ದೇಹದ ಕೂದಲ ಕಸಿ ಸಾಧ್ಯವೇ?

Поділитися
Вставка
  • Опубліковано 3 жов 2024
  • ಕೂದಲು ಕಸಿ ಶಸ್ತ್ರಚಿಕಿತ್ಸೆಯು ಕೂದಲು ಉದುರುವಿಕೆಗೆ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ
    ಚಿಕಿತ್ಸೆಯಾಗಿದೆ. ಈ
    ಕಾರ್ಯವಿಧಾನವು ತಲೆಯ ಹಿಂಭಾಗದಿಂದ ಸ್ವಂತ
    ಕೂದಲುಗಳನ್ನು ತೆಗೆದು ( ಕಸಿ ಮಾಡಿ), ಅವುಗಳನ್ನು ತಲೆಯ ಮುಂಭಾಗದ ಬೋಳು (bald area) ಪ್ರದೇಶಕ್ಕೆ ಹಾಕಲಾಗುತ್ತದೆ. ಆದರೆ
    ನೀವು ತುಂಬಾ ದೊಡ್ಡ ಜಾಗದ
    ಬೋಳು ತಲೆಯನ್ನು ( large bald area) ಹೊಂದಿದ್ದರೆ ಮತ್ತು ತಲೆಯ
    ಹಿಂಭಾಗದಲ್ಲಿ ಸಾಕಷ್ಟು
    ಕೂದಲನ್ನು
    ಹೊಂದಿಲ್ಲದಿದ್ದರೆ, ದೇಹದ
    ಇತರ ಭಾಗಗಳಿಂದ ಕೂದಲು ಕಸಿ ಮಾಡಬಹುದೆ?
    ಈ ಪ್ರಶ್ನೆಗೆ ಈ ವಿಡಿಯೋದಲ್ಲಿ ನಾವು
    ಉತ್ತರಿಸಿದ್ದೇವೆ.
    ತಲೆಯ ಹಿಂಭಾಗದ ಪ್ರದೇಶದ ( scalp area) ನಂತರ ಗಡ್ಡದ ಕೂದಲುಗಳು (beard). ಉತ್ತಮ ಎನ್ನಬಹುದು,ಏಕೆಂದರೆ ಇಲ್ಲಿ
    ಕೂದಲುಗಳು
    ಸಾಮಾನ್ಯವಾಗಿ ನೆತ್ತಿಯ
    ಕೂದಲಿಗೆ
    ಸಮಾನವಾಗಿರುತ್ತದೆ ಮತ್ತು ಚೆನ್ನಾಗಿ ಬೆಳೆಯುತ್ತದೆ.
    ಕೂದಲು ಕಸಿಗೆ ಬಳಸಬಹುದಾದ ಇತರ ( donor area) ಪ್ರದೇಶವೆಂದರೆ ಎದೆಯ
    ಭಾಗ ( chest area) . ಇಲ್ಲಿ ಕೂದಲುಗಳು ತೆಳ್ಳಗೆ ಮತ್ತು ಚಿಕ್ಕದಾಗಿದ್ದರೂ, ತಲೆಗೆ ಹಾಕಿದಾಗ ಅದು ಉದ್ದವಾಗಿ ಬೆಳೆಯಲು ಸಾಧ್ಯ. ಆದರೆ ಇದು ನಿಧಾನ, ಸಮಯ ತೆಗೆದು ಕೊಳ್ಳುತ್ತದೆ. ಆದ್ದರಿಂದ ಎದೆಯ ಭಾಗದ ಕೂದಲು ಕಸಿಯನ್ನು ಕೂನೆಯ ಆಯ್ಕೆಯಾಗಿ ಮಾತ್ರ ಬಳಸಬೇಕು ಮತ್ತು ಅದನ್ನು ಗಡ್ಡ ಮತ್ತು ತಲೆಯ ಕೂದಲಿನೂಂದಿಗೆ ಬೆರೆಸಿ ಹಾಕಬೇಕು. ಈ ಫಲಿತಾಂಶವು ಹೆಚ್ಚು ಸಮಯ ತೆಗೆದು ಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿ ಕೊಳ್ಳಬೇಕು. ಆದ್ದರಿಂದ ಕೂದಲುಗಳನ್ನು ( donor area) ಸರಿಯಾಗಿ ಬಳಸುವುದರಿಂದ ಪ್ರತಿ ರೋಗಿಯಲ್ಲು ಮತ್ತು
    ಹೆಚ್ಚಾದ ಬೋಳುತಲೆ
    ಇರುವವರು ಸಹ ಉತ್ತಮ ಫಲಿತಾಂಶಗಳನ್ನು
    ಪಡೆಯಬಹುದು.
    ಆದರೆ ಇದನ್ನು ಅನುಭವ ಇರುವ ತಜ್ಞ ವೈದ್ಯರಿಂದ ಮಾತ್ರ ಮಾಡಿಸಿಕೊಳ್ಳಬೇಕು

КОМЕНТАРІ • 9