EP 2 | ಹೇಡಿಯಾಗುವುದಕ್ಕಿಂತ ದುಷ್ಟನಾಗುವುದು ಮೇಲು! | ಸ್ವಾಮಿ ನಿರ್ಭಯಾನಂದ ಸರಸ್ವತೀ |
Вставка
- Опубліковано 7 січ 2025
- 'ಧರ್ಮ ಬಯಸುವುದು ಧೀರತನವನ್ನು ಹೇಡಿತನವನಲ್ಲ' ಎಂಬ ವಿಷಯವನ್ನು ಕುರಿತು ವಿವೇಕ ಹಂಸದ ವಾರ್ಷಿಕ ವ್ಯಕ್ತಿತ್ವ ವಿಕಸನ ಶಿಬಿರ 'ಹಣತೆ'ಯಲ್ಲಿ ಮಾತನಾಡಿದ ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರ ಭಾಷಣದ ಕೊನೆಯ ಭಾಗ ಈ ವಿಡಿಯೋ. ಹೇಡಿಯಾಗಿ ಬದುಕುವ ಬದಲು ದುಷ್ಟರಾಗಿ ಬದುಕುವ ಬದುಕುವುದು ಮೇಲು ಎಂಬ ವಿವೇಕಾನಂದರ ನುಡಿಗಳನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಇಡೀ ಜಗತ್ತು ತನ್ನದೇ ಜಗತ್ತಿನವರೆಲ್ಲ ತನ್ನವರೇ ಎಂಬ ಉನ್ನತ ಆಲೋಚನೆಯನ್ನು ಹೊತ್ತು ಹೊಸ ಜನಾಂಗ ಹೊಮ್ಮಬೇಕು ಇದೆ ಹೊಸ ಭರವಸೆ ಎಂದರು. ಭಾರತೀಯತೆಯ ವೈಶಿಷ್ಟ್ಯವಿರುವುದು ಅದರ 'ಕೃಣ್ವಂತೋ ವಿಶ್ವಮಾರ್ಯಂ' ಎಂಬ ಆಶಯದಲ್ಲಿ. ಇಲ್ಲಿ ಆರ್ಯ ಎಂಬುದು ಜನಾಂಗವಲ್ಲ ಅದೊಂದು ಉದಾತ್ತ ಚರಿತೆಯ ಪರಿಕಲ್ಪನೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಜವಬ್ದಾರಿ ನಮ್ಮದು ಎಂದು ಅವರು ತಿಳಿಸಿದರು. ಪಾಶ್ಚ್ಯಾತ್ಯರಿಗೆ ತಾವು ಭಾರತೀಯರಾಗಿ ಹುಟ್ಟಬೇಕೆಂಬ ಹಂಬಲವಿದೆ. ಆದರೆ ಭಾರತೀಯರಿಗೆ ತಮ್ಮ ನೆಲ ಜಲ ಸಂಸ್ಕೃತಿಗಳ ಹಿರಿಮೆಯ ಅರಿವಿಲ್ಲ, ಹೆಮ್ಮೆ ಇಲ್ಲ. ಅದನ್ನು ರೂಢಿಸಿಕೊಳ್ಳಬೇಕು ಎಂದು ಅವರು ಕರೆಕೊಟ್ಟಿದ್ದಾರೆ. ವಿವೇಕಾನಂದರ ಚಿಂತನೆಗಳನ್ನು ರಕ್ತಗತವಾಗಿಸಿಕೊಂಡರೆ ಇಲಿಯಂಥವರು ಕೂಡ ಹುಲಿಯಂತಾಗುತ್ತಾರೆ ಆದುದರಿಂದ ಯುವಜನಾಂಗವು ವಿವೇಕಾನಂದರನ್ನು ಕಂಠಪಾಠ ಮಾಡುವ ಮಟ್ಟಿಗೆ ಓದಿಕೊಳ್ಳಬೇಕು ಎಂದರು. ಹಾಗೆಯೇ ಗುರು-ಧರ್ಮ-ದೇಶಗಳ ತಂಟೆಗೆ ಬಂದರೆ ನಾವು ಸುಮ್ಮನಿರಬಾರದು ವಿರೋಧಿಸಬೇಕು. ಹೇಡಿಗಳಂತೆ ಬದುಕುವುದು ಶೋಭೆಯಲ್ಲ ಎಂದು ಅವರು ನಿಶ್ಚಿತವಾಗಿ ತಿಳಿಸಿದ್ದಾರೆ.
Music track: Cinematic by Aylex
Source: freetouse.com/...
Music for Videos (Free Download)
Music track: Atmosphere by Avanti
Source: freetouse.com/...
Free Vlog Music Without Copyright
.
.
.
.
.
.
.
#arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews #Criticism #HandlingCritics #ConstructiveFeedback #DealingWithCriticism #NegativityManagement #GrowthMindset #SelfImprovement #FeedbackCulture #PositiveResponse #CriticismTips #ImpactOfResponsibility #SocialResponsibility #PersonalAccountability #EthicalLeadership #ResponsibilityInSociety #CommunityImpact #DutyToOthers #ConsciousLiving #EmpowerThroughResponsibility #OwnYourActions #PositiveChange #SocialContribution #BuildingBetterCommunities #LeadByExample #ResponsibleCitizenship #CreatingChange #AccountableLeadership #InspireResponsibility #SocietalWellbeing #LaughterIsLife #LaughMore #JoyfulLiving #HumorHeals #SmileEveryday #LaughOutLoud #HappyHeart #BrightenYourDay #LaughterTherapy #SpreadJoy #HappinessIsContagious #LaughingIsLearning #GiggleGuide #HumorAndHealth #LaughingAllTheWay
ಎಲ್ಲವು ಒಳ್ಳೇದಾಗುತ್ತಿದ್ದೆ ಪ್ರಣಾಮಗಳು
ಗುರುಗಳೇ ನಿಮ್ಮ ಮಾತು ಪ್ರತೀ ಒಬ್ಬರ ಬದುಕಿಗೆ ಬಂಗಾರ 👏👏👏👏👏👏🌻🌻🌻🌻🌻🌻
🙏ಜೈ ಗುರುದೇವ 🙏
ನಮಸ್ತೆ 🙏 ಸ್ವಾಮೀಜಿ
🙏 ಜೈ ಗುರುದೇವ 🙏
Nirbhayanand means no fear to sustain slavery, conquer over the enemies
.......111........