ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ||'ದೇವಾಲಯ ದರ್ಶನ || ಕಡೂರು to ಮಂತ್ರಾಲಯ || V V RIDER || in ಕನ್ನಡ

Поділитися
Вставка
  • Опубліковано 24 сер 2024
  • ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||'
    Mantralayam train journey
    Train vlog
    Kadur to mantralayam
    railway vlogs
    mantralayam railway station to temple
    Mantralayam vlog
    mantralayam temple
    mantralayam temple kannada
    mantralayam temple kannada vlogs
    mantralayam railway station to temple
    UA-cam ( / @vvrider2202 )
    MY INSTAGRAM ( VAIBHAV3328)
    ( UA-cam CHANNEL VV RIDER )
    FACEBOOK ( VAIBHAV GOWDA )
    ( ತಮಿಳುನಾಡಿನ ಚಿದಂಬರ ಕ್ಷೇತ್ರ ಸಮೀಪದ ಭುವನಗಿರಿಯಲ್ಲಿ 1595ರಲ್ಲಿ ಜನಿಸಿದ ಶ್ರೀ ರಾಘವೇಂದ್ರಸ್ವಾಮಿಗಳು (ಪೂರ್ವಾಶ್ರಮದ ಹೆಸರು ವೆಂಕಟನಾಥ) 76 ವರ್ಷಗಳ ಕಾಲ ಇಹಲೋಕದಲ್ಲಿದ್ದು ಇಚ್ಛಾಮರಣಿಯಂತೆ 1671ರಲ್ಲಿ ಸಶರೀರವಾಗಿ ವೃಂದಾ ವನವನ್ನು ಪ್ರವೇಶಿಸಿದರು. ಅವರು ಜನಿಸಿ ಈಗ 425 ವರ್ಷಗಳಾಗಿವೆ, ಅವರು ಭೌತಿಕ ಶರೀರದಲ್ಲಿ ಕೊನೆಯದಾಗಿ ಕಾಣಿಸಿಕೊಂಡು 349 ವರ್ಷಗಳಾಗಿವೆ )
    ( ರಾಘವೇಂದ್ರ ಸ್ವಾಮಿಗಳ ಕೊನೆಯ ಸಂದೇಶ )
    ರಾಘವೇಂದ್ರ ಸ್ವಾಮಿಗಳು ತಾವು ವೃಂದಾವನ ಪ್ರವೇಶಿಸುವ ದಿನವನ್ನು ನಿಗದಿಪಡಿಸಿ ಪೂಜೆಗಳೆಲ್ಲ ವನ್ನೂ ಮಾಡಿ ಅನಂತರ ತಮ್ಮ ನಿರ್ದೇಶನದಂತೆ ನಿರ್ಮಿತವಾದ 6ಗಿ6 ಅಡಿ ಸುತ್ತಳತೆಯ ವೃಂದಾವನ ಗುಹೆಯನ್ನು ಪ್ರವೇಶಿಸಿದರು
    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ| ಭಜತಾಂ ಕಲ್ಪವೃಕ್ಷಾಯ ನಮತಾಂ
    ಕಾಮಧೇನವೇ||'
    ಈ ಧ್ಯಾನ ಶ್ಲೋಕದಲ್ಲಿ ಅವರ ಆದ್ಯತೆ ಸತ್ಯ ಮತ್ತು ಧರ್ಮಕ್ಕೆ ಎನ್ನುವುದು ಕಂಡುಬರುತ್ತದೆ. ಎಲ್ಲ ಧರ್ಮೀಯರಿಗೂ ಅನುಗ್ರಹ ಮಾಡಿದ ಯತಿಗಳು ಎಂಬುದಕ್ಕೆ ರಾಯರ ಕಾಲಾನಂತರ ಮಂತ್ರಾಲಯಕ್ಕೆ ಬಂದ ಬ್ರಿಟಿಷ್‌ ಅಧಿಕಾರಿ ಥಾಮಸ್‌ ಮನ್ರೊàವಿಗೂ ದರ್ಶನ ಮತ್ತು ಮಂತ್ರಾಕ್ಷತೆ ಕೊಟ್ಟ ಘಟನೆ (1800 -1807), ಅವರ ತಪಃಪ್ರಭಾವಕ್ಕೆ ಒಳಗಾದ ಅದೋನಿಯ ಮಾಂಡಲಿಕ ಸಿದ್ಧಿಮಸೂದ್‌ ಖಾನ್‌ ವೃಂದಾವನ ನಿರ್ಮಾಣಕ್ಕೆ ಸ್ಥಳವನ್ನು ಕೊಟ್ಟದ್ದು, ವೃಂದಾವನದ ಮೇಲೆ ವಿವಿಧ ಭಗವದ್ರೂಪಗಳ ಜತೆ ಮೀನಾರ್‌ ಕೆತ್ತನೆ ಇರುವುದು ಕೆಲವು ಉದಾಹರಣೆಯಾಗಬಹುದು.
