Lord Srinivasa, worshiped by true disciples of Srimadacharya

Поділитися
Вставка
  • Опубліковано 10 вер 2024
  • ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಿಂದ ಪೂಜಿತನಾದ ಶ್ರೀನಿವಾಸ
    ಶ್ರೀಗುರುಭ್ಯೋ ನಮಃ
    ಆನಂದತೀರ್ಥವರದೇ ಶ್ರೀನಿವಾಸೇऽಸ್ತು ಮೇ ಮನ:-೧೨
    ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಿಂದ ಪೂಜಿತನಾದ ಶ್ರೀನಿವಾಸ
    ಶ್ರೀಮದಾಚಾರ್ಯರಿಗೂ ಶ್ರೀನಿವಾಸಪರಬ್ರಹ್ಮನಿಗೂ ಇರುವ ಅಸದೃಶಬಾಂಧವ್ಯದ ಬಗ್ಗೆ ಹಿಂದಿನ ಅನೇಕ ಲೇಖನಗಳಲ್ಲಿ ತಿಳಿದಿದ್ದೇವೆ. ಈ ಲೇಖನದಲ್ಲಿ ಶ್ರೀಮದಾಚಾರ್ಯರ ಸಾಕ್ಷಾಚ್ಛಿಷ್ಯರು ಶ್ರೀನಿವಾಸನನ್ನು ಆರಾಧಿಸಿದ ಕ್ರಮವನ್ನು ತಿಳಿಯೋಣ.
    ಆಚಾರ್ಯರ ಸಾಕ್ಷಾತ್ ಶಿಷ್ಯರಲ್ಲಿ ವೇದಪ್ರವಚನಾಚಾರ್ಯಶಿಷ್ಯರು ಕರ್ನಾಟಕಪೂರ್ವಸಜ್ಜನಗುರು ಇತ್ಯಾದಿ ಬಿರುದುಗಳಿಂದ ಸಭೆಗಳಲ್ಲಿ ಮಾನ್ಯರಾಗಿದ್ದವರು ಶ್ರೀಪದ್ಮನಾಭತೀರ್ಥರು. ಪದ್ಮನಾಭತೀರ್ಥರು ಅಥವಾ ಹೃಷೀಕೇಶತೀರ್ಥರೇ ಮೊದಲಾದ ಅಷ್ಟಮಠದ ಅಧಿಪತಿಗಳು ವೇಂಕಟಾಚಲಕ್ಕೆ ಹೋಗಿದ್ದಕ್ಕೆ ದಾಖಲೆ ಸಿಗದಿದ್ದರೂ ಅವರಿಗೂ ಶ್ರೀನಿವಾಸನಿಗೂ ಸಂಬಂಧವಿತ್ತು ಎನ್ನುವುದನ್ನು ನಾವು ಚಿಂತಿಸಬಹುದಾಗಿದೆ.
    ಶ್ರೀಮದಾಚಾರ್ಯರು ತಿರುಪತಿಕ್ಷೇತ್ರದಲ್ಲಿ ಚಾತುರ್ಮಾಸ್ಯಕ್ಕೆ ಕುಳಿತಾಗ ಅಲ್ಲಿ ಶ್ರೀನಿವಾಸನನ್ನು ಸೇವಿಸುವಾಗ ಅವರ ಜೊತೆಯಲ್ಲಿದ್ದ ಶಿಷ್ಯರು ಶ್ರೀನಿವಾಸನನ್ನು ಸೇವಿಸಿರುತ್ತಾರೆ. ನಿರಂತರ ತೀರ್ಥಯಾತ್ರೆಯನ್ನು ಮಾಡುವ ಕ್ರಮವನ್ನಿಟ್ಟುಕೊಂಡ ಆ ಎಲ್ಲಾ ಯತಿಪುಂಗವರು ಕ್ಷೇತ್ರಶ್ರೇಷ್ಠವಾದ ವೇಂಕಟಾಚಲಕ್ಕೆ ಹೋಗದಿರುವ ಸಾಧ್ಯತೆ ಇಲ್ಲ.
