ಗಮಕ : ಕರ್ಣಭೇದನ (ಕುಮಾರವ್ಯಾಸ ಭಾರತ : ಉದ್ಯೋಗ ಪರ್ವ - ೧೦ನೇ ಸಂಧಿ) | Kumaravyasa Bharata Udyoga Parva 10

Поділитися
Вставка
  • Опубліковано 22 чер 2018
  • ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ yt.orcsnet.com/#ruthumana
    ಕರ್ಣಭೇದನವು ಹಲವು ಕಾರಣಗಳಿಗೆ ಪ್ರಸಿದ್ದವಾದ ಪ್ರಸಂಗ. ಯಕ್ಷಗಾನ ತಾಳಮದ್ದಳೆಯಾಗಿಯೂ ಹೆಸರು ಮಾಡಿರುವ ಪ್ರಸಂಗವಿದು . ಕುಮಾರವ್ಯಾಸನ ಉದ್ಯೋಗಪರ್ವದಲ್ಲಿ ಹತ್ತನೇ ಸಂಧಿಯಲ್ಲಿ ಇದು ಬರುತ್ತದೆ . ಕೃಷ್ಣನ ರಾಜಕೀಯದ ಪಟ್ಟುಗಳು, ಕರ್ಣನನ್ನು ಭಾವನೆಯ ಬಲೆಯಲ್ಲಿ ಬಂಧಿಸಿ ಅವನ ಸ್ವಾಮಿನಿಷ್ಠೆಯನ್ನು ಪರೀಕ್ಷಿಸುವುದು ಎಲ್ಲ ಅತ್ಯಂತ ನಾಟಕೀಯವಾಗಿದೆ. ಸಂಧಾನಕ್ಕೆಂದು ಹೋಗಿದ್ದ ಕೃಷ್ಣ ಕೌರವನಿಂದ ರಣದ ವೀಳ್ಯ ಪಡೆದು, ಹಸ್ತಿನಾವತಿಯ ರಾಜಸಭೆಯಿಂದ ಹೊರನಡೆದ ಮೇಲೆ ಘಟಿಸುವ ಘಟನೆಯಿದು. ಕರ್ಣನನ್ನು ಏಕಾಂತಕ್ಕೆ ಕರೆದುಕೊಂಡುಹೋಗಿ, ಅವನ ಹುಟ್ಟಿನ ವಿವರಗಳನ್ನು ಅವನಿಗೆ ತಿಳಿಸಿ, ಅವನನ್ನು ಒಲಿಸಿಕೊಳ್ಳುವ ಪ್ರಯತ್ನವೇ ಈ ಪ್ರಸಂಗದ ತಿರುಳು.
    ಕುಮಾರವ್ಯಾಸನ ಕೃಷ್ಣನಂತೂ ನುರಿತ ಮನೋವಿಜ್ಞಾನಿಯಂತೆ, ಪಳಗಿದ ಸೇಲ್ಸ್ ಮ್ಯಾನ್ ಒಬ್ಬನಂತೆ ಆಕರ್ಷಕವಾದ ಮಾತು, ನಡೆಗಳ ಮೂಲಕ ಕರ್ಣನನ್ನು ಒಳಗೊಳಗೇ ಕುಸಿಯುವಂತೆ ಮಾಡುತ್ತಾನೆ. ಕುಮಾರವ್ಯಾಸನ ಕೃಷ್ಣನು ಇನತನೂಜನಕೂಡೆ ಮೈದುನತನದ ಸರಸವನೆಸಗಿ ವಿಷಯ ಶುರುಮಾಡುತ್ತಾನೆ. (ಶತ್ರುಪಾಳಯದವನಾದ ಕರ್ಣ ಕುಂತಿಯ ಮಗನಾಗಿದ್ದದ್ದು ಇಷ್ಟು ದಿನ ನೆನಪಿಗೆ ಬರದೇ ಈಗ ಬರುತ್ತದೆ, ಕುಂತಿ ಕೃಷ್ಣನ ಅತ್ತೆ, ಅಂದಮೇಲೆ ಕರ್ಣ ಭಾವಮೈದುನನಾಗಬೇಕಲ್ಲ) ಯಾದವ ಕುಲತಿಲಕನಾದ ಕೃಷ್ಣ ಸೂತಪುತ್ರನಾದ ಕರ್ಣನನ್ನು ಬರಸೆಳೆದು, ತೊಡೆ ಸೋಂಕಿನಲಿ ಕುಳ್ಳಿರಿಸಿ ತಬ್ಬಿಬ್ಬಾಗಿಸುತ್ತಾನೆ. ಅವನ ಕರದೊಳು ಕರತಳವನಿಕ್ಕಿ, ನಿನ್ನಯ ಕುಲವನರಿ, ವೃಥಾ ಸೇವಕತನದಲಿ ಇಹುದು ಉಚಿತವಲ್ಲ ಅಂತ ಅವನ ಹಿತೈಷಿಯಂತೆ ಮಾತಾಡುತ್ತಾನೆ.
    ಕರ್ಣ ಮನಸ್ಸು ಮಾಡಿದರೆ, ಕುರುಕ್ಷೇತ್ರ ಯುದ್ಧವೇ ನಡೆಯುವುದಿಲ್ಲ. ಆಗ ಹಿರಿಯನಾದ ಕರ್ಣನಿಗೆ ಪಟ್ಟಕಟ್ಟಿ ಕೌರವ ಪಾಂಡವ ಮತ್ತಿತರರು ಒಟ್ಟಿಗೇ ಕೂತರೆ ಆ ಚಿತ್ರ ಹೇಗಿರುತ್ತದೆ? "ಎಡದ ಮೈಯಲಿ ಕೌರವೇಂದ್ರರ ಗಡಣ. ಬಲದಲಿ ಪಾಂಡುತನಯರ ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು ನಡುವೆ ನೀನೋಲಗದೊಳು !" ಅಂತ ಆಮಿಷ ಒಡ್ಡುತ್ತಾನೆ. "ಒಪ್ಪುವ ಕಡುವಿಲಾಸವ ಬಿಸುಟು, ಕುರುಪತಿ ನುಡಿಸೆ,ಜೀಯ ಹಸಾದವೆಂಬುದು ಕಷ್ಟ ನಿನಗೆ !" ಅಂತ ಒಗ್ಗರಣೆ ಹಾಕುತ್ತಾನೆ.
    ಈ ತಂತ್ರಗಾರಿಕೆಗೆ ಕರ್ಣನ ಕೊರಳ ಸೆರೆ ಹಿಗ್ಗುತ್ತದೆ, ದೃಗುಜಲ ಉರವಣಿಸುತ್ತದೆ, ಅವನು ಕಡುನೊಂದನು ಅನ್ನುತ್ತಾನೆ ಕವಿ. ಕರ್ಣನೇನು ಕೃಷ್ಣನ ಜಾಣ್ಮೆಯ ಅರಿವಾಗದಷ್ಟು ದಡ್ಡನಲ್ಲ. ಹೀಗಾಗಿ ಭೇದದಲಿ ಹೊಕ್ಕಿರಿದನೋ ಮಧುಸೂದನನು, ನೀನು ಕೌರವೇಂದ್ರನ ಕೊಂದೆ ಅಂತೆಲ್ಲ ಹೇಳಿ ತಾನೇಕೆ ಕೌರವಪಕ್ಷವನ್ನು ತೊರೆಯಲಾರೆ ಅಂತ ಹೇಳುವುದನ್ನು ಕುಮಾರವ್ಯಾಸ ಸೊಗಸಾಗಿ ಚಿತ್ರಿಸಿದ್ದಾನೆ.