    ತಂಜಾವೂರಿನಲ್ಲಿ ಬರಗಾಲವಿದ್ದಾಗ ಯಜ್ಞವನ್ನು ಮಾಡಿ ಮಳೆ ತರಿಸಿದ್ದು, ನಾಶಿಕದಲ್ಲಿ ವಾಸುದೇವ ಪಂತ್‌ ಅವರ ಸೋದರಳಿಯ ಸುರೇಂದ್ರನಿಗೆ ಬಾಯಿ ಬಿದ್ದು ಹೋಗಿದ್ದಾಗ ಮತ್ತೆ ಹಾಡುವಂತಾದುದು, ಗದುಗಿನ ವೆಂಕಟರಾಯ ದೇಸಾಯಿ, ಸವಣೂರು ನವಾಬನ ಪುತ್ರ ಸತ್ತಾಗ ಬದುಕಿಸಿದ್ದು ಜೀವನಚರಿತ್ರೆಯಲ್ಲಿ ಕಾಣಸಿಗುತ್ತದೆ.
    ರಾಘವೇಂದ್ರಸ್ವಾಮಿಗಳು ವೈಕುಂಠದ ಭಗವಂತನ ಸೇವಾ ಕಿಂಕರನಾದ ಶಂಕುಕರ್ಣನ ಅವತಾರ, ಶಂಕುಕರ್ಣ ಪ್ರಹ್ಲಾದನಾಗಿ, ಬಾಹ್ಲಿàಕರಾಜನಾಗಿ, ವ್ಯಾಸರಾಜರಾಗಿ, ರಾಘ ವೇಂದ್ರಸ್ವಾಮಿಗಳಾಗಿ ಅವತರಿಸಿದರು ಎಂಬ ನಂಬಿಕೆ ಇದೆ
    ಶ್ರೀ ರಾಘವೇಂದ್ರಸ್ವಾಮಿಗಳು ಶ್ರೀಮನ್ಮಧ್ವಾಚಾರ್ಯರ ಶಿಷ್ಯರಾದ ಶ್ರೀ ಪದ್ಮನಾಭತೀರ್ಥರ ಪರಂಪರೆಯಲ್ಲಿ ಬಂದ ಕುಂಭಕೋಣ ಮಠದ ಶ್ರೀವಿಜಯೀಂದ್ರತೀರ್ಥರ ಪ್ರಶಿಷ್ಯರಾದರು. ಶ್ರೀ ವಿಜಯೀಂದ್ರತೀರ್ಥರು ಶ್ರೀಕಾಶೀ ಮಠ ಸಂಸ್ಥಾನದ ಪ್ರವರ್ತಕರು. ಶ್ರೀ ವಿಜಯೀಂದ್ರತೀರ್ಥರ ಶಿಷ್ಯ ಶ್ರೀ ಸುಧೀಂದ್ರತೀರ್ಥರು ವೆಂಕಟನಾಥರಿಗೆ ಶ್ರೀ ರಾಘವೇಂದ್ರತೀರ್ಥರೆಂದು ನಾಮಕರಣ ಮಾಡಿ 1621, ದುರ್ಮತಿ ಸಂವತ್ಸರ ಪಾಲ್ಗುಣ ಶುದ್ಧ ಬಿದಿಗೆಯಂದು ಶಿಷ್ಯರಾಗಿ ಸ್ವೀಕರಿಸಿದರು. ಮಧ್ವಾಚಾರ್ಯರ ಬಳಿಕ ಪರಂಪರೆಯಲ್ಲಿ 16ನೆಯ ಯತಿಗಳು ಇವರು.
