ಹತ್ತ ಬ್ಯಾಡ್ರೊ ಹುಡಗಿರ ಬೆನ್ನ

Поділитися
Вставка
  • Опубліковано 21 лис 2024
  • ಹತ್ತ ಬ್ಯಾಡ್ರೋ ಹುಡಿಗೆರ ಬೆನ್ನ
    ಕೊಡತಾರೊ ನಿಮ್ಮನ್ನ ಮಣ್ಣ
    ಮುಖ ನೋಡಿ ಮಳೆ ಹಾಕಬ್ಯಾಡೊ ಅಣ್ಣ
    ತೊಳದ ಮ್ಯಾಗ ತಿಳಿತದ ಬಣ್ಣ
    ಸುಂದರಿ ಅಂತ ಸೊಕ್ಕ ಎನ್ ನಿನಗ
    ಮೊನಾಲಿಸ ಮಣ್ಣ ಆಗಿದ್ದ ನೋಡಿನಿ ಹೋಗ
    ಸಂದಿಯಾಗ ಪ್ರೀತಿ ಮಾಡಿದಿ
    ಮಂದಿಯಾಗ ಮರ್ಯಾದಿ ತಗದಿ
    ಬ್ಯಾಗಲಲ್ಲಿ ನಿಂತು ನಗತಿದ್ದಿ
    ಬಾರನ್ಯಾಗ ಕುಂತ ಅಳತೇನ
    ನೊಡದವ್ರು ಅಂತಾರ ದೊಡ್ಡ ಕುಡಕ
    ಅವ್ರಿಗೇನ ಗೊತ್ತು ಹೃದಯ ದ ನರಕ
    ಪ್ರೀತಿ ಮಾಡತಿನಿ ಅಂತಾಳ ಹಂಗ ಇನ್ನೋಬ್ಬ ನ ನೋಡತಾಳ
    ನಂಬಿ ಲವ ನ್ಯಾಗ ಬಿಳ್ಳ ಬ್ಯಾಡ್ರೋ
    ಬಿದ್ರ ಬಗನಿಗೂಟ ಜಡಿತಾರೋ
    ಹೆಣ್ಣುಮಕ್ಕಳ ಮನಸ ತಿಳದಿಲ್ಲ
    ಹುಡಕ್ಯಾಡಿ ಹುಡುಗೂರು ಸತ್ರಲ್ಲ ‌
    ತಿಳದವರ ಹೇಳತಾರ ಬೇಡ ಪ್ರೀತಿ
    ಆದ್ರು ಮಾಡಿ ಆಗತಿವಿ ಉತ್ತತಿ
    ಸಾಲ್ಯಾಗ ನಿನಗ ನೂರ ಮಂದಿ
    ಮದವಿಗಿ ಗೊರ್ಮೆಂಟ ಬೇಕ ಅಂದಿ
    ಮನ್ಯಾಗ ಅಣ್ಣ ತಮ್ಮ ಊರ ಉಡಾಳ
    ಅಕ್ಕಗ ಬೇಕೊ ಗೋರ್ಮೆಂಟ ಕೂಳ
    ಕಟ್ಟಿ ಹೊಡದಿರಿ ನೀವು ನನ್ನ
    ಮೋಸ ಮಾಡಿಲ್ಲ ಯಾರಗೂ ನಾ
    ಮ್ಯಾಗಿನ ಗಾಯ ಮಾಯತದ
    ಹೃದಯ ದ ಗಾಯ ಕುದಿತದ
    ಕಟ್ಟಿ ಹೋಡಯೋದು ದೊಡ್ಡದಲ್ರೋ
    ತಿರಗಿ ಬಿದ್ರ ಯಾರು ನಿಂದ್ರಲ್ಲಾ
    ನಾವೆ ಸುರರು ಅಂತ ಮರಿಬ್ಯಾಡ್ರೋ
    ಎಲ್ಲರನ್ನೂ ಇಲ್ಲ ಸುಡತಾರೋ
    ಏಕಾಂತ ದಲ್ಲಿ ನಿನ್ನ ನೆನಪು ಕಾಡಿ
    ಕಣ್ಣಿರು ಹನಿ ಗೊತ್ತಿಲ್ಲದ ಜಾರಿ
    ಹೃದಯ ಬಂದಿತ್ತು ಪ್ರೀತಿಯ ಕೋರಿ
    ಹಾಕಿದೆ ನೀನು ಬೆನ್ನಗಿ ಚೂರಿ
    ಯಾರ ಮುಂದೆ ತಲಿ ತಗ್ಗಿಸ ಬ್ಯಾಡ್ರೋ
    ತಂದೆ ತಾಯಿ ಕಾಲಿಗೆ ಬಿಳ್ರೋ
    ಸ್ವರ್ಗ ಎಲ್ಲಿ ಹುಡಕ ಬ್ಯಾಡ್ರೋ
    ತಾಯಿ ಮಡಿಲಲ್ಲಿ ಮಲಗಿ ನೋಡ್ರೋ

КОМЕНТАРІ • 97