ಅಭಿನಂದನ ಭಾಷಣ ಮತ್ತು ಉತ್ತರಕ್ಕೆ ಒಂದು ಮಾದರಿ

Поділитися
Вставка
  • Опубліковано 9 вер 2017
  • ಬೆಂಗಳೂರಿನಲ್ಲಿ ಸೆ.10, 2017ರಂದು ’ಅನನ್ಯ’ ಸಂಸ್ಥೆಯು ಖ್ಯಾತ ಯಕ್ಷಗಾನ ಕಲಾವಿದ, ವಿಮರ್ಶಕ, ಲೇಖಕ ಡಾ. ಎಂ ಪ್ರಭಾಕರ ಜೋಶಿಯವರಿಗೆ ಸನ್ಮಾನ ಸಮಾರಂಭ ಏರ್ಪಡಿಸಿತ್ತು. ಶತಾವಧಾನಿ ಡಾ. ಆರ್. ಗಣೇಶ ಅವರು ಅಭಿನಂದನಪತ್ರ ರಚಿಸಿ ವಾಚಿಸಿ ಭಾಷಣ ಮಾಡಿದರು. ಅದಕ್ಕೆ ಪ್ರತಿಯಾಗಿ ಡಾ. ಪ್ರಭಾಕರ ಜೋಶಿಯವರೂ ಅಷ್ಟೇ ಮನೋಜ್ಞವಾಗಿ, ಹೃದಯಂಗಮವಾಗಿ ಮಾತನಾಡಿದರು. ಒಂದು ಅಭಿನಂದನ ಭಾಷಣ ಮತ್ತು ಅದಕ್ಕೆ ಉತ್ತರ ಹೇಗಿರಬೇಕು ಎನ್ನುವುದಕ್ಕೆ ಮಾದರಿ ಎಂಬಂತಿದೆ ಈ ಕಾರ್ಯಕ್ರಮ. ಉತ್ತಮವಲ್ಲ ಇದು ಅತ್ಯುತ್ತಮ.
    ಬೆಂಗಳೂರಿನಲ್ಲಿರುವ ಮಿತ್ರ ನಟರಾಜ ಉಪಾಧ್ಯರು ಫೇಸ್‌ಬುಕ್ ಲೈವ್ ಪ್ರಸಾರಮಾಡಿದ್ದರಿಂದಾಗ ಈ ವಿಡಿಯೋ ಸಿಕ್ಕಿತು (ಹಾಗಾಗಿ ವಿಡಿಯೊ ಕ್ವಾಲಿಟಿ ಬಗ್ಗೆ ಕ್ಷಮೆಯಿರಲಿ). ಒಟ್ಟು 36 ನಿಮಿಷ ಅವಧಿಯದು. ಆಸಕ್ತಿಯಿದ್ದರೆ, ಸಾಧ್ಯತೆಯಿದ್ದರೆ, ಇಳಿಸಿಕೊಂಡು ವೀಕ್ಷಿಸಿ. 36 ನಿಮಿಷಗಳನ್ನು ಸುಂದರವಾಗಿ, ಸಂಪದ್ಭರಿತವಾಗಿ, ಸಾರ್ಥಕವಾಗಿ ಕಳೆದ ತೃಪ್ತಿ ನಿಮ್ಮದಾಗುತ್ತದೆ. ಅಲ್ಲಿ ಸಭಾಮಂದಿರದಲ್ಲಿದ್ದ ಆತ್ಮೀಯ ವಾತಾವರಣ ಹೇಗಿತ್ತು ಎನ್ನುವುದರ ಅರಿವೂ ಆಗುತ್ತದೆ.

КОМЕНТАРІ • 3

  • @gghegde3224
    @gghegde3224 6 років тому +1

    Wonderful, thank you for posting.

  • @omp1335
    @omp1335 4 роки тому +1

    Ibbaruu mahaanakshatragalu