ದೈವಗಳ ಪವಾಡ ... ಸಮಾಜಿಕ ಜಾಲತಾಣಗಳ ಪ್ರಭಾವ !ಕಳೆದು ಹೋಗಿದ್ದ ಮಗ 28 ವರ್ಷಗಳ ಬಳಿಕ ಮನೆ ಸೇರಿದ್ದು ಹೇಗೆ ಗೊತ್ತಾ ???

Поділитися
Вставка
  • Опубліковано 11 січ 2025
  • ಹೆಬ್ರಿ ತಾಲೂಕಿನ ವರಂಗದ ಪಡುಕುಡೂರು ನ ದೈವಸ್ಥಾನದಲ್ಲಿ ನಡೆದ ಘಟನೆ.
    ದೈವದ ಪವಾಡ : ದೈವದ ಚಾಕರಿ ಮಾಡುತ್ತಿರುವ ಸುಂದರ ಪೂಜಾರಿ ಗೆ 80 ವರ್ಷ ಹನ್ನೆರಡನೆ ವಯಸ್ಸಿನಿಂದಲೆ ದೈವಗಳ ಚಾಕರಿ ಮಾಡಿಕೊಂಡು ಬರುತಿದ್ದಾರೆ‌ ಸುಂದರ ಪೂಜಾರಿ.
    ಮಗ ಭೋಜ ಮನೆಬಿಟ್ಟು ಹೋಗಿ 28 ವರ್ಷಗಳು ಕಳೆದಿವೆ. ಆದರ ಚಿಂತೆಯಲ್ಲಿಯೆ ಇದ್ದ ತಂದೆ ಸುಂದರ ಪೂಜಾರಿ ಕಳೆದ ವರ್ಷ ಬ್ರಹ್ಮಬೈದರ್ಕಳ ಕೋಲದ ಸಂದರ್ಭದಲ್ಲಿ ದೈವದ ಬಳಿ ಹರಕೆ ಸಲ್ಲಿಸಿದ್ದರು.ದೈವಗಳು ಒಂದು ವರ್ಷಗಳ ಒಳಗೆ ಮಗನನ್ನು ಮನೆಗೆ ಕರೆಸುವ ಅಭಯ ನೀಡಿದ್ದವು.ಆದರೆ ದೈವಗಳು ಅಭಯ ನೀಡಿದ ಒಂದೇ ವರ್ಷದಲ್ಲಿಯೆ ತನ್ನ ಪುತ್ರ ಮನೆಗೆ ಬಂದಿದ್ದಾನೆ.ಎನ್ನುತ್ತಾ ಖುಷಿಪಟ್ಟರು ಸುಂದರ ಪೂಜಾರಿ.
    ವೀಡಿಯೋ ನೋಡಿ ಬಂದ ಮಗ:
    ಕಳೆದ ಬಾರಿ 2023 ರಲ್ಲಿ ಡಿಸೆಂಬರ್ ನಲ್ಲಿ ನಡೆದ ಪಡುಕುಡೂರು ಕೊಡಮಣಿತ್ತಾಯ ದೈವದ ಸಾಂಪ್ರದಾಯಿಕ ಶೈಲಿಯ ಕಂಬಳದಲ್ಲಿ ಉಡುಪಿಯ ಕಂಡೀರ ಖ್ಯಾತಿಯ ಉಪನ್ಯಾಸಕ ಮಂಜುನಾಥ್ ಕಾಮತ್ ಫೇಸ್ಬುಕ್ ನಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ದೈವದ ಕಂಬಳದ ಚಾಕರಿ ಮಾಡುತಿದ್ದ ವೀಡಿಯೋ ವನ್ನು ಮಾಡಿ ಪೋಸ್ಟ್ ಮಾಡಿದ್ದರು. ಈ ವೀಡಿಯೋ ಲಕ್ಷಾಂತರ ಜನರು ವೀಕ್ಷಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ತಂದೆಯನ್ನು ನೋಡಿದ್ದ ಮಗ ಭೋಜ ತಂದೆಯನ್ನು ನೋಡಲು ಹುಬ್ಬಳ್ಳಿಯಿಂದ ಬಂದಿದ್ದ ರು. .ತನ್ನ 20 ನೆ ವಯಸ್ಸಿನಲ್ಲಿ ಉದ್ಯೋಗದ ನಿಮಿತ್ತ ಭೋಜ ಮನೆಯಿಂದ ಹೋದವರು ವಾಪಾಸಾಗಿರಲೆ ಇಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ತಂದೆ ಸುಂದರ ಪೂಜಾರಿ ಯವರು ಚಾಕರಿ ಮಾಡುತಿದ್ದ ವೀಡಿಯೋ ವನ್ನು ನೋಡಿ ಮಗ ಮನೆಗೆ ಬಂದಿದ್ದರು.