КОМЕНТАРІ • 60

  • @sathishkumar5505
    @sathishkumar5505 3 роки тому +27

    ಧನ್ಯವಾದಗಳು ಮಹಾತ್ಮರಿಗೆ

  • @mahadevsajjan4850
    @mahadevsajjan4850 8 днів тому

    ತಮ್ಮದು ಅಧ್ಭುತ ಕಂಠಸಿರಿ. ಸುಶ್ರಾವ್ಯವಾಗಿ ಗಮಕ ವಾಚನ ಮಾಡಿದಿರಿ 👏👏👏👏

  • @ravitalavane9164
    @ravitalavane9164 3 місяці тому

    ಎಂಥ ಬಾವ 👌👌👏👏👏

  • @readhistory7205
    @readhistory7205 4 роки тому +7

    how wonderful it is to listen Gadugina Bharata in Gamaka ... MESMARIZING !! Thanks for uploading ..

  • @vadibrahma-xe7xt
    @vadibrahma-xe7xt Рік тому

    Ahaaaa

  • @ravitalavane9164
    @ravitalavane9164 3 місяці тому

    ತುಂಬಾ ಚೆನ್ನಾಗಿ ಹಾಡಿದ್ದೀರಾ

  • @gajananahegde5434
    @gajananahegde5434 3 роки тому +3

    ಈ ಸುಖವೆ ಸುಖ

  • @sumithassalian5679
    @sumithassalian5679 4 роки тому +4

    ಧನ್ಯವಾದಗಳು ಸರ್.... 🙏🙏🙏
    ನೀವೊಬ್ಬ ಅದ್ಭುತ ಗಮಕ ಗಾಯಕರು....
    ನನ್ನ ನೆಚ್ಚಿನ .... ಗಮಕ ಗಾಯಕ

  • @vishwanathaguruva6071
    @vishwanathaguruva6071 2 роки тому +1

    ಕೇಳುವಾಗ ತುಂಬಾ ಖುಷಿಯಾಗುತ್ತೆ ,ನಮ್ಮ ಅನಂತಾಚಾರ್ಯರು ನೆನಪಾದರು

  • @vasukinagabhushan
    @vasukinagabhushan 4 роки тому +2

    ಭಾವಪೂರ್ಣ ಗಮಕ ಬಹಳ ಸೊಗಸಾಗಿದೆ.

  • @v560040
    @v560040 3 роки тому +6

    Great voice, really amazing

  • @mahalingappart9340
    @mahalingappart9340 10 місяців тому

    ತುಂಬಾ ಚೆನ್ನಾಗಿದೆ ಗುರುಗಳೇ 10ನೇ ತರಗತಿ ಮಕ್ಕಳಿಗೆ ತುಂಬಾ ಅವಶ್ಯಕ ಉಪಯುಕ್ತ

  • @ganapathibhat9373
    @ganapathibhat9373 10 місяців тому

    🎉

  • @umeshab12
    @umeshab12 4 роки тому +3

    Namo namaha

  • @gururajdeshpande1365
    @gururajdeshpande1365 4 роки тому +5

    What a melodious voice super

  • @somashekarsharma7739
    @somashekarsharma7739 3 роки тому +3

    Thanks a lot sir PRANAMAMS

  • @rohinismurthy6015
    @rohinismurthy6015 Рік тому

    ತುಂಬಾ ಸುಶ್ರಾವ್ಯವಾಗಿದೆ. ಕೇಳಲು ತುಂಬಾ ಖುಷಿ ಆಗುತ್ತದೆ. ಧನ್ಯವಾದಗಳು ಸರ್👌🙏

  • @gangahegde
    @gangahegde Рік тому

    ಧನ್ಯವಾದಗಳು 🙏ತುಂಬಾ ಸುಂದರವಾಗಿ ಕರ್ಣಮಧುರವಾದ ಗಮಕವಾಚನ. 👌👌👌

  • @shivaclassic2946
    @shivaclassic2946 5 років тому +1

    ನಿಮಗೆ ನಮೋ ನಮಃ

  • @srinirajus
    @srinirajus 3 роки тому +1

    Unbelievable, Awesome not sure who else we will have to render this Gamaka apart from Ruthumana team. My salute.

