ನವರಾತ್ರಿಯ ನವದುರ್ಗೆ 4ನೇ ಸ್ವರೂಪ ಕೂಷ್ಮಾಂಡಾದೇವಿಯ ವಿಶೇಷತೆ ಮತ್ತು ಮಹತ್ವ /NAVARATHRI- DAY-04 : KUSHMANDADEVI

Поділитися
Вставка
  • Опубліковано 22 вер 2024
  • ☆☆🌹 ಶರನ್ನವರಾತ್ರಿ - ನವರಾತ್ರಿ ದುರ್ಗಾದೇವಿಯ ನಾಲ್ಕನೆಯ ಸ್ವರೂಪ - ಕೂಷ್ಮಾಂಡಾ ದೇವಿ 🌹☆☆
    ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
    ದಧಾನ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||
    ಜಗಜ್ಜನನೀ ದುರ್ಗಾದೇವಿಯ ನಾಲ್ಕನೆಯ ಶಕ್ತಿ ಸ್ವರೂಪವು ‘ಕೂಷ್ಮಾಂಡಾ’ ಎಂದಾಗಿದೆ. ತನ್ನ ಮಂದ, ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಕಾರಣ ಇವಳನ್ನು ಕೂಷ್ಮಾಂಡಾದೇವಿ ಎಂದು ಕರೆಯುವರು.
    ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ, ಎಲ್ಲೆಡೆ ಅಂಧಕಾರವೇ-ಅಂಧಕಾರ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ರಚಿಸಿದ್ದಳು. ಆದ್ದರಿಂದಲೇ ಇವಳೇ ಸೃಷ್ಟಿಯ ಆದಿ ಸ್ವರೂಪವಾದ ಆದಿಶಕ್ತಿಯಾಗಿದ್ದಾಳೆ. ಇವಳಿಗಿಂತಲೂ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ.
    ಇವಳ ನಿವಾಸವು ಸೂರ್ಯಮಂಡಲದೊಳಗಿನ ಲೋಕದಲ್ಲಿ ಇದೆ. ಸೂರ್ಯ ಲೋಕದಲ್ಲಿ ನಿವಾಸ ಮಾಡುವ ಅರ್ಹತೆ ಮತ್ತು ಶಕ್ತಿ ಕೇವಲ ಇವಳಲ್ಲೇ ಇದೆ. ಇವಳ ಶರೀರದ ಕಾಂತಿ, ಪ್ರಭೆಯೂ ಸೂರ್ಯನಿಗೆ ಸಮಾನವಾಗಿ ದೇದಿಪ್ಯಮಾನ ಹಾಗೂ ಹೊಳೆಯುವಂತಹುದಿದೆ. ಇವಳ ತೇಜದ ತುಲನೆ ಇದರಿಂದಲೇ ಮಾಡಲಾಗುತ್ತದೆ. ಬೇರೆ ಯಾವುದೇ ದೇವ-ದೇವತೆಗಳೂ ಇವಳ ತೇಜಸ್ಸು ಮತ್ತು ಪ್ರಭಾವಕ್ಕೆ ಸರಿಗಟ್ಟಲಾರರು. ಇವಳ ತೇಜಸ್ಸು ಮತ್ತು ಪ್ರಕಾಶದಿಂದಲೇ ಹತ್ತೂ ದಿಕ್ಕುಗಳು ಪ್ರಕಾಶಿತವಾಗಿವೆ. ಬ್ರಹ್ಮಾಂಡದ ಎಲ್ಲ ವಸ್ತುಗಳಲ್ಲಿ, ಪ್ರಾಣಿಗಳಲ್ಲಿ ಇರುವ ತೇಜಸ್ಸು ಇವಳದೇ ಛಾಯೆಯಾಗಿದೆ.
    ಇವಳಿಗೆ ಎಂಟು ಭುಜಗಳಿದ್ದು 'ಅಷ್ಟಭುಜಾದೇವೀ' ಎಂದು ಖ್ಯಾತಳಾಗಿದ್ದಾಳೆ. ಇವಳ ಏಳು ಕೈಗಳಲ್ಲಿ ಕ್ರಮಶಃ ಕಮಂಡಲು, ಧನುಷ, ಬಾಣ, ಕಮಲ, ಅಮೃತತುಂಬಿದ ಕಲಶ, ಚಕ್ರ ಮತ್ತು ಗದೆ ಇವೆ. ಇವಳ ವಾಹನ ಸಿಂಹವಾಗಿದೆ. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು 'ಕೂಷ್ಮಾಂಡ'ವೆಂದು ಹೇಳುತ್ತಾರೆ. ಬಲಿಯಲ್ಲಿ ಕುಂಬಳಕಾಯಿಯ ಬಲಿಯೇ ಇವಳಿಗೆ ಸರ್ವಾಧಿಕ ಪ್ರಿಯವಾಗಿದೆ. ಈ ಕಾರಣದಿಂದಲೂ ಇವಳನ್ನು 'ಕೂಷ್ಮಾಂಡಾ' ಎಂದು ಹೇಳುತ್ತಾರೆ.
    ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಸ್ವರೂಪದ್ದೇ ಉಪಾಸನೆ ಮಾಡಲಾಗುತ್ತದೆ. ಈ ದಿನ ಸಾಧಕನ ಮನಸ್ಸು ಅನಾಹತಾ ಚಕ್ರದಲ್ಲಿ ನೆಲೆ ನಿಲ್ಲುತ್ತದೆ. ಆದ್ದರಿಂದ ಅಂದು ಅವನು ಅತ್ಯಂತ ಪವಿತ್ರ ಮತ್ತು ಅಚಂಚಲ ಮನಸ್ಸಿನಿಂದ ಕೂಷ್ಮಾಂಡಾ ದೇವಿಯ ಸ್ವರೂಪವನ್ನು ಧ್ಯಾನದಲ್ಲಿ ಧರಿಸಿಕೊಂಡು ಪೂಜೆ ಉಪಾಸನೆಯ ಕಾರ್ಯದಲ್ಲಿ ತೊಡಗಬೇಕು. ಜಗಜ್ಜನನೀ ಕೂಷ್ಮಾಂಡಾ ದೇವಿಯ ಉಪಾಸನೆಯಿಂದ ಭಕ್ತರ ಎಲ್ಲ ರೋಗ ಶೋಕಗಳು ನಾಶವಾಗುತ್ತವೆ. ಇವಳ ಭಕ್ತಿಯಿಂದ ಆಯಸ್ಸು, ಯಶ, ಬಲ, ಆರೋಗ್ಯದ ವೃದ್ಧಿಯಾಗುತ್ತದೆ. ತಾಯಿ ಕೂಷ್ಮಾಂಡಾ ದೇವಿಯು ಸ್ವಲ್ಪ ಸೇವೆ-ಭಕ್ತಿಯಿಂದ ಪ್ರಸನ್ನಳಾಗುತ್ತಾಳೆ. ನಿಜವಾದ ಹೃದಯದಿಂದ ಮನುಷ್ಯನು ಇವಳಿಗೆ ಶರಣಾಗತನಾದರೆ ಬಳಿಕ ಅವನಿಗೆ ಅತ್ಯಂತ ಸುಲಭವಾಗಿ ಪರಮ ಪದದ ಪ್ರಾಪ್ತಿಯಾಗಬಲ್ಲುದು.
    ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ ವರ್ಣಿಸಿರುವ ವಿಧಿ-ವಿಧಾನಕ್ಕನುಸಾರ ಜಗನ್ಮಾತೆ ದುರ್ಗೆಯ ಉಪಾಸನೆ ಮತ್ತು ಭಕ್ತಿಯ ಮಾರ್ಗದಲ್ಲಿ ಹಗಲು-ರಾತ್ರಿ ಮುಂದುವರಿಯಬೇಕು. ದುರ್ಗೆಯ ಭಕ್ತಿಮಾರ್ಗದಲ್ಲಿ ಕೆಲವೇ ಹೆಜ್ಜೆ ಮುನ್ನಡೆದಾಗ ಭಕ್ತ ಸಾಧಕನಿಗೆ ಅವಳ ಕೃಪೆಯ ಸೂಕ್ಷ್ಮ ಅನುಭವವಾಗ ತೊಡಗುತ್ತದೆ. ಈ ದುಃಖಮಯ ಸಂಸಾರವು ಅವನಿಗೆ ಅತ್ಯಂತ ಸುಖಮಯ ಹಾಗು ಸುಗಮವಾಗುತ್ತದೆ. ತಾಯಿ ದುರ್ಗೆಯ ಉಪಾಸನೆಯು ಮನುಷ್ಯನಿಗೆ ಸಹಜಭಾವದಿಂದ ಭವಸಾಗರದಿಂದ ದಾಟಿಹೋಗಲು ಹೆಚ್ಚಿನ ಸುಗಮ ಹಾಗೂ ಶ್ರೇಯಸ್ಕರ ಮಾರ್ಗವಾಗಿದೆ. ಕೂಷ್ಮಾಂಡಾ ದೇವಿಯ ಉಪಾಸನೆಯು ಮನುಷ್ಯನಿಗೆ ಆದಿ-ವ್ಯಾಧಿಗಳಿಂದ ಪೂರ್ಣವಾಗಿ ಮುಕ್ತಗೊಳಿಸಿ, ಅವನಿಗೆ ಸುಖ, ಸಮೃದ್ಧಿ ಮತ್ತು ಉನ್ನತಿಯ ಕಡೆಗೆ ಕೊಂಡು ಹೋಗುವುದಾಗಿದೆ. ಆದ್ದರಿಂದ ತನ್ನ ಲೌಕಿಕ-ಪಾರಲೌಕಿಕ ಉನ್ನತಿಯನ್ನು ಬಯಸುವವರು ಕೂಷ್ಮಾಂಡಾದೇವಿಯ ಉಪಾಸನೆಯಲ್ಲಿ ಸದಾಕಾಲ ತತ್ಪರರಾಗಿರಬೇಕು.
    ಶ್ರೀಕೃಷ್ಣಾರ್ಪಣಮಸ್ತು
    #navarathrispecial #haircare #herbalhairoil #beautifulhair #navarathri2023 #dasara2023#navarathri #kushmandadevi #ಮೈಸೂರಿಚಾಮುಂಡೇಶ್ವರಿ #ಮಾತೆ #navadurga

КОМЕНТАРІ •