ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವ (ಭಾಗ3 ) ಭಗವಂತನ ವಿವಾಹದ ಕಥೆ ಮನೆಯಲ್ಲಿ ಪಾರಾಯಣ ಮಾಡಿದರೆ ಎಲ್ಲ ಅಮಂಗಳಗಳು ದೂರ

Поділитися
Вставка
  • Опубліковано 15 тра 2024
  • #ಶ್ರೀನಿವಾಸ_ಕಲ್ಯಾಣ_part 1 link ede nodi
    👇
    • ಶ್ರೀನಿವಾಸ ಪದ್ಮಾವತಿ ಮದು...
    #ಶ್ರೀನಿವಾಸ ಪದ್ಮಾವತಿ ಕಲ್ಯಾಣ ಕಥೆ ಭಾಗ 2 part 2
    link ede nodi 👇
    • ಶ್ರೀನಿವಾಸ ಪದ್ಮಾವತಿ ಕಲ್...
    #ಶ್ರೀ ವಾದಿರಾಜರು ರಚಿಸಿರುವ ಪದ್ಯ ರೂಪದ ಶ್ರೀನಿವಾಸ ಕಲ್ಯಾಣ.
    ಗಂಗಾತೀರದಿ ಋಷಿಗಳು /ಅಂದು ಯಾಗವ ಮಾಡ್ದರು
    ಬಂದು ನಾರದ ನಿಂತುಕೊಂಡು /ಯಾರಿಗೆಂದು ಕೇಳಲು
    ಅರಿತು ಬರಬೇಕು ಎಂದು/ ಆ ಮುನಿಯು ತೆರಳಿದ..ಭೃಗುಮುನಿಯು ತೆರಳಿದ
    ನಂದಗೋಪನ ಮಗನ ಕಂದನ/ ಮಂದಿರಕಾಗೆ ಬಂದನು
    ವೇದಗಳನೆ ಓದುತಾ/ ಶ್ರೀ ಹರಿಯನೂ ಕೊಂಡಾಡುತಾ
    ಇರುವ ಬೊಮ್ಮನ ನೋಡಿದ/ ಕೈಲಾಸಕ್ಕೆ ಬಂದನು
    ಶಂಭುಕಂಠನು ಪಾರ್ವತೀಯೂ/ ಕಲಿತಿರುವುದ ಕಂಡನು
    ಸೃಷ್ಟಿಯೊಳಗೆ ನಿನ್ನ ಲಿಂಗ/ ಶ್ರೇಷ್ಟವಾಗಲೆಂದನು
    ವೈಕುಂಠಕ್ಕೆ ಬಂದನು/ ವಾರಿಜಾಕ್ಷನ ಕಂಡನು
    ಕೆಟ್ಟ ಕೋಪದಿಂದ ಒದ್ದರೆ/ ಎಷ್ಟು ನೊಂದಿತೆನ್ದನು
    ತಟ್ಟನೆ ಬಿಸಿನೀರಿನಿಂದ/ ನೆಟ್ಟಗೆ ಪಾದ ತೊಳೆದನು
    ಬಂದ ಕಾರ್ಯ ಆಯಿತೆಂದು/ಅಂದು ಮುನಿಯು ತೆರಳಿದ
    ಬಂದು ನಿಂದು ಸಭೆಯೊಳಗೆ/ಇಂದಿರೇಶನ ಹೊಗಳಿದ
    ಪತಿಯ ಕೂಡೆ ಕಲಹ ಮಾಡಿ/ಕೊಲ್ಹಾಪುರಕ್ಕೆ ಹೋದಳು
    ಸತಿಯು ಪೋಗೆ ಪತಿಯು ಹೊರಟು/ ಗಿರಿಗೆ ಬಂದು ಸೇರಿದ
    ಹುತ್ತದಲ್ಲೇ ಹತ್ತು ಸಾವಿರ ವರುಷ/ ಗುಪ್ತವಾಗೆ ಇದ್ದನು
    ಬ್ರಹ್ಮ ಧೇನುವಾದನು/ ರುದ್ರ ವತ್ಸನಾದನು
    ಧೇನು ಮುಂದೆ ಮಾಡಿಕೊಂಡು/ ಗೋಪಿ ಹಿಂದೆ ಬಂದಳು
    ಕೋಟಿ ಹೊನ್ನು ಬಾಳುವೋದು / ಕೊಡದ ಹಾಲು ಕರೆವುದು
    ಪ್ರೀತಿಯಿಂದಲೇ ತನ್ನ ಮನೆಗೆ/ ತಂದುಕೊಂಡನು ಚೋಳನು
    ಒಂದು ದಿವಸ ಕಂದಗ್ಹಾಲು/ ಚೆಂದದಿಂದಲಿ ಕೊಡಲಿಲ್ಲ
    ಅಂದು ರಾಯನ ಮಡದಿ ಕೋಪಿಸಿ/ ಬಂದು ಗೋಪನ ಹೊಡೆದಳು
    ಧೇನು ಮುಂದೆ ಮಾಡಿಕೊಂಡು/ ಗೋಪ ಹಿಂದೆ ನಡೆದನು
    ಕಾಮಧೇನು ಕರೆದ ಹಾಲು/ ಹರಿಯ ಶಿರ್ಕೆ ಬಿದ್ದಿತು
    ಇಷ್ಟು ಕಷ್ಟ ಬಂದಿತೆಂದು/ ಪೆಟ್ಟು ಬಡಿಯೆ ಹೋದನು
    ಕೃಷ್ಣ ತನ್ನ ಮನದಲ್ಯೋಚಿಸಿ/ ಕೊಟ್ಟ ತನ್ನ ಶಿರವನ್ನು
    ಏಳು ತಾಳೆಮರದ ಉದ್ದ/ ಏಕವಾಗಿ ಹರಿಯಿತು
    ರಕ್ತವನ್ನು ನೋಡಿ ಗೋಪ/ ಮತ್ತೆ ಸ್ವರ್ಗಕ್ಕೇರಿದ
    ಕಷ್ಟವನ್ನು ನೋಡಿ ಗೋವು ಅಷ್ಟು ಬಂದು ಹೇಳಿತು
    ತಟ್ಟನೆ ರಾಯ ಎದ್ದು ಗಿರಿಗೆ/ ಬಂದು ಬೇಗ ಸೇರಿದ
    ಏನು ಕಷ್ಟ ಇಲ್ಲಿ ಹೀಗೆ/ ಯಾವ ಪಾಪಿ ಮಾಡಿದ
    ಇಷ್ಟು ಕಷ್ಟ ಕೊಟ್ಟವಾಗೆ/ ಭ್ರಷ್ಟಪಿಶಾಚಿಯಾಗೆಂದ
    ಪೆಟ್ಟು ವೇದನೆ ತಾಳಲಾರದೆ/ ಬ್ರಹಸ್ಪತೀಯ ಕರೆಸಿದ
    ಅರುಣ ಉದಯದಲ್ಲೆದ್ದು/ ಔಷಧಕ್ಕೆ ಪೋದನು
    ಕ್ರೋಢರೂಪಿಯ ಕಂಡನು/ ಕೂಡಿ ಮಾತನಾಡಿದನು
    ಇರುವುದಕ್ಕೆ ಸ್ಥಳವು ಎನಗೆ/ ಏರ್ಪಾಡಾಗಬೇಕೆಂದ
    ನೂರು ಪಾದ ಭೂಮಿ ಕೊಟ್ಟರೆ/ ಮೊದಲು ಪೂಜೆ ನಿಮಗೆಂದ
