ಈ ದೇವಸ್ಥಾನಕ್ಕೆ ಹೋಗಿ ನೀವು ಶ್ರೀಮಂತ ರಾಗುತ್ತೀರಾ | GANGAMMA TEMPLE MALLESHWARAM KHUSHII WADKAR | KHUSHITV

Поділитися
Вставка
  • Опубліковано 10 жов 2024
  • ಬೆಂಗಳೂರಿನ ಶ್ರೀ ಗಂಗಮ್ಮ ದೇವಿ ದೇವಸ್ಥಾನ; ಕಷ್ಟ ಎಂದು ಬಂದವರ ಸಮಸ್ಯೆಗಳನ್ನು ಪರಿಹರಿಸುವ ತಾಯಿ ಇವಳು, ಒಮ್ಮೆ ಭೇಟಿ ಕೊಡಿ
    ಗಂಗಮ್ಮ ದೇವಿಯ ಮೂಲ ವಿಗ್ರಹವನ್ನು ನೋಡಿದರೆ ಮನಸ್ಸಿಗೆ ಒಂದು ರೀತಿಯ ಸಂತೋಷ ಉಂಟಾಗುತ್ತದೆ. ನಿಜವಾದ ದೇವಿಯೇ ಎದ್ದು ಬಂದಂತೆ ಭಾಸವಾಗುತ್ತದೆ. ಪ್ರಾಕಾರದಲ್ಲಿ ಇರುವ ಅಮ್ಮನವರ ವಿಗ್ರಹವನ್ನು ಎಷ್ಟು ನೋಡಿದರೂ ಸಮಾಧಾನ ಎನಿಸುವುದಿಲ್ಲ.
    ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆಯಲ್ಲಿ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಶ್ರೀ ಗಂಗಮ್ಮ ದೇವಿ ದೇವಸ್ಥಾನ ಕೂಡಾ ಒಂದು. ಈ ದೇವಸ್ಥಾನಕ್ಕೆ ಕಷ್ಟ ಎಂದು ಬಂದವರ ಬಾಳು ಹಸನಾಗುತ್ತಿದೆ. ಇದು ಈ ದೇವಾಲಯದ ವೈಶಿಷ್ಟ್ಯ
    1928 ರಲ್ಲಿ ಆರಂಭವಾದ ದೇವಸ್ಥಾನ
    ಶ್ರೀ ಗಂಗಮ್ಮ ದೇವಿ ದೇವಸ್ಥಾನವು ಬೆಂಗಳೂರು ನಗರದ ವಾಯುವ್ಯ ಪ್ರದೇಶದಲ್ಲಿ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದ ಹಿಂಬದಿಯ ರಸ್ತೆಯಲ್ಲಿದೆ. ಈ ದೇವಾಲಯವು 1928ರಲ್ಲಿ ಚಿಕ್ಕ ಮೈದಾನದಲ್ಲಿ ಆರಂಭವಾಯಿತೆಂದು ಹೇಳಲಾಗುತ್ತದೆ. ಆರಂಭದಿಂದಲೇ ಅನೇಕ ಪವಾಡಗಳಿಂದ ಪ್ರಸಿದ್ಧಿ ಪಡೆದ ಈ ದೇಗುಲವನ್ನು 2004ರಲ್ಲಿ ಪುನರುಜ್ಜೀವನ ಮಾಡಲಾಗಿತ್ತು. ಆನಂತರ ನಡೆದಿದ್ದೆಲ್ಲಾ ದೊಡ್ಡ ಚರಿತ್ರೆ
    ಇದನ್ನೂ ಓದಿ: ಸಂತಾನ ದೋಷ ಮಕ್ಕಳ ಆರೋಗ್ಯ ಸಮಸ್ಯೆ ಪರಿಹರಿಸುವ ಅಂಬಲಪಾಡಿಯ ಜನಾರ್ದನ ಶ್ರೀ ಮಹಾಕಾಳಿ ದೇವಾಲಯ; ಒಮ್ಮೆ ಭೇಟಿ ನೀಡಿ
    ಇಂದಿಗೂ ಈ ದೇವಾಲಯಕ್ಕೆ ಭಕ್ತರ ಮಹಾಪೂರವೇ ಬರುತ್ತದೆ. ಅದರಲ್ಲೂ ಅಮಾವಾಸ್ಯೆ, ಹುಣ್ಣಿಮೆ, ಮಂಗಳವಾರ ಮತ್ತು ಶುಕ್ರವಾರ ಸ್ತ್ರೀಯರು, ಪುರುಷರು ಕೂಡಾ ಈ ದೇವಸ್ಥಾನಕ್ಕೆ ಬಂದು ಹೋಗುತ್ತಾರೆ. ಭಗೀರಥನ ಪ್ರಯತ್ನದಿಂದಾಗಿ ಗಂಗಾಮಾತೆಯು ನದಿಯ ರೂಪದಲ್ಲಿ ಶಕ್ತಿಯಾಗಿ ಭೂಮಿಯಲ್ಲಿ ಅವತರಿಸುತ್ತಾಳೆ. ಗಂಗಾ ಮಾತೆಯ ಪ್ರಾಮುಖ್ಯತೆ ಎಷ್ಟೆಂದೂ ಎಲ್ಲರಿಗೂ ತಿಳಿದಿದೆ. ಮನೆಯನ್ನು ಸ್ವಚ್ಚಗೊಳಿಸುವುದರಿಂದ ಹಿಡಿದು ಇಹಲೋಕ ತ್ಯಜಿಸುವವರೆಗೂ ಗಂಗಾಮಾತೆ ಮುಖ್ಯವಾಗುತ್ತಾಳೆ.
    ಬೇಡಿದ ವರಗಳನ್ನು ಈಡೇರಿಸುವ ಗಂಗಮ್ಮ ದೇವಿ
