ಬಹಳ ಬೇಡಿಕೆಯ ಈ ಹೆಬ್ಬಾತುಗಳ ಸಾಕಾಣಿಕೆಗೆ ನಿರ್ವಹಣಾ ವೆಚ್ಚವೇ ಇಲ್ಲ! ಲಾಭ ಕಟ್ಟಿಟ್ಟ ಬುತ್ತಿ

Поділитися
Вставка
  • Опубліковано 5 гру 2023
  • ಬಹಳ ಬೇಡಿಕೆಯ ಈ ಹೆಬ್ಬಾತುಗಳ ಸಾಕಾಣಿಕೆಗೆ ನಿರ್ವಹಣಾ ವೆಚ್ಚವೇ ಇಲ್ಲ! ಲಾಭ ಮಾತ್ರ ಕಟ್ಟಿಟ್ಟ ಬುತ್ತಿ
    ಹಲ್ಲು, ಸೊಪ್ಪು ತಿಂದು ಬದುಕುವ ಸಸ್ಯಾಹಾರಿ ಹೆಬ್ಬಾತುಗಳು ನಾಯಿಯಂತೆ ಕಾವಲು ಕಾಯುತ್ತವೆ
    ಸಾಮಾನ್ಯವಾಗಿ ಪಕ್ಷಿಗಳ ಜಾತಿಗೆ ಸೇರಿದವೆಲ್ಲವೂ ಸಸ್ಯಾಹಾರಿ ಮತ್ತು ಸಾಕಾಹಾರಿಗಳಿಗಾಗಿರುತ್ತವೆ. ಆದರೆ ಈ ಹೆಬ್ಬಾತುಗಳು ಮಾತ್ರ ಪಕ್ಕಾ ಸಸ್ಯಾಹಾರಿಗಳು. ಇವುಗಳ ನಿರ್ವಹಣೆಗೆ ಬಿಡಿಗಾಸನ್ನು ಖರ್ಚು ಮಾಡುವ ಅಗತ್ಯವೇ ಇಲ್ಲ. ಅವುಗಳಿಗೆ ಕುಡಿಯಲು ನೀರು ಮತ್ತು ರಾತ್ರಿ ಹೊತ್ತು ನೆಮ್ಮದಿಯಿಂದ ನಿದ್ರಿಸಲು ಪುಟ್ಟ ಗೂಡಿನಂತಹ ಜಾಗ ಇದ್ದರೆ ಸಾಕು. ಇನ್ನೂ ತಿನ್ನಲು ಏನೂ ಹಾಕಬೇಕೆನ್ನುವ ಕಿರಿಕಿರಿ ಇಲ್ಲವೇ ಇಲ್ಲ. ಮನೆಯ ಆಸುಪಾಸಿನಲ್ಲಿರುವ ಹುಲ್ಲು ಸೊಪ್ಪು ಸದೆಯಲ್ಲಿ ಮೆಯ್ದುಕೊಂಡು ಹಾಯಾಗಿರುತ್ತವೆ. ಇಂತಹ ಹೆಬ್ಬಾತುಗಳನ್ನು ಪ್ರತಿಯೊಬ್ಬರೂ ಸಾಕಬಹುದು. ನೋಡಲು ಬಹಳ ಮುದ್ದಾಗಿರುತ್ತವೆ. ಅವುಗಳಿಂದ ಆರೋಗ್ಯದಾಯಕ ಮೊಟ್ಟೆಗಳನ್ನು ಪಡೆದುಕೊಳ್ಳಬಹುದು. ಮಾಂಸಕ್ಕಾಗಿಯೂ ಸಾಕಬಹುದು. ಒಂದೊಂದು ಹೆಬ್ಬಾತು ಕೂಡ ಸಾವಿರ ರೂಪಾಯಿ ಬೆಲೆಗೆ ಮಾರಾಟವಾಗುತ್ತದೆ.
