Full ಕನ್ನಡ ವರ್ಣಮಾಲೆ Kannada Varnamale Alphabets, Swaragalu, Vyanjanagalu, Vargiya, Avargiya Vyanjana

Поділитися
Вставка
  • Опубліковано 18 чер 2023
  • ಕನ್ನಡ ವರ್ಣಮಾಲೆ
    ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಕರೆಯುವರುಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗಿಸಬೇಕಾದರೆ ಆ ಭಾಷೆಯ ವ್ಯಾಕರಣದ ಪರಿಚಯ ಅತ್ಯಾವಶ್ಯಕ.ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು.
    What is Kannada ಕನ್ನಡ ವರ್ಣಮಾಲೆ ( #KannadaAlphabets ) or #KannadaVarnamale ?
    Kannada varnamale is the list of Kannada alphabets or letters or words.
    #KannadaKagunita
    ಕನ್ನಡ ಭಾಷೆಯಲ್ಲಿರುವ ಮೂಲಾಕ್ಷರಗಳನ್ನು ಕನ್ನಡ ವರ್ಣಮಾಲೆ ಎಂದು ಕರೆಯುತ್ತಾರೆ.
    How many letters are there in Kannada?
    In ಕನ್ನಡ ವರ್ಣಮಾಲೆ ( Kannada Alphabets ) Kannada Varnamale Consists of 49 letters or words.
    ಸ್ವರಗಳು - 13
    ಯೋಗವಾಹಗಳು - 2
    ವ್ಯಂಜನಗಳು - 34
    The Kannada alphabet has 49 letters,
    Kannada Varnamale (ಕನ್ನಡ ವರ್ಣಮಾಲೆ) :
    ಕನ್ನಡ ವರ್ಣಮಾಲೆಯಲ್ಲಿ ೪೯ (49 ) ಅಕ್ಷರಗಳಿವೆ.
    ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ
    ಕ ಖ ಗ ಘ ಙ
    ಚ ಛ ಜ ಝ ಞ
    ಟ ಠ ಡ ಢ ಣ
    ತ ಥ ದ ಧ ನ
    ಪ ಫ ಬ ಭ ಮ
    ಯ ರ ಲ ವ ಶ ಷ ಸ ಹ ಳ
    ಸ್ವರಗಳು (Vowels) :
    ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.
    ಅವು ಯಾವುವೆಂದರೆ,
    ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ
    ಸ್ವರಗಳಲ್ಲಿ ಎರಡು ವಿಧ :
    ಹೃಸ್ವ ಸ್ವರಗಳು - 6
    ದೀರ್ಘ ಸ್ವರಗಳು. - 7
    ಪ್ಲುತ ಸ್ವರ
    ಹೃಸ್ವ ಸ್ವರ :
    ಹೃಸ್ವ ಸ್ವರಗಳು ಆರು. 6
    ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಅಕ್ಷರಗಳನ್ನು ಹೃಸ್ವ ಸ್ವರಗಳೆಂದು ಕರೆಯುವರು.
    ಅ,ಇ ಉ,ಋ,ಎ,ಒ
    ದೀರ್ಘ ಸ್ವರ :
    ದೀರ್ಘ ಸ್ವರಗಳು 7
    ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಅಕ್ಷರಗಳನ್ನು ದೀರ್ಘ ಸ್ವರಗಳೆಂದು ಕರೆಯುವರು.
    ಆ,ಈ,ಊ,ಏ.ಐ.ಓ,ಔ
    ಪ್ಲುತ ಸ್ವರ:
    ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.
    ಉದಾ: ಅಕ್ಕಾ, ಅಮ್ಮಾ
    ಕ್+ಅ=ಕ
    ಮ್+ಅ=ಮ
    ಯ್+ಅ=ಯ
    ಯೋಗವಾಹಗಳು :
    ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಛರಿಸಲ್ಪಡುವ ಅಕ್ಷರ ಅಥವಾ ವರ್ಣಗಳನ್ನು ಯೋಗವಾಹಗಳು ಎಂದು ಕರೆಯುತ್ತಾರೆ.
    ಅಂ(ಅನುಸ್ವಾರ)
    ಅಃ(ವಿಸರ್ಗ)
    ಅನುಸ್ವಾರ: ಯಾವುದೇ ಒಂದು ಅಕ್ಷರ ತನ್ನ ಜೊತೆ ಒಂದು ಬಿಂದುವಿನನ್ನು ಹೊಂದಿದ್ದರೇ ಅದನ್ನು ಅನುಸ್ವಾರ ಎಂದು ಕರೆಯುವರು.
    ಉದಾಹರಣೆಗೆ : ಅಂಗ, ಒಂಟೆ, ಅಂಬ, ಅಂದ, ತಂಗಿ ಹಾಗೂ ಇತ್ಯಾದಿ.
    ವಿಸರ್ಗ: ಒಂದು ಅಕ್ಷರವು ಒಂದರ ಮೇಲೊಂದು ಎರಡು ಬಿಂದುಗಳನ್ನು ಹೊಂದಿದ್ದರೇ ಅದನ್ನು ವಿಸರ್ಗ ಎನ್ನುವರು.
    ಉದಾಹರಣೆ: ಬಹುಶಃ, ದುಃಖ, ಅಂತಃಕರಣ, ಇತ್ಯಾದಿ.
    ವ್ಯಂಜನಗಳು :
    ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) 34 ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು.
    ಕ ಖ ಗ ಘ ಙ
    ಚ ಛ ಜ ಝ ಞ
    ಟ ಠ ಡ ಢ ಣ
    ತ ಥ ದ ಧ ನ
    ಪ ಫ ಬ ಭ ಮ
    ಯ ರ ಲ ವ ಶ ಷ ಸ ಹ ಳ
    ವ್ಯಂಜನಗಳಲ್ಲಿ ಎರಡು ವಿಧ :
    ವರ್ಗೀಯ ವ್ಯಂಜನಗಳು - 25
    ಅವರ್ಗೀಯ ವ್ಯಂಜನಗಳು - 9
    ವರ್ಗೀಯ ವ್ಯಂಜನಗಳು (Grouped Consonants) :
    ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) 25 ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ,
    ಕ-ವರ್ಗ = ಕ, ಖ, ಗ, ಘ, ಙ.
    ಚ-ವರ್ಗ = ಚ, ಛ, ಜ, ಝ, ಞ.
    ಟ-ವರ್ಗ = ಟ, ಠ, ಡ, ಢ, ಣ.
    ತ-ವರ್ಗ = ತ, ಥ, ದ, ಧ, ನ.
    ಪ-ವರ್ಗ= ಪ, ಫ, ಬ, ಭ, ಮ.
    ವರ್ಗೀಯ ವ್ಯಂಜನದ ವಿಧಗಳು :
    ಅಲ್ಪ ಪ್ರಾಣಗಳು - 10
    ಮಹಾಪ್ರಾಣಗಳು - 10
    ಅನುನಾಸಿಕಗಳು - 5
    ಅಲ್ಪ ಪ್ರಾಣಗಳು: ಕಡಿಮೆ ಉಸಿರಿನಿಂದ ಉಚ್ಛರಿಸಲ್ಪಡುವ ವ್ಯಂಜನಗಳಿಗೆ ಅಲ್ಪ ಪ್ರಾಣಗಳು ಎಂದು ಕರೆಯುತ್ತಾರೆ.
    ಇವು ಒಟ್ಟು ಸಂಖ್ಯೆಯಲ್ಲಿ ೧೦ (10 ) ಇವೆ.
    ಕ,ಚ,ಟ,ತ,ಪ
    ಗ,ಜ,ಡ,ದ,ಬ
    ಮಹಾಪ್ರಾಣಗಳು: ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಾಕ್ಷರಗಳಿಗೆ ಮಹಾಪ್ರಾಣಗಳು ಎಂದು ಕರೆಯುತ್ತಾರೆ. ಇವು ಸಂಖ್ಯೆಯಲ್ಲಿ ೧೦ (10 ) ಇವೆ,
    ಖ,ಛ,ಠ,ಥ,ಫ
    ಘ,ಝ,ಢ,ಧ,ಭ
    ಅನುನಾಸಿಕಗಳು: ಇವು ಕನ್ನಡದಲ್ಲಿ ಒಟ್ಟು ೫ (5) ಇದ್ದು, ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುತ್ತವೆ.
    ಙ, ಞ, ಣ, ನ, ಮ
    ಅವರ್ಗೀಯ ವ್ಯಂಜನಗಳು (Miscellaneous Consonants) :
    ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು (9) ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ,
    ಯ ರ ಲ ವ ಶ ಷ ಸ ಹ ಳ

