ಕರೋನಾ! ಜೊತೆಗೂಡಿ ಹೋರಾಡೋಣ ..

Поділитися
Вставка
  • Опубліковано 4 жов 2024
  • ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಿ!
    ಮಾಡಬೇಕಾದ್ದು:
    ಆಗಾಗ್ಗೆ ಸಾಬೂನು ಹಾಗೂ ನೀರಿನಿಂದ ಕೈ ತೊಳೆಯುವುದನ್ನು ಅಭ್ಯಾಸ ಮಾಡಿ ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್‌ರಬ್‌ಗಳನ್ನು ಬಳಸಿ. ನಿಮ್ಮ ಕೈಗಳು ಸ್ವಚ್ಛಗೊಂಡಂತೆ ಕಂಡರೂ ಸಹಾ ಆಗಿಂದಾಗ್ಗೆ ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದು.
    ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಮೂಗು ಮತ್ತು ಬಾಯಿಯನ್ನು ಕರವಸ್ತ್ರ/ಟಿಷ್ಯುವಿನಿಂದ ಮುಚ್ಚಿಕೊಳ್ಳಿ.
    *ಬಳಸಿದ ಟಿಷ್ಯು/ ಕರವಸ್ತ್ರವನ್ನು ತಕ್ಷಣವೇ ಮುಚ್ಚಿದ ತೊಟ್ಟಿಯಲ್ಲಿ ಎಸೆಯಿರಿ.
    ನಿಮಗೆ ರೋಗ ಲಕ್ಷಣಗಳು ಕಂಡು ಬಂದಲ್ಲಿ (ಜ್ವರ, ಉಸಿರಾಟದ ತೊಂದರೆ, ನೆಗಡಿ, ಕೆಮ್ಮು) ಮೂಗು ಮತ್ತು ಬಾಯಿಯನ್ನು ಕರವಸ್ತ್ರ/ಮಾಸ್ಕ್‌ನಿಂದ ಮುಚ್ಚಿಕೊಂಡು ತಕ್ಷಣ ವೈದ್ಯರನ್ನು ಭೇಟಿ ಮಾಡಿ.
    ಈ ರೋಗದ ಲಕ್ಷಣ ಮತ್ತು ಚಿಹ್ನೆಗಳಿದ್ದರೆ 24/7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ.
    ದೊಡ್ಡ ಸಭೆ-ಸಮಾರಂಭಗಳಿಗೆ ಭಾಗವಹಿಸುವುದನ್ನು ತಪ್ಪಿಸಿ.
    ಮಾಡಬಾರದ್ದು:
    ನಿಮಗೆ ಕೆಮ್ಮು ಮತ್ತು ಜ್ವರ ಕಂಡುಬಂದರೆ ಬೇರೆಯವರೊಡನೆ ನಿಕಟ ಸಂಪರ್ಕ ಹೊಂದುವುದು.
    ನಿಮ್ಮ ಕಣ್ಣುಗಳು, ಮೂಗು ಮತ್ತು ಬಾಯಿಯನ್ನು ಆಗಿಂದಾಗ್ಗೆ ಸ್ಪರ್ಶಿಸುವುದು.
    ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು.
    ನಾವೆಲ್ಲರೂ ಒಟ್ಟಾಗಿ ಕರೋನಾ ವೈರಸ್ ವಿರುದ್ಧ ಹೋರಾಡೋಣ.
    ರೋಗ ಹರಡದಂತೆ ಎಲ್ಲರೂ ಜಾಗೃತಿ ವಹಿಸೋಣ.

КОМЕНТАРІ • 8

  • @pubgplayer8576
    @pubgplayer8576 4 роки тому

    ಧನ್ಯವಾದಗಳು ಚಕ್ರವರ್ತಿ ಅಣ್ಣಾರ.......

  • @maheshababukv4883
    @maheshababukv4883 4 роки тому

    Jai ho, sir...

  • @harishkumaraswamy1199
    @harishkumaraswamy1199 4 роки тому +1

    ಸ್ಪಷ್ಟ ಸರಳ ಮಾಹಿತಿಗಾಗಿ ಧನ್ಯವಾದಗಳು ಚಕ್ರವರ್ತಿ ಅಣ್ಣ..... ಯುವ ಬ್ರಿಗೇಡ್ ನ ಕೌಶಲ್ಯವೆ ವಿಶೇಷ

  • @kareppapujeri3185
    @kareppapujeri3185 4 роки тому

    ಧನ್ಯವಾದಗಳು ಅಣ್ಣ

  • @shivarajsbhandari7340
    @shivarajsbhandari7340 4 роки тому

    Jai

  • @naveenkoppal7
    @naveenkoppal7 4 роки тому +1

    ಧನ್ಯವಾದಗಳು.