Captured wild tusker in Ubrani Forest (24-12-2017) Complete Raw Footage Video Report

Поділитися
Вставка
  • Опубліковано 27 гру 2021
  • #WildTusker #Abhimanyu #OperationUbrani #Sakrebylu
    24-12-2017
    ದಾವಣಗೆರೆ ಜಿಲ್ಲೆಯ ಗಡಿಭಾಗದಲ್ಲಿ ಮೂವರು ರೈತರನ್ನು ಬಲಿ ಪಡೆದಿದ್ದ ಎರಡು ಕಾಡಾನೆಗಳನ್ನು ಉಬ್ರಾಣಿ ಕಾಡಿನಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.ಸೆರೆ ಹಿಡಿದ ಗಂಡು ಕಾಡಾನೆಗಳನ್ನು,ಸಕ್ರೆಬೈಲು ಆನೆ ಬಿಡಾರದ ಬಳಿಯಿರುವ ಕ್ರಾಲ್ ನಲ್ಲಿ ಇಡಲಾಗಿದೆ.ಅಭಿಮನ್ಯು ಸೇರಿದಂತೆ ಇತರೆ ಆರು ಆನೆಗಳು ಕ್ರಾಲ್ ನಲ್ಲಿ ಕಾಡಾನೆಯನ್ನು ಸೇರಿಸಲು ಹರಸಾಹಸ ಪಟ್ಟವು...
    ಉಬ್ರಾಣಿ ಕಾಡಿನಲ್ಲಿ ಸುರಕ್ಷಿತವಾಗಿ ಸೆರೆಹಿಡಿಯಲ್ಪಟ್ಟ ಕಾಡಾನೆಗಳು.,
    ಸಕ್ರೆಬೈಲು ಕ್ರಾಲ್ ನಲ್ಲಿ ಚೇತರಿಸಿಕೊಳ್ಳುತ್ತಿರುವ ಆನೆಗಳು.
    ದಾವಣಗೆರೆ ಶಿವಮೊಗ್ಗ ಚಿತ್ರದುರ್ಗ ಜಿಲ್ಲೆಯ ಗಡಿಭಾಗದಲ್ಲಿ ಮೂವರು ರೈತರನ್ನು ಬಲಿತೆಗೆದುಕೊಳ್ಳುನ ಮೂಲಕ ನರಹಂತಕ ಎಂಬ ಕುಖ್ಯಾತಿ ಪಡೆದಿದ್ದ ಎರಡು ಕಾಡಾನೆಗಳನ್ನು ಸೆರೆಹಿಡಿಯಲು ಸತತ ಏಳು ದಿನಗಳ ಕಾಲ ಉಬ್ರಾಣಿ ಕಾಡಿನಲ್ಲಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.ಕಳೆದ ಎರಡು ದಿನಗಳ ಹಿಂದೆ ಒಂದು ಕಾಡಾನೆಯನ್ನು ಇದೇ ಕಾಡಿನಲ್ಲಿ ಸೆರೆಹಿಡಿದಿದ್ದ ಮಾವುತ ಕಾವಾಡಿಗಳು ನೆನ್ನೆ ಮತ್ತೊಂದು ಕಾಡಾನೆಯನ್ನು ಸೆರೆಹಿಡಿದಿದ್ದರು. ಕಾಡಾನೆಗಳ ಕಾರ್ಯಾಚರಣೆಯಲ್ಲಿ ಮಂಚೂಣಿಯಲ್ಲಿದ್ದ ಅಭಿಮನ್ಯು ಸಾಕಾನೆ ಸಹಾಯದಿಂದ ಇತರೆ ಆನೆಗಳು ಕಾಡಾನೆಯನ್ನು ಸುತ್ತುವರೆದು ಎರಡು ಕಾಡಾನೆಗಳನ್ನು .ಸೆರೆಹಿಡಿದಿದ್ದವು.ಸೆರೆಯಾದ ಕಾಡಾನೆಗಳನ್ನು ಲಾರಿಯಲ್ಲಿ ಸಕ್ರೆಬೈಲಿಗೆ ತಂದು ಕ್ರಾಲ್ ನಲ್ಲಿ ಇಡಲಾಗಿದೆ.ಕಾಡಾನೆಯನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಮುಗಿಬಿದ್ದರು.ಇಂದು ಸೆರೆಹಿಡಿದಿದ್ದ ಕಾಡಾನೆಯನ್ನು ಅಭಿಮನ್ಯು ಆನೆ ಕ್ರಾಲ್ ಗೆ ಸೇರಿಸಲು ಕ್ಯಾಪ್ಟನ್ ಆಗಿ ಕೆಲಸ ಮಾಡಿತು.ಸಾಗರ್ ಗೋಪಾಲಸ್ವಾಮಿ ಕೃಷ್ಣ ಸಾಗರ್ ಹರ್ಷ ಗಂಗೆ ಆನೆಗಳು ಅಭಿಮನ್ಯು ಗೆ ಸಾಥ್ ನೀಡಿದವು.ನಂತರ ಕ್ರಾಲ್ ಗೆ ಕಾಡಾನೆಯನ್ನು ಸೇರಿಸಿದ ಅಭಿಮನ್ಯು ಆನೆ...ಮರದ ದಿಂಬೆಗಳನ್ನು ರಕ್ಷಣಾತ್ಮಕವಾಗಿ ಕ್ರಾಲ್ ಗೆ ಸೇರಿಸಿತು.
