Mysuru Dasara : ಮೈಸೂರು ರಾಜಮನೆತನದ ವಿಜಯಯಾತ್ರೆ | Yadhuveer Wadiyar | Vijayadashami | Vijay Karnataka
Вставка
- Опубліковано 5 лют 2025
- ಜಗತ್ಪ್ರಸಿದ್ಧ ಮೈಸೂರು ಅರಮನೆಯ ವಿಜಯದಶಮಿ ಜಂಬೂ ಸವಾರಿಯ ಧಾರ್ಮಿಕ ಕಾರ್ಯ ಸಕಲ ಸಂಪ್ರದಾಯಗಳೊಂದಿಗೆ ಸಂಪನ್ನಗೊಂಡಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆಯೊಂದಿಗೆ ರಾಜಮನೆತನದ ಖಾಸಗಿ ದರ್ಬಾರಿನ ಎಲ್ಲಾ ವಿಧಿಗಳು ಅಂತ್ಯಗೊಂಡಿವೆ. ಪಟ್ಟದ ಆನೆ, ಕುದುರೆ, ಹಸುಗಳು, ಒಂಟೆ 5.45ಕ್ಕೆ ಅರಮನೆ ಒಳಾವರಣಕ್ಕೆ ಆಗಮಿಸಿದ್ದು, 6.13 ರಿಂದ 6.32ರವರೆಗೆ ಕಾಸಾ ಆಯುಧಗಳಿಗೆ ಪೂಜಾ ಕೈಂಕರ್ಯ ನಡೆಯಿತು. ಬಳಿಕ ಅರಮನೆಯ ಚಾಮುಂಡಿ ದೇವಿಯ ವಿಗ್ರಹವನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡಲಾಯಿತು. ನಂತರ ಪಟ್ಟದ ಕತ್ತಿ ಭುವನೇಶ್ವರಿ ದೇವಾಲಯಕ್ಕೆ ಕಳುಹಿಸಿ ವಿಜಯ ಯಾತ್ರೆ ನೆರವೇರಿಸಲಾಯಿತು. ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ, ಕಾರಿನಲ್ಲಿ ಯದುವೀರ್ ಕುಳಿತು ವಿಜಯಯಾತ್ರೆ ಕೈಗೊಂಡು ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನೆರವೇರಿಸಿದರು. ಬಳಿಕ ಭುವನೇಶ್ವರಿ ಮಂಟಪದಲ್ಲಿ ಬನ್ನಿ ಮರಕ್ಕೆ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಪೂಜೆ ಸಲ್ಲಿಸಿದರು. ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್ ಆಗಿ ಕಂಕಣ ವಿಸರ್ಜನೆ ಮಾಡುವ ಮೂಲಕ ಜಂಬೂ ಸವಾರಿಯ ಧಾರ್ಮಿಕ ಕಾರ್ಯ ಸಂಪನ್ನಗೊಂಡವು. ಅರಮನೆ ನಗರಿ ಮೈಸೂರಲ್ಲಿ ಮನೆ ಮಾಡಿದ ದಸರಾ ಸಂಭ್ರಮ
ರಾಜವಂಶಸ್ಥ ಯದುವೀರ್ ಒಡೆಯರ್ ವಿಜಯಯಾತ್ರೆ ಅಂತ್ಯ
ರಾಜಮನೆತನದ ಖಾಸಗಿ ದರ್ಬಾರಿನ ಎಲ್ಲಾ ವಿಧಿಗಳು ಸಂಪನ್ನ
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರಿಂದ ಬನ್ನಿ ಮರಕ್ಕೆ ಪೂಜೆ
ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ, ಕಾರಿನಲ್ಲಿ ಯದುವೀರ್ ಮೆರವಣಿಗೆ
ಅರಮನೆ ಮುಖ್ಯದ್ವಾರದಿಂದ ಭುವನೇಶ್ವರಿ ದೇಗುಲದವರೆಗೂ ಯಾತ್ರೆ.
#MysuruDasara #YadhuveerWadiyar #Vijayadashami
Our Website : Vijaykarnataka...
Facebook: / vijaykarnataka
Twitter: / vijaykarnataka
Proud to have our Dasarafestival,,,👌👍Wishing Happy Dasara festival fo all🦚
Super thanks for posting this video
Namma naadina hemme Namma Mysore dasara jai chamundeshwari
NAMMA MYSORE NAMMA HEEME
Happy dasara festival to all
Thq. Same to u
ಎರಡು ಕಣ್ಣು ಸಾಲದು ಅರಮನೆ ನಗರಿ ಮೈಸೂರು ನೋಡಲು...... 🙏🙏 I love mysuru..... 😍
Chamundeswai dhanyoshmi krupa karo karona mayavagi nemmade sigali