    ಮುಖ್ಯವಾಗಿ ಉಡುಪಿಯ ಸಮೀಪದ ಚಿಟ್ಪಾಡಿಯಲ್ಲಿರುವ ಪುರಾತನವಾದ ಶ್ರೀನಿವಾಸದೇಗುಲದ ನಂಟು ಅಷ್ಟಮಠಾಧಿಪತಿಗಳಿಗೆ ಉಂಟು ಎನ್ನುವುದನ್ನು ನಾವು ಮರೆಯುವಂತಿಲ್ಲ.
    _______
    ನರಹರಿತೀರ್ಥಪ್ರತಿಷ್ಠಿತಶ್ರೀನಿವಾಸ
    ಶ್ರೀಮದಾಚಾರ್ಯರಿಂದಲೇ ಸನ್ಯಾಸವನ್ನು ಸ್ವೀಕರಿಸಿ 40ವರ್ಷಕ್ಕೂ ಹೆಚ್ಚು ಕಾಲ ಶ್ರೀಮದಾಚಾರ್ಯರ ಸಂಪರ್ಕದಲ್ಲಿದ್ದ, ಶ್ರೀಮದಾಚಾರ್ಯರ ಆದೇಶದಂತೆ ಕಳಿಂಗದ ರಾಜ್ಯನಿರ್ವಹಣೆಯನ್ನು ಮಾಡಿ, ಶ್ರೀಮದಾಚಾರ್ಯರ ಅಭೂತಪೂರ್ವಸಾಮರ್ಥ್ಯವನ್ನು ಜಗತ್ತಿನಲ್ಲಿ ಪ್ರತಿಪಾದಿಸಿ, ಪುರಾತನವಾದ ಮೂಲರಾಮಸೀತೆಯರ ವಿಗ್ರಹಗಳನ್ನು ಶ್ರೀಮದಾಚಾರ್ಯರಿಗೆ ಸಮರ್ಪಿಸಿದ, ಶ್ರೀ ಪದ್ಮನಾಭತೀರ್ಥರ ವಿದ್ಯಾಶಿಷ್ಯರೂ ಉತ್ತರಾಧಿಕಾರಿಗಳೂ ಆದ ಶ್ರೀನರಹರಿತೀರ್ಥರು ಶ್ರೀನಿವಾಸನನ್ನು ವಿಶೇಷವಾಗಿ ಸೇವಿಸಿದ್ದಾರೆ.
    ನರಹರಿತೀರ್ಥರು ಶ್ರೀಮದಾಚಾರ್ಯರ ಜೊತೆಯಲ್ಲಿ, ಅಥವಾ ತಾವು ಸ್ವತಂತ್ರವಾಗಿ ತೀರ್ಥಯಾತ್ರೆಯನ್ನು ಮಾಡುವ ಸಂದರ್ಭದಲ್ಲಿ ತಿರುಪತಿಗೆ ಬಂದಿರಬಹುದು. ಆದರೆ ಸ್ಪಷ್ಟ ದಾಖಲೆ ಸಿಕ್ಕಿಲ್ಲ. ಹಾಗೆಂದು ನಿರಾಕರಣೆ ಮಾಡಲೂ ಸಾಧ್ಯವಿಲ್ಲ.
