ಸಾವಿರ ಮೆಟ್ಟಿಲ ಹತ್ತಿ ಬಂದರೆ ಸನ್ನಿಧಿದೊರಕುವುದು |Chamundeshwari

Поділитися
Вставка
  • Опубліковано 17 вер 2024
  • ಸಾವಿರ ಮೆಟ್ಟಿಲ ಹತ್ತಿ ಬಂದರೆ ಸನ್ನಿಧಿ ದೊರಕುವುದು | ತಾಯಿಯ ದರುಶನ ದೊರಕುವುದು | ಸಾವಿರ ಬಾರವ ಹತ್ತಿ ಹವನಕೆ ಶಾಂತಿಯು ಲಭಿಸುವುದು | ಚಾಮುಂಡಿ ವರವು ಲಭಿಸುವುದು ||
    ದನುಜ ಮಹಿಷನ ದಮನ ಮಾಡಿದ ದುರ್ಗೆಯ ಚರಣವಿದೆ | ಅಸುರ ಮರ್ಧಿನಿ ಚರಣವಿದೇ|| ನಾಲಿಗೆ ಚಾಚಿ ರಕ್ಕಸ ರಕ್ತವ ಹೀರಿದ ರೂಪವಿದೆ | ಶಕ್ತಿಯ ರುದ್ರ ಸ್ವರೂಪವಿದೆ ||
    ಪರ್ವತ ನಂದಿನಿ ನಂದಿತ ಮೇಧಿನಿ ಪಾರ್ವತಿ ಆಲಯವು | ನಿರ್ಮಲ ಆನಂದಾಲಯವು ॥ ಪಾಪ ವಿಮೋಚನೀ ಪುಷ್ಪ ವಿಲೋಚನಿ ಪರಶಿವೆ ಧಾಮವಿದು | ನಿಶ್ಚಲ ಶಾಂತಿ ನಿವಾಸವಿದು ||
    ಕರ್ಪೂರದಾರತಿ ಹೊಂಬೆಳಕಲ್ಲಿ ಕಣ್ ತುಂಬ ನೋಡುವೆವು| ಅಂಬೆಯ ಕೀರ್ತಿಯ ಹಾಡುವೆವು| ತಾನಾಗಿ ಬಂದ ಸಂತೋಷದಲ್ಲಿ ಮೈಯನ್ನು ಮರೆಯುವೆವು| ಆದರೆ ಮೈ ಬಾಗಿ ನಮಿಸುವೆವು||

КОМЕНТАРІ • 4