ಅಂಕೋಲಾ ಹುಬ್ಬಳ್ಳಿ ರೈಲು ಯೋಜನೆಗಿದ್ದ ಅಡೆತಡೆ ನಿವಾರಣೆ, PIL ವಿಲೇವಾರಿ ಮಾಡಿದ ಕೋರ್ಟ್| Vijay Karnataka

Поділитися
Вставка
  • Опубліковано 14 жов 2024
  • ಬಹುನಿರೀಕ್ಷಿತ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಯ ವಿರುದ್ಧ ಸಲ್ಲಿಕೆಯಾಗಿದ್ದ ವೃಕ್ಷ ಫೌಂಡೇಶನ್‌ನ ಪಿಐಎಲ್ ಅನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ. ಆ ಮೂಲಕ ಈ ಯೋಜನೆಗೆ ಇದ್ದ ತೊಡಕೆಲ್ಲ ನಿವಾರಣೆಯಾದಂತಾಗಿದ್ದು, ಹೈಕೋರ್ಟ್ ನ ಗ್ರೀನ್ ಸಿಗ್ನಲ್ ಉತ್ತರಕನ್ನಡ ಜಿಲ್ಲೆಯ ಜನರಲ್ಲಿ ಹೊಸ ಆಶಾಭಾವ ಮೂಡಿಸಿದೆ.
    ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ಶಂಕುಸ್ಥಾಪನೆ ಮಾಡಲಾದ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಹುಬ್ಬಳ್ಳಿಯ ಕಲಘಟಕಿಯವರೆಗೆ ಈವರೆಗೆ ಹಳಿ ನಿರ್ಮಿಸಲಾಗಿದೆ. ತದನಂತರ ಪರಿಸರವಾದಿಗಳು ಯೋಜನೆಗೆ ಒಂದಲ್ಲಾ ಒಂದು ರೀತಿಯಲ್ಲಿ ಅಡ್ಡಗಾಲು ಹಾಕುತ್ತಿದ್ದರು. ಈ ಯೋಜನೆ ಕುಂಟುತ್ತಾ ಸಾಗುತ್ತಿರುವಾಗಲೇ 2001ರಲ್ಲಿ ಪಾಂಡುರಂಗ ಹೆಗಡೆ ಎನ್ನುವವರು ಪಿಐಎಲ್ ಸಲ್ಲಿಸಿದ್ದ ಕಾರಣ 19 ವರ್ಷಗಳ ಕಾಲ ಯೋಜನೆ ನೆನೆಗುದಿಗೆ ಬಿದ್ದಿತ್ತು. ತದನಂತರ 2020ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ರಾಜ್ಯ ವನ್ಯಜೀವಿ ಮಂಡಳಿಯಿಂದ ಯೋಜನೆಗೆ ಕ್ಲಿಯರೆನ್ಸ್ ಸಿಗುತ್ತಿದ್ದಂತೆ ಬೆಂಗಳೂರಿನ ವೃಕ್ಷಫೌಂಡೇಶನ್ ಕುಂಟು ನೆಪಗಳನ್ನು ಒಡ್ಡಿ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರಿಂದ ಯೋಜನೆ ಮತ್ತಷ್ಟು ವಿಳಂಬವಾಗುವಂತಾಗಿತ್ತು.
    ಆದರೆ ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯು ಈ ಎಲ್ಲಾ ಅಡೆತಡೆಗಳನ್ನ ನಿವಾರಿಸಿ, ಯೋಜನೆಯನ್ನ ಅನುಷ್ಠಾನಗೊಳಿಸಲು ಪಣತೊಟ್ಟು ಕಾನೂನು ಹೋರಾಟ ಆರಂಭಿಸಿತ್ತು. ಇದೀಗ ಈ ಹೋರಾಟ ಯಶಸ್ಸು ಕಂಡಿದ್ದು, ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡುವ ಮೂಲಕ ಇಷ್ಟು ವರ್ಷಗಳ ಕಾನೂನು ಪ್ರಕ್ರಿಯೆಗೆ ಇತಿಶ್ರೀ ಹಾಡಿದೆ. ಅಲ್ಲದೇ ರೈಲ್ವೆ ಮಂಡಳಿ ಕೂಡ ವನ್ಯಜೀವಿ ಮಂಡಳಿಯ ನಿರ್ದೇಶನದಂತೆ ಯೋಜನೆ ಅನುಷ್ಠಾನಗೊಳಿಸುವುದಾಗಿ ಅಫಿಡವಿಟ್ ನೀಡಿರುವುದರಿಂದ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ ಇದ್ದ ಎಲ್ಲಾ ತೊಡಕು ನಿವಾರಣೆಯಾದಂತಾಗಿದೆ.
    Hubballi ankola railway project implementation soon said Rajeev gaonkar
    #uttarakannada #railwaystation #highcourt
    Our Website : Vijaykarnataka...
    Facebook: / vijaykarnataka
    Twitter: / vijaykarnataka
    Our Video Website: kannada.timesx...

КОМЕНТАРІ • 9

  • @JagadeeshMnaik-c4j
    @JagadeeshMnaik-c4j 9 місяців тому +2

    ನಕಲಿ ಪರಿಸರ ವಾದಿಗಳಿದ್ದಾರೆ ಎಚ್ಚರ 😂

  • @gulabsinghbindrabin6199
    @gulabsinghbindrabin6199 5 місяців тому

    Thanks brother taau nija helidri hubali ankola maarg adsre jansrige bahal bshsl anskul aagalide

  • @basavarajkamatborewellmoto2054

    ನಾನು ಫಸ್ಟ್ ಈ ಕೆಲಸ ಸ್ಟಾರ್ಟ್ ಆದಾಗ ನಾ ಹೋಗಿದ್ದೆ ಸರ್ 18 ವರ್ಷ ಆಯ್ತು ಸರ್ ಇದು ಬಂದಾಗಿ ಸ್ಟಾರ್ಟ್ ಆಗುತ್ತೆ ನಿಲ್ಲೋ ಗೊತ್ತಿಲ್ಲ ನಾವು ನೋಡ್ತೀವಿ ನಿಲ್ಲೋ ಅದೇ ತರ ಇದೆ ನಮಗೆ ಈ ಯಶಸ್ವಿ ವೈ ಕನ್ಸ್ಟ್ರಕ್ಷನ್ ಅವರತ್ರ ನಾನು ಎರಡು ವರ್ಷ ಮಾಡಿದೆ ಸರ್ ಕೆಲಸ ಆದರೆ ಏನು ಮಾಡೋದು ಹುಬ್ಬಳ್ಳಿ ಅಂಕೋಲಾ ಸ್ಟಾರ್ಟ್ ಆದರೆ ಬಹಳ ಚೆನ್ನಾಗಿರುತ್ತದೆ ಸರ್ ಸ್ವಲ್ಪ ಎಲ್ಲರೂ ಕೂಡಿ ಸ್ಟಾರ್ಟ್ ಮಾಡುವ ಪ್ರಯತ್ನ ಮಾಡಿ ಸರ್

  • @vinayakmetrani1549
    @vinayakmetrani1549 Рік тому +1

    Edu abhiruddiy marg aglebeku

  • @aquasquad720
    @aquasquad720 Рік тому

    Nice work

  • @aquasquad720
    @aquasquad720 Рік тому

    work should start asap

  • @kamalakarnaik8070
    @kamalakarnaik8070 Рік тому

    🙏👌👍

  • @panchaksharikotimath8843
    @panchaksharikotimath8843 Місяць тому

    Tumba santos aitu sigra kelasa suruwagali