ಅತ್ತಿಬೆಲೆ ರೈನ್ ಬೋ ಪಬ್ಲಿಕ್ ಶಾಲೆಯಲ್ಲಿ ಸಡಗರ ಸಂಭ್ರಮದಿoದ ನಡೆದ ಆರ್‌ಪಿಎಸ್ ವಿಜಯೋತ್ಸವ
Вставка
- Опубліковано 8 лют 2025
- ಅತ್ತಿಬೆಲೆ ರೈನ್ ಬೋ ಪಬ್ಲಿಕ್ ಶಾಲೆಯಲ್ಲಿ ಸಡಗರ ಸಂಭ್ರಮದಿoದ ನಡೆದ ಆರ್‌ಪಿಎಸ್ ವಿಜಯೋತ್ಸವ
ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಿಂದ ಮಂಚನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ರೈನ್ ಬೋ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಆರ್ ಪಿಎಸ್ ವಿಜಯೋತ್ಸವ ಕಾರ್ಯಕ್ರಮವು ಸಡಗರ ಸಂಭ್ರಮದಿAದ ನೆರವೇರಿತು. ಇನ್ನು ಆರ್ ಪಿಎಸ್ ವಿಜಯೋತ್ಸವ ಕಾರ್ಯಕ್ರಮಕಕ್ಕೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣರವರು ಮತ್ತು ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡರು ಚಾಲನೆ ನೀಡಿ ನಂತರ ಮಾತನಾಡಿದ ಅವರು ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು .ವಿದ್ಯಾರ್ಥಿಗಳು ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ
ವಿಷಯಗಳಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆಯಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡೆಯಿಂದಾಗಿ ಉತ್ತಮ ಆರೋಗ್ಯ ಮತ್ತು ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ತಿಳಿಸಿದರು. ಹಾಗೆಯೇ ರೈನ್ ಬೋ ಪಬ್ಲಿಕ್ ಶಾಲೆಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೌಡರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬು ಗುರಿಯೊಂದಿಗೆ ರೈನ್ ಬೋ ಪಬ್ಲಿಕ್ ಶಾಲೆಯಲ್ಲಿ ಸ್ಥಾಪಿಸಲಾಗಿದೆ ಎಂದರು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಲು ಆರ್ ಪಿಎಸ್ ವಿಜಯೋತ್ಸವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.ಇನ್ನು ರೈನ್ ಬೋ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಆರ್‌ಪಿಎಸ್ ವಿಜಯೋತ್ಸವದಲ್ಲಿ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನಟಿ ರೀಷ್ಮಾ ನಾಣಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ನೃತ್ಯ ಪ್ರದರ್ಶನ ನೀಡಿದರು. ಶೈಕ್ಷಣಿಕ ಚಟುವಟಿಕೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಬಾಗವಹಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಪುತ್ತೂರಾಯ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್, ಹಂಸ ಸಂಘಟನೆಯ ಅಧ್ಯಕ್ಷ ಪ್ರಹ್ಲಾದ್ ಗೌಡ, ಆಕ್ಸ್ಫರ್ಡ್ ಸಂಸ್ಥೆಯ ರವಿಕುಮಾರ್, ಸ್ಪೂರ್ತಿ ಕಾಲೇಜಿನ ವಿನಯ್, ಕೇಂಬ್ರಿಡ್ಜ್ ಶಾಲೆಯ ಕಾಳಿನಾಥ್, ನ್ಯಾಷನಲ್ ಪಬ್ಲಿಕ್ ಶಾಲೆಯ ಅನಂತರಾಜು, ಶಾಂತಿನಿಕೇತನ ಶಾಲೆಯ ಭರತ್, ಶಾರದ ಶಾಲೆಯ ಯೋಗೇಶ್, ಮಾಯಸಂದ್ರ ಗ್ರಾಹ ಹರೀಶ್, ಮುರುಗೇಶ್ ಮತ್ತು ಅದ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಬಾಗವಹಿಸಿದ್ದರು.