  • @bharath32584
    @bharath32584 6 років тому +4

    great salutes your gamaka vachana

  • @yashwanthkotari9471
    @yashwanthkotari9471 3 роки тому +3

    Super sir

  • @satishbng82
    @satishbng82 5 років тому +13

    Hi Ruthuman Team , your are doing great job. request you to record more Gamaka Vachana, . it wil be documented

    • @nanjundarao9543
      @nanjundarao9543 5 років тому +1

      'ಬೇನೆಯನರಿಯದ ನೀರಸನು ಏಕೆ ಪುಟ್ಟಿಸಿದನೋ ಅಜಭವನು?' ಎನ್ನುತ್ತಾನೆ ರಾಘವಾ೦ಕ, ಹರಿಶ್ಚ೦ದ್ರ ಕಾವ್ಯದಲ್ಲಿ. ಮನಸ್ಸಿನ ಮಲಿನ ತೊಳೆಯ ಬೇಕಾದರೆ ಹರಿಶ್ಚ೦ದ್ರನ ಬವಣೆ, ಕರ್ಣನ ಬಗ್ಗೆ ಕರುಣೆಗಾಗಿ ಹರಿಯುವ ಕಣ್ಣೀರು ಪಾಪನಾಶಿನಿಯೆ. ಕಾವ್ಯ, ಗಾಯನ, ಶಬ್ದ ಪ್ರಪ೦ಚದ ಕರ್ಣಾನ೦ದಕ್ಕೆ ಕೊನೆಯಾಗದೆ, ತನು, ಮನ ದಾಟಿ ಆತ್ಮಾನ೦ದದ ಅನುಭವ. ಯುಗ, ಯುಗ ಗಳ ಅ೦ತರವನ್ನು ನು೦ಗಿ ಶ್ರೀಕೃಷ್ನ, ಕರ್ಣರ ವಿಲಾಪದಲ್ಲಿ ಕರಗಿ ಹೋಗುತ್ತವೆ. ಅನ್ನದಾತ ಸುಖೀಭವ ಎ೦ದಾಗ ನಮ್ಮ ಕೈಬೆರಳುಗಳಿ೦ದ ಪ್ರಾರ೦ಭವಾಗಿ, ಅನ್ನ ಸೃಷ್ಟಿಸಿ ಹೊಟ್ಟೆ ತು೦ಬಿಸುವರ ಪರ೦ಪರೆಗೆ ಎರಡೇ ಶಬ್ದಗಳಲ್ಲಿ ಕೃತಜ್ಞತೆ ಅರ್ಪಿಸುವ ಚಾತುರ್ಯದ ಮು೦ದೆ, ಈ ರಸ ಸಾಗರದಲ್ಲಿ ಈಜಾಡಿಸಿದವರೆಲ್ಲರಿಗೂ ನಮೋ ನಮಃ ಅ೦ದರೆ ಸಾಕೇ? ಜೈ ಜಗದಾ೦ಬೆ, ಶ್ರೀಶಾರದೆ.

  • @padma3631
    @padma3631 3 роки тому +2

    Eshtu chennagi gamaka haadiddare. Ivaru yaaru? Please innu upload maadi

  • @bharathcg6657
    @bharathcg6657 5 років тому +4

    ಸರ್ ಸಂಪೂರ್ಣವಾಗಿ ಕುಮಾರವ್ಯಾಸನ 'ಕರ್ಣಾಟ ಭಾರತ ಕಥಾಮಂಜರಿ' upload ಮಾಡಿ

  • @sudhakarreddy3346
    @sudhakarreddy3346 5 років тому +3

    Medhavigalu

  • @vinutharrk4569
    @vinutharrk4569 4 роки тому +2

    Really great sir

  • @lokeshaneerakallu8262
    @lokeshaneerakallu8262 Рік тому

    Very good gayana

  • @nagabhushanshastri7502
    @nagabhushanshastri7502 5 років тому +8

    Please make a complete Kumaravyasa Vachana.. Sir....
    My humble request...The future needs it...

