ಆ-ಹಾ ಕಾರದ “ಆಹಾ!" ಪದ್ಯ

Поділитися
Вставка
  • Опубліковано 28 кві 2021
  • ಅಮೆರಿಕನ್ನಡಿಗ ಕವಿ ಹಂ.ಕ.ರಾಮಪ್ರಿಯನ್ ಅವರು ಬರೆದಿರುವ ಒಂದು ಸರಳ ಪದ್ಯ ಇಲ್ಲಿದೆ. ಕನ್ನಡ ಭಾಷೆಯಲ್ಲಿ ಆ-ಹಾ ಕಾರ ಉಚ್ಚಾರ ಮತ್ತು ಬರವಣಿಗೆಯಲ್ಲಿ ಸಮಸ್ಯೆಯಿರುವವರು ಇದನ್ನು ಕಲಿತರೆ ಸಮಸ್ಯೆ ಪರಿಹಾರವಾಗುವುದು. ಚಿಕ್ಕಮಕ್ಕಳಿಗಂತೂ ಇದನ್ನು ಕಲಿಸಿದರೆ ಅವರಿಗೆ ಎಂದೆಂದಿಗೂ ಆ ಸಮಸ್ಯೆಯೇ ಬಾರದು! ರಾಗವಾಗಿ ಹಾಡಲಿಕ್ಕಾಗುವುದು ಈ ಪದ್ಯದ ಇನ್ನೊಂದು ಹೆಚ್ಚುಗಾರಿಕೆ. ಆದ್ದರಿಂದ ಇದನ್ನು ಶಾಲೆಗಳಲ್ಲಿ ನಿತ್ಯಪ್ರಾರ್ಥನೆಯಾಗಿಸಿದರೆ, ಸುದ್ದಿಮನೆಗಳಲ್ಲಿ ಕಡ್ಡಾಯವಾಗಿ ನಿತ್ಯ ಪ್ರಮಾಣವಚನ ಅಂತಾಗಿಸಿದರೆ, ಕರ್ನಾಟಕವನ್ನು ಅಗಾಧವಾಗಿ ತಟ್ಟಿರುವ ಆ-ಹಾಕಾರದ ಹಾಹಾಕಾರ ಸಂಪೂರ್ಣ ನಿರ್ನಾಮವಾಗುತ್ತದೆ.
    ಉದಿಸಿಹನರುಣನು ಬರುತಿರುವನು ರವಿ ಬಿಡು ಹಾಸಿಗೆಯನು ನೀನ್ ಏಳು|
    ಹರಿ ಹರಿ ಎನ್ನುತ ಭಜನೆಯ ಮಾಡುತ ಸವಿಮಾತುಗಳನು ನೀನ್ ಹೇಳು||
    ಹೊಟ್ಟೆಯ ಪಾಡಿಗೆ ನೌಕರಿ ಮಾಡುವ ಭಾರವ ಬೆನ್ನಲಿ ನೀ ಹೇರಿ|
    ಕೆಲಸಕೆ ಹೋಗೆಲೊ ವೇಗದಿ ಹೋಗುವ ಎಣ್ಣೆಯ ಗಾಡಿಯ ನೀನ್ ಏರಿ||
    ಮನೆಗೆ ಸಂಜೆಯಲಿ ಬಂದನು ಗಂಡನು ಹೇಳಿದನ್ ಊಟವ “ನೀ ಹಾಕೇ"|
    “ನೌಕರಿ ಮಾಡಿಯೆ ನಾನೂ ಬಂದಿಹೆನಡುಗೆಯ ಮಾಡ್"ಎಂದಳು ಆಕೆ||
    ಅಡುಗೆಯ ಕೆಲಸದಿ ತೊಡಗಿರಲಮ್ಮನು ಬಳಲುತಲಿರುವುದು ಮಗು ಅತ್ತು|
    ದಯಪರನಾಗುತ diaperಅ ಬದಲಿಸೆ ಮಹಡಿಯ ಮೇಗಡೆ ನೀ ಹತ್ತು||
    ತಲೆಯೊಳು ಕರಿಕಿರಿಹುಳು ಬಂದಿರುವುದು ಅಮ್ಮಾ ನೀ ಹೇಳಿದು ಏನು?
    ಕೆರೆವುದ ನಿಲ್ಲಿಸು ಔಷಧ ಹಾಕುತ ತಲೆಯನು ತೊಳೆವೆನು ಅದು ಹೇನು||
    ಪುಸ್ತಕವೋದುತ ಕವಿತೆಯ ಬರೆಯುತಲಿರುವನು ಎಮ್ಮಯ ಹಿರಿ ಅಣ್ಣ|
    ಹಸಿದಿಹ ಹೊಟ್ಟೆಯ ತುಂಬಲು ತಿನ್ನುವ ಸುಲಿಯುತ ಸಿಹಿ ಬಾಳೆಯ ಹಣ್ಣ||
    ಎರವನು ಪಡೆಯಲು ಮನೆಕೆಲಸಗಳೊಳು ಬಿಡುವೆನು ಮನೆಯೊಳು ನಾನ್ ಆಳ|
