ಮೇರುಪರ್ವತಕಿಹವು ನೂರೆಂಟು ಶಿಖರಗಳು| (ಮಂಕುತಿಮ್ಮನ ಕಗ್ಗ)

Поділитися
Вставка
  • Опубліковано 3 жов 2024
  • ಪರ್ವತಕ್ಕೆ ನೂರಾರು ಶಿಖರಗಳು. ಮೇಲಕ್ಕೇರಲು ನೂರಾರು ದಾರಿಗಳು ಮತ್ತು ನೂರಾರು ನಿಲುಗಡೆಗಳು. ಯಾತ್ರಿಕರಿಗೆಲ್ಲ ನೀನು ಜೊತೆಯಾಗಿ ಸಾಗು. ಮೇರುವಿನ ನೆನಪೇ ಶಕ್ತಿ.
    ಉನ್ನತಿಯ ಮೇರು ಶಿಖರಕ್ಕೆ ನೂರಾರು ದಾರಿಗಳು. ಕೆಲವರು ಸಂಗೀತದ ಮೂಲಕ, ಕೆಲವರು ಸಾಹಿತ್ಯದ ದಾರಿಯಿಂದ, ನಟನೆಯಿಂದ, ಓದಿನಿಂದ, ತ್ಯಾಗದಿಂದ, ಸಹಕಾರದಿಂದ, ಪ್ರೇಮದಿಂದ ತಮ್ಮ ತಮ್ಮ ಜೀವನದ ಮೇರುವನ್ನೇರಿದ್ದಾರೆ. ಪ್ರತಿಯೊಬ್ಬರಿಗೂ ಅವರವರದೇ ಮಾರ್ಗ. ಅವರು ತಮ್ಮ ಆರೋಹಣದಲ್ಲಿ ಅಲ್ಲಲ್ಲಿ ನಿಂತು ಸುಧಾರಿಸಿಕೊಂಡು ಯಶಸ್ಸಿನ ಶಿಖರಗಳನ್ನು ಏರಿದ್ದಾರೆ.ಇದರರ್ಥ, ಸಾಧನೆಯ ಶಿಖರಕ್ಕೆ ಹಲವಾರು ದಾರಿಗಳು. ಯಾವ ದಾರಿಯೂ ಸಣ್ಣದಲ್ಲ, ಯಾವುದೂ ದೊಡ್ಡದಲ್ಲ. ಪ್ರತಿಯೊಬ್ಬರೂ ತಮ್ಮಲ್ಲಿ ಅಂತರ್ಗತವಾದ ಶಕ್ತಿಯನ್ನು, ಪ್ರೇರಣೆಯನ್ನು ಬಳಸಿಕೊಂಡು ಬೆಳೆಯುತ್ತಾರೆ ಎಂಬುದಾಗಿ ಈ ಕಗ್ಗ ನಮಗೊಂದು ಸಲಹೆ ನೀಡುತ್ತದೆ.
    ಕಗ್ಗ:
    ಮೇರುಪರ್ವತಕಿಹವು ನೂರೆಂಟು ಶಿಖರಗಳು |
    ದಾರಿ ನೂರಿರಬಹುದು, ನಿಲುವ ಕಡೆ ನೂರು ||
    ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ |
    ಮೇರು ಸಂಸ್ಮೃತಿಯೆ ಬಲ - ಮಂಕುತಿಮ್ಮ ||

КОМЕНТАРІ •