STUDENTS COUNCIL ELECTION 2024-25 | SGIS PAVAGADA (ICSE)

Поділитися
Вставка
  • Опубліковано 11 жов 2024
  • ಶಾಲಾ ಸಂಸತ್ತು ಚುನಾವಣೆ 2024-25
    ದಿನಾಂಕ 22ನೇ ಜುಲೈ 2024ರಂದು
    ಶ್ರೀ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ ಪಾವಗಡದಲ್ಲಿ
    ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು.
    ಬೆಳಗ್ಗೆ 9 :40ಕ್ಕೆ ಶುರುವಾದ ಚುನಾವಣೆ ಕಾರ್ಯಕ್ರಮ
    ಸಾಯಂಕಾಲ 5 ಗಂಟೆಯವರೆಗೆ ನಡೆಯಿತು. ಇದರಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರಿಗೆ
    ಸುಮಾರು 470 ವಿದ್ಯಾರ್ಥಿಗಳು ಹಾಗೂ 80ಕ್ಕೂ ಹೆಚ್ಚು ಭೋದಕ ಮತ್ತು ಭೋದಕೇತರ ವರ್ಗ ಭಾಗವಹಿಸಿ ಮತ ಚಲಾಯಿಸಿದರು.
    ಈ ಬಗ್ಗೆ ಪ್ರಾಂಶುಪಾಲರು ಶ್ರೀ ರಾಮು ಅವರು ಮಾತನಾಡಿ ಇದು
    ಮಕ್ಕಳಲ್ಲಿ ನಾಯಕತ್ವ ಗುಣಗಳು ಹೆಚ್ಚಿಸಿದೆ ಹಾಗೆಯೇ ಚುನಾವಣಾ ಸಾಕ್ಷರತೆ ಬಗ್ಗೆ ಅರಿವು ಮೂಡಿಸದೆ ಎಂದರು. ಈ ಚುನಾವಣೆ ಬಗ್ಗೆ
    ಶ್ರೀ ಗುರುಕುಲ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳು ಶ್ರೀ ಎನ್ ಸಿ ನಾಗಭೂಷಣರವರು ಮಾತನಾಡಿ ಕಾರ್ಯಕ್ರಮ ತುಂಬಾ
    ಶಿಸ್ತಿನಿಂದ ನಡೆಯಿತು. ಇದರ ಹಿಂದಿನ ಉದ್ದೇಶ ಸಮಾಜದಲ್ಲಿ ಚುನಾವಣಾ ವ್ಯವಸ್ಥೆ ಹೇಗೆ ನಡೆಯುತ್ತದೆ ಎಂದು ಮಕ್ಕಳಿಗೆ
    ಅರಿವು ಮೂಡಿಸುವುದರ ಜೊತೆಗೆ ಜವಾಬ್ದಾರಿಯುತ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಉತ್ತಮ ಅವಕಾಶ ಮಾಡಿಕೊಟ್ಟಿದೆ
    ಏಕೆಂದರೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
    ಈ ಕಾರ್ಯಕ್ರಮವನ್ನು ಆಯೋಜಿಸಿದ ಪ್ರಾಂಶುಪಾಲರಿಗೆ ಹಾಗೂ ಕಾರ್ಯಕ್ರಮ ಯಶಸ್ವಿಯಾಗಿ
    ನೆರವೇರಿಸಲು ಸಹಕರಿಸಿದ ಬೋಧಕ ಬೋಧಕೇತರ ವರ್ಗಕ್ಕೆ ಅಭಿನಂದನೆಗಳನ್ನು ತಿಳಿಸಿದರು.

КОМЕНТАРІ •