ಹತ್ತಲು ಅಸಾಧ್ಯ ಎನ್ನಿಸುವ ಬೆಟ್ಟ & ಬೆಟ್ಟದ ಮೇಲೊಂದು ಕೋಟೆ | Asia's 2'nd largest Monolith |

Поділитися
Вставка
  • Опубліковано 13 жов 2024
  • Edit ಮಾಡೋ ಅವಸರದಲ್ಲಿ voice editing ಹಿಂದೆ ಮುಂದೆ ಆಗಿದ್ದು ದಯವಿಟ್ಟು ಕ್ಷಮೆ ಇರಲಿ!!
    ಬೆಟ್ಟಗಳು ಅಂದ್ರೇನೆ ಸೊಬಗು, ಕುತೂಹಲಗಳ ತಾಣ. ರಮ್ಯ ರಮಣೀಯ ಎನಿಸುವ ನೋಟ, ಆಕರ್ಷಣೀಯ, ಮನಮೋಹಕ. ಬಾನೆತ್ತರದ ಬೆಟ್ಟ ಏರುವುದೇ ರೋಚಕ. ಹೀಗೆ ಹಲವು ಆಕರ್ಷಣೆ ಹಾಗೂ ವೈಶಿಷ್ಟ್ಯದಿಂದಲೇ ಎಲ್ಲರನ್ನೂ ಸೆಳೆಯುತ್ತೆ ತುಮಕೂರು ಜಿಲ್ಲೆಯ ಮಧುಗಿರಿಯ ಏಕಶಿಲಾ ಬೆಟ್ಟ.
    ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಏಕಶಿಲಾ ಬೆಟ್ಟ ಎಂಬ ಖ್ಯಾತಿಗೂ ಪಾತ್ರವಾಗಿರುವ ಈ ಬೆಟ್ಟದಲ್ಲಿ ಸಿಗುತ್ತಿದ್ದ ಜೇನಿನಿಂದಾಗಿ ಈ ಬೆಟ್ಟಕ್ಕೆ ಮಧುಗಿರಿ ಎನ್ನುವ ಹೆಸರು ಬಂದಿದೆ ಎಂಬ ಪ್ರತೀತಿಯೂ ಇದೆ. ಮಧುಗಿರಿ ಪಟ್ಟಣದ ಹೃದಯ ಭಾಗದಲ್ಲೇ ಈ ಬೆಟ್ಟವಿದ್ದು, ಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ಆರಂಭದಲ್ಲಿಯೇ ಶಕ್ತಿ ದೇವತೆ ದಂಡಿನ ಮಾರಮ್ಮನ ದರ್ಶನವೂ ದೊರೆಯುತ್ತದೆ.
    ಮಧುಗಿರಿ ಬೆಟ್ಟ ಹತ್ತುವುದೇ ಒಂದು ರೋಚಕ ಅನುಭವ. ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಬೆಟ್ಟವು ಚಾರಣಕ್ಕೆ ಹೇಳಿ ಮಾಡಿಸಿದಂತಿದೆ. ಬೆಟ್ಟ ಹತ್ತುತ್ತಾ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಆನಂದ. ಹೊಸಬರಿಗೆ ಮತ್ತು ಮೊದಲ ಬಾರಿಗೆ ಬೆಟ್ಟ ಹತ್ತುವವರು ಇಲ್ಲಿ ದಾರಿ ತಪ್ಪುವುದು ಖಚಿತ. ಹೀಗಾಗಿ ಗೆಳೆಯರೊಂದಿಗೆ ಅಥವಾ ಕುಟುಂಬದೊಂದಿಗೆ ಒಂದು ತಂಡವಾಗಿ ಬೆಟ್ಟ ಹತ್ತುವುದು ಸೂಕ್ತ.
    ಬೆಟ್ಟದ ಆಕರ್ಷಣೆ ಕೋಟೆ:
    ಮಧುಗಿರಿಯ ಏಕಶಿಲಾ ಬೆಟ್ಟದ ಮೇಲೆ ಪ್ರಮುಖ ಆಕರ್ಷಣೆಯಾಗಿರುವುದು ಕೋಟೆ. ಮಧುಗಿರಿ ಬೆಟ್ಟದ ಕೋಟೆ ಎಂದೂ ಕರೆಯಲ್ಪಡುವ ಈ ಕೋಟೆಯು 3,930 ಅಡಿ ಎತ್ತರದಲ್ಲಿದೆ. 17ನೇ ಶತಮಾನದಲ್ಲಿ ಕ್ರಿ.ಪೂ. 1670ರಲ್ಲಿ ಮಣ್ಣಿನ ಕೋಟೆಯನ್ನು ಗಂಗಾ ವಂಶಸ್ಥರಾದ ರಾಜಾ ಹೈರಾಗೌಡ ನಿರ್ಮಿಸಿದ್ದರು. ನಂತರ ಅದಕ್ಕೆ ಕಮಾನುಗಳನ್ನು ಹಾಗೂ ವೀಕ್ಷಣಾ ಗೋಪುರವನ್ನು ಹೈದರ್ ಆಲಿ ನಿರ್ಮಿಸಿದನು ಎಂದು ಇತಿಹಾಸ ಹೇಳುತ್ತದೆ. ಒಂದು ಕುತೂಹಲಕಾರಿ ಘಟನೆಯು ಗೌಡ ಕುಟುಂಬವನ್ನು ಕೋಟೆ ನಿರ್ಮಿಸಲು ಪ್ರೇರೇಪಿಸಿತು ಎನ್ನಲಾಗಿದೆ.
