Nadedu Baarayya Bhava | Shri Gopala Dasaru | Ananth Kulkarni | Nadhotsava | RisingWaves

Поділитися
Вставка
  • Опубліковано 4 лип 2023
  • ನಡೆದು ಬಾರಯ್ಯಾ.... ಭವ ಕಡಲಿಗೇ... ಕುಂಭಸಂಭವಾ... ||ನಡೆದು|| ನಡೆದು ಬಾರಯ್ಯ ಭವ ಕಡಲಿಗೆ ಕುಂಭಸಂಭವಾ||ನಡೆದು|| ಸಡಗರದಿಂದ ಮೆಲ್ಲಡಿಯನಿಡುತ ಬೇಗ ಎಡಬಲದಲಿ ನಿನ್ನ ಮಡದಿಯರೊಡಗೂಡಿ ತಡಮಾಡದೆ ಬಾ ಮ್ರಡಸಖ ವೆಂಕಟ ...ನಡೆದು ||ನಡೆದು|| ವಿಜಯದಶಮಿ ಆಶ್ವಿಜಶುಧ್ಧ ಮಾಸದಲ್ಲಿ ನಿಜರಥಾರೂಢನಾಗಿ ಸುಜನರಿಂದೊಪ್ಪುತಾ
    ಗಜಸಿಂಹ,ಮಯೂರ,ಧ್ವಿಜಸಿಂಗ,ಸಾರಂಗ ಮಜಬಾಪುರೆ ಎನಲು ತ್ರಿಜಗವು ತಲೆದೂಗೇ...ಏ...ಏ... ಅಜನು ಸ್ತುತಿಯ ಮಾಡೆ ರುಜಗಣಾಧಿಪ ಪಡೆ ಗಜಮುಖನಯ್ಯ ನಿಜಾನಂದದಲಾಡೆ ಭುಜಗಶ್ರೇಷ್ಠ ಧ್ವಿಜರಾಜರು ಜಯವೆನ್ನೆ ಕುಜನರೆದೆಯ ಮುಟ್ಟಿ ರಜತಮ ಕಲೆಯುತ ನಡೆದು....ನಡೆದು||ನಡೆದು ಬಾರಯ್ಯ|| ದಕ್ಷಿಣ ಧಿಕ್ಕಿನಲ್ಲಿ ,ರಾಕ್ಷಸರೆದುರಾಗಿ ಒಂದಕ್ಷೋಹಿಣಿ ಬಲ ನಿನ್ನೂಪೇಕ್ಷೆ ಮಾಡುತಲಿರೆ ಪಕ್ಷಿವಾಹನಣೆ ಅ ಕ್ಷಣದಲ್ಲಿ ,ಖಳರ ಶಿಕ್ಷಿಸಿ ಸುಜನರ ರಕ್ಷಿಸಿ ಮೆರೆದೆಯಾ...ಆ.... ತಕ್ಷಕ ನರನನು ಭಕ್ಷಿಸಬರುತಿರೆ ಈಕ್ಷಿಸಿ ತಕ್ಷಣ ರಥನೆಲಕ್ಕೊತ್ತಿದೆ, ಲಕ್ಷೀಶನೆ ಅಕ್ಷಯ ಫಲದಾಯಕ ಕುಕ್ಷಿಯೊಳಗೆ ಜಗರಕ್ಷಿಪ ವಿಶ್ವನೇ..... ||ನಡೆದು ಬಾರಯ್ಯ|| ಮನಕೆ ಬಾರಯ್ಯಾ ಸುಧಾಮನ ಸಖ ಹರಿಯೆ ಸೋಮನ ಧರಿಸಿದವನೆ ಮನ ಕುಮುದಕೆ ಚಂದ್ರಮಣಿ ಕೇಳೋ ಎನ್ನ ದುಮ್ಮಾನವನೆ ಪರಿಹರಿಸಿ ಬಮ್ಮನ ಕೊಡು ಅಹಿಗಿರಿತಿಮ್ಮನೆ ಕೇಳೋ ಭಿನ್ನಪಾ ಕೊಂಬು ಕಹಳೆಗಳು ಬುಂಭೋರಿಡುತಿರೆ ತುಂಬುರು ನಾರದ ಇಂಪಾಗಿ ಪಾಡಲು ಅಂಭರದಲಿ ವಾದನ ತುಂಬಿ ಧಿಮಿಕೆನೆ ಸಂಭ್ರಮದಲಿ ಬಾರೋ ಶಂಭೂ ವಂದಿತನೆ ||ನಡೆದು ಬಾರಯ್ಯ|| ಪರಿಪರಿ ಬಗೆಯಿಂದ ಕರವ ಮುಗಿದು ಸ್ತುತಿಸಿ ಕರೆದರೆ ಬಾರದೆ ಗರ್ವವು ಯಾಕೊ ಕರಿಯ ಮೊರೆಯ ಕೇಳಿ ಸಿರಿಗೆ ಹೇಳದೆ ಬಂದೆ ಕರಿರಾಜ ಅವನಿನ್ನ ಹಿರಿಯಪ್ಪನ ಮಗನೇನೊ...ಓ...ಓ.. ಶರಣಾಗತರಕ್ಷಕ ಮಣಿ ಎಂಬುವ ಬಿರುದು ಬೇಕಾದರೆ ,ಸರಸರ ಬಾರಯ್ಯ, ಗರುಡ ಗಮನ ಗೋಪಾಲ ವಿಠ್ಠಲರಾಯ ಗೋಪಾಲ ವಿಠ್ಠಲರಾಯ. ..ಆ..||2|| ||ಗರುಡ|| ಕರುವಿನಮೊರೆಗಾವು ನೆರೆದಂತೆ ಪೊರೆಯೊ || ನಡೆದು ಬಾರಯ್ಯ||
