ದಕ್ಷಿಣದ ಪ್ರಯಾಗ್ ರಾಜ್ ಎಂದೇ ಖ್ಯಾತವಾಗಿರುವ ತಿರುಮಕೂಡಲು ಕ್ಷೇತ್ರದಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಕುಂಭಮೇಳ
Вставка
- Опубліковано 7 лют 2025
- ತ್ರಿವೇಣಿ ಸಂಗಮ ಕ್ಷೇತ್ರ ಹಾಗು ದಕ್ಷಿಣದ ಪ್ರಯಾಗ್ ರಾಜ್ ಎಂದೇ ಖ್ಯಾತವಾಗಿರುವ ತಿರುಮಕೂಡಲು ಕ್ಷೇತ್ರದಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಕುಂಭಮೇಳ ನಡೆಯಲಿರುವ ಹಿನ್ನೆಲೆಯಲ್ಲಿ ಆದಿ ಚುಂಚನಗಿರಿ ಶ್ರೀಕ್ಷೇತ್ರದ ಶ್ರೀ ನಿರ್ಮಲಾನಂದ ಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ಸಿದ್ದತಾ ಕಾರ್ಯಗಳನ್ನು ಪರಿಶೀಲಿಸಿದರು.
ಚುಂಚನಗಿರಿ ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ,ತಿರುಚ್ಚಿ ಬುದ್ಧ ಸ್ವಾಮೀಜಿ ಹಾಗು ದೊರೆಸ್ವಾಮಿಗಳೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಶ್ರೀಗಳು ಕುಂಭಮೇಳ ಕ್ಷೇತ್ರದಲ್ಲಿ ಆಗಿರುವ ಹಾಗು ಆಗುತ್ತಿರುವ ಸಿದ್ದತಾ ಕಾರ್ಯ ಕುರಿತಂತೆ ಉಪ ವಿಭಾಗಾಧಿಕಾರಿ ರಕ್ಷಿತ್ ಹಾಗು ತಹಶೀಲ್ದಾರ್ ಟಿ.ಜೆ.ಸುರೇಶಾಚಾರ್ ರವರಿಂದ ಮಾಹಿತಿ ಪಡೆದುಕೊಂಡ ನಂತರ ತೆಪ್ಪದಲ್ಲಿ ಸಂಗಮಕ್ಕೆ ತೆರಳಿ ಸಿದ್ದತಾ ಕಾರ್ಯಗಳನ್ನು ಪರಿಶೀಲಿಸಿ ಆಗಬೇಕಾದ ಕೆಲ ಮಾರ್ಪಾಡುಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.