    ಕೋಟೆಯ ಮೇಲ್ಭಾಗವನ್ನು ತಲುಪಲು ಕಡಿದಾದ ಇಳಿಜಾರಿನ ಮೇಲೆ ಹತ್ತಬೇಕು. ಕೋಟೆಯ ಅತ್ಯಂತ ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಅದರ ಬೃಹತ್ ಪ್ರವೇಶದ್ವಾರ. ಇದನ್ನು ದಿಡ್ಡಿಬಾಗಿಲು ಎಂದು ಕರೆಯಲಾಗುತ್ತದೆ. ಪ್ರವೇಶದ್ವಾರವು ಸುಮಾರು 25 ಅಡಿ ಎತ್ತರ ಮತ್ತು 17 ಅಡಿ ಅಗಲವಿದೆ ಮತ್ತು ಕೋಣೆಗಳ ಸರಣಿ ಹೊಂದಿದೆ. ಮದ್ದು ಗುಂಡುಗಳು, ಶಸ್ತ್ರಾಸ್ತ್ರಗಳು ಮತ್ತು ಆಹಾರ ವಸ್ತುಗಳನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು ಎನ್ನಲಾಗಿದೆ. ಪ್ರವೇಶದ್ವಾರದಲ್ಲಿ ರಹಸ್ಯವಾಗಿ ತಪ್ಪಿಸಿಕೊಳ್ಳಲು ದಾರಿ ಇದೆ. ಇದು ಅಪಾಯದ ಸಮಯದಲ್ಲಿ ತಪ್ಪಿಸಿಕೊಳ್ಳಲು ಸೈನಿಕರು ಬಳಸುತ್ತಿದ್ದ ಮಾರ್ಗ ಎನ್ನಲಾಗಿದೆ.
    ಕೋಟೆಯು ಹಲವಾರು ನೀರಿನ ತೊಟ್ಟಿಗಳನ್ನು ಮತ್ತು ಗೋಪಾಲಕೃಷ್ಣ ದೇವರಿಗೆ ಸಮರ್ಪಿತವಾದ ದೇವಾಲಯವನ್ನು ಹೊಂದಿದೆ. ಇಲ್ಲಿನ ಸುಂದರವಾದ ಕೆತ್ತನೆಗಳು ಹೊಯ್ಸಳ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.
    ಚಾರಣಕ್ಕೆ ಹೇಳಿ ಮಾಡಿಸಿದ ತಾಣ
    ಮಧುಗಿರಿ ಬೆಟ್ಟ ಚಾರಣಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಬೆಟ್ಟ ಹತ್ತಲು ಅರ್ಧದಷ್ಟು ಮೆಟ್ಟಿಲುಗಳಿವೆ. ನಂತರ ಬಯಲು ಮತ್ತು ಕಡಿದಾದ ಬಂಡೆಗಳ ಮೇಲೆ ಪಾದಯಾತ್ರೆಯಲ್ಲೇ ಸಾಗಬೇಕಾಗುತ್ತದೆ. ಬೆಟ್ಟದ ಮೇಲೆ ಹತ್ತಲು ಸುಲಭವಾಗಲು ಹ್ಯಾಂಡಲ್ ಬಾರ್‌ಗಳಿವೆ. ಸುಮಾರು 3.5 ಕಿಮೀ ಕೋಟೆಯ ಹಾದಿ ಹಾದು ಹೋಗುತ್ತದೆ. ಕೆಲವು ಬೆರಗುಗೊಳಿಸುವ
    ಭೂ ದೃಶ್ಯಗಳ ಮೂಲಕ ಮತ್ತು ಸುತ್ತಮುತ್ತಲಿನ ಬೆಟ್ಟಗಳು ಮತ್ತು ಮಧುಗಿರಿ ಪಟ್ಟಣದ ವಿಹಂಗಮ ನೋಟ ಕಣ್ಣಿಗೆ ಹಬ್ಬ ನೀಡುತ್ತವೆ.
    ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಜಿಲ್ಲಾ ಕೇಂದ್ರ ತುಮಕೂರಿನಿಂದ ಕೇವಲ 45 ಕಿಮೀ ಪ್ರಯಾಣ ಮಾಡಬೇಕಿದೆ. ಬೆಂಗಳೂರಿನಿಂದ 105 ಕಿಮೀ ದೂರ ಆಗಲಿದೆ. ಮಧುಗಿರಿಗೆ ತಲುಪಲು ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯವಿದೆ. ಪ್ರತಿ ಅರ್ಧಗಂಟೆಗೊಂದು ಬಸ್ ಸಂಚರಿಸುತ್ತದೆ. ಈ ಬೆಟ್ಟದ ಪಕ್ಕದಲ್ಲೇ ಬಸ್ ನಿಲ್ದಾಣ ಇರುವುದು ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ.
    #mrdary #onestatemanyworld #karnataka #trekking #tumkur #bengaluru #kannada
    #madhugiri #travel #explore #exploremore #travelindia #indiatourism #incredibleindia #history #incredibleknowledge

КОМЕНТАРІ • 19