    ಪಾಕ ಪಕ್ವ ಮಾಡುವುದಕ್ಕೆ/ ಆಕೆ ಬಕುಳೆ ಬಂದಳು
    ಭಾನುಕೋಟಿತೇಜನೀಗ/ ಬೇಟೆಯಾಡ ಹೊರಟನು
    ಮಂಡೆ ಬಾಚಿ ದೊಂಡೆ ಹಾಕಿ/ ದುಂಡುಮಲ್ಲಿಗೆ ಮುಡಿದನು
    ಹಾರ ಪದಕ ಕೊರಳಲ್ಹಾಕಿ/ ಫಣೆಗೆ ತಿಲಕವಿಟ್ಟನು
    ಅ೦ಗುಲಿಗೆ ಉಂಗುರ/ ರಂಗಶೃಂಗಾರವಾದವು
    ಪಟ್ಟೆನುಟ್ಟು ಕಚ್ಚೆ ಕಟ್ಟಿ / ಪೀತಾ೦ಬರವ ಹೊದ್ದನು
    ಡಾಳು ಕತ್ತಿ ಉಡಿಯಲ್ ಸಿಕ್ಕಿ/ ಜೋಡು ಕಾಲಲ್ಲಿ ಮೆಟ್ಟಿದ
    ಕರದಿ ವೀಳ್ಯವನ್ನೇ ಪಿಡಿದು/ ಕನ್ನಡೀಯ ನೋಡಿದ
    ಕನಕಭೂಷಣವಾದ ತೊಡಿಗೆ/ ಕಮಲನಾಭ ತೊಟ್ಟನು
    ಕನಕಭೂಷಣವಾದ ಕುದುರೆ / ಕಮಲನಾಭ ಏರಿದ
    ಕರಿಯ ಹಿಂದೆ ಹರಿಯು ಬರಲು/ ಕಾಂತೆರೆಲ್ಲ ಕಂಡರು
    ಯಾರು ಇಲ್ಲಿ ಬರುವರೆಂದು/ ದೂರ ಪೋಗಿರೆಂದರು
    ನಾರಿಯರಿರುವ ಸ್ಥಳಕ್ಕೆ/ ಯಾವ ಪುರುಷ ಬರುವನು
    ಎಷ್ಟು ಹೇಳೇ ಕೇಳ ಕೃಷ್ಣ / ಕುದುರೆ ಮುಂದೆ ಬಿಟ್ಟನು
    ಕೇಶ ಬಿಚ್ಚಿ ವಾಸುದೇವ/ ಶೇಷಗಿರಿಗೆ ಬಂದನು
    ಪರಮಾನ್ನ ಮಾಡಿದ್ದೇನೆ/ ಉಣ್ಣು ಬೇಗ ಎಂದಳು
    ಅಮ್ಮ ಎನಗೆ ಅನ್ನ ಬೇಡ/ ಎನ್ನ ಮಗನೆ ವೈರಿಯೇ
    ಕಣ್ಣಿಲ್ಲಾದ ದೈವ ಅವಳ/ ನಿರ್ಮಾಣವ ಮಾಡಿದ
    ಯಾವದೇಶ ಯಾವೋಳಾಕೆ/ ಎನಗೆ ಪೇಳು ಎಂದಳು
    ನಾರಾಯಣನ ಪುರಕೆ ಹೋಗಿ / ರಾಮಕೃಷ್ಣರ ಪೂಜಿಸಿ
    ಕುಂಜಮಣಿಯ ಕೊರಳಲ್ಹಾಕಿ/ ಕೂಸಿನ್ ಕೊಂಕಳಲೆತ್ತಿದಾ
    ಧರಣಿ ದೇವಿಗೆ ಕಣಿಯ ಹೇಳಿ/ ಗಿರಿಗೆ ಬಂದು ಸೇರಿದ
    ಕಾಂತೆರೆಲ್ಲ ಕೂಡಿಕೊಂಡು/ ಆಗ ಬಕುಳೆ ಬಂದಳು
    ಬನ್ನಿರೆಮ್ಮ ಸದನಕೆನುತ/ ಬಹಳ ಮಾತನಾಡಿದರು
    ತಂದೆತಾಯಿ ಬಂಧುಬಳಗ/ಹೊನ್ನು ಹಣ ಉಂಟೆ೦ದರು
    ಇಷ್ಟು ಪರಿಯಲ್ಲಿದ್ದವಗೆ/ ಕನ್ನೆ ಯಾಕೆ ದೊರಕಲಿಲ್ಲ
    ದೊಡ್ಡವಳಿಗೆ ಮಕ್ಕಳಿಲ್ಲ/ ಮತ್ತೆ ಮಾಡುವೆ ಮಾಡ್ವೆವು
    ಬೃಹಸ್ಪತೀಯ ಕರೆಸಿದ/ ಲಗ್ನಪತ್ರಿಕೆ ಬರೆಸಿದ
    ಶುಕಾಚಾರ್ಯರ ಕರೆಸಿದ/ ಮದುವೆ ಓಲೆ ಬರೆಸಿದ
    ವಲ್ಲಭೇನ ಕರೆವುದಕ್ಕೆ/ ಕೊಲ್ಹಾಪುರಕ್ಕೆ ಹೋದರು
    ಗರುಡನ್ ಹೆಗಲನೇರಿಕೊಂಡು/ ಬೇಗ ಹೊರಟುಬಂದರು
    ಅಷ್ಟವರ್ಗವನ್ನು ಮಾಡಿ/ ಇಷ್ಟದೇವರ ಪೂಜಿಸಿ
    ಲಕ್ಷ್ಮೀಸಹಿತ ಆಕಾಶರಾಜನ/ ಪಟ್ಟಣಕ್ಕೆ ಬಂದರು
    ಕನಕಭೂಷಣವಾದ ತೊಡಿಗೆ/ ಕಮಲನಾಭ ತೊಟ್ಟನು
    ಕಮಲನಾಭಾಗೆ ಕಾಂತಿಮಣಿಯ/ ಕನ್ಯಾದಾನವ ಮಾಡಿದ
    ಕಮಲನಾಭ ಕಾಂತೆ ಕೈಗೆ/ ಕಂಕಣವನ್ನೇ ಕಟ್ಟಿದ
    ಶ್ರೀನಿವಾಸ ಪದ್ಮಾವತಿಗೆ/ ಮಾಂಗಲ್ಯವನ್ನೇ ಕಟ್ಟಿದ
    ಶ್ರೀನಿವಾಸನ ಮದುವೆ ನೋಡೇ/ ಸ್ತ್ರೀಯರೆಲ್ಲರೂ ಬನ್ನಿರೆ
    ಪದ್ಮಾವತಿಯ ಮದುವೆ ನೋಡೇ/ ಪದ್ಮಿನಿಯರು ಬನ್ನಿರೆ
    ಶಂಕೆಯಿಲ್ಲದೆ ಹಣವ ಸುರಿದು/ ವೆಂಕಟೇಶ ಸಲಹೆನ್ನ
    ಕೋಟಿ ತಪ್ಪು ಎನ್ನಲ್ಲುಂಟು/ ಕುಸುಮನಾಭ ಸಲಹೆನ್ನ
    ಶಂಕೆ ಇಲ್ಲದೆ ವರವ ಕೊಡುವ/ ವೆಂಕಟೇಶ ಸಲಹೆನ್ನ
    ಭಕ್ತಿಯಿಂದಲಿ ಹೇಳ್ ಕೇಳ್ದವರಿಗೆ/ ಮುಕ್ತಿ ಕೊಡುವ ಹಯವದನ
    ಜಯ ಜಯ ಶ್ರೀನಿವಾಸನಿಗೆ/ ಜಯ ಜಯ ಪದ್ಮಾವತಿಗೆ
    ಒಲಿದಂತಹ ಶ್ರೀಹರಿಗೆ/ ನಿತ್ಯ ಶುಭಮಂಗಳ
    ಶೇಷಾದ್ರಿಗಿರಿವಾಸ ಶ್ರೀದೇವಿ ಅರಸಗೆ/
    ಕಲ್ಯಾಣಮೂರುತಿಗೆ/ ನಿತ್ಯ ಜಯಮಂಗಳ//
    ಸರ್ವೇಜನಾ ಸುಖಿನೋ ಭವ೦ತು....ಸಮಸ್ತ ಸನ್ಮ೦ಗಳಾನಿ ಭವ೦ತು

