YAVA DEVARA GUDIYA ಯಾವ ದೇವರ ಗುಡಿಯ || ಭಾವಗೀತೆ || Ravindra nayak sannakkibettu || Raghavendra beejadi

Поділитися
Вставка
  • Опубліковано 2 жов 2024
  • ಯಾವ ದೇವರ ಗುಡಿಯ ಒಲವ ದೀಪ
    Yava devara gudiya olava deepa
    Lyrics: Ravindra nayak sannakkibettu
    Music: Raghavendra beejadi
    Orchestration: Sameer rao
    Singer: Raghavendra beejadi
    Keyboard: Sangeeth Thomas
    Tabla: Venugopal raju
    Sitar: Shrinivas
    Flute: Sameer rao
    Pad: Vinay rangadhol
    Sound engineer: Nagaraj
    Aravinda studio, Bangalore
    ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
    ಸಂಗೀತ ಮತ್ತು ಗಾಯನ: ರಾಘವೇಂದ್ರ ಬೀಜಾಡಿ
    ವಾದ್ಯ ಸಂಯೋಜನೆ: ಸಮೀರ್ ರಾವ್
    ಯಾವ ದೇವರ ಗುಡಿಯ ಒಲವ ದೀಪವು ನೀನು;
    ಯಾರ ತಪಸಿಗೆ ಇಳಿದ ಪೊರೆವ ಗಂಗೆಯು ನೀನು.
    ಮನದಿ ಚೇತನ ತುಂಬಿ ನಗೆಯ ಸೀರೆಯನುಟ್ಟು
    ಬರೆದೆ ಮನೆಯಂಗಳದಿ ಹೊಳೆವ ರಂಗಾವಲ್ಲಿ;
    ಬದುಕ ಕನಸಿನ ಬೆರಳ ಹಿಡಿದು ಮುನ್ನಡಿಯಿಟ್ಟು
    ಕಳೆಯೆ ಕತ್ತಲಗವಿಯ ಉರಿದು ಬೆಳಕನು ಚೆಲ್ಲಿ.
    ಸುಖದ ಕರೆಗೂ ತೂಗಿ ನೋವನಲೆಯಲಿ ಮಾಗಿ
    ಒಲವ ಹನಿಹನಿಯಲ್ಲಿ ಕಟ್ಟಿ ಜೇನಿನಗೂಡು;
    ಹೂಬನವು ಎದೆಯಲ್ಲಿ ತೆರೆದ ಮಾತಿನ ಘಮಲು
    ಕವಲು ಹಾದಿಯ ಮರೆಸಿ ಗುರಿಯ ತೋರಿದ ಹಾಡು.
    ನವಮಾಸಗಳ ಗುಟ್ಟು ಸೊಗದ ರೆಕ್ಕೆಯ ತೆರೆದು
    ಬಯಲ ಆಗಸದಲ್ಲಿ ಹಾರಿರಲು ನಲಿವುಕ್ಕಿ;
    ಚಿಗುರುವಾಸೆಯ ಬೇರು ಮಣ್ಣಿನಾಳಕೆ ಇಳಿದು
    ಹಬ್ಬಿ ಹಸುರಿನ ಸೆರಗು ಬಂದು ತಬ್ಬಿತು ಹಕ್ಕಿ.
    ~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
    #ಭಾವಗೀತೆ
    #kannadabhavageethegalu
    #mother
    #mothersday

КОМЕНТАРІ • 30

  • @umasrinivas4418
    @umasrinivas4418 2 роки тому +1

    👌👌 ಮಹಿಳಾ ಉತ್ಸವ

  • @sukanyanayak542
    @sukanyanayak542 2 роки тому +1

    ಮಧುರವಾಗಿದೆ.....

