Ondu kanasu ಒಂದು ಕನಸು | Ravindra nayak sannakkibettu

Поділитися
Вставка
  • Опубліковано 2 жов 2024
  • ಒಂದು ಕನಸು
    ಮೊನ್ನೆ ರಾತ್ರಿ ಒಂದು ಕನಸು
    ಕೊಂಡುಕೊಂಡಿದ್ದೆ
    ಚಿಗುರಿ‌ ಇನ್ನೇನು ನನಸಾಯಿತು ಅನ್ನುವಾಗಲೇ
    ಆದ್ಯಾರೋ ಆಕಾಶವನ್ನೇ
    ಸೀಳಿಬಿಟ್ಟರು ಎರಡಾಗಿ.
    ನನ್ನ ಭಾಗಕ್ಕೆ ಸೂರ್ಯನಿಲ್ಲದೇ
    ಬೆಳಕಾಗಲೇ ಇಲ್ಲ;
    ಪಾಲಿಗೆ ಬಂದ ಚಂದಿರನಿಗೆ
    ಬೆಳದಿಂಗಳೇ ಇಲ್ಲ.
    ಯಾರ್ಯಾರೋ ಇಲ್ಲಿ ಬಂದು
    ತಮ್ಮ ಬೇಸರ ಕಳೆಯಲು
    ಆಟವಾಡಿ, ಇನ್ನು ಸಾಕು ಎಂದು
    ಮನೆಗಳಿಗೆ ಹಿಂದಿರುಗಿದಾಗ
    ನನಗೆ ಉಳಿದದ್ದು
    ಆಟ ಮುಗಿದ ಬಯಲ ಕೆಂಧೂಳು!
    ಗಡಿಗಳ ನಡುವೆ
    ಬದುಕು ಹಳಿ ತಪ್ಪಿದೆ.
    ಅರ್ಧ ಸತ್ತು ಮಲಗಿದ ರಸ್ತೆಯಲ್ಲೀಗ
    ಹೊಸ ಹುಟ್ಟು ಕಾಣುತ್ತಿಲ್ಲ
    ತೂಗದಿಹ ತೊಟ್ಟಿಲಿನಲ್ಲಿ
    ಕಂದನ ಅಳು ನಿಲ್ಲುತ್ತಿಲ್ಲ.
    ಕನಸುಗಳು ಬತ್ತುವ ಮುನ್ನ
    ಎಲ್ಲೆಗಳ ಮೀರಿ
    ಗಡಿರೇಖೆಗಳಿಲ್ಲದ
    ಖಾಲಿ ಇತಿಹಾಸಕ್ಕೆ ಮರಳುತ್ತೇನೆ.
    ಅಲ್ಲಿಯೂ ಪುಟಗಳು
    ಖಾಲಿ ಇಲ್ಲದಿದ್ದರೆ,
    ನಾಗರೀಕತೆಯ ಗಂಧವಿಲ್ಲದ
    ನದಿದಂಡೆಗೆ ಮರಳುತ್ತೇನೆ.
    ~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
    #lovepoetry
    #dream
    #war

КОМЕНТАРІ • 24

  • @vighneshwaraudupa801
    @vighneshwaraudupa801 2 роки тому +1

    Very nice

  • @Yatheeshdatta
    @Yatheeshdatta 2 роки тому +1

    ಅಬ್ಬಾ!!! ಅದ್ಭುತ ಕವನ ಮತ್ತು ವಾಚನ ಸರ್🙏🙏🙏

  • @ಕಾಳನಾಯಕ.ವಿ.ನಾಯಕ

    ಕವನ ಮತ್ತು ವಾಚನ ಎರಡೂ ಉತ್ತಮ ಸರ್.

  • @dr.badarinathjahagirdar1466
    @dr.badarinathjahagirdar1466 2 роки тому +1

    ಮನಸ್ಸಿಗೆ ಹಿಡಿಸಿತು

  • @jyotijalihal7351
    @jyotijalihal7351 2 роки тому +1

    🙏🙏🙏 Kelutiddhare manassella muukhavago haagide...💥💥👏👏👏👏👏 super sir...