КОМЕНТАРІ • 355

  • @arunashrinath6705
    @arunashrinath6705 20 днів тому +7

    ಶ್ರೀನಿವಾಸ ಸ್ವಾಮಿಯ ಕಲ್ಯಾಣ ಪದ್ಮಾವತಿ
    ದೇವಿ ಯೊಡನೆ ಶ್ರೀನಿವಾಸ ಸ್ವಾಮಿಯ ಕಲ್ಯಾಣ... ಸುಲಗ್ನ ಸಾವಧಾನ ಸುಮಹೂರ್ತ' ಸಾವಧಾನ ಶ್ರೀ ಲಕ್ಷ್ಮಿ ನಾರಾಯಣ ಧ್ಯಾನ ಸಾವಧಾನ... ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಭಾಗವಹಿಸಿ ಕಣ್ತುಂಬಿಸಿಕೊಂಡು ಬಂದಂತಹ ತೃಪ್ತಿ ಆಯಿತು ನಿಮಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು ಅಮ್ಮ❤❤❤❤❤❤❤❤❤❤

  • @09870
    @09870 20 днів тому +22

    🙏🙏ಶ್ರೀ ಶ್ರೀ ನಿವಾಸ ಪದ್ಮಾವತಿಗೆ ಜಯ ಮಂಗಳಂ ನಿತ್ಯ ಶುಭ ಮಂಗಳಂ 🙏🙏🌺🌷🌷🌷🌷🌷 ರಂಗೋಲಿ ತುಂಬಾ ಸುಂದರವಾಗಿದೆ

    • @yashadammayashada5637
      @yashadammayashada5637 20 днів тому

      23:51 all of good

    • @MarutiDanghal
      @MarutiDanghal 19 днів тому

      Namste.amma.nanna.yava prashanege.hutara.kottilla.nivu,.nanna ee.prashane.ge.adru.kodi.nanna.talli.pade.pade.dhara.kata.agaatahide.yallaru.anata.hidhare.hitara.dhara.kata.agabaradu.anatta.nannage.tunda
      .Baya.agide.amma

