ರಾಜ್ಯ ಪ್ರಧಾನ ಬಿ.ಎಸ್.ಪಿ ರಾಜ್ಯಕಾರ್ಯದರ್ಶಿ ಕೆ.ಸಿ.ನಾಗರಾಜ್
Вставка
- Опубліковано 6 лют 2025
- ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಾರ್ಟಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಹೊಸದಾಗಿ ಸೇರ್ಪಡೆಯಾದವರನ್ನು ಪಕ್ಷದ ಭಾವುಟ ನೀಡಿ ಬರಮಾಡಿಕೊಂಡು ಮಾತನಾಡಿದರು.ಬಹುಜನ ಸಮಾಜ ಪಾರ್ಟಿ ಎಂದಿಗೂ ಬಡವರ ಪರವಾಗಿ ನಿಲ್ಲಲಿದೆ,ರಾಜ್ಯ ಹಾಗೂ ಜಿಲ್ಲೆಯಲ್ಲಿ ಪಕ್ಷ ವೇಗವಾಗಿ ಬೆಳೆಯುತ್ತಿದ್ದು ರಾಜ್ಯಾದ್ಯಕ್ಷರಾಗಿ ಮಂಡ್ಯ ಡಾ.ಕೃಷ್ಣಮೂರ್ತಿ ನೇತ್ರತ್ವದಲ್ಲಿ ಪಕ್ಷ ಮುಂದೆ ಸಾಗುತ್ತಿದ್ದು ಸಮಾಜದ ಬಡ ವರ್ಗದ ಜೊತೆ ನಿಲ್ಲುತ್ತೇವೆ ಎಂದರು.
ಬಹುಜನ ಸಮಾಜ ಪಾರ್ಟಿ ಎಸ್.ಸಿ.ಎಸ್.ಟಿ ಹಾಗೂ ಅಲ್ಪ ಸಂಖ್ಯಾತರಿಗೆ ಅನಿವಾರ್ಯವಾಗಿದೆ, ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ನೀತಿ ನಿಯಮಗಳನ್ನು ಇತ್ತೀಚಿಗೆ ತೋರುತ್ತಿದ್ದು,ಪ್ರಜಾ ಪ್ರಭುತ್ವದಲ್ಲಿ ಬಿಜೆಪಿ ಮೂಲ ಸಿವಾಸಿಗಳ ವಿರೋದಿಯಾಗಿದ್ದು ನೋಟ್ ಬ್ಯಾನ್‌ಮಾಡಿ ಬಡವರನ್ನು ತುಳಿದು,ಶ್ರೀಮಂತರ ಪರವಾಗಿ ಕಾರ್ಯಕ್ರಮ ರೂಪಿಸುತ್ತಾ ಕಾಂಗ್ರೆಸ್ ಹಾಗೂ ಬಿಜೆಪಿ ಮನುವಾದಿ ಪಕ್ಷಗಳು ಎಂಬುದನ್ನು ಸಾಬೀತು ಮಾಡಿಕೊಂಡಿದ್ದಾರೆ,ಬಲಾಢ್ಯರ ಪರವಾಗಿ ಎರಡೂ ಪಕ್ಷಗಳು ಇದ್ದು ಬಿ.ಎಸ್.ಪಿ ಪಕ್ಷ ಈ ಎರಡೂ ಪಾರ್ಟಿಯ ನೀತಿ ನಿಯಮಗಳನ್ನು ವಿರೋಧಿಸಿ ಎಲ್ಲಾ ವರ್ಗದ ಜನರ ಪರ ಕೆಲಸ ಮಾಡಲಿದೆ ಎಂದರು.
ನೂತನ ಪದಾಧಿಕಾರಿಗಳು ಆಯ್ಕೆ*-
ರಾಜ್ಯ ಸಮಿತಿ ಸದಸ್ಯ ಸಿ.ಕೆ ರಾಮು
ತಾಲ್ಲೂಕು ಅದ್ಯಕ್ಷ ಚಿಕ್ಕಹಾಗಡೆ ಕೆ.ಯಲ್ಲಪ್ಪ,ಜಿಲ್ಲಾ ಕಾರ್ಯದರ್ಶಿ ಚಂಬೇನಹಳ್ಳಿ ಯಲ್ಲಪ್ಪ,ತಾಲ್ಲೂಕು ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಕೋಲೆ ಬಸವ ಶ್ರೀನಿವಾಸ್, ದೊಡ್ಡಹಾಗಡೆ ಕೃಷ್ಣಪ್ಪ, ಬೆಂಗಳೂರು ದಕ್ಷಿಣ ತಾಲ್ಲೂಕು ಕಾರ್ಯದರ್ಶಿ ಹುಲ್ಲಳ್ಳಿ ಶಿವು,ಆನೇಕಲ್ ಪಟ್ಟಣದ ಮಹಿಳಾ ಘಟಕದ ಅದ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷೆ ಮಂಜುಳ,ಅತ್ತಿಬೆಲೆ ಹೋಬಳಿ ಕಾರ್ಯದರ್ಶಿ ಭಕ್ತಿಪುರ ವೆಂಕಟೇಶ್, ಕಲಾ ಮಂಡಳಿ ಅದ್ಯಕ್ಷ ಕಾವಲಹೊಸಹಳ್ಳಿ ನಾಗರಾಜ್, ಬಿವಿಎಪ್ ತಾಲ್ಲೂಕು ಕಾರ್ಯದರ್ಶಿ ಸುಭಾಷ್ ಆಯ್ಕೆ ಮಾಡಲಾಯಿತು.
20ಆನೇ ಚಿತ್ರ 02-ಆನೇಕಲ್ ಪಟ್ಟಣದಲ್ಲಿ ಬಹುಜನ ಸಮಾಜ ಪಕ್ಷದ ನೂತನ ಪದಾಧಿಕಾರಿಗಳನ್ನು ರಾಜ್ಯ ಕಾರ್ಯದರ್ಶಿ ಕೆ.ಸಿ.ನಾಗರಾಜ್ ನೇತ್ರತ್ವದಲ್ಲಿ ಆಯ್ಕೆ ಮಾಡಿ ಪಕ್ಷ ಭಾವುಟ ನೀಡಿದರು.