  • @mallikasnayak6318
    @mallikasnayak6318 2 роки тому +1

    ಚೆನ್ನಾಗಿದೆ"ಕನಸು"
    ನಿರಾಶೆಯ ಕನಸು.

  • @prajnayanevanil8032
    @prajnayanevanil8032 2 роки тому +1

    ಬದುಕಿನ ಪೂರ್ಣ ಚಿತ್ರಣ 👌

  • @Lachamanna.1975
    @Lachamanna.1975 2 роки тому +1

    ಗುರುಗಳೇ 🙏🙏🙏

  • @prajnayanevanil8032
    @prajnayanevanil8032 2 роки тому +1

    Sir nanu alpa swalpa barithini nimma tanaka nann baravanige muttisuva tavaka.

  • @nemikasantha4420
    @nemikasantha4420 Рік тому +2

    ನಾನೇ ಒಂದು ಕ್ಷಣ ಆ ಲೋಕದಲ್ಲಿ ನಿಂತುಬಿಟ್ಟಿದ್ದಿನೆ ಎಂಬ ಭಾವ ಒಮ್ಮೆ ಎದೆಯೊಳಗೆ ನುಸುಳಿ ಹೋಯಿತು..

  • @kannadapadyapaata3882
    @kannadapadyapaata3882 2 роки тому +1

    ಕವನ ಹಾಗೂ ವಾಚನ ಎರಡೂ ಚೆನ್ನಾಗಿದೆ 👌👌

  • @prajnayanevanil8032
    @prajnayanevanil8032 2 роки тому +1

    Wawww ಅದ್ಭುತ. Nimma kavanavu yesto janarA badjkina naija sangatgigalu sir.

    • @Ravindranayaksannakkibettu
      @Ravindranayaksannakkibettu  2 роки тому

      ಒಂದು ಭಾವಗೀತೆ
      💐💐💐
      ua-cam.com/video/1kTsvmyygGY/v-deo.html
      ಬಿಡುವಿದ್ದಾಗ ಕೇಳಿ

  • @gururajasr6207
    @gururajasr6207 2 роки тому +1

    ಕವನ ಬಹಳ ಚೆನ್ನಾಗಿದೆ, ವಾಚನವೂ ಚೆನ್ನಾಗಿದೆ ಆದರೆ audio clarity ಇಲ್ಲ
    ಹೀಗೆ ಹೇಳಿದ್ದಿಕ್ಕೆ ಏನು ಅಂದುಕೊಳ್ಲಬೇಡಿ
    🙏🙏🙏🙏🙏👏👏👌👌👍👍

    • @Ravindranayaksannakkibettu
      @Ravindranayaksannakkibettu  2 роки тому +1

      ಧನ್ಯವಾದ ಸರ್...ಹೌದು ಒಂದು ಹೊಸ app ಹಾಕ್ಕೊಂಡೆ....ಅದರಲ್ಲಿ setting ಮಾಡೋದ್ರಲ್ಲಿ ಎಡವಿದೆ.ಮುಂದಿನ ಸಾರಿ Best ಕೊಡ್ತೇನೆ ❤

  • @lavanya1335
    @lavanya1335 2 роки тому +1

    Superb!!

  • @satheeshag2779
    @satheeshag2779 2 роки тому +1

    Superb 👌

  • @dhruvalokauk419
    @dhruvalokauk419 2 роки тому +1

    ಚಂದ 🙏

  • @dhruvanayak9635
    @dhruvanayak9635 2 роки тому

  • @shrinivasanayakbhavageethe9199
    @shrinivasanayakbhavageethe9199 2 роки тому +1

    ಬಹಳ ಸೊಗಸಾದ ಕವನ ಮತ್ತು ಭಾವಪೂರ್ಣ ವಾಚನ 👌