Trending | Kannadi ಕನ್ನಡಿ | Mirror | Poetry | Ravindra nayak sannakkibettu

Поділитися
Вставка
  • Опубліковано 26 чер 2022
  • Kannada
    ಕನ್ನಡಿ
    Poetry
    ಇತ್ತೀಚೆಗೆ ಯಾಕೋ ಗೊತ್ತಿಲ್ಲ
    ಕನ್ನಡಿಯ ಎದುರು ನಿಲ್ಲುವಾಗೆಲ್ಲಾ
    ಗಲಿಬಿಲಿಗೊಳ್ಳುತ್ತೇನೆ,
    ಅಲ್ಲಿ ಕಾಣುವ ನನ್ನದಲ್ಲದ ಬಿಂಬ
    ಸಿಡುಕು ಮುಖ;ನಗುವಿಲ್ಲದ ಗೆರೆಗಳು
    ಗಾಯದ ಕಲೆಗಳು;ಚಂಚಲ ಕಣ್ಣುಗಳಲ್ಲಿ
    ನನ್ನನ್ನು ಕಾಣದೇ ಹತಾಶೆಗೊಳ್ಳುತ್ತೇನೆ.
    ನಾನು ಕಂಡ ರೂಪ ಯಾರದ್ದು?
    ಹೊರಗೆ ನಿಂತಿರುವ
    ನಾನು ಯಾರು?
    ಅದು ನಾನಲ್ಲ; ನಾನೆ?
    ಅಥವಾ
    ಮುಖವಾಡಗಳ ಮೊರೆಹೋಗಿದ್ದೇನಾ?
    ಬರಿಯ ಪ್ರಶ್ನೆಗಳು.
    ಬದುಕಿನಲ್ಲಿ ಕಳೆದುಹೋಗಿ
    ಬಯಲನ್ನು ಮರೆತ
    ನನ್ನ ಪರಿಚಯವೇ ನನಗಿಲ್ಲ.
    ಇನ್ನು ಲೋಕಕ್ಕೆ ಹೇಗೆ ಹೇಳಲಿ
    ನನ್ನ ಬಗ್ಗೆ?
    ನೀರಿನಲ್ಲಿ ಕಲಸಿ ಹೋದ
    ನೂರು ಬಣ್ಣಗಳಲ್ಲಿ
    ನನ್ನ ಮೂಲ ಯಾವುದು?
    ಜರಡಿಯಲ್ಲಿ ಸೋಸಿದರೂ
    ಬಣ್ಣದ ನೀರು ಸೋರಿ ಹೋಗುತ್ತಿದೆ.
    ಲೋಕದ ಕಣ್ಣಿನಲ್ಲಿ
    ನನ್ನನ್ನು ನೋಡಿ ಸುಸ್ತಾಗಿ ಹೋಗಿದ್ದೇನೆ;
    ಸರಿಗಳ ಸಿದ್ಧ ಮಾದರಿಗಳಿಗೆ
    ಹಲವು ಬಾರಿ
    ರೂಪಾಂತರಗೊಂಡಿದ್ದೇನೆ.
    ನನ್ನನ್ನು ಕಾಣಲು
    ಮನೆಯಲ್ಲಿನ ಕನ್ನಡಿ ಸಾಲುತ್ತಿಲ್ಲ;
    ಲೋಕದ ಕಣ್ಣಿನ ಪೊರೆ ಸರಿಸಿ
    ನನ್ನೊಳಗನ್ನು ತೋರಿಸುವ
    ಕನ್ನಡಿ ಇಲ್ಲಿ ಸಿಗುತ್ತಿಲ್ಲ.
    ~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
    #poetry
    #kannadakavanagalu
    #mirror

КОМЕНТАРІ • 20

  • @gururajasr6207
    @gururajasr6207 2 роки тому +1

    ಅಮೋಘ ಅರ್ಥಗರ್ಭಿತ ಆತ್ಮಾವಲೋಕನ
    ರವೀಂದ್ರ ಸರ್
    ನಿಮ್ಮ ಅಭಿಮಾನಿ 👌👌👍👍🙏🙏

  • @mallikasnayak6318
    @mallikasnayak6318 2 роки тому

    ಚೆನ್ನಾಗಿತ್ತು.
    ಗೊಂದಲ, ನೋವು, ಹತಾಶೆ ತುಂಬಿದ ' ಕನ್ನಡಿ ' .

  • @Vinutha2368
    @Vinutha2368 Рік тому

    ವಾವ್.....ಅಧ್ಬುತ ಸಾಲುಗಳು 👌👌ಸುಂದರ ಆತ್ಮಾಲೋಕನ. ವಾಚನವು ಅಷ್ಟೇ ಸೊಗಸಾಗಿದೆ. ನಿಮ್ಮ ಕವನ ಹೃದಯದ ಕದವನ್ನು ತಟ್ಟಿದೆ. ❤️👌👌👌👌👌
    ಶುಭೋದಯ,.🙏.ನಿಮ್ಮ ಅಧ್ಭುತ ರಚನೆಗೆ ಅಭಿನಂದನೆಗಳು🙏🙏🙏

  • @nemikasantha4420
    @nemikasantha4420 2 роки тому +1

    ನಿಮ್ಮ ಬರವಣಿಗೆಯೇ ಬಿನ್ನ
    ಪ್ರತೀ ಬಾರಿಯೂ ನಿಮ್ಮ ಬರವಣಿಗೆಗೆ ಈ ಮನವು ಸೋಲುತ್ತಿದೆ
    ನಿಮ್ಮ ಸಾಹಿತ್ಯದ ಅಭಿಮಾನಿಗಳು ಕಾರಣಗಳನ್ನು ನೀಡುತ್ತಿದೆ

  • @vanishreek.gurumurthy6119
    @vanishreek.gurumurthy6119 Рік тому

    ನನ್ನ ಮನದ ಮಾತುಗಳನ್ನು ನೀವು ಹೇಳಿದಂತಿದೆ..... ಭಾವನಾತ್ಮಕವಾದ ಅರ್ಥಗರ್ಭಿತ ಪದಗಳು ❤

  • @veenarajesh7625
    @veenarajesh7625 2 роки тому

    Beautiful composition

  • @prabhurajgpatil808
    @prabhurajgpatil808 Рік тому

    🙏🙏💐

  • @deshpandegunderao7597
    @deshpandegunderao7597 2 роки тому

    👌👌👌

  • @nayanapoojari2936
    @nayanapoojari2936 Рік тому

    ಚಂದ 💐🥰

  • @manjulasanath4239
    @manjulasanath4239 2 роки тому

    ಚಂದ

  • @kallappagudadur399
    @kallappagudadur399 2 роки тому

    ಅದ್ಬುತ ಸರ್

  • @anantvaidyayellapur
    @anantvaidyayellapur 2 роки тому

    Fine

  • @Lachamanna.1975
    @Lachamanna.1975 2 роки тому

    👌 ಸರ್

  • @sandhyanayak6821
    @sandhyanayak6821 2 роки тому

    Super

  • @sanju_see5302
    @sanju_see5302 2 роки тому

    👍

  • @Rajactor4u
    @Rajactor4u 2 роки тому

    Good

  • @shrinivasanayakbhavageethe9199
    @shrinivasanayakbhavageethe9199 2 роки тому

    ತುಂಬಾ ಚಂದದ ಕವನ, ಆತ್ಮಾವಲೋಕನ 👌👌

  • @maheshparkala417
    @maheshparkala417 2 роки тому

    Nice dear

  • @madhupatil-uh6fe
    @madhupatil-uh6fe 2 роки тому

    Exllent sir super👌👌