    ಆದರೆ ಇಲ್ಲಿ ಒಂದು ವಿಶೇಷವನ್ನು ಗಮನಿಸಬೇಕು:- ನರಹರಿತೀರ್ಥರು ಸಂಚಾರಿಸುತ್ತಾ ತುಂಗಭದ್ರಾತೀರದ ಕರ್ನೂಲಿಗೆ ಆಗಮಿಸುತ್ತಾರೆ. ಅಲ್ಲಿ ಶ್ರೀನಿವಾಸನನ್ನು ಹಾಗೂ ಹನುಮಂತದೇವರನ್ನು ಸ್ಥಾಪಿಸಿದ್ದಾರೆ. ಈಗಲೂ ಆ ದೇವಸ್ಥಾನವನ್ನು ನಾವು ಕಾಣಬಹುದು. ಅದನ್ನು ಈಗ ಪೇಟೆ ಆಂಜನೇಯಸ್ವಾಮಿದೇವಸ್ಥಾನ ಎಂದು ಕರೆಯುತ್ತಾರೆ. ಪರಂಪರಾಗತವಾದ ಈ ವಿಷಯವನ್ನು ತಿಳಿದಾಗ ಆಚಾರ್ಯರ ಶಿಷ್ಯರು ಶ್ರೀನಿವಾಸನನ್ನು ವಿಶೇಷವಾಗಿ ಉಪಾಸಿಸುತ್ತಿದ್ದರು ಎನ್ನುವುದು ತಿಳಿಯುತ್ತದೆ.
    ಆ ಶ್ರೀನಿವಾಸದೇವರ ಹಾಗೂ ಹನುಮಂತದೇವರ ಪೂಜೆಯನ್ನು ಮುಂಜಿ ಎಂಬ ಉಪನಾಮದ ಮನೆತನದವರು ಮಾಡುತ್ತಾ ಬಂದಿದ್ದಾರೆ. ಅದೇ ವಂಶದಲ್ಲಿ ಬಂದ, ಶ್ರೀಸತ್ಯಧ್ಯಾನತೀರ್ಥರ ಶಿಷ್ಯರಾದ ಮುಂಜಿ ಲಕ್ಷ್ಮಣಾಚಾರ್ಯರು ಆದಿತ್ಯಪುರಾಣವೇಂಕಟೇಶಮಾಹಾತ್ಮೆಯ ವಿಶೇಷಪಾರಾಯಣದಿಂದ ಸಿದ್ಧಿಯನ್ನು ಪಡೆದು, ಸತ್ಯಧ್ಯಾನತೀರ್ಥರ ಅನುಗ್ರಹ-ಆದೇಶಗಳಂತೆ ಶ್ರೀನಿವಾಸನ ಬ್ರಹ್ಮೋತ್ಸವವನ್ನು ಆರಂಭಿಸಿದರು.
    ಮುಂಜಿ ಲಕ್ಷ್ಮಣಾಚಾರ್ಯರಿಗೆ ಲಬ್ಧವಾದ ಶ್ರೀನಿವಾಸವಿಗ್ರಹವನ್ನು ಸತ್ಯಧ್ಯಾನತೀರ್ಥರು ತಾವು ಪೂಜಿಸಿ ನಿತ್ಯ ವಿಶೇಷಪೂಜೆಯನ್ನು ಮಾಡಲು ತಿಳಿಸಿದ್ದಾರೆ. ಇಂದಿಗೂ ಆ ಮನೆತನದವರು ಉತ್ಸವಮೂರ್ತಿಯ ವಿಶೇಷಪೂಜೆಯನ್ನು ಹಾಗೂ ನರಹರಿತೀರ್ಥಪ್ರತಿಷ್ಠಿತ ಶ್ರೀನಿವಾಸನನ್ನು ವಿಶೇಷವಾಗಿ ಪೂಜಿಸುತ್ತಾ ವೈಭವದಿಂದ ಬ್ರಹ್ಮೋತ್ಸವವನ್ನು ಮಾಡುತ್ತಿದ್ದಾರೆ.