    ಜಡತನ ಪಿಡಿದಿರೆ ಕದಿಯುತ ನಡೆದಿರೆ ತರುವನು ಮನೆಗವ ಬಲು ಹಾಳ||
    ಆಳದ ಬಾವಿಯ ನೀರನು ಸೆಳೆಯಲು ಬೇಕೆಲೊ ಬಲು ಉದ್ದದ ಹಗ್ಗ|
    ನಮ್ಮನೆ ಹತ್ತಿರದಂಗಡಿಯೊಂದಿದೆ ಅಲ್ಲೇ ಕೊಳ್ಳೆಲೊ ಅದು ಅಗ್ಗ||
    ಕುಟ್ಟಿದ ಬತ್ತವ ಮೊರದಲಿ ತೂರ್ದೊಡೆ ಒಮ್ಮೆಲೆ ಅಕ್ಕಿಯು ಹಾರುವುದು|
    ಬೇಯಿಸಿ ಮೇಜಿನ ಮೇಗಡೆ ಇಟ್ಟರೆ ನಂತರ ಅಕ್ಕಿಯು ಆರುವುದು||
    ಉರಿಬಿಸಿಲಿನ ಧಗೆ ಹೆಚ್ಚುತ ಬಂದರೆ ಮರದೊಳು ಹಕ್ಕಿಯು ಆರುವುದು|
    ಓಡುತ ಬರುತಿಹ ಮಕ್ಕಳ ಗಲಭೆಗೆ ಬೆದರುತ ಹಕ್ಕಿಯು ಹಾರುವುದು||
    ಬೆಳೆದಿದೆ ಹರಡಿದೆ ನೆರಳನು ಕೊಡುತಿದೆ ಹೆಸರಿದೆಯೊಂದದಕದೆ ಆಲ|
    ಬೆಳೆಯಲು ಕರುವಿಗೆ ದಿನದಿನ ಕೊಡುವುದು ತೃಣವುಣುತಲಿ ದನ ನೊರೆ ಹಾಲ||
    ಹುಲ್ಲನು ಮೇಯುತ ಜೊಲ್ಲನು ಸುರಿಸುತ “ಬ್ಯಾ ಬ್ಯಾ" ಎನ್ನುವುದದು ಆಡು|
    ಮೆಲ್ಲನೆ ನಡೆಯುತ ನಲ್ಲನ ಸನಿಹಕೆ ಬರುತಿರುವಾಡಿಗೆ ಅದೆ ಹಾಡು||
    ನಮ್ಮೂರ್ ಚೆಂದವು ಎಲ್ಲ ಋತುಗಳೊಳು ಬೆಚ್ಚಗೆ ಇರುವುದು ಹವೆ ಅಲ್ಲಿ|
    ಗೋಡೆಯ ಮೇಗಡೆ ಕುಳಿತು ಸಂತಸದಿ ಲೊಚಲೊಚಗುಟ್ಟುವುದಾ ಹಲ್ಲಿ||
    ಹುಣ್ಣಿಮೆ ಬಾನೊಳು ಬೆಣ್ಣೆಯ ಬಣ್ಣದ ಬೆಳಕನು ಚೆಲ್ಲುವನವ ಇಂದು|
    ದಿನದಿನ ಭಾನುವು ಹೋಗಿರೆ ಮುಂದಕೆ ಓಡುತ ಪೋಗುವನ್ ಅವ ಹಿಂದು||
    ಮತಗಳ ಹೆಸರಲಿ ಕೊಲ್ಲುವ ಜನಗಳು ಜಗದೊಳು ಹೆಚ್ಚಾಗಿಹರ್ ಇಂದೂ|
    ಮತಗಳ ಸಮತೆಯ ನಂಬುತ ಶಾಂತಿಯ ಜೀವನ ನಡೆಸುವ ನರ ಹಿಂದೂ||
    ಓದನು ಓದಿರೆ ಕೆಲಸವ ಮಾಡಿರೆ ಬೇಸರ ಹೋಗಲು ನೀನ್ ಆಡು|
    ಹರಿಯನು ಭಜಿಸುತ ಮನವನು ತಣಿಸುತ ದಾಸರ ಪದಗಳ ನೀ ಹಾಡು||
    ಎನ್ನೀ ಕವಿತೆಯ ಮೆಚ್ಚಿಹ ಜನಗಳು ‘ಆಹಾ!’ಕಾರವ ಮಾಡುವರು|
    ಎನ್ನೀ ಕವಿತೆಯ ಮೆಚ್ಚದ ಜನಗಳು ಹಾಹಾಕಾರವ ಮಾಡುವರು||
    ಬರೆದವರು: ಹಂ.ಕ.ರಾಮಪ್ರಿಯನ್; ಕ್ಯಾಲಿಫೋರ್ನಿಯಾ, ಅಮೆರಿಕ.
    ಹಾಡಿದವರು: ಅನೀಷಾ ಮತ್ತು ಅದಿತಿ; ಬೆಂಗಳೂರು, ಭಾರತ
    ====

