||
    ಇಂತು ನವರಾತ್ರಿಯನು ಬಿಡದೆ ಪೂಜೆಯ ಗೊಂಡು
    ಸಂತಸ ಸೌಭಾಗ್ಯ ಕೊಡುತಿಹಳು
    ಕೊಟ್ಡು ರಕ್ಷಿಸುವ ನಮ್ಮ ಪರಿಪಾಲಿಸುವ
    ಶಾರದೆ ಬಂದಳು ನಮ್ಮ ಮನೆಗೆ
    ಮಂಗಲಂ ಜಯ ಮಂಗಲೇ|||||
    #navaratri #hindu #dasararangoli #dasaracelebrations #dasaravideos #navaratridhamaka #navaratri playlist #ನವರಾತ್ರಿ playlist #songs #song #devotionalsongs #devotional #devotionalmusic #story #stories #storytime #ಪುರಾಣ #firstday #durgamaa #durgapuja #bhajan #bhaktigeet #devotionalsongs #devotionalsong #devotional #navaratri #playlist #devimaa #devisong2024 #songoftheday #viralvideo #viralsong #youtube#ಹವ್ಯಕ #havyaka

КОМЕНТАРІ • 3