    ಕಾಡಾನೆಗಳನ್ನು ಸೆರೆಹಿಡಿಯಲು ಮೂವರು ವನ್ಯಜೀವಿ ವೈದ್ಯರ ತಂಡ ಅರವಳಿಕೆ ಮದ್ದು ನೀಡಿದ್ದರು. ಸೆರೆಹಿಡಿದ ಕಾಡಾನೆಗಳ ಆರೋಗ್ಯ ಸುರಕ್ಷಿತವಾಗಿದ್ದು ಚೇತರಿಸಿಕೊಳ್ಳುತ್ತಿವೆ.ಕಾಡಾನೆಗಳ ಕಾರ್ಯಾಚರಣೆಯಲ್ಲಿ ಗಾಯಗಳಾಗಿರುವುದರಿಂದ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ
    ಅಭಿಮನ್ಯು ಸಾಕಾನೆಯನ್ನು ಚಾಣಾಕ್ಷವಾಗಿ ನಿಭಾಯಿಸುತ್ತಿದ್ದ ಮಾವುತ ವಸಂತ್ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.ಕಾಡಾನೆಯನ್ನು ಕಂಡ ಅಭಿಮನ್ಯು ಏಕಾಏಕಿ ದಾಳಿ ಮಾಡಿ ದಂತ ಮುರಿದಂತ ಪ್ರಕರಣಗಳು ಕಾರ್ಯಾಚರಣೆಯಲ್ಲಿ ಸಾಮಾನ್ಯ.ಹೀಗಾಗಿ ಅಭಿಮನ್ಯು ಕೂಡ ಹಲವು ಆನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅನುಭವ ಇರುವುದರಿಂದ ಉಬ್ರಾಣಿ ಕಾರ್ಯಾಚರಣೆ ಯಶಸ್ವಿಯಾಗಲು ಕಾರಣವಾಯಿತು ಎನ್ನುತ್ತಾರೆ ಮಾವುತ ವಸಂತ್.
    ಒಟ್ಟಿನಲ್ಲಿ ಉಬ್ರಾಣಿ ಕಾಡಿನಲ್ಲಿ ಬೀಡುಬಿಟ್ಟು ನರಹಂತಕ ಆನೆಗಳೆಂದು ಕುಖ್ಯಾತಿ ಪಡೆದಿದ್ದ ಕಾಡಾನೆಗಳ ಸೆರೆಯಿಂದ ಕಾಡಂಚಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.ಇದೇ ಕಾಡಿನಲ್ಲಿ ಇನ್ನು ಎರಡು ಆನೆಗಳಿದ್ದು ಅವುಗಳ ಉಪಟಳ ಹೆಚ್ಚಾದರೆ ಅವುಗಳನ್ನು ಕೂಡ ಸೆರೆಹಿಡಿಯಲು ಅರಣ್ಯ ಇಲಾಖೆ ಸಜ್ಜಾಗಿದ್ದು,ಸದ್ಯಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.ಸೆರೆ ಹಿಡಿದ ಕಾಡಾನೆಗಳನ್ನು ಪಳಗಿಸಿ ಪ್ರವಾಸಿಗರ ವೀಕ್ಷಣೆಗೆ ಇಲಾಖೆಯ ಕೆಲಸಕಾರ್ಯಗಳಿಗೆ ಉಪಯೋಗಿಸಿಕೊಳ್ಳಲು ಅರಣ್ಯ ಇಲಾಖೆ ಸಜ್ಜಾಗಿದೆ.
  • Домашні улюбленці та дикі тварини

КОМЕНТАРІ •