ನಮ್ಮ ಬೇರುಗಳು ಸಭೆ ೧೯೨: ಜ್ಞಾನ-ವಿಜ್ಞಾನ-ಯಾನ | ನಿರೂಪಣೆ: ಶ್ರೀಮತೀ ಪ್ರತಿಭಾ ಕಾವ್ಯಶ್ರೀ

Поділитися
Вставка
  • Опубліковано 4 жов 2024
  • ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ।
    ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ|
    ಜ್ಞಾನಕ್ಕೆ ಸಮನಾದುದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು ಭಗವದ್ಗೀತೆಯೇ ಹೇಳುತ್ತದೆ.
    ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ |
    ಜ್ಞಾನಂ ವಿಜ್ಞಾನಸಹಿತಂ ಯಜ್ಞಾತ್ವಾ ಮೋಕ್ಷ್ಯಸೇಯಶುಭಾತ್ ।।
    ಅಂತೆಯೇ ಭಗವದ್ಗೀತೆಯ ಇನ್ನೊಂದು ಶ್ಲೋಕದಲ್ಲಿ ವಿಜ್ಞಾನ ಎಂದರೆ ವಿಶೇಷ ರೂಪೇಣ ಜ್ಞಾನಂ ಅಥವಾ ಸ್ವಯಂ ಅನುಭವ ಜ್ಞಾನ ಎಂದು ಹೇಳಲ್ಪಡುತ್ತದೆ ·
    ಭಾರತೀಯ ಜ್ಞಾನ ಪರಂಪರೆಯ ಆಳವಾದ ಅಧ್ಯಯನ, ಭೌತಿಕ ಲೋಕದಲ್ಲಿನ ವಿಜ್ಞಾನದ ಆವಿಷ್ಕಾರಗಳು, ಇವೆಲ್ಲವನ್ನೂ ಸೂಕ್ಶ್ಮಾತಿ ಸೂಕ್ಷ್ಮವಾಗಿ ಗಮನಿಸಿ, ತಮ್ಮ ಕಲ್ಪನೆಯ ಮೂಸೆಯೊಳಗೆ ಹದಗೊಳಿಸಿ ಸತ್ವಯುತ ಬರಹದಿಂದ ಕನ್ನಡಿಗರಿಗೆ ಉಣಬಡಿಸುತ್ತಿರುವ ಶ್ರೀಯುತ ಎಸ್. ಎಲ್. ಭೈರಪ್ಪನವರ ಒಂದು ಕೃತಿ "ಯಾನ".
    ಈ ಕುರಿತು ನಮ್ಮ ಪಯಣ 'ಜ್ಞಾನ ವಿಜ್ಞಾನ ಯಾನ' ನಮ್ಮ ಬೇರುಗಳ ವತಿಯಿಂದ. ನೀವು ಬನ್ನಿ ಭಾಗವಹಿಸಿ. ಒಂದು ಸುಂದರ ಅನುಭವ ನಿಮ್ಮದಾಗಿಸಿಕೊಳ್ಳಿ.
    ದಿನಾಂಕ: 28 ಸೆಪ್ಟೆಂಬರ್ 2024, ಶನಿವಾರ
    ಸಮಯ: ಅಪರಾಹ್ನ 2.45-4.00
    #kannadaclub #kannada #slbhyrappa #yaana #bookreview #nasa #science #sciencefiction #astronomy #nammaberugalu

КОМЕНТАРІ •