  • @jayasheelae1353
    @jayasheelae1353 20 днів тому +7

    ಕಥೆ ಹೇಳಿದ ನಿಮಗೂ ಕಥೆ ಕೇಳಿದೆ ನಮಗೂ ಕೋಟಿ ಕೋಟಿ ಪುಣ್ಯ ಲಭಿಸಲಿ❤🙏🙏🙏💐💐

  • @renozoff607
    @renozoff607 18 днів тому

    Hare shrinivasa Laxmi padmavati sahita shrinivasa namo namaha rangoli so beautiful 👌👌👍👍🙏🙏🙏🌹🌹🌹

  • @veenaanigol1016
    @veenaanigol1016 20 днів тому +7

    ರಂಗೋಲಿ ನೋಡಲು ಎರಡು ಕಣ್ಣು ಸಾಲದು ವೀಣಾ ಅವರೆ ನಿಮ್ಮ ಕೈಯಲ್ಲಿ ಜಾದೂ ಇದೆ ಧನ್ಯವಾದಗಳು ವೆಂಕಟಾಚಲಪತಿ ಗೋವಿಂದ ಗೋವಿಂದ

  • @sumavijaykumar1074
    @sumavijaykumar1074 18 днів тому

    Hare Srinivasa

  • @umadevi807
    @umadevi807 14 днів тому

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @user-dd9jq7mt6h
    @user-dd9jq7mt6h 19 днів тому

    ತುಂಬಾ ಸುಂದರವಾಗಿ ವಿವರಿಸಿದ್ದೀರಾ ಅಮ್ಮ 🙏🤗

  • @SunitaKurahatti-qg4nu
    @SunitaKurahatti-qg4nu 18 днів тому

    Shri Nevada padamavathi Jaya magalme neethi subhi magalme

  • @wv3217
    @wv3217 20 днів тому +2

    ವೀಣಾ ಅಮ್ಮ ಕಥೆ ತುಂಬಾ ಸುಂದರವಾಗಿತ್ತು .😊ನೀವು ಎಷ್ಟು ಚೆನ್ನಾಗಿ ಕಥೆಯನ್ನು ಅರ್ಥಪೂರ್ಣವಾಗಿ ಹೇಳ್ತೀರಾ ಅಂದ್ರೆ ನಮ್ಮ ಮನಸ್ಸು ಕೂಡ ಅಲ್ಲಿ ಕಲ್ಯಾಣೋತ್ಸವದಲ್ಲಿ ಭಾಗಿಯಾಗಿತ್ತು..😇😇 ನಿಮಗೆ ಅನಂತನಂತ ಧನ್ಯವಾದಗಳು🙏🏻🙏🏻 ಅಮ್ಮ ಕಥೆ ಹೇಳುವ ಈ ನಿಮ್ಮ ಕಲೆ ತುಂಬಾ ಚೆನ್ನಾಗಿದೆ ಅಮ್ಮ...👌👌

  • @rajeshwarinaganur7217
    @rajeshwarinaganur7217 19 днів тому

    🙏🏿🙏🏿🙏🏿🙏🏿🙏🏿

  • @jyosrijyosri8203
    @jyosrijyosri8203 20 днів тому +6

    ಕಲ್ಯಾಣ ಅಧ್ಬುತ ಗಾತ್ರಯ ಕಾಮಿತರ್ಥ ಪ್ರದಾಯಿನಿ ಶ್ರೀ ಮಧ್ ವೆಂಕಟನಾಥಯ ಶ್ರೀನಿವಾಸಯತೆ ಮಂಗಳಂ🙏🙏🙏

  • @radhakhandate2211
    @radhakhandate2211 20 днів тому +1

    ಹರೇ ಶ್ರೀನಿವಾಸ ಅಕ್ಕಾ

  • @ushagudi3601
    @ushagudi3601 19 днів тому

    🙏 🙏 🙏 🙏 🙏

  • @shruthishastri5705
    @shruthishastri5705 20 днів тому +2

    ಅಮ್ಮ ರಂಗೋಲಿ ತುಂಬಾ ಚೆನ್ನಾಗಿ ಹಾಕಿದ್ದೀರಿ
    ಶ್ರೀನಿವಾಸ ಕಲ್ಯಾಣೋತ್ಸವದ ಕಥೆ ತುಂಬಾ ಚೆನ್ನಾಗಿತ್ತು. ಧನ್ಯವಾದಗಳು

  • @nagarajnaga3345
    @nagarajnaga3345 7 днів тому

    ❤,🙏🙏🙏🙏🙏🌹🌹🌹

  • @bharulalli6927
    @bharulalli6927 18 днів тому

    amma namsttee❤❤❤❤

  • @jyotipurohit9046
    @jyotipurohit9046 17 днів тому

    ಧನ್ಯವಾದಗಳು

  • @asharaghu9659
    @asharaghu9659 15 днів тому

    ಹರಿ: ಓಂ ಮೇಡಂ 🙏🏿

  • @jyotijugali1211
    @jyotijugali1211 17 днів тому

    ಸೂಪರ ಅಮ್ಮ

  • @PraveenaShriyan
    @PraveenaShriyan 8 днів тому

    ಧನ್ಯವಾದಗಳು ಅಮ್ಮ 🙏🙏🙏

  • @shailanarasimhamurthy8319
    @shailanarasimhamurthy8319 19 днів тому

    We are blessed to hear this from you Didi thank you so much

  • @bharadwajl8838
    @bharadwajl8838 19 днів тому

    🙏🙏

  • @vinodashetty5449
    @vinodashetty5449 13 днів тому

    ಧನ್ಯವಾದಗಳು ಅಮ್ಮಾ 🙏🏻🙏🏻

  • @funwithkcb
    @funwithkcb 19 днів тому

    🙏🙏🙏🙏🙏🙏🙏🙏🙏

  • @poornima20099
    @poornima20099 20 днів тому +5

    ಅಮ್ಮ ಎಷ್ಟು ಸುಂದರವಾದ ರಂಗೋಲಿ ❤ ನಿಮ್ಮ ಧ್ವನಿಯಲ್ಲಿ ಕಥೆ ಕೆಳೋಕೆ ತುಂಬಾ ಇಷ್ಟ ಮನಸ್ಸಿಗೆ ಸಮಾಧಾನ ಆಗುತ್ತೆ ಅಮ್ಮ ಧನ್ಯವಾದ ನಿಮಗೆ 🙏 🙏