    ಹೀಗೆ ನರಹರಿತೀರ್ಥರು ಶ್ರೀನಿವಾಸನ ಪೂಜೆಯ ಕ್ರಮವನ್ನು ನಿಯಮಿಸಿದ್ದಾರೆ
    ________
    ಅಕ್ಷೋಭ್ಯತೀರ್ಥವರದನಾದ ಶ್ರೀನಿವಾಸ
    ಶ್ರೀಮದಾಚಾರ್ಯರಿಂದಲೇ ಸನ್ಯಾಸವನ್ನು ಸ್ವೀಕರಿಸಿ ಮಾಧವತೀರ್ಥರ ಉತ್ತರಾಧಿಕಾರಿಗಳಾಗಿ
    ಶ್ರೀಮಟ್ಟೀಕಾಕೃತ್ಪಾದರೆಂಬ ಅನರ್ಘ್ಯರತ್ನವನ್ನು ಜಗತ್ತಿಗೆ ನೀಡಿದ ಅಕ್ಷೋಭ್ಯತೀರ್ಥರಿಗೆ ಶ್ರೀನಿವಾಸನು ವಿಶೇಷವಾಗಿ ಅನುಗ್ರಹಿಸಿದ್ದಾನೆ.
    ಮಳಖೇಡ-ಕೂಡ್ಲಿಗಳಂತೆಯೆ ತಿರುಪತಿಸಮೀಪದ, ತಿರುಪತಿಗೆ ಪೂರ್ವದ್ವಾರವೆನಿಸಿದ ಮುಳಬಾಗಿಲನ್ನೂ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಅಕ್ಷೋಭ್ಯತೀರ್ಥರು ತಿರುಪತಿ ಯಾತ್ರೆಯನ್ನು ಮಾಡಿರುವುದರಲ್ಲಿ ಯಾವ ಸಂದೇಹವೂ ಇಲ್ಲ.
    ಒಮ್ಮೆ ಅಕ್ಷೋಭ್ಯತೀರ್ಥರು ತಿರುಪತಿಗೆ ಹೋಗಿ ಸ್ವಾಮಿಪುಷ್ಕರಣಿಯಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಒಂದು ವಿಶ್ವಂಭರ ಸಾಲಿಗ್ರಾಮ ಸಿಗುತ್ತದೆ. ಸ್ವಾರಸ್ಯವೆಂದರೆ ಆ ಸಾಲಿಗ್ರಾಮದ ಮೇಲೆ ಶ್ರೀನಿವಾಸನ ರೇಖಾಚಿತ್ರವಿದೆ. ಇಂದಿಗೂ ಅದು ಕೂಡಲಿ ಆರ್ಯ ಅಕ್ಷೋಭ್ಯತೀರ್ಥಮಠದಲ್ಲಿ ಪೂಜೆಗೊಳ್ಳುತ್ತಿದೆ. (ಅದರ ಚಿತ್ರವನ್ನು ಕೆಳಗೆ ನೋಡಬಹುದು.)
    ಹೀಗೆ ಶ್ರೀಮದಾಚಾರ್ಯರು ಅವರ ಸಾಕ್ಷಾತ್ ಶಿಷ್ಯರು ಶ್ರೀನಿವಾಸನ ವಿಶೇಷವಾದ ಆರಾಧನೆಯನ್ನು ಮಾಡಿದ್ದಾರೆ ಎನ್ನುವುದು ಲಿಖಿತ-ಅಲಿಖಿತ ದಾಖಲೆಗಳಿಂದ ನಮಗೆ ಸಿದ್ಧವಾಗುತ್ತದೆ.
    ಅಂತಹ ಮಧ್ವಾಂತಸ್ಥನಾದ ಶ್ರೀನಿವಾಸನ ಅನುಗ್ರಹವು ಎಲ್ಲ ಸಜ್ಜನರ ಮೇಲೆ ನಿರಂತರವಾಗಿ ಇರಲಿ.
    ಶ್ರೀನಿವಾಸ ಕೊರ್ಲಹಳ್ಳಿ
    ೧೦/೦೧/೨೦೨೩

КОМЕНТАРІ • 2

  • @rajatrayadurg6894
    @rajatrayadurg6894 Рік тому

    Acharyare Srimadacharyaru Tirumala Kshetrakke hogirodu ullekha Sumadhwavijyadalli idiya 🤔

    • @madhavabk
      @madhavabk  Рік тому +2

      There are some documents related to that