ನಾಗರ ಪೂಜೆಯ ಹಾಡು, ರಚನೆ: ನರಸಿಂಹ ಹೆಬ್ಬಾರ್. ಸ್ವರಸಂಯೋಜನೆ ಗಾಯನ: ಶರಾವತಿ ಹೆಗಡೆ, ದೃಶ್ಯಜೋಡಣೆ: ದಿವ್ಯಾ ಹೆಗಡೆ .

Поділитися
Вставка
  • Опубліковано 16 січ 2025

КОМЕНТАРІ • 18

  • @jayalakshmigaonkar2890
    @jayalakshmigaonkar2890 5 місяців тому

    ಚಂದದ ಸಾಹಿತ್ಯ, ಸುಮಧುರ ಸಂಗೀತ, ಸುಶ್ರಾವ್ಯ ಗಾಯನ 🎉🎉❤❤

  • @bhari63
    @bhari63 5 місяців тому +1

    ಸುಂದರ ಗಾಯನ - ಸಾಹಿತ್ಯ

  • @DivineTuneswithNagaveniHegde
    @DivineTuneswithNagaveniHegde 5 місяців тому

    ತುಂಬಾ ಚಂದ ಹಾಡು🎉

  • @savitahebbar9421
    @savitahebbar9421 5 місяців тому

    ಹಾಡು.ಹಾಡಿದು.ಬರದದ್ದು.ಎರಡೂ.ಚೊಲೋ.ಆಜು🎉🎉

  • @hemavatibhat8395
    @hemavatibhat8395 5 місяців тому +1

    👏👏🙏

  • @MamataGummani-vq2he
    @MamataGummani-vq2he 5 місяців тому

    😊❤❤

  • @girijamadhu3877
    @girijamadhu3877 5 місяців тому

    Please send the lyrics in kannada.Hadu super Madam .Namasthe.

    • @sharavatihegde2697
      @sharavatihegde2697  5 місяців тому

      ನಾಗರ ಪಂಚಮಿ ಶುಭಾಶಯದ ಹಾಡು
      ಪೂಜೆ ಮಾಡುವ ಬನ್ನಿರೋ ಶ್ರೀನಾಗರಾಜನ
      ಪೂಜೆ ಮಾಡುವ ಬನ್ನಿರೋ||ಪಲ್ಲವಿ||
      ಭಜನೆ ಗೈಯ್ಯುತ ನಾಗರಾಜನ
      ನಾಗ ದೋಷವ ಕಳೆಯಿರೋ||ಅ.ಪ.||
      ಕಾಳಸರ್ಪನ ದೋಷವಿದ್ದರು
      ಕಳೆದುಕೊಳ್ಳುವ ಬನ್ನಿರೋ
      ವ್ಯಾಳ ಶಾಪವು ದೃಷ್ಠಿಯಿದ್ದರು
      ದೂರಗೊಳಿಸುವ ಬನ್ನಿರೋ||ಪೂಜೆ ಮಾಡುವ ಬನ್ನಿರೋ||
      ನಾಗಕುಲಕಧಿಪತಿಯು ನೀನೆಂ-
      ದಾಡಿಕೊಳ್ಳುತ ಮುದದಲಿ
      ಜಾಗ ನಿನಗಿದೊ ಹುತ್ತವೆನ್ನುತ
      ಹಾಲನೆರೆಯುವ ಭಕುತಿಲಿ||ಪೂಜೆ ಮಾಡುವ ಬನ್ನಿರೋ||
      ಯಾರಮೇಲೆಳ್ಳಿನಿತು ಕೋಪವ
      ತಾಳದಿರು ಎಂದೆನುತಲಿ
      ಘೋರ ಗರಳವನುಗುಳದಾ ಪರಿ
      ಅಜಗರನ ಸಂಪ್ರಿಯದಲಿಪೂಜೆ ಮಾಡುವ ಬನ್ನಿರೋ||
      ಶುದ್ಧ ಮನದಲಿ ಶುದ್ಧ ಜಲದಲಿ
      ಶುದ್ಧ ಪುಷ್ಪಾಕ್ಷತೆಯಲಿ
      ಶುದ್ಧ ಹಳದಿಯು ಕುಂಕುಮಾದಿಗ-
      ಳಿಂದ ಪೂಜಾವಿಧಿಯಲಿ||ಪೂಜೆ ಮಾಡುವ ಬನ್ನಿರೋ||
      ಅರ್ಚಿಸುತ್ತಲಿ ಕ್ಷೀರ ವೃಷ್ಠಿಯ
      ಸುರಿಸಿ ಜಯ ಜಯವೆನ್ನುತ
      ತೀರ್ಚಿಕೊಳ್ಳುವ ಋಣವದಿದ್ದರೆ
      ಫಣಿಗೆ ಶಿರವಂ ಬಾಗುತ||ಪೂಜೆ ಮಾಡುವ ಬನ್ನಿರೋ||
      ಭಕ್ತಿ ಗೇಯತೆ ತಾಳ ಲಯದಲಿ
      ಭಜನೆ ಮಾಡುವ ಭನ್ನಿರೋ
      ಮುಕ್ತಿದಾಯಕ ಶಿವನ ಕೊರಳಿನ
      ಹಾರ ಹಾವಿಗೆ ನಮಿಸಿರೋ||ಪೂಜೆ||
      ***********************************
      ನರಸಿಂಹ ಹೆಬ್ಬಾರ ಮಲವಳ್ಳಿ
      ಅಜಗರನ=ಸರ್ಪನ,ಹಳದಿಯು=ಹರಿದ್ರಾಅರಿಶಿಣ, ತೀರ್ಚಿಕೊಳ್ಳುವ=ತೀರಿಸಿಕೊಳ್ಳುವ,ಶಿರವಂ=ಶಿರವನ್ನು,

  • @PrabhaBhat-x2f
    @PrabhaBhat-x2f 5 місяців тому

    Super

  • @JayalakshmiHegde-r5n
    @JayalakshmiHegde-r5n 5 місяців тому

    Cholo aajuu