  • @chaithrachaithra7020
    @chaithrachaithra7020 20 днів тому

    🙏🙏🙏🙏

  • @vidyaabhi7620
    @vidyaabhi7620 19 днів тому

    🙏🙏🙏🙏🙏🙏

  • @preetiharish5845
    @preetiharish5845 18 днів тому

    Sastanga namaskaragalu amma🙏🙏🙏🙏🙏

  • @sudhan371
    @sudhan371 20 днів тому +4

    ಹರೇ ಶ್ರೀನಿವಾಸ 🙏🙏🙏🙏🙏
    ಶುಭ ಸಾಯಂಕಾಲದ ವಂದನೆಗಳು ವೀಣಾ ರವರೆ
    ಶ್ರೀನಿವಾಸ ದೇವರ ರಂಗೋಲಿ ತುಂಬಾ ಚೆನ್ನಾಗಿದೆ

  • @SunitaKurahatti-qg4nu
    @SunitaKurahatti-qg4nu 18 днів тому

    🙏🙏🙏🙏🙏

  • @manjunathadvg6072
    @manjunathadvg6072 19 днів тому

    🙏🙏🙏

  • @keshavprasad4225
    @keshavprasad4225 20 днів тому +1

    ಅಣ್ಣವ್ರ ಶ್ರೀನಿವಾಸ ಕಲ್ಯಾಣ ನೆನಪಾಯಿತು...❤

  • @nethragnreddyravikumar3103
    @nethragnreddyravikumar3103 18 днів тому

    🙏💐

  • @allinonewithcp6018
    @allinonewithcp6018 19 днів тому

    Thank you so much Amma nice narration 🙏🙏🙏🙏🙏🙏🙏🙏🙏🙏

  • @rashmiadaviswamimath9490
    @rashmiadaviswamimath9490 18 днів тому

    danyavaada amma🙏🙏

  • @varadarajkundar9076
    @varadarajkundar9076 20 днів тому

    🙏🏻💐

  • @shruthisreenivas5494
    @shruthisreenivas5494 20 днів тому +1

    ಅಮ್ಮ ಕಥೆ ಯನ್ನು ಕೇಳುತ್ತಾ ಇದ್ರೆ ಅದೇಷ್ಟೋ ಮನಸಿಗೆ ಸಂತೋಷ ಸಮಾಧಾನ ನೆಮ್ಮದಿ ನಿಮ್ಮ ಬಾಯಿಂದ ಕಥೆ ಕೇಳೋಕೆ ನಾವು ಅದೆಷ್ಟು ಪುಣ್ಯ ಮಾಡಿರಬೇಕು ಅಮ್ಮ 🙏💐🙏❤ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ 🙏💐❤

  • @user-dh7mg4wd2s
    @user-dh7mg4wd2s 20 днів тому +2

    Thankyou so much Amma super Amma thankyou so much Amma 🙏🙏🙏🙏🙏🎉🎉🎉🎉🎉❤❤❤❤❤💐💐💐💐💐🌹🌹🌹🌹🌹🌺🌺🌺🌺🌺👌👌👌👌👌

  • @mamathagirish9141
    @mamathagirish9141 19 днів тому

    🙏🙏🙏💐

  • @madhuridixit3313
    @madhuridixit3313 18 днів тому

    🙏🙏🙏🙏🙏❤❤

  • @naguMMsai7318
    @naguMMsai7318 19 днів тому

    Wow ತುಂಬಾ ಚೆನ್ನಾಗಿದೆ ಅಮ್ಮ ಕೆಳಕ್ಕೆ ತುಂಬಾ Kushi ಆಗುತ್ತೆ❤❤❤

  • @PavitraPavitra-dk2in
    @PavitraPavitra-dk2in 19 днів тому

    ರಂಗೋಲಿ ಚೆನ್ನಾಗಿದೆ.. ಕಥೆಕೂಡ ಚೆನ್ನಾಗಿತು ಅಮ್ಮ... ನಿಮ್ಮ ಬಾಯಿ ಇಂದ ಕಥೆ ಕೇಳ್ತಾದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ.. ಹಾಗೆ ಕಣ್ ಮುಂದೆ ಶ್ರೀನಿವಾಸದೇವ್ರ ಪದ್ಮಾವತಿ ದೇವ್ರ ಬಂದಹಾಗೆ aythu. ರಾಜಕುಮಾರ್ ಸಿನಿಮಾ ಇದೆಯಲ ಅದೇ ಚಿತ್ರಗಳು ಕಣ್ಮುಂದೆ ಬಂತು... ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ... 🙏🙏🙏

  • @lilavathikambalimath2067
    @lilavathikambalimath2067 19 днів тому

    Shtee shreenivasa. Badamavati ge. Shuba vagali mahalam. Lk kambali matha🙏🙏🙏🙏🙏🌹👍👌

  • @manojharsha81
    @manojharsha81 20 днів тому

    Harhe Harhe Sri Nivasa Govenda Venkathsa padmavati Namaha🌺🤍🌺🙏🏻🌺🙏🏻🌺🌺🙏🏻♥️🤍💛

  • @BharatiAmarappagol
    @BharatiAmarappagol 20 днів тому +3

    ಹರೇ. ಶ್ರೀನಿವಾಸ. 🙏🙏🙏🙏🙏

  • @santuwadekar1498
    @santuwadekar1498 20 днів тому +1

    ತುಂಬಾ ಚೆನ್ನಾಗಿ ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವದ ಕಥೆ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು ಅಮ್ಮ..🙏🏻🙏🏻