  • @raghavendrakulkarni8550
    @raghavendrakulkarni8550 2 роки тому

    ಸಾಹಿತ್ಯ, ಸಂಗೀತ, ಹಿನ್ನೆಲೆ ಗಾಯನ, ವಾದ್ಯ ಸಂಯೋಜನೆ ಎಲ್ಲವೂ ಅದ್ಭುತ

  • @sandhyanayak6821
    @sandhyanayak6821 2 роки тому +1

    Super 😍😍😍

  • @btsusheela1183
    @btsusheela1183 4 місяці тому

    Naguvina belaku tumbide haadina tumbellaa😊😊😊😊❤❤❤❤❤

  • @mamathaacharya4520
    @mamathaacharya4520 2 роки тому +1

    ❤️🎊🙏👍

  • @mythilisram6077
    @mythilisram6077 Рік тому

    Speech less just say wonderful

  • @Ravindranayaksannakkibettu
    @Ravindranayaksannakkibettu  4 місяці тому

    ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤❤❤

  • @lavanya1335
    @lavanya1335 2 роки тому +1

    Beautiful!! 😍 ಧನ್ಯವಾದಗಳು ಸರ್ 🙏💐

  • @gururajasr6207
    @gururajasr6207 2 роки тому +2

    ಸೊಗಸಾದ ಸಾಹಿತ್ಯಕ್ಕೆ ಮಧುರ ಕಂಠಸಿರಿ
    ರವೀಂದ್ರ ಸರ್ ಹಾಗೂ ರಾಘವೇಂದ್ರ ಬಿಜಾಡಿ ಸರ್ ನಿಮ್ಮ ಸಂಯೋಜನೆಗಳು ಅದ್ಭುತ..
    ನಿಮ್ಮ ಅಭಿಮಾನಿ..
    👏👏👌👌👍👍❤️❤️🌹🌹🙏🙏

  • @mallikasnayak6318
    @mallikasnayak6318 2 роки тому +2

    ಸುಂದರ ಸಾಲುಗಳು, ಗಾಯನ...👌😍

  • @dr.badarinathjahagirdar1466
    @dr.badarinathjahagirdar1466 2 роки тому +1

    ತುಂಬಾ ಚೆನ್ನಾಗಿದೆ ಭಾವಗೀತೆ. ಇಷ್ಟವಾಯಿತು

  • @shanthaparamesh8364
    @shanthaparamesh8364 2 роки тому +1

    ತುಂಬಾ ಚೆನ್ನಾಗಿದೆ ಗೀತೆ ಸಾರ್

  • @Lachamanna.1975
    @Lachamanna.1975 2 роки тому +1

    ಗುರುಗಳೇ 👌

  • @vishnubhat3842
    @vishnubhat3842 2 роки тому +1

    ಮನ ತುಂಬಿತು.

  • @vighneshwaraudupa801
    @vighneshwaraudupa801 2 роки тому +1

    ಸೂಪರ್

  • @bhagyasbhat764
    @bhagyasbhat764 2 роки тому +1

    ನೈಸ್

  • @parimalagowda1992
    @parimalagowda1992 2 роки тому +1

    😍💖💖💖💖

  • @AmitaRavikirana
    @AmitaRavikirana 2 роки тому +1

    Tumba chanda

  • @MythiliSRam
    @MythiliSRam 12 днів тому +1

    Awesome song ..Beautiful singing...Fabulous music composition and lyrics..Fantastic video graphics..Thank you for sharing

    • @Ravindranayaksannakkibettu
      @Ravindranayaksannakkibettu  12 днів тому

      Thank you ❤️
      ತುಂಬಾ ದಿನಗಳ ನಂತರ ನಿಮ್ಮ ಮೆಸೇಜ್ ನೋಡಿ ಖುಷಿ❤️ ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ❤️
      ಬಿಡುವಿದ್ದಾಗ ಕೇಳಿ
      ಗಜಲ್
      ua-cam.com/video/zmjZ1tZa3kE/v-deo.htmlsi=kKVRumrg9VqBfZcE

  • @ShashikiranAnekar
    @ShashikiranAnekar 2 роки тому +1

    ಆಹಾ..👌👌👌👌

  • @pbusha2305
    @pbusha2305 2 роки тому +1

    Very nice singing sir👌💐🙏

  • @Vinutha2368
    @Vinutha2368 Рік тому

    ವರ್ಣಿಸಲು ಪದಗಳೇ ಸಾಲದು ಸರ್ ನಿಮ್ಮ ಅಧ್ಬತ ಸಾಹಿತ್ಯಕ್ಕೆ. ❤️👌 ನಿಮ್ಮ ಚಂದದ ಕವಿತೆಗೆ ರಾಘವೇಂದ್ರ ಸರ್ ಅವರ ಸೊಗಸಾದ ರಾಗ ಸಂಯೋಜನೆ, ಮಧುರವಾದ ಗಾಯನ , ನಿಜಕ್ಕೂ ಹೃದಯ ಮುಟ್ಟಿತು.👌👌👌👌 ಇಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏🙏🙏

  • @Seeta-sanju
    @Seeta-sanju 2 роки тому +1

    Beautiful 😍

  • @prajnayanevanil8032
    @prajnayanevanil8032 2 роки тому

    Hennannu chennagi varnisidiri.nanu song kelirlilla.

    • @Ravindranayaksannakkibettu
      @Ravindranayaksannakkibettu  2 роки тому

      ತುಂಬಾ ತುಂಬಾ Thank you...
      ನಿಮ್ಮ ಸೂಕ್ಷ್ಮ ಒಳನೋಟಗಳ ಪ್ರತಿಕ್ರಿಯೆಗಳು ಬೇಕು 💐