4K Motion : ಅಜ್ಜಿಯ ಜಂಬ [ AJJIYA JAMBA ] | Kannada short story for KIDS

Поділитися
Вставка
  • Опубліковано 9 лис 2024
  • "Remember that story from back in 2000's? The one about Grandma, her proud little hen, and how she learned that the sun rises even without her 'kokoko'?" 🌅🐔
    ಹಿಂದೆ ಸೋಮನಹಳ್ಳಿ ಎಂಬ ಊರು. ಅಲ್ಲಿ ಅಜ್ಜಿ ಇದ್ದಳು. ಅವಳ ಬಳಿ ಒಂದು ಕೋಳಿ ಇತ್ತು. ಪ್ರತಿನಿತ್ಯ ಆ ಕೋಳಿ ಸೂರ್ಯೋದಯವಾಗುತ್ತಿದ್ದಂತೆಯೇ ಕೊಕ್ಕೋಕೋ ಎಂದು ಕೂಗುತ್ತಿತ್ತು. ಗಟ್ಟಿಯಾಗಿ ಕೂಗುವ ಮೂಲಕ ಹಳ್ಳಿಯ ಜನರನ್ನು ಎಬ್ಬಿಸುತ್ತಿತ್ತು. ಜನ ಕೋಳಿ ಕೂಗಿಗೆ ಎದ್ದು ತಮ್ಮ ತಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗುತ್ತಿದ್ದರು. ಅಜ್ಜಿಯ ಗುಡಿಸಲಲ್ಲಿ ಒಂದು ಅಗ್ಗಿಷ್ಟಿಕೆ ಇತ್ತು. ಅಲ್ಲಿಂದ ಒಂದು ತುಂಡು ಕೆಂಡವನ್ನು ಮನೆಗೆ ಒಯ್ಯುತ್ತಿದ್ದರು. ಅದರಿಂದ ಒಲೆ ಹೊತ್ತಿಸಿ ಅಡುಗೆ ಮಾಡಿಕೊಳ್ಳುತ್ತಿದ್ದರು. ಕೆಲವು ದಿನಗಳಾದವು. ಒಂದು ದಿನ ಅಜ್ಜಿ, ಬೆಳಗಾಗುವುದು ತನ್ನ ಕೋಳಿಯಿಂದ. ಜನರು ಅಡುಗೆ ಮಾಡಿ ತಿನ್ನುವುದೂ ತನ್ನ ಅಗ್ಗಿಷ್ಟಿಕೆಯ ಬೆಂಕಿಯಿಂದ ಎಂದು ತಿಳಿದಳು. ಈ ವಿಚಾರದಿಂದ ಅವಳಲ್ಲಿ ಅಹಂಕಾರ ಮೂಡಿತು. ಅದರಿಂದ ಜಂಬ ಹೆಚ್ಚಿತು. ಕೋಳಿ ಇಲ್ಲದೆ ಇವರೆಲ್ಲ ಹೇಗೆ ಏಳುತ್ತಾರೆ? ಅಗ್ಗಿಷ್ಟಿಕೆ ಇಲ್ಲದೆ ಹೇಗೆ ಅಡುಗೆ ಮಾಡಿಕೊಳ್ಳುತ್ತಾರೆ? ನೋಡೋಣ ಎಂದುಕೊಂಡಳು. ಅಜ್ಜಿ ತನ್ನ ಕೋಳಿ ಹಾಗೂ ಅಗ್ಗಿಷ್ಟಿಕೆಯೊಡನೆ ಪಕ್ಕದ ಕಾಡಿಗೆ ಹೋದಳು. ಮರುದಿನ, ಎಂದಿನಂತೆ ಬೆಳಗಾಯಿತು. ಜನರೆಲ್ಲ ತಮ್ಮ ಪಾಡಿಗೆ ತಾವು ಎದ್ದರು. ಅಜ್ಜಿ ಗುಡಿಸಲಿಗೆ ಹೋದರು. ಅಜ್ಜಿ ಇಲ್ಲದುದನ್ನು ಕಂಡು ಪಕ್ಕದೂರಿನಿಂದ ಬೆಂಕಿ ತಂದು ಅಡುಗೆ ಮಾಡಿಕೊಂಡರು. ಹೀಗೆ ಕೆಲವು ದಿನ ಕಳೆದವು. ಅಜ್ಜಿ ಕಾಡಿನಲ್ಲಿಯೇ ಉಳಿದಿದ್ದಳು. ಒಂದು ದಿನ ಸೌದೆ ಕಡಿಯಲೆಂದು ಅಲ್ಲಿಗೆ ಹಳ್ಳಿಯವನು ಬಂದ. ಅಜ್ಜಿಯನ್ನು ಕಂಡು 'ಏನಜ್ಜಿ, ಇಲ್ಲಿದ್ದೀಯಾ? ಊರು ಸಾಕಾಯ್ತಾ?' ಎಂದು ಕೇಳಿದ. ಅಜ್ಜಿ, ಏನಪ್ಪಾ, ಪ್ರತಿದಿನ ಬೆಳಗಾಗುತ್ತಿದೆಯೇ? ನೀವೆಲ್ಲ ಊಟ ಮಾಡುತ್ತಿದ್ದೀರಾ? ಎಂದು ಕೇಳಿದಳು. ಹಳ್ಳಿಯವನಿಗೆ ನಗು ಬಂತು. 'ಅಜ್ಜಿ, ನಿನ್ನ ಕೋಳಿ ಕೊಕ್ಕೋಕೋ ಅಂತ ಕೂಗದಿದ್ದರೆ ಬೆಳಗಾಗುವುದಿಲ್ಲ ಅಂದುಕೊಂಡಿದ್ದೀಯಾ? ದಿನಾ ಬೆಳಗಾಗುವುದು ಸೂರ್ಯೋದಯವಾಗುವುದರಿಂದ! ತಿಳಿಯಿತೆ? ಬೆಂಕಿ ಸಿಗಲಿಲ್ಲವೆಂದು ನಾವೆಲ್ಲ ಉಪವಾಸ ಇದ್ದು ಬಿಡ್ತೀವಾ? ನಡಿನಡಿ ಊರಿಗೆ'" ಎಂದ. ಅಜ್ಜಿಯ ಜಂಬ ಕರಗಿತು. ತನ್ನ ವರ್ತನೆಗೆ ನಾಚಿಕೊಂಡಳು. ಅಗ್ಗಿಷ್ಟಿಕೆ ಹಿಡಿದು, ಕೋಳಿಯನ್ನು ಕಂಕುಳಲ್ಲಿ ಇಟ್ಟುಕೊಂಡು ಊರಿಗೆ ಹಿಂದಿರುಗಿದಳು. ಎಲ್ಲರಂತೆ ಬಾಳತೊಡಗಿದಳು.