  • @anjanamanicn8044
    @anjanamanicn8044 18 днів тому

    ರಂಗೋಲಿ ತುಂಬಾ ಸುಂದರವಾಗಿ ಇದೆ. Hats off to your ರಂಗೋಲಿ
    ❤❤❤❤

  • @arunam.b1176
    @arunam.b1176 20 днів тому

    Thank you very much maaaaa

  • @shruthisreenivas5494
    @shruthisreenivas5494 20 днів тому

    ಶ್ರೀ ನಿವಾಸ ಕಲ್ಯಾಣೋತ್ಸವ ದ ಕಥೆ ತುಂಬಾ ಚನ್ನಾಗಿದೆ ಅಮ್ಮ ಹಾಗೆ ರಂಗೋಲಿಗಳು ಅಮ್ಮ 🙏🙏🌺💐🌺🙏🌺💐🌺🙏🌺💐🌺🌺🙏🌺🙏💐🙏

  • @yashodhakudagol6924
    @yashodhakudagol6924 20 днів тому +1

    ಅಮ್ಮ ಶರಣು ಶರಣಾರ್ಥಿ ರಂಗೋಲಿ ತುಂಬಾ ಚೆನ್ನಾಗಿದೆ ನಮ್ಮ ಮನೆಯಲ್ಲಿ ಮಂಗಳ ಕಾರ್ಯಗಳು ನೆರೆವೆರುವ ಹಾಗೆ ಆಶೀರ್ವಾದ ಮಾಡಿ 🙏🙏🙏🙏🙏🌹🌹🌹🌹🌹

  • @suchitrab.k2368
    @suchitrab.k2368 19 днів тому

    Thanks mam

  • @latavchoukimath8761
    @latavchoukimath8761 20 днів тому +1

    🙏🙏 ಕಣ್ಣಿಗೆ ಹಬ್ಬ ಅಕ್ಕಾ ಶಿ.ಸಾ. ನಮಸ್ಕಾರಗಳು ಅಕ್ಕ🙏🙏

  • @lavanya3019
    @lavanya3019 20 днів тому +1

    🙏🙏🙏ನಮಗೆ ಗೊತ್ತಿರಲಿಲ್ಲ ಅಮ್ಮ ಈ ಕಥೆ ತುಂಬಾ ಧನ್ಯವಾದಗಳು

  • @rekhabopaiah4366
    @rekhabopaiah4366 20 днів тому

    ಅಮ್ಮಾ ನಮಸ್ತೆ🙏🙏🙏🙏 ಅಮ್ಮಾ ಶ್ರೀ ವೆಂಕಟ್ರಮಣ ಗೋವಿಂದನ ರಂಗವಲ್ಲಿ ಬಹಳ ಸುಂದರವಾಗಿ ಮೂಡಿದೆ, ಭಗವಂತನ ಕಥೆಗಳು ಕೇಳ್ತಾ ಇದ್ದರೆ ಅಮ್ಮಾ ಮನಸ್ಸಿಗೆ ತುಂಬಾ ಸಂತೋಷ ವಾಗುತ್ತೇ, ನಿಮಗೆ ತುಂಬು ಹೃದಯದ ದಾನ್ಯವಾದಗಳು 🙏🙏🙏🙏

  • @jayalakshminagraj7814
    @jayalakshminagraj7814 19 днів тому

    Dhanyavadagalu veena akka

  • @anjalimaheshanjalimahesh6939
    @anjalimaheshanjalimahesh6939 16 днів тому

    Namaste amma. Hegiddiri.....? Nivu Laxmi sahith kuber puja helikotri. Aa pujena shuru madi. Dinadina tumba olledu aagide amma. Aadina maneyali tumba abhivrNimmage tumba abhivruddhi aagide.dhanyvad agalu amma. 🌹🙏🏻Nimmana nodbeku anta.

  • @kingofpop7765
    @kingofpop7765 20 днів тому +1

    ನಾಳೆ ಖಂಡಿತ ಪೂಜೆ ಮಾಡಿ ಆ ಕಥೆಯನ್ನ ಹೇಳ್ತೀವಿ ಅಮ್ಮಾ 😊ನಮಗೆಲ್ಲರಿಗೋಸ್ಕರ್ ಈ ಕಥೆಯನ್ನು ಹೇಳಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಮ್ಮಾ 🙏🙏🙏🙏🎉🎉

  • @user-it9mw4ol9n
    @user-it9mw4ol9n 20 днів тому

    🙏🏻🙏🏻ಹರೇ ಶ್ರೀನಿವಾಸ ಮುಂಜಾನೆಯ ಒಂದನೆಗಳು ಅಮ್ಮಾ ತುಂಬಾ ಚೆನ್ನಾಗಿ ಕಥೆ ಹೇಳಿದಿರಿ ಅಮ್ಮಾ ಶ್ರೀನಿವಾಸ ರಂಗೋಲಿ ತುಂಬಾ ಚೆನ್ನಾಗಿ ಇದೆ ಈ ಕಥೆ ಹೇಳಿದ್ದಕ್ಕೆ ಧನ್ಯವಾದಗಳು ಅಮ್ಮಾ ನಿಮ್ಮನ್ನ ಶ್ರೀನಿವಾಸ ಚೆನ್ನಾಗಿ ಇಡಲಿ ನಮಸ್ಕಾರ ಅಮ್ಮಾ

  • @sandhyaskulkarni6055
    @sandhyaskulkarni6055 19 днів тому

    Very beautiful Rangoli Veena avre
    nd nice kalyanotsava story presentation

  • @mukthasudhakar5934
    @mukthasudhakar5934 19 днів тому

    ಶ್ರೀ ನಿವಾಸ ಕಲ್ಯಾಣ ಕಥೆ ಕೇಳಿ ತುಂಬಾ ಸಂತೋಷವಾಯಿತು. ಅಮ್ಮ ನಿಮಗೆ ತುಂಬಾ ತುಂಬಾ ಧನ್ಯವಾದಗಳು.

