ಗ್ರೀನ್ ಪಾರ್ಕ್ ಆಗಿ ಬದಲಾದ ಬೆಂಗಳೂರಿನ ನಲ್ಲೂರುಹಳ್ಳಿ ಸ್ಮಶಾನ!

Поділитися
Вставка
  • Опубліковано 19 вер 2024
  • ಗ್ರೀನ್ ಪಾರ್ಕ್ ಆಗಿ ಬದಲಾದ ಬೆಂಗಳೂರಿನ ನಲ್ಲೂರುಹಳ್ಳಿ ಸ್ಮಶಾನ!
    ಗೋರಿಗಳ ನಡುವೆ ಆರ್ಯುವೇದ ಸಸ್ಯಗಳ ಜೊತೆಗೆ ಫಲ ನೀಡುವ ಬಾಳೆ, ಮಾವು, ನೇರಳೆ, ಅಂಜೂರ, ರ‍್ರಿ ಗಿಡಗಳ ರಾಶಿ!
    ಹೌದು ಇಂತಹದೊAದು ಸ್ಮಶಾನ ನಮ್ಮ ರಾಜಧಾನಿ ಬೆಂಗಳೂರಿನಲ್ಲಿದೆ. ಅಸಂಖ್ಯಾತ ಜನರಿಂದ ತುಂಬಿ ತುಳುಕುತ್ತಿರುವ ರಾಜಧಾನಿ ಬೆಂಗಳೂರು ನಗರದಲ್ಲಿನ ಅನೇಕ ಸ್ಮಶಾನಗಳು ಸೂಕ್ತ ಭದ್ರತೆ ಇಲ್ಲದೆ ಮಂಗಮಾಯವಾಗಿವೆ. ಅಳಿದುಳಿದ ಸ್ಮಶಾನಗಳು ಯಾವುದೇ ಅಭಿವೃದ್ಧಿ ಕಾಣದೆ ಕಸ ಸುರಿಯುವ ಗುಂಡಿಗಳ0ತಾಗಿವೆ. ಆದರೆ ವೈಟ್‌ಫೀಲ್ಡ್ ಸಮೀಪದ ನಲ್ಲೂರುಹಳ್ಳಿ ಗ್ರಾಮದ ಸ್ಮಶಾನ ಮಾತ್ರ ಬಹಳ ವಿಭಿನ್ನವಾಗಿದೆ. ಗಿಡಮರಗಳಿಂದ ತುಂಬಿ ತುಳುಕುತ್ತಿದೆ. ಒಂದಲ್ಲ ಎರಡಲ್ಲ ನೂರಾರು ಆರ್ಯುವೇದ ಸಸ್ಯಗಳು ಸ್ಮಶಾನದಲ್ಲಿ ಬೆಳೆದುಕೊಂಡಿವೆ. ದೊಡ್ಡವರು ಮಾತ್ರವಲ್ಲ ಚಿಕ್ಕ ಮಕ್ಕಳು ಸಹ ಯಾವುದೇ ಭಯವಿಲ್ಲದೆ ಸ್ಮಶಾನದಲ್ಲಿ ಓಡಾಡುವಂತಹ ವಾತಾವರಣ ನಿರ್ಮಾಣವಾಗಿದೆ.
    ಇಂತಹ ಸ್ಮಶಾನದ ಕುರಿತು ನಲ್ಲೂರುಹಳ್ಳಿಯ ಸಮಾಜಸೇವಕರು, ಮುಖಂಡರಾದ ನಲ್ಲೂರುಹಳ್ಳಿ ನಾಗೇಶ ಟಿ. ಅವರು ಮುಕ್ತವಾಗಿ ಮಾತನಾಡಿದರು. ಸ್ಮಶಾನದ ನಿರ್ಮಾಣಕ್ಕೆ ಟೊಂಕಕಟ್ಟಿ ನಿಂತಹ ತಮ್ಮ
    ಸಹೋದರ ಗೋರ್ವಧನ ಅವರ ಕುರಿತು ವಿವರಿಸಿದರು. ಅರವತ್ತಾದರೂ ಸಹ ಗೋರ್ವಧನ ಅವರು ಕಳೆದ ಎರಡು ವರ್ಷಗಳಿಂದ ಸತತವಾಗಿ ಸ್ಮಶಾನದಲ್ಲಿಯೇ ಇದ್ದು ಗಿಡಮರಗಳನ್ನು ಬೆಳೆಸಿದ್ದಾರೆ. ಯಾರ ಸಹಕಾರವನ್ನು ಪಡೆದುಕೊಳ್ಳದೇ ಸ್ವಂತ ಹಣದಲ್ಲಿ ಸ್ಮಶಾನದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಉದ್ಯಾನವನ್ನು ನಿರ್ಮಿಸಿದ್ದಾರೆ. ಇಂತಹ ಮಾದರಿ ಸ್ಮಶಾನಗಳು ನಮ್ಮ ಬೆಂಗಳೂರಿನ ವಿವಿಧೆಡೆ ಆಗಬೇಕು ಎಂದು ನಲ್ಲೂರುಹಳ್ಳಿ ನಾಗೇಶ ಟಿ. ಅವರು ಹೇಳಿದರು.
    ನಲ್ಲೂರುಹಳ್ಳಿ ಗ್ರಾಮದ ಸರ್ವೇ ನಂಬರ್ ೩ರಲ್ಲಿರುವ ಸಾರ್ವಜನಿಕ ಸ್ಮಶಾನ ಕಳೆದ ಎರಡು ವರ್ಷಗಳ ಹಿಂದೆ ಹತ್ತಾರು ತ್ಯಾಜ್ಯಗಳಿಂದು ತುಂಬಿಕೊAಡು ಕಸದ ಗುಂಡಿಯAತಾಗಿತ್ತು. ಬಿಬಿಎಂಪಿ ಹಾಗೂ ಸಂಬAಧಪಟ್ಟ ಇಲಾಖೆಗಳು ದೂರು ನೀಡಿದರೂ ಸಹ ಸ್ಮಶಾನದ ಅಭಿವೃದ್ಧಿಯಾಗಲಿಲ್ಲ. ಆಗ ಗ್ರಾಮದ ಹಿರಿಯ ಮುಖಂಡರಾದ ಗೋರ್ವಧನ ಅವರು ಸ್ವಂತ ಹಣದಿಂದಲೇ ಸ್ಮಶಾನವನ್ನು ಅಭಿವೃದ್ಧಿ ಮಾಡಲು ಮುಂದಾದರು. ಅದರ ಫಲವಾಗಿ ಇಂದು ಕಣ್ಮನ ಸೆಳೆಯುವಂತಹ ಸುಂದರವಾದ ಉದ್ಯಾನವನ ಸ್ಮಶಾನವಾಗಿದೆ. ಅನೇಕ ಹಕ್ಕಿಗಳು ಸಹ ಉದ್ಯಾನವನದ ಗಿಡಮರಗಳ ನಡುವೆ ಗೂಡು ಕಟ್ಟಿಕೊಂಡು ಬದುಕುವಂತಹ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಸುಮಾರು ಗೋರ್ವಧನ ಅವರು ೨೦ ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ ಎಂದು ನಾಗೇಶ ಅವರು ವಿವರಿಸಿದರು.
    #kannadanews #bangalore #park #parks #nature #birds #kannada #kannadavlogs #green #natural #karnataka #kannadalivetv #kannadalatestnews #karnatakapolitics #karnatakanews #karnatakalatestnews #kpcc #bjp

КОМЕНТАРІ •