    Once, there was a village called Somanahalli where an old grandmother lived. She had a hen that would crow loudly at sunrise every day, waking up the villagers with its “kokoko” sound. People would wake up to the crowing of the hen and begin their daily routines. The grandmother’s hut also had a fire pit, from which she would take a piece of burning ember to light the stove for cooking.
    Days passed. One day, the grandmother realized that her hen was responsible for waking the villagers every morning, and the fire from her ember helped them cook their meals. This thought made her feel proud, and soon, arrogance began to grow in her heart. She thought, "How will they wake up without my hen? And how will they cook without my fire pit? Let’s see." So, she decided to take her hen and ember and head into the nearby forest.
    The next morning, as usual, dawn arrived. The villagers woke up on their own and, noticing the grandmother was not in her hut, borrowed fire from the neighboring village and went on with their cooking. Days went by, and the grandmother remained in the forest. One day, a villager came to the forest to cut firewood and saw her there. He asked, "Grandma, are you here? Did you leave the village?"
    The grandmother asked, "Tell me, does the sun rise every day? Are you all still eating your meals?" The villager smiled and replied, "Grandma, did you really think that without your hen’s crowing, the sun wouldn’t rise? The sun rises on its own! And if we don’t have fire from you, do you think we’ll starve? Come on, let’s go back to the village."
    The grandmother’s arrogance melted away, and she felt ashamed of her behavior. She took her ember, placed the hen under her arm, and returned to the village. She resumed living her life like everyone else, humbled and wiser.

КОМЕНТАРІ •