    ಈ ಲಾಭದಾಯಕ ಹೆಬ್ಬಾತುಗಳು ಹೆಚ್ಚಾಗಿ ಜನರ ಸಂಪರ್ಕದಲ್ಲಿರಲು ಇಷ್ಟಪಡುತ್ತವೆ. ಇನ್ನೂ ಮನೆಗೆ ಯಾರೇ ಹೊಸಬರು ಬಂದರೆ ಜೋರಾಗಿ ಕೂಗುತ್ತವೆ. ಹಿಂದೆಮುಂದೆ ನೋಡದೆ ಓಡೋಡಿ ಹೋಗಿ ಅವರ ಕಾಲುಗಳಿಗೆ ಕುಕ್ಕಿ ಕಚ್ಚುತ್ತವೆ. ಅವುಗಳ ಬಾಯಿಯಲ್ಲಿ ಹಲ್ಲುಗಳು ಗರಗಸದಂತೆ ಇರುತ್ತವೆ. ರಾತ್ರಿ ಹೊತ್ತಿನಲ್ಲಿಯೂ ಸಹ ಹೆಬ್ಬಾತುಗಳು ನಾಯಿಗಿಂತಲೂ ಹೆಚ್ಚಾಗಿ ಜಾಗ್ರತೆಯಿಂದ ಕಾವಲು ಕಾಯುತ್ತವೆ. ಹಾಗಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಬಿಜಿ ಬಂಡೂರು ಕುರಿ ಫಾರಂನಲ್ಲಿ ಬೋರೇಗೌಡರು ಈ ಹೆಬ್ಬಾತುಗಳನ್ನು ಮುದ್ದಿನಿಂದ ಸಾಕುತ್ತಿದ್ದಾರೆ.
    ಹಳ್ಳಿಕಾರ್ ತಳಿಯ ಹಸುಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬೋರೇಗೌಡರು ಕಳೆದ ಎರಡು ವರ್ಷಗಳಿಂದ ಹೆಬ್ಬಾತುಗಳನ್ನು ಸಾಕುತ್ತಿದ್ದಾರೆ. ಅವರಿಗೆ ಪ್ರಾಣಿ ಪಕ್ಷಿಗಳೆಂದತರ ಬಹಳ ಪ್ರೀತಿ. ಅವರ ಮನೆಯ ಹತ್ತಿರುವ ಬಿಜಿ ಬಂಡೂರು ಕುರಿ ಫಾರಂ ಹೌಸನಲ್ಲಿ ಮಲೆನಾಡ ಗಿಡ್ಡ ಹಸುಗಳು, ಬನ್ನೂರು ಕುರಿಗಳು, ಹಳ್ಳಿಕಾರ್ ಹಸುಗಳು, ದೇಶಿ ತಳಿಯ ಮೇಕೆಗಳು, ಟರ್ಕಿ ಕೋಳಿ, ಬೆಂಕಿ ಕೋಳಿಗಳನ್ನು ಸಾಕುತ್ತಿದ್ದಾರೆ. ಅವುಗಳ ನಡುವೆ ಹೆಬ್ಬಾತುಗಳನ್ನು ಸಾಕಿ ಲಾಭವನ್ನು ಪಡೆಯುತ್ತಿದ್ದಾರೆ.
    ಕಳೆದೆರಡು ವರ್ಷಗಳಿಂದ ಹೆಬ್ಬಾತುಗಳನ್ನು ಸಾಕುತ್ತಿರುವ ಬೋರೇಗೌಡರು ಜಿಕೆವಿಕೆ ಕೃಷಿ ಮೇಳದಲ್ಲಿ ಸ್ನೇಹಿತರಿಂದ ಎರಡು ಹೆಣ್ಣು ಮತ್ತು ಒಂದು ಗಂಡು ಹೆಬ್ಬಾತು ಮರಿಗಳನ್ನು ಖರೀದಿಸಿಕೊಂಡು ಬಂದಿದ್ದಾರೆ. ಎರಡು ಹೆಣ್ಣು ಹೆಬ್ಬಾತುಗಳು ಈಗಾಗಲೇ ಎರಡು ಬಾರಿ ಮೊಟ್ಟೆಗಳನ್ನು ಇಟ್ಟು ಮರಿ ಮಾಡಿವೆ. ಸದ್ಯ ಒಂದು ಹೆಣ್ಣು ಹೆಬ್ಬಾತು ಮೊಟ್ಟೆಗಳನ್ನು ಇಟ್ಟುಕೊಂಡು ಕಾವಿಗೆ ಕುಳಿತಿದೆ. ಅದನ್ನು ನೋಡುವುದೇ ಒಂದು ಖುಷಿ. ಮಕ್ಕಳು ಮಾತ್ರವಲ್ಲದೆ ದೊಡ್ಡವರೂ ಸಹ ಇಂತಹ ಸಸ್ಯಾಹಾರಿ ಹೆಬ್ಬಾತುಗಳನ್ನು ಬಹಳ ಇಷ್ಟಪಡುತ್ತಾರೆ. ಹೆಬ್ಬಾತುಗಳನ್ನು ಎತ್ತಿಕೊಂಡು ಮುದ್ದಾಡಬೇಕು ಎನಿಸುತ್ತದೆ.
