ಮುಖ್ಯ ಅತಿಥಿಗಳ ನುಡಿ - ಶ್ರೀ ರಮೇಶ ಅರವಿಂದ,ನಟ-ನಿರ್ದೇಶಕರು,ಬೆಂಗಳೂರು ದಿ||13-1-20ಸ್ಥಳ:ಕೈಲಾಸ ಮಂಟಪ,ಗವಿಮಠ ಕೊಪ್ಪಳ

Поділитися
Вставка
  • Опубліковано 19 січ 2020
  • ರಮೇಶ್ ಅರವಿಂದರು ಭಾರತ ಕಂಡ ಶ್ರೇಷ್ಠ ಪ್ರತಿಭಾನ್ವಿತ ಚಲನಚಿತ್ರ ನಟ, ನಿರ್ದೇಶಕ ಹಾಗೂ ನಿರೂಪಕರಾಗಿದ್ದಾರೆ. ಬಣ್ಣದ ಲೋಕದ ಜನಮೆಚ್ಚಿದ ಕಲಾ ದೊರೆಯಾಗಿರುವ ಇವರು ಜನಿಸಿದ್ದು ಸೆಪ್ಟೆಂಬರ್ 10 1964ರಲ್ಲಿ. ಅಪ್ಪಟ ಕನ್ನಡ ಅಭಿಮಾನಿಯಾಗಿರುವ ಇವರು ಕನ್ನಡ ಚಿತ್ರರಂಗವನ್ನು ಪ್ರೀತಿಸಿ ಪೆÇೀಷಿಸಿದವರು. ಕನ್ನಡ ಚಲನಚಿತ್ರದ ಜೊತೆಗೆ ಹಿಂದಿ, ತೆಲಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಭಾರತೀಯ ಚಿತ್ರರಂಗದ ನಲುಮೆಯ ಕಲಾವಿದರಾಗಿದ್ದರೆ. ತ್ಯಾಗ, ಹಾಸ್ಯ, ಪ್ರೀತಿ ಎಲ್ಲ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ. ಕೆ ಬಾಲಚಂದರ್ ಅವರು ಶ್ರೀ ರಮೇಶ್ ಅವರನ್ನು ಅವರು 1986ರಲ್ಲಿ ಸುಂದರ ಸ್ವಪ್ನಗಳು ಚಿತ್ರದ ಮೂಲಕ ಪರಿಚಯಿಸಿದರು. ಅಲ್ಲಿಂದ ಆರಂಭವಾದ ಇವರ ಪಯಣ ಸತಿ ಲೀಲಾವತಿ, ಡ್ಯುಎಟ್, ಅಮೇರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೆ, ಉಳ್ಟಾ ಪಳ್ಟಾ, ಹೂಮಳೆ ಮತ್ತು ಅಮೃತವರ್ಶಿಣಿ ಚಿತ್ರಗಳಲ್ಲಿನ ಪಾತ್ರಗಳಿಂದ ಗುರುತಿಸಿಕೊಂಡು ನಿರ್ದೇಶಕ ನೀಡಿದ ಪಾತ್ರಗಳಿಗೆ ಘನತೆ ತಂದವರಾಗಿದ್ದಾರೆ. ತಮ್ಮ ವ್ಯೆಯಕ್ತಿಕ ಬದುಕಿಗೆ ಮತ್ತು ವೃತ್ತಿ ಬದುಕಿಗೆ ಒಂದುಕಪ್ಪು ಚುಕ್ಕೆಯನ್ನು ಇಟ್ಟುಕೊಳ್ಳದೆ ಶುಭ್ರವಾದ ಬಿಳಿಯ ಹಾಳೆಯಂತೆ ಬೆಳದಿಂಗಳ ವ್ಯಕ್ತಿತ್ವವುಳ್ಳ ಕನ್ನಡ ಮೇರು ನಟರರಾಗಿದ್ದಾರೆ. ವಿಕ್‍ಎಂಡ್ ವಿಥ್‍ರಮೇಶ್ ಎಂಬ ರಿಯಾಲಿಟಿ ಶೋ ದಲ್ಲಿ ಬರುವ ಸಾಧನೆಯ ಕುರ್ಚಿಯ ಮೇಲೆ ಕುಳಿತ ಘನ ವ್ಯೆಕ್ತಿತ್ವದ ಶಿರೋಮಣಿಗಳಿಗೆ ತಮ್ಮ ವಿನಮ್ರ ಹೃದಯ ಸ್ಪರ್ಶಿ ನುಡಿಗಳ ಮೂಲಕ ಬೆಳಕು ತುಂಬಿದ ಕನ್ನಡ ನಾಡುಕಂಡ ಹೆಮ್ಮೆಯ ನಿರೂಪಕ ರಮೇಶ್ ಅರವಿಂದರು. ಅವರ ಕಲೆ ಮೆಚ್ಚಿದ ಅನೇಕ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಹೂಮಳೆ ಚಿತ್ರದ ನಟನೆಗೆ ಮತ್ತು ಲೇಖನಕ್ಕೆ -ಫಿಲ್ಮ್ ಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಉದಯ ಮತ್ತು ಸುವರ್ಣ ಟಿವಿ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ತಮ್ಮ ನಡೆ ನುಡಿ ಒಂದಾಗಿಸಿದ ಶ್ರೀ ರಮೇಶ್‍ಅವರು ತಮ್ಮ ಉತ್ತಮ ವ್ಯೆಕ್ತಿತ್ವ ವಿಕಸನದ ಉಪನ್ಯಾಸಗಳ ಮೂಲಕ ಅನೇಕ ವಿದ್ಯಾರ್ಥಿಗಳ ಬದುಕಿಗೆ ಸ್ಫೂರ್ತಿಯಾಗಿದ್ದಾರೆ.

КОМЕНТАРІ • 5