    ಈ ದೇವಸ್ಥಾನದ ಮೂಲ ವಿಗ್ರಹವನ್ನು ನೋಡಿದರೆ ಮನಸ್ಸಿಗೆ ಒಂದು ರೀತಿಯ ಸಂತೋಷ ಉಂಟಾಗುತ್ತದೆ. ನಿಜವಾದ ದೇವಿಯೇ ಮೇಲಿಂದ ಇಳಿದು ಬಂದಂತೆ ಭಾಸವಾಗುತ್ತದೆ. ಪ್ರಾಕಾರದಲ್ಲಿ ಇರುವ ಅಮ್ಮನವರ ವಿಗ್ರಹವನ್ನು ಎಷ್ಟು ನೋಡಿದರೂ ಸಮಾಧಾನ ಎನಿಸುವುದಿಲ್ಲ. ಭಕ್ತರು, ತೆಂಗಿನಕಾಯಿಯನ್ನು ನೆಲದ ಮೇಲೆ ಉರುಳಿಸಿ ಪ್ರಾಕಾರವನ್ನು ಪ್ರದಕ್ಷಿಣೆ ಮಾಡಿ ಬರುತ್ತಾರೆ. ಈ ಸೇವೆಯಿಂದ ಮನದ ಆಸೆ ಈಡೇರುತ್ತವೆ ಎಂಬುದು ಹಲವರ ಅನುಭವದ ಮಾತಾಗಿದೆ. ದೇವಾಲಯವನ್ನು ಪ್ರವೇಶ ಮಾಡಿದ ಕೂಡಲೇ ತ್ರಿಶೂಲವೊಂದು ಎದುರಾಗುತ್ತದೆ. ಅದಕ್ಕೆ ನಿಂಬೆ ಹಣ್ಣನ್ನು ಚುಚ್ಚಿ ಬೇಕಿರುವ ವರವನ್ನು ಬೇಡಿದಲ್ಲಿ ಅದು ಖಂಡಿತ ನೆರವೇರುವುದು ಎಂಬುದು ಹಲವರ ಅಭಿಪ್ರಾಯ. ಹಾಗೇ ಬೆಂಗಳೂರಿನಲ್ಲಿ ಪ್ರತಿ ವರ್ಷ ಗಂಗಮ್ಮ ಜಾತ್ರೆ ನಡೆಯುತ್ತದೆ. 1928 ರಿಂದ ಈ ಆಚರಣೆ ನಡೆಯುತ್ತಿದೆ
    ಇಲ್ಲಿ ಕೆಲವರು ದೇವಿಯನ್ನು ಕಣ್ಣಾರೆ ಕಂಡಿದ್ದಾರೆ ಎಂಬ ಮಾತು ಇದೆ. ಒಮ್ಮೆ ಆ ದೇವಾಲಯದ ಕಾವಲುಗಾರನಿಗೆ ದೇವಾಲಯದ ಒಳಗೆ ಏನೋ ಸದ್ದು ಕೇಳಿ ಅದನ್ನು ಪರೀಕ್ಷಿಸಲು ದೇವಸ್ಥಾನದ ಒಳಗೆ ಒಂದಿದ್ದಾರೆ. ಅಲ್ಲಿ ಗಂಗಮ್ಮ ದೇವಿ ತಲೆ ಕೂದಲು ಬಿಚ್ಚಿ ಕುಳಿತಿರುವುದು ಕಂಡು ಬಂದಿದೆ. ಇದಾದ ನಂತರ ಆತನ ಕಷ್ಟಗಳೆಲ್ಲವೂ ಮರೆಯಾಗಿ ಆತ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿ ಇದೆ. ದೇವಾಲಯದ ಸಂಕೀರ್ಣದಲ್ಲಿ ಗಣೇಶ, ಸುಬ್ರಹ್ಮಣ್ಯ ಮತ್ತು ನವಗ್ರಹಗಳ ಸಣ್ಣ ದೇವಾಲಯಗಳಿವೆ. ಇಲ್ಲಿ ಗಂಗಾಮಾತೆಗೆ ರಾಗಿ ಗಂಜಿಯನ್ನು ನೈವೇದ್ಯವನ್ನಾಗಿ ಅರ್ಪಿಸುವುದು ವಿಶೇಷ
    Khushii TV Kannada is an Bridge to connect Celebrities to common man through Interviews to help experts, actors, leaders & achievers to share their experiences of their journey from personal to professional life insights with our channel KHUSHII TV KANNADA viewers.
    Their life stories & struggles in life can inspire many people, not to give up in life.
    Inspiration is very important in life to stay motivated. One cannot achieve their goal, unless they are motivated.
    Our main aim is to reach out to people from different walks of life.
    Motivation helps to improve performance, enhanced wellbeing, personal growth, or a sense of purpose. It is also pathway to change our way of thinking, feeling, and behavior.

