ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ। (ಮಂಕುತಿಮ್ಮನ ಕಗ್ಗ)

Поділитися
Вставка
  • Опубліковано 3 жов 2024
  • ಎಳೆಯ ಸಸಿಯಲ್ಲಿ ದಿನದಿನವೂ ಹೊಸ ಚಿಗುರು ಬರುವಂತೆ, ನೆಲದ ಚಿಲುಮೆಯಲಿ ತಿಳಿನೀರು ನಿಲ್ಲದೆ ಉಕ್ಕುವಂತೆ, ಎಳೆಯ ಮಕ್ಕಳಲ್ಲಿ ಅವರು ಬೆಳೆದಂತೆ ತಿಳಿವು ಚಿಗುರಿ ಬೆಳೆಯುತ್ತದೆ. ಇದೇ ಭೂಮಿಯೊಳಗೆ ಒಂದು ಸೊಗಸು.
    ಹೀಗೆ ಮಗುವಿನಲ್ಲಿ ಹಂತಹಂತವಾಗಿ, ಅರಿವಿನ ಮೊಳಕೆಯೊಡೆದು. ಮುಂದೆ ಸಮೃದ್ಧವಾಗುತ್ತದೆ. ಕಗ್ಗ ಇದನ್ನು ನಿಸರ್ಗಕ್ಕೆ ಹೋಲಿಸುತ್ತದೆ. ಮನೆಯ ಮುಂದೆ ನೆಟ್ಟ ಪುಟ್ಟ ಸಸಿ ದಿನ ಕಳೆದಂತೆ ಹೊಸ ಚಿಗುರುಗಳನ್ನು ಬಿಡುತ್ತ ಬೆಳೆದು ದೊಡ್ಡ ಮರವಾಗುತ್ತದೆ. ಅದರ ಬದಲಾವಣೆ ನಿತ್ಯದ್ದು, ನಿರಂತರವಾದದ್ದು. ಅಂತೆಯೇ ನೆಲದಲ್ಲಿ ಉಕ್ಕುವ ಜಲಧಾರೆ ಕೂಡ. ಜಲಮೂಲದ ಹತ್ತಿರವಿರುವ ನೀರಿನ ಊಟೆ ಸದಾಕಾಲ ಉಕ್ಕುವಂತೆ, ನಿಸರ್ಗದಲ್ಲಿ, ಮನುಷ್ಯ ಜೀವನದಲ್ಲಿ, ಬದಲಾವಣೆ ಅನಿವಾರ್ಯ, ನಿರಂತರ ಮತ್ತು ಅದೇ ಈ ಭೂಮಿಯಲ್ಲಿ ನಾವು ಕಾಣುವ ಸೊಗಸು.
    ಕಗ್ಗ:
    ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ ।
    ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ ॥
    ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು ।
    ಇಳೆಯೊಳಗದೊಂದು ಸೊಗ - ಮಂಕುತಿಮ್ಮ ॥

КОМЕНТАРІ •