  • @timmappagowda3692
    @timmappagowda3692 20 днів тому +1

    ಹರೇ ಶ್ರೀ‌ನಿವಾಸ್!

  • @vrh414
    @vrh414 20 днів тому

    Madam very nice narration, shani sade sati ge enu pariharagalu dayavittu tilsi madam
    Please

  • @rashmiadaviswamimath9490
    @rashmiadaviswamimath9490 18 днів тому

    rangoli tumba muddagide amma.🙏🙏

  • @pankajal6904
    @pankajal6904 20 днів тому +1

    🙏🙏🙏🙏🙏👌

  • @SantoshRB
    @SantoshRB 20 днів тому

    Jai shree Lakshmi Mata ki Jai 🌹🌹🌹 Om namo Bhagwate Vasudevaya namah 🌼🌼🌼🙏🙏🙏🙌🙌🙌🕉️🕉️🕉️🪷🪷🪷

  • @yallammayallama6335
    @yallammayallama6335 20 днів тому

    Om Shree shreenivasa padmavati kalyana namaha 🙏🙏🙏🙏🙏🌹🌹🌹🌹🌹

  • @arunashrinath6705
    @arunashrinath6705 19 днів тому

    ಜಯ ಮಂಗಳಂ ನಿತ್ಯ ಶುಭ ಮಂಗಳಂ...ತುಂಬಾ ಧನ್ಯವಾದಗಳು ಅಮ್ಮ ❤❤❤❤❤

  • @manojharsha81
    @manojharsha81 20 днів тому

    Amma Rangoli Supar 🌺🙏🏻🌺🙏🏻🌺🙏🏻♥️♥️♥️👌👌👌👍

  • @madhubangaru4796
    @madhubangaru4796 20 днів тому +1

    Om srinivasayaa namaha

  • @user-rv5eb6hq6x
    @user-rv5eb6hq6x 20 днів тому +1

    Amma astu chanda amma kathe amma nama kastakalili antha ashirvad madi. Amma ❤❤❤❤❤❤

  • @tusharbg2073
    @tusharbg2073 20 днів тому

    🥀 JaiMaShakthi 🙏
    🌹ಶುಭೋದಯ ಅಮ್ಮಾ 🌷☺️ ❤️ 😘

  • @mayurvardhann.6867
    @mayurvardhann.6867 19 днів тому

    🙏hare shreenivasa🙏🌻

  • @Bharati470
    @Bharati470 17 днів тому

    Jai shrinivaas maha vishnu

  • @savithabm2946
    @savithabm2946 20 днів тому

    ರಂಗೋಲಿಯಲ್ಲಿ ಶ್ರೀನಿವಾಸ 🙏 ತುಂಬಾ ಧನ್ಯವಾದಗಳು ವೀಣಾಮ್ಮ 🙏

  • @manjunathnadumane1305
    @manjunathnadumane1305 20 днів тому

    ತುಂಬಾ ಚೆನ್ನಾಗಿ ಕಲ್ಯಾಣ್ ಉತ್ಸವದ ಕಥೆ ಹೇಳಿದಿರಿ ತುಂಬಾ ಸಂತೋಷ ಆಯ್ತು ಅಮ್ಮ 🙏🏻🙏🏻🙏🏻🙏🏻🙏🏻

  • @sujatadeshpande1679
    @sujatadeshpande1679 19 днів тому

    ತುಂಬಾ ಚೆನ್ನಾಗಿ ರಂಗೋಲಿ ಹಾಕಿದ್ದೀರಿ

  • @PadmajaDeshpande-xb1dy
    @PadmajaDeshpande-xb1dy 20 днів тому

    🙏🙏👌👌tumba chennagi kathe helidri veena avre.Rangli👌👌👌

  • @AnjaneyaH-nb4wy
    @AnjaneyaH-nb4wy 20 днів тому

    🙏🙏ಅಮ್ಮ ನಮ್ಮ ಮನೆಯಲ್ಲಿ ಶುಭ ಕಾರ್ಯವೂ ನಡೆಯಲಿ ಎಂದು ಆಶಿ೯ವಾದ ಮಾಡಿ 🙏🙏💐💐

  • @renukadevi4224
    @renukadevi4224 20 днів тому

    Namaste gurubhyonamaha kannu kivi eradukathe keli pavana vayithu

  • @premaravi7160
    @premaravi7160 20 днів тому

    ತಾಯಿ ನಿಮ್ಮ ರಂಗೋಲಿಯುತುಂಬಾ ಸುಂದರವಳವಾಗಿದೆ ,ನಿಮಗೆ ಧನ್ಯವಾದಗಳು

  • @shruthisreenivas5494
    @shruthisreenivas5494 20 днів тому

    ನಮಸ್ತೆ ಅಮ್ಮ 🙏 ಓಕೆ ಅಮ್ಮ ಬಹಳಷ್ಟು ಮನಸಿಗೆ ಸಂತೋಷ ವಾಯಿತು 🪷ನಿಮ್ಮ ಚರಣ🪷🪷ಕಮಲಗಳಿಗೆ 🙏 ನನ್ನ ಅನಂತ 🪷🪷🙏ಕೋಟಿ 🙏🪷🙏ನಮಸ್ಕಾರಗಳು 🪷ವೀಣಾ ಅಮ್ಮ 🪷🙏👏👏👏👏👏👏👌👌👌👌👌👌👌👌👌👌