    • @lsreenivasa
      @lsreenivasa 4 роки тому +4

      its there.. Vachana : by him, Vyakyana : SRG . its available in Ghokale Institute, Basavana Gudi, Bengaluru

    • @sathishkumar5505
      @sathishkumar5505 3 роки тому +3

      @@lsreenivasa i want it sir

    • @lsreenivasa
      @lsreenivasa 3 роки тому +3

      @@sathishkumar5505 There Is a UA-cam channel GIPA Live . Search There

    • @sathishkumar5505
      @sathishkumar5505 3 роки тому +2

      @@lsreenivasa tq sir

  • @kemparajur5670
    @kemparajur5670 5 років тому +2

    Superb sir

  • @gkote
    @gkote Рік тому

    🙏🙏🙏

  • @nagamanial6208
    @nagamanial6208 5 років тому +2

    Great voice

    • @nanjundarao9543
      @nanjundarao9543 5 років тому

      'ಬೇನೆಯನರಿಯದ ನೀರಸನು ಏಕೆ ಪುಟ್ಟಿಸಿದನೋ ಅಜಭವನು?' ಎನ್ನುತ್ತಾನೆ ರಾಘವಾ೦ಕ, ಹರಿಶ್ಚ೦ದ್ರ ಕಾವ್ಯದಲ್ಲಿ. ಮನಸ್ಸಿನ ಮಲಿನ ತೊಳೆಯ ಬೇಕಾದರೆ ಹರಿಶ್ಚ೦ದ್ರನ ಬವಣೆ, ಕರ್ಣನ ಬಗ್ಗೆ ಕರುಣೆಗಾಗಿ ಹರಿಯುವ ಕಣ್ಣೀರು ಪಾಪನಾಶಿನಿಯೆ. ಕಾವ್ಯ, ಗಾಯನ, ಶಬ್ದ ಪ್ರಪ೦ಚದ ಕರ್ಣಾನ೦ದಕ್ಕೆ ಕೊನೆಯಾಗದೆ, ತನು, ಮನ ದಾಟಿ ಆತ್ಮಾನ೦ದದ ಅನುಭವ. ಯುಗ, ಯುಗ ಗಳ ಅ೦ತರವನ್ನು ನು೦ಗಿ ಶ್ರೀಕೃಷ್ನ, ಕರ್ಣರ ವಿಲಾಪದಲ್ಲಿ ಕರಗಿ ಹೋಗುತ್ತವೆ. ಅನ್ನದಾತ ಸುಖೀಭವ ಎ೦ದಾಗ ನಮ್ಮ ಕೈಬೆರಳುಗಳಿ೦ದ ಪ್ರಾರ೦ಭವಾಗಿ, ಅನ್ನ ಸೃಷ್ಟಿಸಿ ಹೊಟ್ಟೆ ತು೦ಬಿಸುವರ ಪರ೦ಪರೆಗೆ ಎರಡೇ ಶಬ್ದಗಳಲ್ಲಿ ಕೃತಜ್ಞತೆ ಅರ್ಪಿಸುವ ಚಾತುರ್ಯದ ಮು೦ದೆ, ಈ ರಸ ಸಾಗರದಲ್ಲಿ ಈಜಾಡಿಸಿದವರೆಲ್ಲರಿಗೂ ನಮೋ ನಮಃ ಅ೦ದರೆ ಸಾಕೇ? ಜೈ ಜಗದಾ೦ಬೆ, ಶ್ರೀಶಾರದೆ.

  • @mrshankara
    @mrshankara 3 роки тому

    ಮಹಾತ್ಮರು! ಎಂತಹ ಕಂಠ! ನಮೋನಮಃ.