КОМЕНТАРІ • 17

  • @sujaya.r.konnur7478
    @sujaya.r.konnur7478 3 роки тому +1

    ನಿಜವಾಗಿ ಎಷ್ಟು ಸ್ವಚ್ಛವಾಗಿ, ಸ್ಪಷ್ಟವಾಗಿದೆ ಉಚ್ಚಾರ. ಕಷ್ಟದ ಸಾಲುಗಳು........ಎಲ್ಲಾ ಮಾಧ್ಯಮದವರಿಗೆ ಮೊದಲು ಓದಲು ಹೇಳಿ. ಬಹುಶಃ ನಾವು ಕಿವಿ ಮುಚ್ಚಿಕೊಳ್ಳಬೇಕಾದೀತು.
    ನಮ್ಮ ಮುಂದಿನ ಪೀಳಿಗೆ ಈ ರೀತಿ ಸ್ವಚ್ಛ ಕನ್ನಡ ಭಾಷೆ ಮಾತಾಡಿದರೆ, ಮುಂದೆ ಇವರೇ ಮಾಧ್ಯಮಗಳಲ್ಲಿ ಸ್ಪಷ್ಟ ಮಾತನಾಡಬಹುದು. ಬರೆದವರಿಗೂ, ಹಾಡಿದ ಪುಟ್ಟ ಮಕ್ಕಳಿಗೂ, ಹಾಗೂ ಸ್ವಚ್ಛ ಕನ್ನಡ ಭಾಷೆಯನ್ನು ಹರಡುತ್ತಿರುವ ಶ್ರೀ ವತ್ಸ ಜೋಷಿಯವರಿಗೂ ನಮ್ಮೆಲ್ಲರ ಅಭಿನಂದನೆಗಳು.

  • @archanahebbar6557
    @archanahebbar6557 3 роки тому +3

    ಆಹಾ!! ಸ್ಪಷ್ಟ ಉಚ್ಚಾರಣೆಯೊಂದಿಗೆ ಬಹಳ ಚೆನ್ನಾಗಿ ಹಾಡಿದ್ದಾರೆ. 👏👏👏

  • @rpshri9379
    @rpshri9379 3 роки тому +2

    ಆಹಾ... ಪುಟಾಣಿಗಳ ಸ್ಪಷ್ಟ ಉಚ್ಚಾರಣೆ ಖುಷಿ ನೀಡಿತು. ಅದಿತಿ, ಅನೀಷಾರಿಗೆ ಪ್ರೀತಿಯ ಚಪ್ಪಾಳೆ 👏👏👏

  • @DNPuttaHanumantharayappa
    @DNPuttaHanumantharayappa 2 роки тому

    ಧನ್ಯವಾದಗಳು ಸರ್, ನಿಜಕ್ಕೂ ಆನಂದವಾಯಿತು. "ಆ" ಕಾರ ಹಾಗೂ "ಹಾ" ಕಾರ ಕೇಳಿ ಆಹ್ಲಾದಕರ ವಾಯಿತು

  • @shivanandgb
    @shivanandgb 3 роки тому +2

    ಸುಂದರ ಪದ್ಯ ಸುಂದರ ಹಾಡು

  • @adithipraveen7491
    @adithipraveen7491 3 роки тому +1

    Beautiful

  • @charanrajyadady-grammarent9431
    @charanrajyadady-grammarent9431 3 роки тому +1

    ಉತ್ತಮವಾಗಿತ್ತು

  • @jokarmaths7771
    @jokarmaths7771 2 роки тому

    amazing ...@

  • @shakuntalabagalkot889
    @shakuntalabagalkot889 3 роки тому +1

    ಮಕ್ಕಳ ಮಾತು ಚಂದವಾಗಿತ್ತು

  • @NarendraSGangolli
    @NarendraSGangolli 3 роки тому +1

    👍❤❤😊😊 ಪುಟಾಣಿಗಳಿಗೆ ಅಭಿನಂದನೆಗಳು 🌹🌹🌹

  • @rathnakaram.v.7103
    @rathnakaram.v.7103 3 роки тому +1

    ಆಹಾ ಅದಿತಿ
    ಒಹೋ ಅನೀಷಾ🎉

  • @sheelashankar648
    @sheelashankar648 3 роки тому +1

    ಕೇಳಲೆಷ್ಟು ಸುಖ!
    ಕನ್ನಡ ವಾಹಿನಿಗಳ ಸ್ಟುಡಿಯೋ ಗೋಡೆಗಳಲ್ಲಿ ಈ ಹಾಡನ್ನು ಬರೆದು ಅಂಟಿಸಬಹುದಲ್ಲವೇ?

  • @jp3477
    @jp3477 3 роки тому

    Sir, thanayana programme nalli keluva background song yaru compose madiddu sir matthe adara hesaru enu

  • @shashankbv3366
    @shashankbv3366 2 роки тому

    Naukari kannada padavalla

  • @biska7423
    @biska7423 3 роки тому

    ಕರಿಹಪ್ೇಜದುನಂೀರ