    ಪೂರ್ವಾಶ್ರಮದಲ್ಲಿಯೇ ವಿದ್ವತ್‌ಸಿದ್ಧಿ ವೆಂಕಟನಾಥರಾಗಿರುವಾಗಲೇ ಇವರು ಅಣ್ಣ ಗುರುರಾಜಾಚಾರ್ಯರಲ್ಲಿ, ಅನಂತರ ಭಾವ ಲಕ್ಷ್ಮೀನರ ಸಿಂಹಾಚಾರ್ಯರಲ್ಲಿ ಶಾಸ್ತ್ರಾಧ್ಯಯನ ನಡೆಸಿದ್ದರು. ವೆಂಕಟ ನಾಥರು "ಮಧ್ವವಿಜಯ' ಗ್ರಂಥಕರ್ತ ನಾರಾಯಣ ಪಂಡಿತಾ ಚಾರ್ಯರ "ಪ್ರಮೇಯ ನವಮಾಲಿಕಾ' ಗ್ರಂಥಕ್ಕೆ ವ್ಯಾಖ್ಯಾನ ರಚಿಸಿದರು. ಇದು ಅವರ ಚೊಚ್ಚಲ ಕೃತಿ. ಪಾಂಡಿತ್ಯವನ್ನು ಕುಂಭಕೋಣದಲ್ಲಿ ನಡೆದ ವಿದ್ವತ್ಸಭೆಯಲ್ಲಿ ಗಮನಿಸಿದ ಗುರುಗಳು "ಮಹಾಭಾಷ್ಯಾಚಾರ್ಯ' ಬಿರುದು ನೀಡಿದ್ದರು.
    40 ಕೃತಿಗಳ ಕರ್ತ
    ಸ್ವಾಮಿಗಳಾದ ಬಳಿಕ ಮಧ್ವಾಚಾರ್ಯರ, ವೇದವ್ಯಾಸರ ಬ್ರಹ್ಮಸೂತ್ರಗಳು, ಉಪನಿಷತ್ತುಗಳು, ಭಗವದ್ಗೀತಾ ಪ್ರಸ್ಥಾನಕ್ಕೆ ಭಾಷ್ಯ ರಚನೆ ಹೀಗೆ ಒಟ್ಟು ಸುಮಾರು 40 ಕೃತಿಗಳನ್ನು ರಚಿಸಿದರು. ಸಮಗ್ರ ಮೀಮಾಂಸಾಗ್ರಂಥಕ್ಕೆ ಸಂಬಂಧಿಸಿ"ಭಾಟ್ಟ ಸಂಗ್ರಹ' ಗ್ರಂಥಕ್ಕೆ ಮಧುರೆಯ ರಾಜ ಮೆರವಣಿಗೆ ಮಾಡಿಸಿದ್ದ. ವಿಜಾಪುರ ಸಮೀಪದ ಕೃಷ್ಣಾ ನದೀ ತೀರದ ಚಾತುರ್ಮಾಸ್ಯ ವ್ರತಾಚರಣೆಯ ಕಾಲದಲ್ಲಿ ಜಯತೀರ್ಥರ "ತಣ್ತೀಪ್ರಕಾಶಿಕಾ' ಟೀಕೆಗೆ "ಭಾವದೀಪ' ಎಂಬ ವ್ಯಾಖ್ಯಾನವನ್ನು ರಚಿಸಿದರು.

КОМЕНТАРІ • 10