    ಈ ಹೆಬ್ಬಾತುಗಳ ಸಾಕಾಣಿಕೆ ಬಹಳ ಲಾಭದಾಯಕವಾಗಿದೆ. ನಿರ್ವಹಣೆ ಇಲ್ಲವೇ ಇಲ್ಲ ಎನ್ನುತ್ತಾರೆ ಬೋರೇಗೌಡರು. ಬಹಳ ಮುದ್ದಿನಿಂದ ಹೆಬ್ಬಾತುಗಳನ್ನು ಸಾಕಿರುವ ಬೋರೆಗೌಡರು ನಮ್ಮ ಚಾನಲ್‍ನೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವುಗಳ ಕುರಿತು ವಿವರಿಸಿದ್ದಾರೆ. ದಯವಿಟ್ಟು ಗಮನಿಸಿ.
    ಒಟ್ಟಾರೆಯಾಗಿ ಈ ಸಸ್ಯಾಹಾರಿ ಹೆಬ್ಬಾತುಗಳ ಸಾಕಾಣಿಕೆ ಲಾಭದಾಯಕವಾಗಿದೆ. ಪ್ರತಿಯೊಬ್ಬ ರೈತರು ಈ ಹೆಬ್ಬಾತುಗಳ ಸಾಕಾಣಿಕೆಯಲ್ಲಿ ತೊಡಗಬಹುದು. ಇನ್ನೂ ಮನೆಯ ಸುತ್ತಮುತ್ತಲೂ ಒಂದಿಷ್ಟು ಖಾಲಿ ಜಾಗವಿದ್ದವರು ಹಾಗು ಹೂವಿನ ಗಾರ್ಡನ್ ಇದ್ದವರೂ ಕೂಡ ಈ ಹೆಬ್ಬಾತುಗಳನ್ನು ಸಾಕಬಹುದು. ಅವುಗಳಿಂದ ಆರೋಗ್ಯದಾಯಕ ಮೊಟ್ಟೆಗಳನ್ನು ಪಡೆಯಬಹುದು. ಸಾವಿರಾರು ಬೆಲೆ ಹೆಬ್ಬಾತುಗಳನ್ನು ಮಾರಿಕೊಂಡು ಲಾಭವನ್ನು ಪಡೆದುಕೊಳ್ಳಬಹುದು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಬ್ಬಾತುಗಳಿಗಾಗಿ ಬೋರೇಗೌಡರನ್ನು ಮೊಬೈಲ್ ಸಂಖ್ಯೆ: 9606620797 ಮೂಲಕ ಸಂಪರ್ಕ ಮಾಡಬಹುದು.
    #pets, #duck, #birds, #petbird, #indianbirds, #bestpetbirds, #petsindelhi, #ngc, #bcc,
    #hallikar, #hallikarbulls, #varthursanthosharrest, #youtube, #karnataka, #youtubevideos, #youtubevideo, #varthur, #mandya, #malavalli, #viral_video, #kannada, #india, #mysore, #viralnews, #viralnewslive, #BiggBossKannadaSeason10, #HappyBigBoss, #BBK10,
    #horichandrappa, #hallikarbulls, #hallikarhori, #maravenarayanappahallikarbulls, #hallikarsanthosh #hallikarbulls,
    #nannamathunimmajothe, #interviewvideos, #maravenarayanappabulls,
    #varthursanthosh, #hallikarsanthosh, #varthursanthoshinterview,
    #varthursanthoshhighlights, #varthursanthoshvideos,
    #varthursanthoshnewvideo, #varthursanthoshlatestvideo, #varthursanthoshwhatsappstatus, #varthursanthoshhometour,
    #varthursanthoshfarmtour, #varthursanthoshinterview, #bangalorerace,
    #haverirace, #bullockcartrace, #haveriracevarthursanthosh,
    #haverieventhallikarsanthosh, #latestevents, #event, #hallikar, #hallikarbulls, #varthur, #nannamathunimmajothevarthursanthosh

КОМЕНТАРІ •