ಅನ್ನ- ಅಕ್ಷರ-ಆರೋಗ್ಯದ ಉಚಿತ ಸೇವಾ ಕ್ರಾಂತಿ l ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಮಧುಸೂದನ ಸಾಯಿ

Поділитися
Вставка
  • Опубліковано 11 жов 2024
  • ಮಲೆನಾಡ ಮಡಿಲಿನಲ್ಲಿರುವ ಚಿಕ್ಕಮಗಳೂರಿನ ದಿ ಸೆರಾಯ್ ಭವನದಲ್ಲಿ VRL ಮೀಡಿಯಾ ಲಿಮಿಟೆಡ್ ನ ಮುಖ್ಯ ಸಂಪಾದಕರಾದ ಶ್ರೀ ಚನ್ನೇಗೌಡ ಕೆ ಎನ್ ಅವರು ಸಂದರ್ಶಕರಾಗಿ, ಶ್ರೀ ಮಧುಸೂದನ ಸಾಯಿಯವರೊಂದಿಗೆ ನಡೆಸಿಕೊಟ್ಟ ದಿವ್ಯಸಂಜೆ ಸಂವಾದ ಕಾರ್ಯಕ್ರಮವು ಅದ್ವಿತೀಯವಾಗಿದ್ದು, ಶ್ರೀ ಮಧುಸೂದನ ಸಾಯಿಯವರು ಮುಗ್ದವಾಗಿ ಕನ್ನಡದಲ್ಲಿ ಮಾತನಾಡುವ ಮೂಲಕ ಜನರನ್ನು ಆಕರ್ಷಿಸಿದ್ದಾರೆ. ಅವರ ಮಾತೃಭಾಷೆ ಬೇರೆಯಾದರೂ, ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಅಪಾರ ಜ್ಞಾನದ ಮೂಲಕ ನೆರೆದವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೇ ಸಮಯದಲ್ಲಿ ನಡೆದ ಪ್ರಶ್ನೋತ್ತರ ವಾಹಿನಿಯಲ್ಲಿ, ಸಾಮಾಜಿಕ ಕಾಳಜಿ, ಅಧ್ಯಾತ್ಮ-ಸೇವೆ, ನೈತಿಕ ಹೊಣೆಗಾರಿಕೆ, ದೇಶ ನಿರ್ಮಾಣದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅಗತ್ಯಗಳಂತಹ ವಿವಿಧ ರೀತಿಯ ಪ್ರಶ್ನೆಗಳಿಗೆ ಶ್ರೀ ಮಧುಸೂದನ ಸಾಯಿಯವರು ಮನಗಾಣುವ ರೀತಿಯ ಉತ್ತರಗಳನ್ನು ನೀಡಿದರು. ಈ ಪೂರ್ಣ ಕಾರ್ಯಕ್ರಮದ ಒಂದು ಸಣ್ಣ ತುಣುಕು ನೋಟ ಇಲ್ಲಿದೆ.
    'ದಿವ್ಯ ಸಂಜೆ' ಸಂವಾದ ಕಾರ್ಯಕ್ರಮವು ಶ್ರೀ ಮಧುಸೂದನ ಸಾಯಿಯವರ ವಿಭಿನ್ನ ಉಪಕ್ರಮವಾಗಿದ್ದು, ಅನ್ನ (Nutrition), ಅಕ್ಷರ (Education), ಆರೋಗ್ಯಸೇವೆ (Healthcare) ಮತ್ತು ಅಧ್ಯಾತ್ಮ (Spirituality) ವನ್ನು ಉಚಿತವಾಗಿ ನೀಡುವ ಅವರ ಮಾನವೀಯ ಸೇವಾ ಅಭಿಯಾನದಿಂದ ಆಕರ್ಷಿತರಾಗಿ ಸ್ಫೂರ್ತಿ ಪಡೆದ ಅನೇಕ ಸಮಾಜ ಸೇವಕರು, ಸಾಧಕರು ಮತ್ತು ಧುರೀಣರನ್ನು ಒಟ್ಟುಗೂಡಿಸಿ, ಸಂಯುಕ್ತವಾದ ಪ್ರಯತ್ನಗಳ ಮೂಲಕ ಸಮಾಜವನ್ನು ಪರಿವರ್ತಿಸುವ ಧ್ಯೇಯವನ್ನು ಹೊಂದಿದೆ.
    ಸಾಮಾಜಿಕ ಪಿಡುಗುಗಳೆಡೆಗೆ ಸಮಾನ ಹೃದಯಿಗಳ ಮನಸ್ಸುಗಳ ಮಿಡಿದಾಗ, ಅವಶ್ಯಕವಾದ ಅನೇಕ ಪ್ರಾಯೋಗಿಕ ಪರಿಹಾರಗಳು ದೊರಕುತ್ತವೆ. ಆಗ, ಅನೇಕ ಸೇವಾ ಚಟುವಟಿಕೆಗಳ ಸಾಧನೆಗಳನ್ನು ನಿಸ್ವಾರ್ಥವಾಗಿ ಕೈಗೊಳ್ಳುವ ಮೂಲಕ ಭವ್ಯ ಭಾರತದ ನವನಿರ್ಮಾಣದ ಗುರಿಯು ಸಾಕಾರವಾಗುತ್ತದೆ.
    ‪@VijayavaniDigital‬ ‪@VIJAYAVANI4U‬ ‪@smsghm‬
    #srimadhusudansai #srimadhusudansaikannada #sathyasaigrama #SMSGHM #SMSGHMkannada #vijayavani #vijayasankeshwar #VRL #VRLmedia #aneveningdivine #theserai #chikkamagaluru #malnad #malenadu #coffee #evening #divine #chat #firesidechat #samvada #debate #discussion #ajith #conversation #speak #speaks #talks
    _________________
    ನೀವು ಯಾವುದೇ ಅಪೂರ್ಣ ಲಿಂಕ್‌ಗಳು ಅಥವಾ ದೋಷಪೂರಿತ ವೀಡಿಯೋಗಳನ್ನು ಕಂಡರೆ, ದಯವಿಟ್ಟು ನಮಗೆ ತಿಳಿಸಿ.
    ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ವ್ಯಕ್ತಿ ನೋಟಗಳಿಗಾಗಿ
    linktr.ee/srim...
    ಸದ್ಗುರು ಶ್ರೀ ಮಧುಸೂದನ ಸಾಯಿಯವರ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಮಿಷನ್ ಗಳ ಕುರಿತಾಗಿ ತಿಳಿಯಲು
    linktr.ee/srim...

КОМЕНТАРІ • 8