    Nadedu Baarayya Bhava is a Kannada Dasarapadagalu written and composed by Sri Gopala Dasaru. Gopala Dasa was a prominent poet and saint of 18th century Haridasa movement. Haridasa means ‘Servants of Lord Hari’. Some of the famous personalities of Haridasa movement includes Sripadaraya, Vyasathirtha, Vadirajatirtha, Purandara Dasa and Kanaka Dasa and others.
    ರೈಸಿಂಗ್ ವೇವ್ ಸಂಸ್ಥೆ ಧರ್ಮ ಕಲೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನಮ್ಮಸಂಸ್ಥೆ ನೀಡಿದೆ.
    ರಾಮನವಮಿಯ ಶುಭ ಪರ್ವಕಾಲದಲ್ಲಿ ನಾವು ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನಿಗೆ ನಾದೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
    ನಾದೋತ್ಸವ ಕಾರ್ಯಕ್ರಮದ ಮೊದಲನೆಯ ದಿನದಾಸ ಸಾಹಿತ್ಯ ರತ್ನ ಅನಂತ್ ಕುಲಕರ್ಣಿ ಮತ್ತು ತಂಡದಿಂದ ಭಜನ್ ಸಂಧ್ಯಾ ದೇವರ ನಾಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
    Gopaladasa was the contemporary of Vijaya Dasa and Jagannatha Dasa of Haridasa tradition. He propagated the Dwaitha philosophy through his Kirtans or Dasara Padagalu in Kannada language. He was Gopala Vittala was his Ankita Nama [Pen Name].
    Rising Waves is a premier production house and content creation firm with focus on local Culture, Tradition , Folklore, Art , Literature and Music
    Nadhotsava - the annual Musical festival was organized on occasion of Rama Grabha Navathri by Rising Waves at Bangalore .
    Shri Ananth Kulkarni and troupe rendered soulful Bhajan sandhya on day 1 . Songs included popular dasara padagalu and devranama.

КОМЕНТАРІ • 3