ಶ್ರೀ ಲಕ್ಷ್ಮಿನಾರಾಯಣ ಭಾಗ್ವತ್ ಹಬ್ನಗದ್ದೆ( ಕುಂಕಿ) ಇವರ ಭಾಗವತಿಕೆಯ ವೀಡಿಯೊ ತುಣುಕು...
Вставка
- Опубліковано 18 лис 2024
- ಕರ್ನಾಟಕ ಕಲಾಸನ್ನಿಧಿ ತೇಲಂಗಾರ
ಯಲ್ಲಾಪುರ (ಉ.ಕ)
ಯಕ್ಷಗಾನ, ತಾಳಮದ್ದಳೆಗಳಲ್ಲಿ ಮನ್ನಣೆ, ಜನಪ್ರಿಯತೆ ಗಳಿಸಿ, ಅದರಲ್ಲೇ ಬದುಕು ಕಟ್ಟಿಕೊಂಡ ಕಲಾವಿದರು ಅನೇಕರು. ಆದರೆ ಪ್ರಸಿದ್ಧಿ, ಪ್ರಚಾರ, ಪ್ರಶಸ್ತಿ, ಪ್ರಶಂಸೆಗಳ ಹಂಗಿಲ್ಲದೆ, ಹವ್ಯಾಸಿಯಾಗಿದ್ದುಕೊಂಡೇ ಕಲೆಯ ಸೇವೆಯನ್ನು ದಶಕಗಳ ಮಾಡಿದ ಅಸಂಖ್ಯ ಕಲಾ ಸೇವಕರಿದ್ದಾರೆ.ಕಲೆಯ ನೆಲೆ ಗಟ್ಟಿಯಾಗಲು ಅಂತಹ ನಿಸ್ವಾರ್ಥ ಕಲಾರಾಧನೆ ಪ್ರಮುಖ ಕಾರಣವಾಗಿದೆ. ಯಾವ ಸೌಲಭ್ಯಗಳಿಲ್ಲದ ಕಾಲದಲ್ಲೂ ಪ್ರತಿಫಲಾಪೇಕ್ಷೆ ಇಲ್ಲದೇ ಕಲಾ ಸೇವೆಗೈದ ತೆರೆಮರೆಯ ಕಲಾಸಾಧಕರನ್ನು ಗುರುತಿಸಿ, ಅವರನ್ನು ಸಂದರ್ಶಿಸಿ, ಅವರ ಕಲಾಸೇವೆಯನ್ನು ದಾಖಲಿಸಿ, ಸಮಾಜದ ಎದುರು ತೆರೆದಿಡುವ ಪ್ರಯತ್ನವನ್ನು ನಮ್ಮ ಸಂಸ್ಥೆ ಕಳೆದ ೪ ವರ್ಷಗಳಿಂದ ಮಾಡುತ್ತ ಬಂದಿದೆ.
ಈವರೆಗೆ ೮೦ ಕ್ಕೂ ಹೆಚ್ಚಿನ ಕಲಾವಿದರ ಸಂದರ್ಶನ ಮಾಡಿ, ಅವರ ಕುರಿತಾದ ಲೇಖನವನ್ನು ಜಾಲತಾಣದ ಮೂಲಕ ಪ್ರಕಟಿಸಿದ್ದೇವೆ. ಯಲ್ಲಾಪುರ, ಅಂಕೋಲಾ, ಸಿರಸಿ, ಕುಮಟಾ, ಜೋಯಿಡಾ, ಶಿವಮೊಗ್ಗ ಜಿಲ್ಲೆಯ ಸಾಗರ, ನಿಟ್ಟೂರು ಭಾಗದ ಕಲಾವಿದರ ಕಲಾಸೇವೆಯ ದಾಖಲೀಕರಣ ಮಾಡಲಾಗಿದೆ. ಕೇವಲ ಯಕ್ಷಗಾನ, ತಾಳಮದ್ದಳೆಗೆ ಸೀಮಿತವಾಗದೇ ಇತರ ಕಲಾ ಪ್ರಕಾರಗಳಲ್ಲೂ ಈ ರೀತಿ ಸೇವೆಗೈದ ಕಲಾವಿದರನ್ನು ಗುರುತಿಸಿ, ದಾಖಲೀಕರಣ ಮಾಡುವ ಸದುದ್ದೇಶ ನಮ್ಮದು.
ನಮ್ಮ ಈ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರ, ಪ್ರೋತ್ಸಾಹದ ಶ್ರೀರಕ್ಷೆಯನ್ನು ಸದಾ ಬಯಸುತ್ತೇವೆ..
ಧನ್ಯವಾದಗಳು🙏