Sindagi By Election : ಹೇಗಿದೆ ಅಖಾಡ? ಯಾರಿಗೆ ವಿಜಯ ಮಾಲೆ? | ಸಿಂದಗಿ ಉಪಚುನಾವಣೆ | Vijay Karnataka

Поділитися
Вставка
  • Опубліковано 7 вер 2024
  • ಸಿಂದಗಿ ವಿಧಾನಸಭಾ ಉಪಚುನಾವಣೆ : ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಂದಗಿ ಕ್ಷೇತ್ರವೂ ಒಂದು. ಭೀಮಾತೀರದ ಗ್ರಾಮಗಳನ್ನು ಹೊಂದಿರುವ ಸಿಂದಗಿಯಲ್ಲಿ ಇದೇ ಮೊದಲ ಬಾರಿಗೆ ಬೈ ಎಲೆಕ್ಷನ್ ಎದುರಾಗಿದೆ. ಜೆಡಿಎಸ್‌ ಹಿರಿಯ ನಾಯಕ ಮಾಜಿ ಸಚಿವ ಎಂಸಿ ಮನಗೂಳಿ ಅವರ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಅಷ್ಟಕ್ಕೂ ಈ ಕ್ಷೇತ್ರದಲ್ಲಿ ರಣ ಕಣ ಹೇಗಿದೆ..? ಪಕ್ಷಗಳ ಬಲಾಬಲ ಹೇಗಿದೆ..? ಜಾತಿವಾರ ಲೆಕ್ಕಾಚಾರ ಏನು..? ಹೇಗಿದೆ ಮತದಾರನ ಮನದಾಳ.. ಸಿಂದಗಿ ರಣಕಣದ ಕಂಪ್ಲೀಟ್‌ ಚಿತ್ರಣ ನಿಮ್ಮ ಮುಂದೆ.
    ಒಂದು ಕಾಲದಲ್ಲಿ ಕಾಂಗ್ರೆಸ್‌ನ ಅಭೇದ್ಯ ಕೋಟೆ. ಆದ್ರೆ ಕಳೆದೆರಡು ದಶಕಳಿಂದ ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆ ನಡೀತಾ ಇದೆ. ಈವರೆಗೆ ಇಲ್ಲಿ 14 ಚುನಾವಣೆಗಳು ನಡೆದಿದ್ದು, ಎಂಟು ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ, ಬಿಜೆಪಿ ಹಾಗೂ ಜೆಡಿಎಸ್‌ ತಲಾ ಮೂರು ಬಾರಿ ವಿಜಯ ಪತಾಕೆ ಹಾರಿಸಿದೆ. ಒಮ್ಮೆ ಜನತಾ ಪಾರ್ಟಿಗೆ ಇಲ್ಲಿನ ಮತದಾರ ಅವಕಾಶ ನೀಡಿದ್ದ. ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ನೇರ ಕದನ ನಡೆಯುತ್ತಿದ್ದು, ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ಜಾರಿದೆ. ಆದರೆ ಈ ಬಾರಿಯ ಉಪ ಚುನಾವಣೆಯಲ್ಲಿ ಮೃತ ಮನಗೂಳಿ ಅವರ ಪುತ್ರ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. Sindagi by election : By election in Sindagi assembly constituency is happening on October 30. The by poll is happening due to the demise of JDS leader MC Managuli. It was once upon a time strong fold of Congress, which won record 8 times. BJP and JDS have won 3 times each. Son of Managuli is contesting with Congress ticket. Here is an analysis by Vijay Karnataka Online. The election result will be announced on November 2.
    #SindagiByElection #KarnatakaByElection #KarnatakaByElection2021
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 70