  • @Vinutha.M.H
    @Vinutha.M.H 20 днів тому +1

    🙏🙏ಅಮ್ಮ

  • @sumababu4393
    @sumababu4393 20 днів тому

    ರಂಗೋಲಿ ತುಂಬಾ ಚನ್ನಾಗಿದೆ 👌🏻👌🏻
    ಕಥೆ ಚನ್ನಾಗ್ಗಿತ್ತು 🙏🏻🙏🏻

  • @pinkykammar1463
    @pinkykammar1463 19 днів тому

    ಅಮ್ಮ ರಂಗೋಲಿ ನೋಡಲು ಎರಡು ಕಣ್ಣು ಸಾಲದು 🙏🏼 ನಿಮ್ಮ ಮನಸ್ಸು ಕೂಡ ಅಷ್ಟೇ ಮೃದುವಾಗಿದೆ ಒಮ್ಮೆ ನಿಮ್ಮನ್ನು ನೋಡಬೇಕು🙏🏼🙏🏼🙏🏼🙏🏼🙏🏼🙏🏼 ರಂಗೋಲಿಯಿಂದ ನನ್ನ ಮನಸ್ಸು ತುಂಬಿ ಬಂದಿತು

  • @parimalasc1027
    @parimalasc1027 20 днів тому

    ಅಮ್ಮ ನೀವು ತುಂಬಾ ಚೆನ್ನಾಗಿ ರಂಗೋಲಿ ಹಾಕುತ್ತೀರಿ 😊ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವದ ಕಥೆ ಬಹಳ ಸುಂದರವಾಗಿ ಹೇಳಿದ್ದೀರಿ 🙏 ಧನ್ಯವಾದಗಳು 🙏

  • @DeepaDeepa-xx8jk
    @DeepaDeepa-xx8jk 19 днів тому

    ಅಮ್ಮ ನಿಮ್ಮನ್ನು ಪಡೆದ ನಾವೇ ಧನ್ಯರು.. 🙏🏻🙏🏻🙏🏻🙏🏻

  • @sujathadeshpande9329
    @sujathadeshpande9329 20 днів тому +1

    ಹರೇ ಶ್ರೀನಿವಾಸ..🙏

  • @anilajagadeesh2491
    @anilajagadeesh2491 20 днів тому

    🙏🙏 Amma tumbadanyavadaglu Amma rangoli tumba chanagide 🙏🙏

  • @LakshmiVKannadaofficial
    @LakshmiVKannadaofficial 20 днів тому +2

    🙏🏼amma

  • @amrutha_809
    @amrutha_809 19 днів тому

    👌🙏🙏🙏🙏🙏💐ತುಂಬು ಹೃದಯದ ದ ನ್ಯವಾದಗಳು ಅಮ್ಮ🤝

  • @hemanthak8826
    @hemanthak8826 20 днів тому

    ಅಮ್ಮ ರಂಗೋಲಿ ತುಂಬಾ ಚನ್ನಾಗಿ ಹಾಕಿದ್ದೀರಾ 👌❤️🙏ಕಥೆ ತುಂಬಾ ಸುಂದರ ವಾಗಿ ಹೇಳಿದ್ದಿರಿ 🙏🙏

  • @aratideshpande109
    @aratideshpande109 19 днів тому

    Mam srinivasan rangoli bahala muddagide.....,. thank you for sharing such a beautiful video....

  • @AnjaneyaH-nb4wy
    @AnjaneyaH-nb4wy 20 днів тому

    🙏🙏ಅಮ್ಮ ರಂಗೋಲಿ ತುಂಬಾ ಚೆನ್ನಾಗಿದೆ 🙏🙏💐💐

  • @vishwak6176
    @vishwak6176 20 днів тому

    ರಂಗೋಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಮ್ಮ

  • @laxmigaddigoudra369
    @laxmigaddigoudra369 20 днів тому

    ನಮಸ್ಕಾರ ಅಮ್ಮ ಎಷ್ಟು ಸುಂದರವಾಗಿ ಹೇಳಿದ್ದೀರಾ ಅಮ್ಮ ಮತ್ತು ರಂಗೋಲಿ ತುಂಬಾ ಸುಂದರವಾಗಿದೆ ನಾವು ಪುಣ್ಯ ಮಾಡಿದ್ದೇವೆ ಅಮ್ಮ ಈ ತರ ರಂಗೋಲಿ ನಾನು ತಿರುಪತಿಗೆ ಹೋಗಿಲ್ಲ ಅಮ್ಮ ಅವರು ನನ್ನ ಯಾವಾಗ ಅವರ ದರುಶನಕ್ಕೆ ಕರೆಯುತ್ತಾರೆ ಗೊತ್ತಿಲ್ಲ ಆದ್ರೆ ನನಗೆ ಇವತ್ತು ತುಂಬಾ ಆನಂದವಾಯಿತು ಅಮ್ಮ ನೀವು ಹಾಕಿದ ರಂಗೋಲಿಯಲ್ಲಿ ನಾನು ತಿರುಪತಿ ನೋಡಿದ ಹಾಗೆ ತುಂಬಾ ಅಂದ್ರೆ ತುಂಬಾ ಅನುಭವವಾಗಿ ತುಂಬಾ ಸಂತೋಷ ಅಮ್ಮ❤❤

  • @pushpak2916
    @pushpak2916 20 днів тому

    Hari om sahodari rangoli tumba sundaravagi hakiddira sakshat timmappana darshana madidasthu santoshavayitu mattomme rangolige ananta koti pranamagalu 🙏🙏🌺🌺

  • @MangalaPuttu
    @MangalaPuttu 20 днів тому +1

    ತಿರುಪತಿ ಶ್ರೀನಿವಾಸ ನನ್ನೇ ನೋಡಿದಂತಾಯಿತು❤

  • @user-zi4db9fv1y
    @user-zi4db9fv1y 20 днів тому

    Dhanyavadagalondige koti koti vandanegalu amma nimage

  • @rakeshnidagundi1977
    @rakeshnidagundi1977 20 днів тому

    ಭಗವಂತನ ಸುಂದರವಾದ ಕಥೆ ತುಂಬಾ ಸೊಗಸಾಗಿದೆ.ˌ..