ಭೂಮಿ ಶೆಟ್ಟಿ ಜನ್ಮದಿನವನ್ನ ಭರ್ಜರಿಯಾಗಿ ಆಚರಿಸಿದ ಅಭಿಮಾನಿಗಳು

Поділитися
Вставка
  • Опубліковано 27 вер 2024
  • ‘ಕಿನ್ನರಿ’ ಧಾರಾವಾಹಿಯ ಬೆಡಗಿ ಭೂಮಿ ಶೆಟ್ಟಿ ಅವರ ಹುಟ್ಟುಹಬ್ಬವನ್ನ ಅಭಿಮಾನಿಗಳು ಸಖತ್ ವಿಶೇಷವಾಗಿ ಆಚರಿಸಿದ್ದಾರೆ. ಅಭಿಮಾನಿಗಳ ಪ್ರೀತಿ ಕಂಡು ಭೂಮಿ ಶೆಟ್ಟಿ ಮೂಕವಿಸ್ಮಿತರಾಗಿದ್ದಾರೆ.
    ಸ್ಪೆಷಲ್ ಆಗಿ ಜನ್ಮದಿನ ಆಚರಿಸಿದ ಅಭಿಮಾನಿಗಳಿಗೆ ಭೂಮಿ ಶೆಟ್ಟಿ ಪ್ರೀತಿಯ ಧನ್ಯವಾದ
    ಕನ್ನಡ ನಟಿ, ಕರಾವಳಿ ಬೆಡಗಿ ಭೂಮಿ ಶೆಟ್ಟಿ ಅವರಿಗೆ ಜನ್ಮದಿನದ ಸಂಭ್ರಮ. ನಟಿ ಭೂಮಿ ಶೆಟ್ಟಿ ಅವರ ಹುಟ್ಟುಹಬ್ಬವನ್ನ ಅಭಿಮಾನಿಗಳು ಸೂಪರ್ ಸ್ಪೆಷಲ್ ಆಗಿ ಆಚರಿಸಿದ್ದಾರೆ. ಫ್ಯಾನ್ಸ್ ಜೊತೆಗೆ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಭೂಮಿ ಶೆಟ್ಟಿಗೆ ಸಿಕ್ಕಾಪಟ್ಟೆ ಖುಷಿ ಆಗಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ ಭೂಮಿ ಶೆಟ್ಟಿ.
    ‘’ನನ್ನ ಜನ್ಮದಿನವನ್ನ ಆಚರಿಸಿದ ಅಭಿಮಾನಿಗಳಿಗೆ ಧನ್ಯವಾದಗಳು. ನನ್ನ ಈ ಜನ್ಮದಿನ ನಿರೀಕ್ಷೆಗಿಂತ ಹೆಚ್ಚು ವಿಶೇಷವಾಗಿದೆ. ನನಗೆ ನಿಜವಾದ ಪ್ರೀತಿ ತೋರಿಸುವ ಜನರ ಗುಂಪೇ ಇರುವಾಗ ನಮ್ಮನ್ನು ಗೌರವಿಸದವರ ಅಪ್ರೂವಲ್‌ ಯಾಕೆ ಬೇಕು? ನನ್ನ ಹುಟ್ಟುಹಬ್ಬವನ್ನ ನಾನು ಎಂದೆಂದಿಗೂ ನೆನಪಿಡುವ ಹಾಗೆ ಆಚರಣೆ ಮಾಡಿದ ನನ್ನ ಅಭಿಮಾನಿಗಳಿಗೆ ದೊಡ್ಡ ಚಿಯರ್ಸ್. ಕೇಕ್‌ ಹಾಗೂ ಚಿಯರ್ಸ್ ನಡುವೆ ನಿಜವಾದ ಪ್ರೀತಿಯ ಮೌಲ್ಯವನ್ನು ನಾನು ಅರಿತುಕೊಂಡೆ. ಎಲ್ಲರ ಪ್ರೀತಿಗಾಗಿ ನನ್ನ ಕೃತಜ್ಞತೆ. ನೀವೇ ನಿಜವಾದ ತಾರೆಯರು’’
    #birthday #birthdaycelebration #happybirthday #bhoomishetty

КОМЕНТАРІ • 2