КОМЕНТАРІ • 13

  • @girishcl8411
    @girishcl8411 7 місяців тому +1

    🙏🌹ಹರ್ ಹರ್ ಗಂಗೆ🐊 ಹರ್ ಹರ್🔱 ಮಹದೇವ್ 🌹🙏

  • @ramamurthy6309
    @ramamurthy6309 3 місяці тому

    🙏🙏🙏🙏🙏

  • @pushpasuresh3075
    @pushpasuresh3075 5 місяців тому

    Gangamma bless all over the world ma

  • @Raji11108
    @Raji11108 3 місяці тому

    Power amma

  • @dhanushree8284
    @dhanushree8284 4 місяці тому

    Gangam tayee nanna olle istratha anugrahisu mate❤

  • @kbpadmammakbpadmamma1006
    @kbpadmammakbpadmamma1006 5 місяців тому +1

    ಅಮ್ಮ ಕೋಟಿ ಕೋಟಿ ನಮಸ್ಕಾರ ಅಮ್ಮ

  • @hoomanboing8477
    @hoomanboing8477 5 місяців тому +2

    Devara ashirvada yellaramele irali

  • @thrivenic305
    @thrivenic305 5 місяців тому +1

    Koti koti namaskara Amma

  • @RASIGANboys
    @RASIGANboys Рік тому +1

    ,🙏🙏🙏🙏💯🔥🔥🔥

  • @erammao5823
    @erammao5823 4 місяці тому +1

    ❤🙏🙏🏻🌹👃👋🏻

  • @AmrishAmrish-bl5so
    @AmrishAmrish-bl5so 4 місяці тому +1

    Amma kapadu thayi

  • @nagu8884
    @nagu8884 4 місяці тому

    H

  • @pushpasuresh3075
    @pushpasuresh3075 5 місяців тому

    🙏🙏🙏