Chanakya Quotes In Kannada Part3 || By Philosophy Guru

Поділитися
Вставка
  • Опубліковано 29 гру 2022
  • Chanakya Quotes In Kannada Part3 || By Philosophy Guru
    #chankyaniti
    #chanakya
    #motivationalspeech
    #kannadamotivation
    "ವಿಷ್ಣುಗುಪ್ತ" ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ, ಯವನ ಚಕ್ರವರ್ತಿಯಾದ ಅಲೆಕ್ಸಾಂಡರನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ ಚಂದ್ರಗುಪ್ತ ಮೌರ್ಯ.
    ಅಸಾಧಾರಣ ಪ್ರತಿಭಾವಂತ. ಹಿಡಿದ ಕೆಲಸವನ್ನು ಪಟ್ಟು ಹಿಡಿದು, ಸಾಧಿಸುವ ಸ್ವಭಾವದವನು. ಸಕಲ ಶಾಸ್ತ್ರ ಪಾರಂಗತ, ಅರ್ಥಶಾಸ್ತ್ರ ಪ್ರವೀಣ. ರಾಜನೀತಿ ವಿಶಾರದ. ಸಾಮ, ದಾನ, ಭೇದ, ದಂಡ ಎಂಬ ಚತರೋಪಾಯ ಚತುರದ್ಯೆಯಲ್ಲಿ ತುಂಬಾ ಅನುಭವಿ, ಸೂಕ್ಷ್ಮಮತಿ. ಆತನ ಮನಸ್ಸಿನ ಅಭಿಪ್ರಾಯವನ್ನು ಹೀಗೆಂದು ತಿಳಿಯಲು ಯಾರಿಗೂ ಸಾಧ್ಯವಿಲ್ಲ. ಬಹಳ ರಹಸ್ಯವಾಗಿ ಕೆಲಸ ಮಾಡುವವನು. ಬಹುದೂರದ ಅಲೋಚನೆ, ಯಾವ ಕೆಲಸದಲ್ಲಿಯೇ ಆಗಲಿ ಆತ ಇಟ್ಟ ಗುರಿ, ಮಾಡಿದ ಅಂದಾಜು ಎಂದೂ ತಪ್ಪುತ್ತಿರಲಿಲ್ಲ. ಮಹಾತ್ಯಾಗಿ, ಮಹಾ ತಪಸ್ವಿ. ಹೊರನೋಟಕ್ಕೆ ತುಂಬ ಕಠಿಣ ಸ್ವಭಾವದವನು. ಅಪಾರ ಲೋಕಾನುಭವವಿದ್ದವನು. ಶತ್ರುಗಳನ್ನು ಸಂಹಾರ ಮಾಡುವುದರಲ್ಲಿ ಬಗೆಬಗೆಯ ತಂತ್ರಗಳನ್ನು ಸಮಯವರಿತು ಎಚ್ಚರಿಕೆಯಿಂದ ಮಾಡುವಾತ. ಆತನಿಗೆ ತಿಳಿಯದ ಶಾಸ್ತ್ರವಿಲ್ಲ. ಗೊತ್ತಿಲ್ಲದ ವಿಚಾರವಿಲ್ಲ. ಅದೊಂದು ಪ್ರತಿಭಾಪುಂಜ.
    “ಚಾಣಕ್ಯ ತಂತ್ರ” ಎಂಬ ಮಾತು ಈಗಲೂ ಗಾದೆಯಾಗಿದೆ. ನಂದವಂಶವನ್ನು ಸರ್ವನಾಶಮಾಡಿ, ಚಂದ್ರಗುಪ್ತನಿಗೆ ರಾಜ್ಯವನ್ನು ಕೊಡಿಸಿ, ಮೌರ್ಯ ಸಾಮ್ರಾಜ್ಯ ಸ್ಥಾಪಕನಾಗಿ ಮೆರೆದ ಪುಣ್ಯ ಪುರುಷ ಚಾಣಕ್ಯ. ಚಾಣಕ್ಯನಿಗೆ ಕೌಟಿಲ್ಯ ಎಂದು ಇನ್ನೊಂದು ಹೆಸರು. ಈತನ ಪ್ರತಿಭೆಯನ್ನು ತೋರಿಸುವ ಒಂದು ಪುಸ್ತಕ ಇಂದೂ ಉಳಿದಿದೆ. “ಅರ್ಥಶಾಸ್ತ್ರ” ಎಂದು ಅದರ ಹೆಸರು. ಅದು ಇಂಗ್ಲೀಷ್, ಫ್ರೆಂಚ್, ಜರ್ಮನ್- ಹೀಗೆ ಹಲವು ಭಾಷೆಗಳಿಗೆ ಅನುವಾದವಾಗಿದೆ.
    -----------------------
    Disclaimer for Copyright :-
    Some contents in the video are used for educational purpose under fair use.
    Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
    ----------------------

КОМЕНТАРІ • 5