ಗುತ್ತಿಗೆ ಆಧಾರದ ಸರಕಾರಿ ಕೆಲಸಕ್ಕೆ ಗುಡ್‌ಬೈ, ಕುಂಬಳಕಾಯಿ ಬೀಜದ ಕೃಷಿಯಲ್ಲಿ ಯುವಕನ ಖುಷಿ | Vijay Karnataka

Поділитися
Вставка
  • Опубліковано 18 вер 2024
  • ಹಾವೇರಿ ತಾಲೂಕು ಕೋಣನತಂಬಿಗೆ ಗ್ರಾಮದ 25ರ ಹರೆಯದ ಭೀಮಪ್ಪ ಇದಕ್ಕೆ ಹೊರತು. ಭೀಮಪ್ಪ ಕೃಷಿಯಲ್ಲಿ ಡಿಪ್ಲೊಮಾ ಮಾಡಿ ಸರ್ಕಾರಿ ನೌಕರಿಯ ಕನಸು ಕಂಡಿದ್ದ. ಸರ್ಕಾರಿ ನೌಕರಿ ಗ್ಯಾರಂಟಿಯಾಗುತ್ತೆ ಎಂದು ತೋಟಗಾರಿಕೆ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕ ಸೇರಿದ್ದು ತಿಂಗಳಿಗೆ 10 ಸಾವಿರ ರೂಪಾಯಿ ಪಡೆಯುತ್ತಿದ್ದ ಭೀಮಪ್ಪನಿಗೆ ಸರ್ಕಾರಿ ನೌಕರಿ ಕನಸು ಈಡೇರುವ ಸಾಧ್ಯತೆ ಕಡಿಮೆಯಾಯಿತು. ಇದರಿಂದ ಗುತ್ತಿಗೆ ಆಧಾರದ ಕೆಲಸ ಬಿಟ್ಟಿರುವ ಭೀಮಪ್ಪ ಇದೀಗ ಕುಂಬಳಕಾಯಿ ಬೀಜೋತ್ಪಾದನೆಯಲ್ಲಿ ತೊಡಗಿಕೊಂಡಿದ್ದಾನೆ. ತನಗೆ ಇರುವ ಜಮೀನಿನಲ್ಲಿ ಕುಂಬಳಕಾಯಿ ಬೆಳೆಯಲು ಮುಂದಾಗಿದ್ದಾನೆ. 25 ಗುಂಟೆ ಜಾಗದ ಎರಡು ಪ್ಲಾಟ್ ಮಾಡಿರುವ ಭೀಮಪ್ಪ ಕುಂಬಳ ಬಳ್ಳಿ ಸಸಿ ತಂದು ನಾಟಿ ಮಾಡಿದ್ದಾನೆ. ಮಚ್ಲಿಂಗ್ ಮತ್ತು ತುಂತುರು ನೀರಾವರಿ ಅಳವಡಿಸಿ ಅತ್ಯುತ್ತಮ ಕುಂಬಳ ಬಳ್ಳಿ ಬೆಳೆದಿದ್ದಾನೆ. ಕುಂಬಳ ಬಳ್ಳಿ ಬೆಳೆಯುತ್ತಿದ್ದಂತೆ ಅದಕ್ಕೆ ಎರಡು ಕುಡಿ ಇರುವಂತೆ ನೋಡಿಕೊಂಡಿದ್ದಾನೆ. ಪ್ರತಿಯೊಂದು ಕುಡಿಗೊ ಒಂದು ಕುಂಬಳಕಾಯಿಗೆ ಬಿಟ್ಟರೆ ಎರಡು ಕುಂಬಳಕಾಯಿ ಬೆಳೆಯಲು ಮಾತ್ರ ಅವಕಾಶ ನೀಡಿದ್ದಾನೆ. ಇದರಿಂದ ಕುಂಬಳ ಬಳ್ಳಿಯಲ್ಲಿ ಎರಡು ಕುಡಿಗಳಲ್ಲಿ ಎರೆಡೆರಡು ಕುಂಬಳಕಾಯಿಗಳು ಬಿಟ್ಟಿದ್ದು ಇನ್ನು 15 ದಿನಕ್ಕೆ ಕುಂಬಳಕಾಯಿ ಕಟಾವ್ ಮಾಡಲಾಗುತ್ತದೆ. ಆದಾದ ನಂತರ ನೆರಳಿನಲ್ಲಿ ಕುಂಬಳಕಾಯಿ ಒಣಗಿಸಿ ಅದರಿಂದ ಬೀಜ ತಗೆದು ಮಾರಾಟ ಮಾಡುತ್ತೇನೆ ಎನ್ನುತ್ತಾರೆ ಯುವಕೃಷಿಕ ಭೀಮಪ್ಪ.
    Pumpkin Farming Harvesting Selling Seeds To Companies By Young Farmer Of Haveri Konanatambige Village
    #haveri #agriculture #farm
    Our Website : Vijaykarnataka...
    Facebook: / vijaykarnataka
    Twitter: / vijaykarnataka
    Our Video Website: kannada.timesx...

КОМЕНТАРІ • 5

  • @rojaraghu9888
    @rojaraghu9888 6 місяців тому +1

    ನಾವು ಕೂಡ ಕುಂಬಳ 3 ಎಕ್ಕರೆ ಗೆ hakiddo 5 ಲಕ್ಷ ಆದಾಯ ಬಂದಿದೆ 3 ತಿಂಗಳಿಗೆ 27,000 ಕರ್ಚು ಮಾಡಿದ್ದೋ ಅಷ್ಟೇ

  • @bhimubirakabbi1411
    @bhimubirakabbi1411 7 місяців тому +1

    Raitar phone number haki sir