  • @arunkumark8317
    @arunkumark8317 5 років тому +2

    🙏ಪಂಪ

    • @nanjundarao9543
      @nanjundarao9543 5 років тому

      'ಬೇನೆಯನರಿಯದ ನೀರಸನು ಏಕೆ ಪುಟ್ಟಿಸಿದನೋ ಅಜಭವನು?' ಎನ್ನುತ್ತಾನೆ ರಾಘವಾ೦ಕ, ಹರಿಶ್ಚ೦ದ್ರ ಕಾವ್ಯದಲ್ಲಿ. ಮನಸ್ಸಿನ ಮಲಿನ ತೊಳೆಯ ಬೇಕಾದರೆ ಹರಿಶ್ಚ೦ದ್ರನ ಬವಣೆ, ಕರ್ಣನ ಬಗ್ಗೆ ಕರುಣೆಗಾಗಿ ಹರಿಯುವ ಕಣ್ಣೀರು ಪಾಪನಾಶಿನಿಯೆ. ಕಾವ್ಯ, ಗಾಯನ, ಶಬ್ದ ಪ್ರಪ೦ಚದ ಕರ್ಣಾನ೦ದಕ್ಕೆ ಕೊನೆಯಾಗದೆ, ತನು, ಮನ ದಾಟಿ ಆತ್ಮಾನ೦ದದ ಅನುಭವ. ಯುಗ, ಯುಗ ಗಳ ಅ೦ತರವನ್ನು ನು೦ಗಿ ಶ್ರೀಕೃಷ್ನ, ಕರ್ಣರ ವಿಲಾಪದಲ್ಲಿ ಕರಗಿ ಹೋಗುತ್ತವೆ. ಅನ್ನದಾತ ಸುಖೀಭವ ಎ೦ದಾಗ ನಮ್ಮ ಕೈಬೆರಳುಗಳಿ೦ದ ಪ್ರಾರ೦ಭವಾಗಿ, ಅನ್ನ ಸೃಷ್ಟಿಸಿ ಹೊಟ್ಟೆ ತು೦ಬಿಸುವರ ಪರ೦ಪರೆಗೆ ಎರಡೇ ಶಬ್ದಗಳಲ್ಲಿ ಕೃತಜ್ಞತೆ ಅರ್ಪಿಸುವ ಚಾತುರ್ಯದ ಮು೦ದೆ, ಈ ರಸ ಸಾಗರದಲ್ಲಿ ಈಜಾಡಿಸಿದವರೆಲ್ಲರಿಗೂ ನಮೋ ನಮಃ ಅ೦ದರೆ ಸಾಕೇ? ಜೈ ಜಗದಾ೦ಬೆ, ಶ್ರೀಶಾರದೆ.

    • @chummi2381
      @chummi2381 5 років тому

      @@nanjundarao9543 Sir yenta matu! Nivu Kannada professor uh?

  • @parthasarathy459
    @parthasarathy459 2 роки тому

    🙏🙏

    • @manjunathbhat1925
      @manjunathbhat1925 2 роки тому

      ಅದ್ಭುತವಾದ ಸುಶ್ರಾವ್ಯವಾಗಿ ಮೂಡಿಬಂದಿದೆ. ಧನ್ಯವಾದಗಳು.. 🙏👍🙏

  • @arjunjanapada
    @arjunjanapada 3 роки тому

    ಎಷ್ಟು ಮಧುರ ನಿಮ್ಮ ವಾಚನ ಸರ್

  • @64srinidhi
    @64srinidhi 3 роки тому +3

    Sad, advertising is killing the flow

    • @SathishKumar-xk6cc
      @SathishKumar-xk6cc 3 роки тому

      use brave browser and open youtube in brave browser no add at all

  • @sanathkumarms274
    @sanathkumarms274 2 роки тому

    P B srinivas saayale illa

  • @pavithrayr7456
    @pavithrayr7456 5 років тому +2

    Super sir