    ಮಗನ ಕೈಯಲ್ಲಿದ್ದ ಗುಳ್ಳೆಯ ಪತ್ತೆಹಚ್ಚಿದ ತಂದೆ. : ಈಗ 55 ವರ್ಷ ಪ್ರಾಯವಾಗಿರುವ ಭೋಜ ಪೂಜಾರಿ ಯವರು ಮನೆಗೆ ಅಗಮಿಸಿದಾಗ ಮನೆಯವರು ನಂಬುವ ಸ್ಥಿತಿಯಲ್ಲೇ ಇರಲಿಲ್ಲ. ಆದರೆ ತಂದೆ ಮಗನ ಕೈಯಲ್ಲಿದ್ದ ಗುಳ್ಳೆಯ ಗುರುತನ್ನು ಪತ್ತೆಹಚ್ಚಿ ಮಗನನ್ನು ಖಾತ್ರಿಯಾಗಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಭೋಜ ಪೂಜಾರಿ ಪಡುಕುಡೂರಿನ ಹೊಸಬೆಟ್ಟು ಮನೆಗೆ ಬಂದು ತಂದೆ ಹಾಗೂ ತಾಯಿಯ ಆಶಿರ್ವಾದ ಪಡೆದಿದ್ದಾರೆ. ಆದರೆ ಮಗನ‌ ಬರುವಿಕೆ ಕಾಯುತಿದ್ದ ತಾಯಿ ತನ್ನ ಆಸೆಯನ್ನು ಕೂಡ ಈಡೇರಿಸಿದ್ದಾರೆ.ಬಳಿಕ ತಾಯಿ ಸುಶೀಲ ಅನಾರೋಗ್ಯ ದಿಂದ ಮೃತಪಟ್ಟಿದ್ದಾರೆ.
    28 ವರ್ಷಗಳ ಬಳಿಕ ಮನೆಗೆ ಬಂದಿದ್ದೇನೆ .‌ಪೇಸ್ಬುಕ್ ಖಾತೆ ಉಡುಪೀಯ ಕಂಡೀರ ಸಾಮಾಜಿಕ ಜಾಲತಾಣವೇ ನನಗೆ ವರದಾನವಾಯಿತು. ತಂದೆಯ ದೈವಗಳ ಚಾಕರಿ ನನಗೆ ಮನೆಗೆ ಬರಲು ಪ್ರೇರಣೆ ನೀಡಿತು‌.
    ಭೋಜ ಪೂಜಾರಿ ಹುಬ್ಬಳ್ಳಿ
    ಸುಂದರ ಪೂಜಾರಿ ಮಗ
    ಮಗ ಮನೆಗೆ ಬಂದಿದ್ದು ನನ್ನ ಅನಂದಕ್ಕೆ ಪಾರವೇ ಇಲ್ಲ. ಬ್ರಹ್ಮ ಬೈದರ್ಗಳ ದೈವಗಳಿಗೆ ಹರಕೆಯನ್ನು ಹೊತ್ತಿದ್ದೆ . ನನ್ನ ಕನಸು ನನಸಾಗಿದೆ. ನನ್ನ ಮಗ ಮನೆಗೆ ಆಗಮಿಸಿದ್ದಾನೆ. ದೈವ ದೇವರುಗಳು ಹಾಗೂ ಸಾಮಾಜಿಕ ಜಾಲತಾಣಗಳು ಪ್ರೇರಣೆಯಾಗಿವೆ.
    .ಸುಂದರ ಪಡುಕುಡೂರು
    ಧೈವದ ಚಾಕರಿ ಮಾಡುವವರು.
    #TuluNadu
    #Tulunad
    #TuluPeople
    #TuluCulture
    #KarnatakaCoast
    #Udupi
    #Mangalore
    #DakshinaKannada
    #TuluLanguage
    #TuluTraditions
    #Daiva
    #DaivaKola
    #DaivadnyaBrahmin
    #DaivadnyaCommunity
    #KarnatakaCulture
    #TuluNadu
    #DaivaTradition
    #DaivaCustoms
    #DaivaRituals

КОМЕНТАРІ •