КОМЕНТАРІ • 36

  • @user-ph3ek4kq4o
    @user-ph3ek4kq4o 6 місяців тому +2

    I'm from Puducheery retired engineer. After my retirement learn .Sanskrit Hindi Malayalam write read. Now I read and write Kannada through your video's are best. Learning of Kannada is very easy because using different colours letting in four line rouled paper. I thought your family hard work for create all videos. Best wishes .God gives all. I like your son.he is beauty . Thank you. ॐ नम क्षिवाय

    • @StunningMoms
      @StunningMoms  5 місяців тому

      Thank you so much 👍 keep watching HAPPY LEARNING 😊

  • @MamathaKishor
    @MamathaKishor Місяць тому +3

    Beautyfulaagi heli Cotri madam

    • @StunningMoms
      @StunningMoms  29 днів тому +1

      Thank You. Nimigey Help agide andre namgu Khushi agutte. 😊 Keep watching, Keep sharing with your family and friends

  • @kirantnayak4084
    @kirantnayak4084 11 місяців тому +2

    ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ ಮೇಡಂ danyvadagalu

    • @StunningMoms
      @StunningMoms  11 місяців тому

      ನಿಮಗೂ ಧನ್ಯವಾದಗಳು.

  • @shreenathv7479
    @shreenathv7479 11 місяців тому +5

    Super madom

    • @StunningMoms
      @StunningMoms  11 місяців тому

      Thank you.. glad it helped you.. keep watching 😊

  • @maanyas.shettymaanyas.shet9744
    @maanyas.shettymaanyas.shet9744 2 місяці тому +3

    thank u madam 🙏🏻 I am from Mumbai I don't know Kan

    • @StunningMoms
      @StunningMoms  2 місяці тому +1

      Thnks for watching..hope this vedio helped u...keep watching

  • @ashaasha658
    @ashaasha658 2 місяці тому +4

    Chanagi helidira medam thanku

    • @StunningMoms
      @StunningMoms  2 місяці тому

      Glad it helped u..thank u for the appreciation..keep watching

  • @AffectionateBaseball-eb8cv
    @AffectionateBaseball-eb8cv Місяць тому +1

    Thanks mam

    • @StunningMoms
      @StunningMoms  29 днів тому

      You're welcome 😊 Keep watching, Keep sharing with your family and friends

  • @shivanandangadi82
    @shivanandangadi82 Місяць тому +1

    Thankyou mam 😊

    • @StunningMoms
      @StunningMoms  29 днів тому

      You're welcome 😊 Keep watching, Keep sharing with your family and friends

  • @ManjunathKodihalli-se1yd
    @ManjunathKodihalli-se1yd 4 місяці тому +1

    Tq mam

  • @reshmadilshad7820
    @reshmadilshad7820 15 днів тому +1

    Hi maam can u explain avargiyavyanjanagalu

    • @StunningMoms
      @StunningMoms  14 днів тому

      In my old vedios u can get full details .
      Check it once please

  • @Standard_boys_makers
    @Standard_boys_makers 2 місяці тому +1

    Thank you

  • @nagrajc7844
    @nagrajc7844 9 місяців тому +2

    Super mam👌👌

  • @rajashreesalian3757
    @rajashreesalian3757 2 місяці тому +1

    Super thanks 😊

    • @StunningMoms
      @StunningMoms  29 днів тому

      You're welcome 😊 😊 Keep watching, Keep sharing with your family and friends

  • @Ashniran960
    @Ashniran960 10 місяців тому +1

    Thank you ma'am now i feel it is easier

    • @StunningMoms
      @StunningMoms  10 місяців тому

      Thank u so much...keep watching 🙂

  • @rajendrathaggarse3980
    @rajendrathaggarse3980 2 місяці тому

    😮🎉😊

  • @raghukushalm5162
    @raghukushalm5162 5 місяців тому

    My project to make it very help 🎉

  • @KalanayakaKalanayaka-jy8zn
    @KalanayakaKalanayaka-jy8zn Місяць тому +1

    ಸೂಪರ್ ವಿಡಿಯೋ

    • @StunningMoms
      @StunningMoms  29 днів тому

      You're welcome 😊 Keep watching, Keep sharing with your family and friends

  • @ManjulaTN-vo5lp
    @ManjulaTN-vo5lp 4 дні тому

    School alli arthaagidiradannu neevu helikotri

  • @user-ry7bx5hx5w
    @user-ry7bx5hx5w Місяць тому

    😡😠😤😡😡😡😡🤬🥵